ಬಿಎಂಟಿಸಿ ಬಸ್‌ನಲ್ಲಿ ಬಾಲೆ

By Suvarna News  |  First Published Nov 5, 2022, 12:15 PM IST

ಬೆರಗಿನ ಬೆಂಗಳೂರಿನಲ್ಲಿ ಊರೂರು ಸುತ್ತಿದಷ್ಟೂ ತಿಳಿಯಲು ಹೊಸ ವಿಚಾರಗಳಿರುತ್ತವೆ. ಹೊಸ ಹೊಸ ಸ್ಥಳಗಳು, ಜನರು ನಮ್ಮನ್ನು ಹಾದುಹೋಗುತ್ತಾರೆ. ಹಾಗೆಯೇ ಸುಮ್ಮನೆ ಮೆಜೆಸ್ಟಿಕ್‌ಗೆ ಬಂದು ಗೊತ್ತಿಲ್ಲದ ಏರಿಯಾಗಿದೆ ಹೋಗಿ ಬಂದರೆ ಹೇಗಿದ್ದೀತು. ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿ, ಆನಂದ ಜೇವೂರ್ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.


-ಆನಂದ ಜೇವೂರ್, ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಮಾತಿನ ಹಾಗೆ, ನನಗೆ ಓಡಾಡುವ ಹುಚ್ಚು. ಮೊದಲ ಬಾರಿ ಬೊಂಗಳೂರಿಗೆ ಬಂದಾಗ ಇಲ್ಲಿನ ವಾಹನಳ ಜಾತ್ರೆಯ ಹಾಗೆ ಟ್ರಾಫಿಕ್ ಪರಿಚಯವಾಯಿತು. ನೋಡಲು ಸಾಕಷ್ಟು ಪ್ರೇಕ್ಷಣಿಯ ಸ್ಥಳಗಳು, ಪ್ರಸಿದ್ಧ ದೇವಾಲಯಗಳು ಹಾಗೂ ಮಾಲ್ ಗಳು ಇದ್ದು. ಆದ್ರೆ ಒಂದು ಪ್ರದೇಶದಲ್ಲಿ ಸುತ್ತಾಡುವಾಗ ಜೊತೆಗೆ ಸಂಗಾತಿ, ಸ್ನೇಹಿತರು, ಪರಿವಾರ ಇದ್ದರೆ ಚೆನ್ನ. ನಾನು ಒಂಟಿಸಲಗನಾಗಿ ಸುತ್ತಾಡುವ ನಿರ್ಧಾರ ಮಾಡಿದೆ. ಮೊದಲೇ ಪ್ಲಾನ್ ಮಾಡಿ ಹೋದರೆ, ಪ್ರಯಾಣ ಇಂಟರೆಸ್ಟಿಂಗ್ ಆಗಿರುವುದಿಲ್ಲವೆಂದು, ಪ್ಲಾನ್ ಇಲ್ಲದೆ ಬಿಎಂಟಿಸಿಯಲ್ಲಿ ಓಡಾಡಲು ನಿರ್ಧಾರ ಮಾಡಿದೆ.

Tap to resize

Latest Videos

ಬಾಯಲ್ಲಿಟ್ಟರೆ ಕರಗೋ ಬೆಣ್ಣೆ ದೋಸೆ ಬೆಂಗಳೂರಲ್ಲಿ ಎಲ್ಲೆಲ್ಲಾ ಸಿಗುತ್ತೆ ?

