ಸಮುದ್ರ (Sea)ವೊಂದು ವಿಸ್ಮಯದ ಪ್ರಪಂಚ. ಅಲ್ಲೊಂದು ವಿಸ್ಮಯದ ಪ್ರಾಣಿ ಗಾಬ್ಲಿನ್ ಶಾರ್ಕ್ (Goblin Sharks). ಅಸ್ಥಿಪಂಜರದಂತೆ ಕಾಣುವ ಜತೆಗೆ, ವಿಚಿತ್ರವಾದ ದವಡೆಯಿಂದ ಭಯ ಬೀಳಿಸುತ್ತದೆ. ಆದರೂ ಮನುಷ್ಯರ ಬೇಟೆಗೆ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ಏನಿದು ವಿಚಿತ್ರ ತಿಳಿಯೋಣ ಬನ್ನಿ.
ಸಾಗರವೆನ್ನುವುದು (Ocean) ವಿಸ್ಮಯಗಳ ಮಹಾಪೂರ. ಚಿತ್ರವಿಚಿತ್ರ ಪ್ರಾಣಿಗಳ (Animals) ಪ್ರಪಂಚವೇ ಸಾಗರದಲ್ಲಿರುತ್ತದೆ. ಕೆಲವು ಪ್ರಾಣಿಗಳು ಪದೇ ಪದೆ ಮನುಷ್ಯ ಪ್ರಪಂಚಕ್ಕೆ ತಮ್ಮ ಅಸ್ತಿತ್ವ ಸಾರುತ್ತ ಫ್ಯಾಮಿಲಿಯರ್ (Familiar) ಎನಿಸಿವೆ. ಆದರೆ, ಕೆಲವು ಪ್ರಾಣಿಗಳು ಅಪರೂಪಕ್ಕೆ (Rare) ಮಾತ್ರ ಗೋಚರಿಸುತ್ತವೆ. ಅಂಥವು ಹತ್ತಾರು ವರ್ಷಗಳಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುವುದಿದೆ. ಮನುಷ್ಯರ ಅರಿವಿಗೇ ಬಾರದ ಪ್ರಾಣಿಗಳೂ ಇದ್ದಿರಬಹುದು.
ಅಪರೂಪದ ಶಾರ್ಕ್ (Shark)
ಅಪರೂಪಕ್ಕೆ ಮನುಷ್ಯನಿಗೆ ಗೋಚರಿಸುವ ಸಮುದ್ರ ಪ್ರಾಣಿಗಳಲ್ಲಿ ಒಂದು ಗಾಬ್ಲಿನ್ ಶಾರ್ಕ್. ಸಾಮಾನ್ಯ ಶಾರ್ಕ್ ಚಿತ್ರ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದೆ. ಮಕ್ಕಳಿಗಂತೂ ಶಾರ್ಕ್ ಎಂದರೆ ಅಚ್ಚುಮೆಚ್ಚು. ಆದರೆ, ಈ ಗಾಬ್ಲಿನ್ ಶಾರ್ಕ್ ಇದೆಯಲ್ಲ, ನೋಡಲು ಭಯ ಹುಟ್ಟಿಸುವಂತೆ ಇರುತ್ತದೆ. ಆಳ ಸಮುದ್ರ ಅಥವಾ ಸಮುದ್ರದ ತಳಭಾಗದಲ್ಲಿ ವಾಸಿಸುವ ಗಾಬ್ಲಿನ್ ಶಾರ್ಕ್ ಅಸ್ಥಿಪಂಜರದಂತೆ (Skeleton) ಕಾಣುತ್ತದೆ. ಕೆಲವೇ ಕೆಲವು ಜನ ಇದನ್ನು ಮುಖಾಮುಖಿಯಾಗಿ ನೋಡಿ ಬೆಚ್ಚಿಬಿದ್ದಿದ್ದಾರೆ.
