ದಟ್ಟಾರಣ್ಯದಲ್ಲಿರೋ ಆದಿವಾಸಿಗಳ ಭೇಟಿಗೆ  ಹೋದ ಆಸ್ಟ್ರೇಲಿಯಾ ಯೂಟ್ಯೂಬರ್‌ಗೆ ಆಯ್ತು  ವಿಚಿತ್ರ ಅನುಭವ  

By Mahmad Rafik  |  First Published Aug 19, 2024, 12:36 PM IST

ವಿದ್ಯುತ್, ರಸ್ತೆ, ಅಂಗಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿ ಜನರನ್ನು ಭೇಟಿಗೆ ಹೋದ ಯುಟ್ಯೂಬರ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.


21ನೇ ಶತಮಾನದಲ್ಲಿಯೂ ಜನರ ಸಂಪರ್ಕ ಇಲ್ಲದೇ ಬದುಕುತ್ತಿರುವ ಸಮುದಾಯಗಳು ಅರಣ್ಯ ಪ್ರದೇಶದಲ್ಲಿ ಕಾಣ ಸಿಗುತ್ತವೆ. ಇಂದಿಗೂ ಇವರು ಆರಣ್ಯದಲ್ಲಿಯೇ ಬದುಕುತ್ತಿದ್ದು, ಇವರು ವಾಸಿಸುವ ಸ್ಥಳದಲ್ಲಿ ವಿದ್ಯುತ್ ಸಹ ಇಲ್ಲ. ಇಲ್ಲಿಗೆ ತೆರಳಲು ಸರಿಯಾದ ರಸ್ತೆಯ ವ್ಯವಸ್ಥೆಯೂ ಇರಲ್ಲ. ಇಂತಹ ಹೊರಜಗತ್ತಿನ ಸಂಪರ್ಕ ಇಲ್ಲದೇ ತಮ್ಮದೇ ಲೋಕದಲ್ಲಿ ಈ ಜನರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಈ ರೀತಿ ದಟ್ಟಾರಣ್ಯದಲ್ಲಿ ವಾಸವಾಗಿರುವ ಜನರ ವೇಷಭೂಷಣ, ಭಾಷೆ, ಆಚಾರ ವಿಚಾರಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕಳೆದ ಕೆಲವು ವರ್ಷಗಳಿಂದ ಇಂತಹ ಸಮುದಾಯಗಳನ್ನು ಭೇಟಿಯಾಗುವ ಮೂಲಕ ಅವರನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ವ್ಲಾಗರ್‌ಗಳು ಮಾಡುತ್ತಿದ್ದಾರೆ. ಆದ್ರೆ ತಮ್ಮದೇ ಲೋಕದಲ್ಲಿ ಬದುಕುತ್ತಿರೋ ಜನರು ಹೊರಗಿನವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಹೊಸಬರಿಗೆ ಅಪಾಯ ಮಾಡುವ ಭಯವೂ ಇರುತ್ತದೆ. 

ಆಸ್ಟೇಲಿಯಾ ಯೂಟ್ಯೂಬರ್‌ ಓರ್ವ ಅರಣ್ಯದಲ್ಲಿರುವ ಜನರನ್ನು ಭೇಟಿಯಾಗಿರುವ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನದಿ ದಾಟಿ ಬರುತ್ತಿದ್ದ ವ್ಯಕ್ತಿಯನ್ನು ನೋಡುತ್ತಿದ್ದಂತೆ ಆತನ ಬಳಿ ಬುಡುಕಟ್ಟು ಜನರ ಗುಂಪು ಬರುತ್ತದೆ. ಯುಟ್ಯೂಬರ್  ಕೈ ಹಿಡಿದುಕೊಂಡು ಆತನನ್ನು ಕರೆದುಕೊಂಡು ಹೋಗಲಾಗುತ್ತದೆ. ಬುಡುಕಟ್ಟು ಜನರು ತಮ್ಮದೇ ಆದ ಭಾಷೆಯಲ್ಲಿ ಏನೇನೋ ಹೇಳುತ್ತಿರುತ್ತಾರೆ. ಮುಂದಿನದ್ದ ಒಬ್ಬರು ಯುಟ್ಯೂಬರ್ ಮೇಲೆ ಬಾಣ ಬಿಡುವಂತೆ ಮಾಡುತ್ತಿರೋದನ್ನು ಗಮನಿಸಬಹುದಾಗಿದೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದ ಎಲ್ಲಾ ವೇದಿಕೆಗಳಲ್ಲಿಯೂ ವೈರಲ್ ಆಗುತ್ತಿರುತ್ತದೆ. 

