ಮೂವತ್ತು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ (Malgudi Days) ಧಾರಾವಾಹಿ ಎಲ್ಲರ ಮನಸೂರೆಗೊಂಡಿತ್ತು. ಶಿವಮೊಗ್ಗದ ಶಿವಪ್ಪ ನಾಯಕನ ಅರಮನೆ, ಆಗುಂಬೆ, ಅರಸಾಳು ರೈಲು ನಿಲ್ದಾಣ (Arasalu Railway station) ಹೀಗೆ ಮಲೆನಾಡಿನ ಸುಂದರ ಪರಿಸರಗಳಲ್ಲಿ ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡಿತ್ತು. ಈ ನೆನಪನ್ನು ಜೀವಂತವಾಗಿಸುವ ಪ್ರಯತ್ನ ಮಾಡಲಾಗಿದೆ. ಅರಸಾಳು ರೈಲ್ವೇ ನಿಲ್ದಾಣದಲ್ಲಿ 'ಮಾಲ್ಗುಡಿ ಡೇಸ್' ನೆನಪಿಸುವ ಮ್ಯೂಸಿಯಂ (Museum) ಸಿದ್ಧವಾಗಿದೆ.
ಮಾಲ್ಗುಡಿ ಪಟ್ಟಣ ಮತ್ತು ಮಾಲ್ಗುಡಿ ನಿಲ್ದಾಣವು ದಕ್ಷಿಣ ಭಾರತದ ಕಾಲ್ಪನಿಕ ಸ್ಥಳಗಳಾಗಿದ್ದು, ಆರ್.ಕೆ ನಾರಾಯಣ್ (R.K Narayan) ಅವರ ಕಾದಂಬರಿಗಳು ಮತ್ತು ಸಣ್ಣ ಕಥೆಗಳ ಮೂಲಕ ಜನಪ್ರಿಯವಾಗಿದೆ. ನಾರಾಯಣ್ ಅವರ ಅತ್ಯುತ್ತಮ ಕೃತಿಗಳ ಕೇಂದ್ರವಾಗಿರುವ ಮಾಲ್ಗುಡಿ ಪಟ್ಟಣ ಮತ್ತು ನಿಲ್ದಾಣವು 80ರ ದಶಕದ ಉತ್ತರಾರ್ಧದಲ್ಲಿ ಮತ್ತು 90ರ ದಶಕದ ಆರಂಭದಲ್ಲಿ ಮನೆಮಾತಾಗಿತ್ತು. ಮಾಲ್ಗುಡಿಯ ಕಾಲ್ಪನಿಕ ಕಥೆಗಳು ಭಾರತೀಯ ಪ್ರೇಕ್ಷಕರನ್ನು ವರ್ಷಗಳ ಕಾಲ ರಂಜಿಸಿದ್ದವು.
ಮಾಲ್ಗುಡಿ ಡೇಸ್ (Malgudi Days) ಧಾರಾವಾಹಿ, ಹಿರಿಯ ನಟ ಶಂಕರ್ ನಾಗ್ ಅವರ ಕನಸು. ಮೂವತ್ತು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಧಾರಾವಾಹಿ ಎಲ್ಲರ ಮನಸೂರೆಗೊಂಡಿತ್ತು. ಶಿವಮೊಗ್ಗದ ಶಿವಪ್ಪ ನಾಯಕನ ಅರಮನೆ, ಆಗುಂಬೆ, ಅರಸಾಳು ರೈಲು ನಿಲ್ದಾಣ ಹೀಗೆ ಮಲೆನಾಡಿನ ಸುಂದರ ಪರಿಸರಗಳಲ್ಲಿ ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡಿತ್ತು. ಈ ನೆನಪನ್ನು ಜೀವಂತವಾಗಿಸುವ ಪ್ರಯತ್ನವನ್ನು ಮೈಸೂರು ರೈಲ್ವೆ ವಿಭಾಗ ಮಾಡಿದೆ.
