ತಾಮ್ರದ ಚೆಂದದ ವಸ್ತು ಬೇಕೆಂದ್ರೆ ಈ ನಗರಕ್ಕೆ ಹೋಗಿ

By Suvarna News  |  First Published Sep 7, 2023, 1:05 PM IST

ನಮ್ಮ ದೇಶ ವೈವಿದ್ಯತೆಯಿಂದ ಕೂಡಿದೆ. ಇಲ್ಲಿನ ಒಂದೊಂದು ಪ್ರದೇಶವೂ ಒಂದೊಂದು ವಿಶೇಷತೆಯನ್ನು ಸಾರುತ್ತದೆ. ತಾಮ್ರದ ಲೂಟ, ಪಾತ್ರೆ, ಶೋ ಕೇಸ್ ವಸ್ತುಗಳು ಬೇಕೆಂದ್ರೆ ನೀವು ಭಾರತದ ಆ ಸ್ಥಳಕ್ಕೆ ಹೋಗ್ಬೇಕು. ಅದ್ಯಾವುದು ಅಂತಾ ನಾವು ಹೇಳ್ತೇವೆ.
 


ವಿಶ್ವದ ಪ್ರತಿಯೊಂದು ನಗರಕ್ಕೂ ತನ್ನದೇ ಆದ ಇತಿಹಾಸವಿದೆ. ಭಾರತದ ಪ್ರತಿಯೊಂದು ನಗರವೂ ವಿಶೇಷತೆ ಹೊಂದಿದೆ. ಭಾರತದ ನಗರಗಳನ್ನು ಅಲ್ಲಿನ ಪ್ರಸಿದ್ಧಿಗೆ ತಕ್ಕಂತೆ ಹೆಸರಿಸಲಾಗುತ್ತದೆ. ರೇಷ್ಮೆ ನಗರ, ಸಿಲಿಕಾನ್ ಸಿಟಿ, ವಾಣಿಜ್ಯ ನಗರ, ಪರ್ಲ್ಸ್ ಸಿಟಿ ಹೀಗೆ ಭಾರತದ ಪ್ರತಿ ನಗರವನ್ನೂ ವಿಶೇಷತೆಯಿಂದ ಗುರುತಿಸಿ ಅದಕ್ಕೊಂದು ನಾಮಕರಣ ಮಾಡಲಾಗುತ್ತದೆ.  ಅದೇ ರೀತಿ  ಭಾರತದ ನಗರವೊಂದನ್ನು ಬ್ರಾಸ್ ಸಿಟಿ ಎಂದು ಕರೆಯಲಾಗುತ್ತದೆ. ಈ ನಗರವು ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಆ ನಗರದ ವ್ಯಾಪಾರ ಅಮೆರಿಕ,ಯುರೋಪ್ ಸೇರಿದಂತೆ ಅನೇಕ ದೇಶಗಳಿಗೆ ವಿಸ್ತರಿಸಿದೆ. ನಾವಿಂದು ಹಿತ್ತಾಳೆ ನಗರ ಯಾವುದು, ಅದ್ರ ಇತಿಹಾಸವೇನು, ವಿಶೇಷವೇನು ಎಂಬುದನ್ನು ತಿಳಿಯೋಣ.

ಹಿತ್ತಾಳೆ (Brass) ನಗರ ಎಲ್ಲದೆ ? :  ಉತ್ತರ ಪ್ರದೇಶ (Uttar Pradesh ) ದ ಮೊರಾದಾಬಾದನ್ನು ಹಿತ್ತಾಳೆ ನಗರವೆಂದು ಕರೆಯಲಾಗುತ್ತದೆ. ಮೊಗಲ್ ರಾಜ ಶಹಜಹಾನ್ ಮಗ ಮುರಾದ್ ಬಕ್ಷ್ ಹೆಸರಿನಲ್ಲಿ ಈ ನಗರಕ್ಕೆ ಮೊರಾದಾಬಾದ್ ಎಂದು ಹೆಸರಿಡಲಾಗಿದೆ. ಸರ್ಕಾರದ ಯೋಜನೆಯಡಿಯಲ್ಲಿ ಈ ನಗರಕ್ಕೆ ಬ್ರಾಸ್ ಸಿಟಿ ಎಂಬ ಹೆಸರು ಬಂದಿದೆ. ಈ ನಗರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಿತ್ತಾಳೆ ತಯಾರಿ ನಡೆಯುವ ಕಾರಣ ಈ ನಗರಕ್ಕೆ ಸರ್ಕಾರ ಬ್ರಾಸ್ ಸಿಟಿ ಎಂದು ನಾಮಕರಣ ಮಾಡಿದೆ.  100 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಮೊರಾದಾಬಾದ್ ನಲ್ಲಿ ಹಿತ್ತಾಳೆ ಕೆಲಸ ನಡೆಯುತ್ತಿದೆ. ಇಲ್ಲಿ ವಿವಿಧ ಬಗೆಯ ಹಿತ್ತಾಳೆ ಉತ್ಪನ್ನ (Product) ಗಳನ್ನು ತಯಾರಿಸಲಾಗುತ್ತದೆ.  ಇಲ್ಲಿ ತಯಾರಾಗುವ ಹಿತ್ತಾಳೆ ಉತ್ಪನ್ನಗಳು ಭಾರತೀಯ ಸಂಸ್ಕೃತಿ, ವೈವಿಧ್ಯತೆ, ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. 