Latest Videos

undefined

ಯುಟ್ಯೂಬರ್ ಬ್ರಾಡಿಮಾಸ್ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ತಮ್ಮ ಜೀವನದ ವಿಚಿತ್ರ ಮತ್ತು ಹೊಸ ಅನುಭವವಾಗಿದೆ. ಈ ಭೇಟಿಯ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ಅಪ್ಲೋಡ್ ಮಾಡುವೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಉತ್ತರ ವನವಾಟು ಮತ್ತು ಕ್ವಾಕಿಯಾ ದ್ವೀಪದಲ್ಲಿ ವಾಸವಾಗಿರುವ ಸ್ಥಳೀಯ ಬುಡಕಟ್ಟು ಜನರನ್ನು ಬ್ರಾಡಿಮಾಸ್ ಭೇಟಿಯಾಗಿದ್ದಾರೆ. 

ವಿಮಾನದಲ್ಲಿ ಪಯಣಿಸುವಾಗ ಬಾಂಬು-ಗೀಂಬು ಅಂದ್ರೆ ನೀವು ಜೈಲಲ್ಲಿ ಕಂಬಿ ಎಣಿಸೋದು ಫಿಕ್ಸ್!

ಬುಡಕಟ್ಟು ಜನರು ತಮ್ಮನ್ನು ವಿಚಿತ್ರವಾಗಿ ಸ್ವಾಗತ ಮಾಡಿಕೊಂಡರು. ನನ್ನನ್ನು ನೋಡಿದ ಖುಷಿಯಲ್ಲಿ ಜೋರಾಗಿ ಏನೇನೂ ಹೇಳುತ್ತಿದ್ದರು. ಆದ್ರೆ ಒಂದು ಕ್ಷಣ ನನಗೂ ಭಯ ಆಯ್ತು. ಈ ಜನರು ವಾಸಿಸುವ ಸ್ಥಳದಲ್ಲಿ ವಿದ್ಯುತ್ ಇಲ್ಲ, ಅಂಗಡಿಗಳು ಸಹ ಇಲ್ಲ ಎಂದು ಬ್ರಾಡಿಮಾಸ್ ಹೇಳಿಕೊಂಡಿದ್ದಾರೆ. 

ಈ ಹಿಂದೆ ಕನ್ನಡದ ವ್ಲಾಗರ್‌ಗಳಾದ ಡಾಕ್ಟರ್ ಬ್ರೋ, ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ ಸಹ ಅಮೇಜಾನ್ ಕಾಡಿನಲ್ಲಿರುವ ಜನರನ್ನು ಭೇಟಿಯಾಗಿದ್ದರು. ಕಾಡಿನಲ್ಲಿರುವ ಜನರನ್ನು ಭೇಟಿಯಾಗಿ ಅವರ ಜೀವನಶೈಲಿಯನ್ನು ಅನಾವರಣಗೊಳಿಸಿದ್ದರು.  

ವಿದೇಶದಲ್ಲಿ 58 ಸಾವಿರ ರೂಪಾಯಿ ದಂಡ ಪಾವತಿಸಿ ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ

 
 
 
 
 
 
 
 
 
 
 
 
 
 
 

A post shared by YBS (@brodiemoss)

click me!