ಉದ್ದನೆಯ ಮೂತಿ (Snout), ತಿಳಿಗುಲಾಬಿ (Pink) ಚರ್ಮದ ಬಣ್ಣ, ಚೂಪಾದ ಹಲ್ಲುಗಳು, ಉದ್ದನೆಯ ದೇಹ ಇದರ ಸಾಮಾನ್ಯ ಚಹರೆ. ಬಾಯಿ ತೆರೆಯುವುದು ಭಾರೀ ವಿಚಿತ್ರವಾಗಿ. ದವಡೆ ಕಿರಿದಾಗಿರುವಂತೆ ಕಂಡರೂ ತೆರೆದರೆ ಅಗಲವಾಗಿ ವಿಸ್ತಾರವಾಗುತ್ತದೆ. ಹೆಚ್ಚುಕಡಿಮೆ ಡೈನೋಸಾರ್ ನಂತೆ ಕಂಡರೂ ಅಚ್ಚರಿಯಿಲ್ಲ. ಅಸ್ಥಿಪಂಜರದಂತೆಯೇ ಗೋಚರಿಸುವ ಮೂಲಕ ಸಮುದ್ರದ ತಳಕ್ಕೆ ಇಳಿಯುವವರನ್ನು ಬೆಚ್ಚಿ ಬೀಳಿಸುತ್ತದೆ.
ರೈಲಿನ ಎಮರ್ಜನ್ಸಿ ಚೈನ್ ಎಳೆದ ಪ್ರಯಾಣಿಕ: ಜೀವ ಪಣಕ್ಕಿಟ್ಟು ಟ್ರೈನ್ ರಿಸ್ಟಾರ್ಟ್ ಮಾಡಿದ ಲೋಕೋ ಪೈಲಟ್
ದೊಡ್ಡ ದೇಹದ ಹೆಣ್ಣು (Female) ಶಾರ್ಕ್
ಅಚ್ಚರಿಯಾಗಬಹುದು, ಗಾಬ್ಲಿನ್ ಶಾರ್ಕ್ 20 ಅಡಿ ಪಾದವನ್ನು ಹೊಂದಿರುತ್ತದೆ. ಗಂಡು ಶಾರ್ಕ್ ಗಳಿಗಿಂತ ಹೆಣ್ಣು ಶಾರ್ಕ್ ಗಳು ಹೆಚ್ಚು ದೊಡ್ಡದಾಗಿರುತ್ತವೆ. ಸಮುದ್ರದ ತಳಭಾಗದಲ್ಲಿ ವಾಸಿಸುವುದರಿಂದ ಅಪರೂಪದಲ್ಲಿ ಅಪರೂಪಕ್ಕೆ ಮಾತ್ರ ಕಂಡುಬರುತ್ತವೆ. ಗಾಬ್ಲಿನ್ ಶಾರ್ಕ್ ಗಳು ಸಮುದ್ರದ 1300 ಅಡಿ ಆಳದಲ್ಲಿ ಕಂಡುಬಂದಿವೆ. ಹಾಗೂ ಕೇವಲ ಮೂರು ಮಹಾಸಾಗರಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿವೆ. ಸಮುದ್ರದ ತಳಭಾಗದಲ್ಲೇ ವಾಸಿಸುವ ಡ್ರಾಗನ್ ಫಿಶ್, ಸೆಫಾಲೊಪಾಡ್ ಮುಂತಾದವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಕೆಲವೊಮ್ಮೆ ಮಾತ್ರ ತಮ್ಮ ನೈಸರ್ಗಿಕ ವಾಸಸ್ಥಾನದಿಂದ ಹೊರತಾದ ಪ್ರದೇಶದಲ್ಲಿ ಆಹಾರ ಸೇವನೆ ಮಾಡುತ್ತವೆ. ಇಲ್ಲವಾದಲ್ಲಿ ತಮ್ಮ ನೆಲೆಯಲ್ಲೇ ಇರುವುದೆಂದರೆ ಅವುಗಳಿಗೆ ಭಾರೀ ಸಮಾಧಾನ.