Travel Tips : ಹುಡುಗಿಯರಿಗೆ ಸುರಕ್ಷಿತ ಈ ಪ್ರವಾಸಿ ತಾಣ
ಮಾಲ್ಗುಡಿ ಪಟ್ಟಣದ ನೆನಪು
ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದಲ್ಲಿ ನೆಲೆಸಿರುವ ಮತ್ತು ಹೊಸನಗರ ತಾಲೂಕಿನಲ್ಲಿರುವ ಈ ನಿಲ್ದಾಣವು ಮಾಲ್ಗುಡಿ ಡೇಸ್ ಟಿವಿ ಕಾರ್ಯಕ್ರಮದ ಕೆಲವು ಸ್ಮರಣೀಯ ಸರಣಿಗಳಿಗೆ ಆತಿಥ್ಯ ವಹಿಸಿದೆ. ಸ್ವಾಮಿ ಮತ್ತು ಸ್ನೇಹಿತರ ನೆನಪುಗಳು ಮ್ಯೂಸಿಯಂ (Museum)ನಲ್ಲಿ ಜೀವಂತವಾಗಿವೆ ಎಂದು ರೈಲ್ವೆ ರಾಜ್ಯ ಸಚಿವ ದರ್ಶನ ಜರ್ದೋಶ್ ಹೇಳಿದ್ದಾರೆ. ಈ ಸ್ಥಳದಲ್ಲಿ ಮಾಲ್ಗುಡಿ ಡೇಸ್ ಹೆಸರಿನ ಕೆಫೆ (Cafe)ಯೂ ಇದೆ.
ಕರ್ನಾಟಕ ರಾಜ್ಯವು 2019 ಲ್ಲಿ ಅರಸಲು ರೈಲು ನಿಲ್ದಾಣವನ್ನು ಮಾಲ್ಗುಡಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿತು.
ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದಲ್ಲಿ ನೆಲೆಸಿರುವ ಮತ್ತು ಹೊಸನಗರ ತಾಲೂಕಿನಲ್ಲಿರುವ ಈ ನಿಲ್ದಾಣವು ಮಾಲ್ಗುಡಿ ಡೇಸ್ ಟಿವಿ ಕಾರ್ಯಕ್ರಮದ ಕೆಲವು ಸ್ಮರಣೀಯ ಸರಣಿಗಳಿಗೆ ಆತಿಥ್ಯ ವಹಿಸಿದೆ. ವರದಿಗಳ ಪ್ರಕಾರ, ನಿಲ್ದಾಣದ ಮರುನಾಮಕರಣವು ಕೆಲವು ಸಂಚಿಕೆಗಳನ್ನು ನಿರ್ದೇಶಿಸಿದ ಭಾರತೀಯ ನಟ ಶಂಕರ್ ನಾಗ್ ಅವರಿಗೆ ಗೌರವ ಸಲ್ಲಿಸುವ ಮಾರ್ಗವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು 2019ರಲ್ಲಿ ನಿಲ್ದಾಣದೊಳಗೆ ವಸ್ತುಸಂಗ್ರಹಾಲಯ ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದ್ದರು.
ಮ್ಯೂಸಿಯಂನ ಫೋಟೋಗಳನ್ನು ರೈಲ್ವೆ ಸಚಿವಾಲಯ (Railway Ministry) ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದೆ. 'ಮಾಲ್ಗುಡಿ ಮ್ಯೂಸಿಯಂನಲ್ಲಿ ಮಾಲ್ಗುಡಿ ದಿನಗಳನ್ನು ಮತ್ತೊಮ್ಮೆ ಸವಿಯಿರಿ. ಮೈಸೂರು ವಿಭಾಗದ ಅಡಿಯಲ್ಲಿ ಅರಸಲು ನಿಲ್ದಾಣದಲ್ಲಿ ಹೊಸದಾಗಿ ತೆರೆಯಲಾದ ಮಾಲ್ಗುಡಿ ವಸ್ತುಸಂಗ್ರಹಾಲಯದಲ್ಲಿ ಮಾಲ್ಗುಡಿ ದಿನಗಳ ಸ್ವಾಮಿ ಮತ್ತು ಸ್ನೇಹಿತರ ಅಚ್ಚುಮೆಚ್ಚಿನ ನೆನಪುಗಳನ್ನು ನೆನಪಿಸಿಕೊಳ್ಳಿ. ಹೆಚ್ಚಿನ ಸಂತೋಷಕ್ಕಾಗಿ, 'ಮಾಲ್ಗುಡಿ ಚಾಯ್' ಎಂಬ ಕೆಫೆಯನ್ನು ಸಹ ತೆರೆಯಲಾಗಿದೆ' ಎಂದು ರೈಲ್ವೆ ಸಚಿವಾಲಯವು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದೆ.
