ವಿಶ್ವದ ಅತಿ ಎತ್ತರದ ಜಿಪ್ ಲೈನ್ ಯುಎಇಯಲ್ಲಿದೆ. ಜಿಪ್ ಲೈನ್ ಉದ್ದ 2.8 ಕಿಲೋಮೀಟರ್ ಇದ್ದು, ಧೈರ್ಯವಂತರು ಮಾತ್ರ ಇದನ್ನು ಏರ್ತಾರೆ. ಆದ್ರೆ ಒಂಟೆಯೊಂದು ಸಾಹಸಕ್ಕೆ ಕೈ ಹಾಕಿದೆ. ಅದನ್ನು ನೋಡಿ ಜನರು ಹುಬ್ಬೇರಿಸಿದ್ದಾರೆ.
ಅಡ್ವೆಂಚರ್ ಮಾಡಲು ಬಯಸುವ ಸಾಹಸಿಗರು ಯಾವಾಗಲೂ ಒಂದಲ್ಲ ಒಂದು ಬಗೆಯ ಅಡ್ವೆಂಚರ್ ಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಧೈರ್ಯದಿಂದ ಅನೇಕ ಭಯಾನಕ ಸ್ಥಳಗಳಲ್ಲಿ ಸಾಹಸಗಳನ್ನು ಮಾಡುತ್ತಿರುತ್ತಾರೆ. ಪರ್ವತಾರೋಹಣ, ಸ್ಕೈ ಡೈವಿಂಗ್, ಸ್ಕೂಬಾ ಡೈವಿಂಗ್ ಮುಂತಾದವು ಅನೇಕ ಕಡೆ ನಡೆಯುತ್ತವೆ. ಇಂತಹ ಸಾಹಸಗಳಿಗೆ ಕೈ ಹಾಕುವವರ ಗುಂಡಿಗೆಯೂ ಅಷ್ಟೇ ಗಟ್ಟಿಯಾಗಿರಬೇಕು.
ನೀವು ಯಾವಾಗಲೂ ಮನುಷ್ಯರು ಇಂತಹ ಸಾಹಸಗಳನ್ನು ಮಾಡುವುದನ್ನು ನೋಡಿರುತ್ತೀರಿ. ಆದರೆ ಪ್ರಾಣಿಗಳು ಹೀಗೆ ಅಡ್ವೆಂಚರ್ (Adventure) ಗೇಮ್ ಗಳಲ್ಲಿ ಭಾಗವಹಿಸುವುದನ್ನು ಬಹುಶಃ ನೀವು ನೋಡಿರಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ (Social media) ದಲ್ಲಿ ಒಂಟೆಯೊಂದರ ಸಾಹಸದ ವಿಡಿಯೋ ವೈರಲ್ ಆಗಿದೆ. ಜಿಪ್ ಲೈನ್ (Zip line) ನಲ್ಲಿ ಅಡ್ವೆಂಚರ್ ಮಾಡುವ ಮೂಲಕ ಈ ಒಂಟೆ ತನ್ನ ಸಾಹಸ ಮೆರೆದಿದೆ. ಜಗತ್ತಿನ ಅತೀ ಎತ್ತರದ ಜಿಪ್ ಲೈಲ್ ನಲ್ಲಿ ಒಂಟೆಯ ಈ ಸಾಹಸವನ್ನು ನೋಡಿದ ಅನೇಕ ಮಂದಿ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಐಟಿಬಿಟಿ ನಗರದಲ್ಲಿ ಆಟೋ ಚಾಲಕರು ಸಹ ಸಿಕ್ಕಾಪಟ್ಟೆ 'ಸ್ಮಾರ್ಟ್', ಕೈಯಲ್ಲೇ ಕ್ಯೂಆರ್ ಕೋಡ್!
ಅತೀ ಎತ್ತರದ ಜಿಪ್ ಲೈನ್ ಮೇಲೆ ಒಂಟೆಯ ಸವಾರಿ : ಜಿಪ್ ಲೈನ್ ಮೇಲೆ ಪರ್ವತಗಳನ್ನು ದಾಟುವುದು, ಕೋಟೆ, ನದಿಗಳನ್ನು ವೀಕ್ಷಿಸುವುದನ್ನು ನೀವು ನೋಡಿರುತ್ತೀರಿ. ನೂರಾರು ಮೈಲಿ ಎತ್ತರದಲ್ಲಿ ಹಗ್ಗದ ಮೂಲಕ ಜಾರುವಾಗ ಮೈ ರೋಮಾಂಚನವಾಗುತ್ತದೆ. ಎತ್ತರದಿಂದ ಪ್ರಕೃತಿಯ ಸೊಬಗನ್ನು ನೋಡುವುದೂ ಕೂಡ ಚೆಂದವೇ. ಅನೇಕ ಮಂದಿ ಪ್ರಕೃತಿ ಪ್ರೇಮಿಗಳು ಹಾಗೂ ಚಾರಣ ಪ್ರಿಯರು ಇಂತಹ ಸಾಹಸಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಇಂತಹ ಅಡ್ವೆಂಚರಸ್ ವಿಡಿಯೋಗಳು ಆಗಾಗ ಬರುತ್ತಲೇ ಇರುತ್ತದೆ. ಇಂತಹ ಸಾಹಸಗಳಲ್ಲಿ ತೊಡಗಿದ ಅನೇಕ ಮಂದಿ ಪ್ರಾಣ ಕಳೆದುಕೊಂಡ ಘಟನೆಗಳನ್ನೂ ನಾವು ನೋಡಿದ್ದೇವೆ.