ಅಂದು ಭಾನುವಾರ ಮೆಜೆಸ್ಟಿಕ್ ಹೋಗಿ ಒಂದು ದಿನದ ಬಸ್ ಪಾಸ್ ತೆಗೆದುಕೊಂಡೆ. ಬಸ್ ಸ್ಟಾಂಡ್‌ನಲ್ಲಿ ಯಾವ ಕಡೆ ನನ್ನ ಪಯಣ (Travel) ಎಂದು ಯೋಚನೆ ಮಾಡುವಾಗ, ಅಲ್ಲಿದ ಹಲವು ಜನರ ಪ್ರಯಾಣಿಕರ (Passengers) ಓಡಾಟದಲ್ಲಿ ಕಂಡಳು ಸುಂದರ ಬಾಲೆ. ಅವಳ ಬೆನ್ನತ್ತಿ ಬಸ್ ಹತ್ತಿದೆ. ಅವಳು ಮುಂದೆ ನಾನು ಹಿಂದೆ ಕುಳಿತಕೊಳ್ಳಬೇಕೆಂದರೆ, ಅಲ್ಲಿ ಸೀಟಿಲ್ಲದ ಕಾರಣ ನಿಂತುಕೊಂಡೆ ನನ್ನ ಪ್ರಯಾಣ ಪ್ರಾರಂಭವಾಯ್ತು. ಕಂಡೆಕ್ಟರ್ ಬಂದು ಎಲ್ಲಿಗೆ ನಿನ್ನ ಪಯಣ? ಎಂದಾಗ, ಅವಳ ಪಯಣ ಎಲ್ಲಿಗೆಂದು ಗೊತ್ತಿಲ್ಲದೆ, ಕೊನೆಯ ಸ್ಟಾಪ್ ಎಂದೆ. ಸ್ವಲ್ಪ ಸಮಯದ (Time) ನಂತರ ಬಾಲೆಯ ಹಿಂಬದಿಯ ಸೀಟ್ ಸಿಕ್ಕಿತ್ತು, ಮಾತನಾಡಬೇಕೆಂಡೆ ಬಾಲೆ ಏರ್ ಬಡ್ಸ್ ಹಾಕಿದಳು. ಆಗ ಸುಮ್ಮನೆ ಯಾಕೆ ಬಂದೆ ಈ ಬಾಲೆ ಹಿಂದೆ ಎಂದು ಅನಿಸಿತು. 

ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ, ಫಿಲ್ಟರ್‌ ಕಾಫಿ ಸವಿದ ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ

ಆಗ ಮತ್ತೆ ಕಿಟಕಿಯಲ್ಲಿ ಎತ್ತರದ ಕಟ್ಟಡಗಳು, ಮಾಲ್ ಗಮನಿಸುತ್ತಿದ್ದಾಗ ಮತ್ತೆ ಅದೆ ರಾಗ ಅದೆ ಹಾಡು ರೀತಿಯಲ್ಲಿ ಟ್ರಾಫಿಕ್ ಗೋಳು. ಆ ಸಮಯದಲ್ಲಿ ಆ ಬಾಲೆಯನ್ನು  ನೋಡುತ್ತಿದ್ದೆ.  ಬಟ್, ಬಸ್ ಸ್ಟಾಪ್ ಬಂದಾಗ ಜನರು ಹೆಚ್ಚಾಗುತ್ತಿದ್ದರಿಂದ ಬಾಲೆ ಮರೆಯಾದಳು. ಸೋ, ನಾನು ಚಿಕ್ಕ ಬ್ರೇಕೆಂದು ಮಲಗಿದೆ, ನಂತರ ಎಚ್ಚರಾಗಿ ನೋಡಿದರೆ ಬಾಲೆಯ ಸೀಟಿನಲ್ಲಿ ಅಜ್ಜಿ ಇದ್ಳು. ಹೋಗ್ಲಿ ಬಿಡು ಅಂತ ಕೊನೆಯ ಸ್ಟಾಪ್‌ಗೆ ಇಳಿದು ಸಿಹಿ ಮೆಕ್ಕೆಜೋಳ ತಿಂದೆ. ಕೊನೆಗೆ ಮರಳಿ ಹೋಗಬೇಕೆಂದರೆ ಅದೆ ಬಸ್ ಎದುರಿಗೆ ಬಂತು. ಆ ಬಾಲೆಯ ನೆನಪಿನ ಬಸ್ ಬಿಟ್ಟು, ಬೇರೆ ಬಸ್‌ಗೆ ಮೆಜೆಸ್ಟಿಕ್ ಗೆ ಬಂದೆ. ಹೀಗೆ ಭಾನುವಾರ (Sunday) ಬಾಲೆಯ ನೆನಪಿನೊಂದಿಗೆ ಬಿಎಂಟಿಸಿ ಬಸ್ ನಲ್ಲಿ ಒಂದು ರೌಂಡ್ಸ್ ಮುಕ್ತಾಯವಾಯಿತು.

ಬೆಂಗಳೂರು ಚಳಿ ತಡ್ಕೊಳ್ಳೋಕೆ ಆಗ್ತಿಲ್ವಾ ? ಬಿಸಿಬಿಸಿ ಸ್ನ್ಯಾಕ್ಸ್ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

click me!