ರೈಲಿನ ಎಮರ್ಜನ್ಸಿ ಚೈನ್ ಎಳೆದ ಪ್ರಯಾಣಿಕ: ಜೀವ ಪಣಕ್ಕಿಟ್ಟು ಟ್ರೈನ್ ರಿಸ್ಟಾರ್ಟ್ ಮಾಡಿದ ಲೋಕೋ ಪೈಲಟ್
ಅರಸಾಳು ರೈಲ್ವೇ ನಿಲ್ದಾಣದಲ್ಲಿ ಮಾಲ್ಗುಡಿ ಮ್ಯೂಸಿಯಂ
ಮಾಲ್ಗುಡಿ ಡೇಸ್ ಧಾರಾವಾಹಿಯ ಮೂಲ ಸೆಟ್‌ಗಳನ್ನು ಜಾನ್ ದೇವರಾಜ್ ಅವರು ನಿರ್ಮಿಸಿದ್ದರು. ಈಗ ಪುನಃ ಅವರಿಂದಲೇ ಈ ಮ್ಯೂಸಿಯಂನಲ್ಲಿನ ಕಲೆ ಅರಳಿದೆ. ಗೋಡೆಯ ಮೇಲಿನ ಅಂದವಾದ ಪೇಟಿಂಗ್‌ಗಳು ಮನಮೋಹಕವಾಗಿವೆ. ಧಾರಾವಾಹಿಯ ಚಿತ್ರೀಕರಣದ ವೇಳೆಯ ಭಾವಚಿತ್ರಗಳು ಗೋಡೆಯನ್ನು ಅಲಂಕರಿಸಿವೆ. ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಕಾಣುವ ರೈಲು ನಿಲ್ದಾಣದ ಒಂಟಿ ಮರ, ಪ್ಲಾಟ್‌ಫಾರಂ, ಕಲ್ಲು ಬೆಂಚುಗಳು, ನಿಲ್ದಾಣದ ಸಾಲು ಕಂಬಿಗಳಿಗೂ ಜೀವ ತುಂಬಲಾಗಿದೆ.
ನೈಋತ್ಯ ರೈಲ್ವೆ ವಲಯದ ಪ್ರಕಾರ ಹಳೆ ಅರಸಾಳು ರೈಲು ನಿಲ್ದಾಣವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಅಂದಾಜು 35 ಲಕ್ಷ ರೂ. ವೆಚ್ಚವಾಗಿದೆ. ನಿಲ್ದಾಣದ ಹಳೆಯ ಭಾಗವನ್ನು ಅದರ ಮೂಲ ವಾಸ್ತುಶೈಲಿಯನ್ನು ಬದಲಾಯಿಸದೆ ಸಾರ್ವಜನಿಕ ಸ್ಥಳವಾಗಿ ಪರಿವರ್ತಿಸಲಾಯಿತು. ವಸ್ತುಸಂಗ್ರಹಾಲಯವು 8 ಆಗಸ್ಟ್ 2002 ರಂದು ಸಾರ್ವಜನಿಕರಿಗೆ ತನ್ನ ಬಾಗಿಲು ತೆರೆಯಿತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು 90 ದಿನಗಳವರೆಗೆ ಮುಚ್ಚಬೇಕಾಯಿತು. ಆಗಸ್ಟ್ 3, 2021 ರವರೆಗೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ 51,501 ಎಂದು ನೈಋತ್ಯ ರೈಲ್ವೆ ಹೇಳಿದೆ.