ಜಿಪ್ ಲೈನಿಂಗ್ ಬಹಳ ಸಾಹಸಕಾರಿಯಾಗಿದೆ. ಕೇಬಲ್ ಅಥವಾ ಹಗ್ಗದ ಸಹಾಯದಿಂದ ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಬರುತ್ತಾರೆ. ಇಂತಹ ಅಪಾಯಕಾರಿಯಾದ ಸಾಹಸಕ್ಕೆ ಎಷ್ಟು ಧೈರ್ಯವಿದ್ದರೂ ಕಡಿಮೆಯೇ. ಅಂತದ್ದರಲ್ಲಿ ಒಂದು ಒಂಟೆ ಈ ಸಾಹಸಕ್ಕೆ ಮುಂದಾಗಿದೆ. ಯುಎಇ ಯಲ್ಲಿರುವ ಅತಿ ಎತ್ತರದವಾದ ಜಿಪ್ ಲೈನ್ ಒಂದರಲ್ಲಿ ಒಂಟೆಯ ಸಾಹಸ ಎಲ್ಲರನ್ನು ದಂಗುಬಡಿಯುವಂತೆ ಮಾಡಿದೆ. ಈ ವಿಡಿಯೋದಲ್ಲಿ ಒಂಟೆಯನ್ನು ಹಗ್ಗಕ್ಕೆ ಕಟ್ಟಿ ಕೇಬಲ್ ಸಹಾಯದಿಂದ ಕೆಳಗೆ ಇಳಿಸಲಾಗಿದೆ. 2.8 ಕಿಲೋಮೀಟರ್ ಉದ್ದದ ಜಿಪೈ ಲೈನ್ ನಲ್ಲಿ ಅಡ್ವೆಂಚರ್ ಮಾಡಿರುವ ಒಂಟೆ ಕೂಲಿಂಗ್ ಗ್ಲಾಸ್ ಕೂಡ ಧರಿಸಿದೆ. ಒಂಟೆ ಕೋಲಿಂಗ್ ಗ್ಲಾಸ್ ಹಾಕಿರುವುದು ನೋಡುಗರಿಗೆ ತಮಾಷೆಯಾಗಿ ಕಾಣುತ್ತದೆ.
ಹಂಪಿ ವರ್ಣಿಸಿದ ಬಾಲಿವುಡ್ ನಟ ಆದಿತ್ಯರಾಯ್, ಕನ್ನಡಿಗರು ಫುಲ್ ಖುಷ್
ಇದು ಎನಿಮೇಶನ್ ಒಂಟೆ : ಕಂಪ್ಯೂಟರ್, ಎನಿಮೇಶನ್ ಸಹಾಯದಿಂದ ಈಗ ಅನೇಕ ರೀತಿಯ ಗೊಂಬೆಗಳನ್ನು ಮಾಡುವುದು ನಮಗೆ ತಿಳಿದೇ ಇದೆ. ಅವುಗಳಲ್ಲಿ ಯಾವುದು ನೈಜವಾದದ್ದು ಯಾವುದು ಎನಿಮೇಟೆಡ್ ಎಂದು ತಿಳಿಯದೇ ಇರುವಷ್ಟು ಅವು ನೈಜವಾಗಿರುತ್ತದೆ. ನೆಟ್ಟಿಗರ ಕಣ್ಣಿಗೆ ಜೀವಂತ ಒಂಟೆಯಂತೆಯೇ ಕಾಣುವ ಇದು ಕೂಡ ಟೆಕ್ನಾಲಜಿಯ ಒಂದು ಭಾಗವೇ ಆಗಿದೆ.
ಈ ಸಾಹಸಿ ಒಂಟೆಯನ್ನು ಎನಿಮೇಶನ್ ಸಹಾಯದಿಂದ ಮಾಡಲಾಗಿದೆ. ಟೆಕ್ನಾಲಜಿಯ ಸಹಾಯದಿಂದ ಒಂಟೆ ಜಿಪ್ ಲೈನಿಂಗ್ ಮಾಡುವಂತೆ ತೋರಿಸಲಾಗಿದೆ. ಕಂಪ್ಯೂಟರ್ ಜನರೇಟೆಡ್ ಇಮೇಜ್ ಮೂಲಕ ಈ ಎನಿಮೇಶನ್ ಒಂಟೆ ಸಿದ್ಧವಾಗಿದೆ.
ನಿಜವಾದ ಒಂಟೆಯೆಂದೇ ಅನಿಸುವಷ್ಟು ನೈಜವಾಗಿ ಈ ಒಂಟೆಯನ್ನು ಮಾಡಲಾಗಿದೆ. ಒಂಟೆಯ ಕಾಲುಗಳು ಹಾಗೂ ಅದರ ಬಾಲ ಅಲ್ಲಾಡುವುದನ್ನು ನೋಡಿದರೆ ಇದು ಅಸಲಿ ಒಂಟೆಯೆಂದೇ ಎಲ್ಲರೂ ಭಾವಿಸುತ್ತಾರೆ. ಒಂಟೆಯ ಈ ಸಾಹಸಕ್ಕೆ ಅನೇಕ ತಮಾಷೆಯ ಕಮೆಂಟ್ ಗಳು ಕೂಡ ಬಂದಿವೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.