Tap to resize

Latest Videos

ಚಿರತೆಯನ್ನು ಡಾ.ಬ್ರೋ ಹೊಗಳ್ತಿದ್ರೆ, ಸಿಟ್ಟಿಗೆದ್ದ ಸಿಂಹ ಅವ್ರ ಮೈಮೇಲೆ ಮೂತ್ರ ಮಾಡೋದಾ?

ಮೊರಾದಾಬದ್ ನಲ್ಲಿ ಹಿತ್ತಾಳೆ ತಯಾರಿಸುವ ಸಣ್ಣ ಹಾಗೂ ದೊಡ್ಡ  ಅನೇಕ ಕಾರ್ಖಾನೆಗಳಿವೆ. ಹಿಂದೂ ದೇವತೆಗಳ ಚಿತ್ರಗಳಿಂದ ಹಿಡಿದು ಮೊಘಲರ ಕಾಲದ ಚಿತ್ರಗಳವರೆಗೆ ಎಲ್ಲ ರೀತಿಯ ಹಿತ್ತಾಳೆ ವಸ್ತುಗಳನ್ನು ನೀವಿಲ್ಲಿ ನೋಡಬಹುದು. ಈ ನಗರಕ್ಕೆ ಬಂದ್ರೆ ನಿಮಗೆ ಎಲ್ಲಿ ನೋಡಿದ್ರೂ ಹಿತ್ತಾಳೆ ವಸ್ತುಗಳು ಕಾಣ ಸಿಗುತ್ತವೆ. ನೀವು ಮನೆಯ ಅಗತ್ಯ ಪಾತ್ರೆಗಳಿಂದ ಹಿಡಿದು ಅಲಂಕಾರಿಕ ವಸ್ತುಗಳವರೆಗೆ ಎಲ್ಲವನ್ನೂ ಇಲ್ಲಿ ಖರೀದಿ ಮಾಡಬಹುದು. 

ವಿದೇಶಕ್ಕೆ ರವಾನೆಯಾಗುತ್ತೆ ಇಲ್ಲಿನ ಹಿತ್ತಾಳೆ ಉತ್ಪನ್ನ : ಬ್ರಾಸ್ ಸಿಟಿಯಲ್ಲಿ ತಯಾರಾದ ಹಿತ್ತಾಳೆ ಉತ್ಪನ್ನಗಳು ಭಾರತದ ಮೂಲೆ ಮೂಲೆ ಸೇರುತ್ತವೆ. ಬರೀ ಭಾರತ ಮಾತ್ರವಲ್ಲ ವಿದೇಶದಲ್ಲೂ ಬ್ರಾಸ್ ಸಿಟಿ ಹೆಸರು ಗಳಿಸಿದೆ. ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ, ಯುರೋಪ್ ನಂತಹ ದೇಶಗಳಿಗೆ ಹಿತ್ತಾಳೆ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ. ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಿತ್ತಾಳೆ ರಫ್ತಾಗುತ್ತದೆ. ಮೊರಾದಾಬಾದ್ ರಾಷ್ಟ್ರ ರಾಜಧಾನಿ ದೆಹಲಿಯಿಂದ 170 ಕಿಲೋಮೀಟರ್ ದೂರದಲ್ಲಿದೆ.   

ಈ ದೇಗುಲದಲ್ಲಿ ಇಲಿಗಳಿಗೆ ಮೊದಲ ನೈವೇದ್ಯ… ಅದು ತಿಂದು ಬಿಟ್ಟದ್ದು ಭಕ್ತರಿಗೆ ಪ್ರಸಾದ

ಬ್ರಾಸ್ ಸಿಟಿ (Brass City) ಉದ್ಯಮದ ಗಾತ್ರವೆಷ್ಟು? :  ಬ್ರಾಸ್ ಸಿಟಿಯಲ್ಲಿ ಹಿತ್ತಾಳೆ ವಹಿವಾಟು ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಉದ್ಯಮದ ವಹಿವಾಟು ಅಂದಾಜು 8,000 ರಿಂದ 9,000 ಕೋಟಿ ರೂಪಾಯಿಗಳವರೆಗೆ ಇದೆ.

ಮೊರಾದಾಬಾದ್ ವಿಶೇಷತೆ ಏನು? : ಹಿತ್ತಾಳೆ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಮೊರಾದಾಬಾದ್ ನ ಜನಸಂಖ್ಯೆಯಲ್ಲಿ ಶೇಕಡಾ 47ರಷ್ಟು ಮುಸ್ಲಿಮರಿದ್ದಾರೆ. ಇವರು ಸಾಂಪ್ರದಾಯಿಕ ಉತ್ಪನ್ನಗಳನ್ನು ತಯಾರಿಸುವಲ್ಲಿ ಸಾಕಷ್ಟು ಕೌಶಲ್ಯ ಹೊಂದಿದ್ದಾರೆ.  ಪ್ರಸ್ತುತ ಮೊರಾದಾಬಾದ್‌ನಲ್ಲಿ ಸುಮಾರು 4,000 ಹಿತ್ತಾಳೆಯ ರಫ್ತುದಾರರಿದ್ದಾರೆ.  ಮನ್ಸೂರಿ, ಪ್ರಧಾನ್, ಪೀಟಲ್ ಬಸ್ತಿ ಕುಶಲಕರ್ಮಿಗಳ ಸಂಘಗಳು ಇಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈಗಿನ ದಿನಗಳಲ್ಲಿ ಇಲ್ಲಿನ ವ್ಯಾಪಾರಸ್ಥರು ಆನ್ಕೈನ್ ಮೂಲಕ ತಾವು ತಯಾಇಸಿದ ತಾಮ್ರದ ವಸ್ತುಗಳನ್ನು ಮಾರಾಟ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. 
 

click me!