ಗಾಬ್ಲಿನ್ ಶಾರ್ಕ್ ಮೂತಿಯೇ ಅವುಗಳಿಗೆ ಒಂದು ವಿಶಿಷ್ಟ ಶಕ್ತಿ ನೀಡಿವೆ. “ಆಂಪ್ಯುಲಾ ಆಫ್ ಲೊರೆಂಜಿನಿʼ ಎನ್ನುವ ಜಾಲದಿಂದ ಇವು ಆವೃತವಾಗಿರುವನ್ನು ಪತ್ತೆ ಮಾಡಲಾಗಿದೆ. ಇದು ನೀರಿನಲ್ಲಿ ಇರಬಹುದಾದ ವಿದ್ಯುತ್ ವಲಯಗಳನ್ನು ಗುರುತಿಸುವ ಎಲೆಕ್ಟ್ರೊರಿಸೆಪ್ಟರ್ ಜಾಲವಾಗಿದೆ. ಇದರಿಂದಲೇ ಗಾಬ್ಲಿನ್ ಶಾರ್ಕ್ ಗಳು ಕೆಲವು ಜಾತಿಯ ಮೀನು ಹಾಗೂ ಪ್ರಾಣಿಗಳು ಹೊರಸೂಸುವ ವಿದ್ಯುತ್ ತರಂಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ.
ಭಾರತದ ಈ ಸ್ಥಳಗಳು ಮೇ ತಿಂಗಳಿನಲ್ಲಿ ಭೇಟಿ ನೀಡಲು ಬೆಸ್ಟ್, ಜಸ್ಟ್ 5000 ರೂ. ಇದ್ದರೆ ಸಾಕು !
ತೇಲುವ (Float) ಶಕ್ತಿ
ತಮ್ಮ ಬೇಟೆ ಪತ್ತೆಯಾದ ಕ್ಷಣವೇ ಅವು ಈಜುವುದನ್ನು ಬಿಟ್ಟು ತೇಲಲು ಆರಂಭಿಸುತ್ತವೆ! ಲಿವರ್ ನಲ್ಲಿರುವ ವಿಶಿಷ್ಟ ಶಕ್ತಿಯಿಂದ ಚೂರೇ ಚೂರು ಸದ್ದಿಲ್ಲದೆ ಆ ಪ್ರಾಣಿಯತ್ತ ತೇಲುತ್ತ ಸಾಗುತ್ತವೆ. ವಿಸ್ತರಿಸಬಹುದಾದ ದವಡೆಗಳನ್ನು ಮುಂದಕ್ಕೆ ಚಾಚಿ ಬೇಟೆಗೆ ಸನ್ನದ್ಧವಾಗುತ್ತದೆ. ಬೇರೆ ಶಾರ್ಕ್ ಗಳಂತೆ ಈ ಶಾರ್ಕ್ ಗಳ ಸಂತಾನೋತ್ಪತ್ತಿ (Reproductive) ಹಾಗೂ ಇನ್ನಿತರ ಜೀವನಶೈಲಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದುಬಂದಿಲ್ಲ ಎಂದರೆ, ಇವು ಅದೆಷ್ಟು ಅಪರೂಪ ಎಂದು ಅಂದಾಜಾಗಬಹುದು. ಇದುವರೆಗೂ ಗರ್ಭ ಧರಿಸಿದ ಗಾಬ್ಲಿನ್ ಶಾರ್ಕ್ ಗಳನ್ನು ಅಧ್ಯಯನ ಮಾಡಲು ಸಾಧ್ಯವೇ ಆಗಿಲ್ಲ.
ಇಷ್ಟು ಅಪರೂಪದ ಪ್ರಾಣಿಗಳಾದರೂ ಗಾಬ್ಲಿನ್ ಶಾರ್ಕ್ ಗಳು ತಮ್ಮ ವಾಸಸ್ಥಾನದಲ್ಲಿ ಯಾವುದೇ ಅಪಾಯ ಎದುರಿಸುತ್ತಿಲ್ಲ. ಹೀಗಾಗಿ, ಇವುಗಳನ್ನು ಅಳಿವಿನಂಚಿನಲ್ಲಿರುವ ಅಥವಾ ಅಪಾಯದಲ್ಲಿರುವ ಪ್ರಾಣಿವರ್ಗಕ್ಕೆ ಸೇರಿಸಲಾಗಿಲ್ಲ. ಒಂದೊಮ್ಮೆ ಇದು ಸಮುದ್ರದಲ್ಲಿ ಮನುಷ್ಯರಿಗೆ ಎದುರಾದರೂ ಅಪಾಯಕಾರಿಯಲ್ಲ.