ಉಡುಪಿಯ ವರಂಗ ಕುರಿತ ಮಹೀಂದ್ರಾ ಟ್ವೀಟ್ ಗೆ ಕರಾವಳಿಗರ ಸಂತಸ, ಏನಿದು ವರಂಗ

By Gowthami K  |  First Published Jun 14, 2023, 7:28 PM IST

ಉಡುಪಿ ಜಿಲ್ಲೆಯ ವರಂಗ ದೇಶದ ಅತ್ಯುನ್ನತ ಉದ್ಯಮಪತಿಗಳಲ್ಲಿ ಒಬ್ಬರಾದ ಆನಂದ ಮಹೀಂದ್ರಾ ಅವರ ಕಣ್ಮನೆ ಸೆಳೆದಿದೆ. ವರಂಗದ ಕುರಿತು ಟ್ವೀಟ್ ಮಾಡಿದ್ದಾರೆ.


ಉಡುಪಿ (ಜೂ.14): ಉಡುಪಿ ಜಿಲ್ಲೆಯ ವರಂಗ ಯಾರಿಗೆ ಗೊತ್ತಿಲ್ಲ ಹೇಳಿ, ಸೋಶಿಯಲ್ ಮೀಡಿಯಾ ಬಂದ ಮೇಲಂತೂ ವಿಶ್ವಾದ್ಯಂತ ಈ ಕ್ಷೇತ್ರ  ಫೇಮಸ್ ಆಗಿ ಬಿಟ್ಟಿದೆ. ಇಲ್ಲಿನ ಸುಂದರ ಲೊಕೇಶನ್ ನೂರಾರು ಸಿನಿಮಾಗಳಲ್ಲಿ ಚಿತ್ರೀಕರಣಗೊಂಡಿದೆ. ಇಂತಹ ಸುಂದರ ಪ್ರದೇಶ ಈಗ ದೇಶದ ಅತ್ಯುನ್ನತ ಉದ್ಯಮಪತಿಗಳಲ್ಲಿ ಒಬ್ಬರಾದ ಆನಂದ ಮಹೀಂದ್ರಾ ಅವರ ಕಣ್ಮನೆ ಸೆಳೆದಿದೆ. ವರಂಗದ ಕುರಿತು ಟ್ವೀಟ್ ಮಾಡುವ ಮೂಲಕ ದೇಶದ ಪ್ರಮುಖ ಹತ್ತು ಸುಂದರ ಪ್ರದೇಶಗಳ ಪಟ್ಟಿಯಲ್ಲಿ ಹಂಚಿಕೊಂಡಿದ್ದು ಇದು ಜನರ ಮೆಚ್ಚುಗೆ ಪಾತ್ರವಾಗಿದೆ. 

ಉಡುಪಿ ಜಿಲ್ಲೆಯಲ್ಲಿ ಕಾಣಸಿಗುವ ಜೈನ ಧರ್ಮೀಯರ ಅತ್ಯಂತ ಪವಿತ್ರವಾದ ಸ್ಥಳ ವರಂಗ. ವರಂಗ ರಾಜನ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಈ ಸ್ಥಳವನ್ನು ವರ್ಗ ಎಂದು ಕರೆಯಲಾಗುತ್ತಿತ್ತು ಎನ್ನಲಾಗುತ್ತದೆ. 

Tap to resize

Latest Videos

undefined

ಭಾರತದಲ್ಲಿ ನೋಡ್ಲೇಬೇಕಾದ ಅದ್ಭುತ ಸ್ಥಳಗಳು, ಆನಂದ್ ಮಹೀಂದ್ರಾ ಶೇರ್ ಮಾಡಿರೋ ಬಕೆಟ್ ಲಿಸ್ಟ್‌ ಇಲ್ಲಿದೆ

ಇಲ್ಲಿ ವಿಶೇಷವಾಗಿ ಮೂರು ಬಸದಿಗಳು ಇದ್ದು ಮೂರು ಬಸದಿಗಳು ಜನಾಕರ್ಷಣೀಯ ಕೇಂದ್ರವಾಗಿದೆ ಎಂದರೆ ತಪ್ಪಾಗಲಾರದು. ವರಂಗದ ಪ್ರಮುಖ ಆಕರ್ಷಣೆಗಳೆಂದರೆ ನೇಮಿನಾಥ ಬಸದಿ, ಚಂದ್ರನಾಥ ಬಸದಿ ಮತ್ತು ಕೆರೆ ಬಸದಿ ಈ ಮೂರು ಬಸದಿಗಳು ಪ್ರವಾಸಿಗರನ್ನ ಹಲವು ವರ್ಷಗಳಿಂದ ತನ್ನತ್ತ ಸಳೆಯುತ್ತಿದೆ. ಆಗುಂಬೆಯ ತಟದಲ್ಲಿರುವ ಹೆಬ್ರಿಯಿಂದ ಕಾರ್ಕಳಕ್ಕೆ ತೆರಳುವ ಮಾರ್ಗದಲ್ಲಿ  ವರಂಗ ಕ್ಷೇತ್ರ ಕಾಣ ಸಿಗುತ್ತದೆ. ಇಲ್ಲಿನ ಕೆರೆಯ ಮಧ್ಯದಲ್ಲಿರುವ ಕೆರೆ ಬಸದಿ ದೇವಸ್ಥಾನಕ್ಕೆ ದೋಣಿಯ ಮೂಲಕ ಸಾಗಿ ಅಲ್ಲಿನ ಪ್ರಕೃತಿ ವೀಕ್ಷಣೆ ಮಾಡುವುದು ಒಂದು ಅಧ್ಬುತ ಅನುಭವ ಎನ್ನಬಹುದು.

ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ

ವರಂಗದ ಕೆರೆ ಬಸದಿಗೆ 850 ವರ್ಷ, ನೇಮಿನಾಥ ಬಸದಿ 1200 ವರ್ಷ ಮತ್ತು ಚಂದ್ರನಾಥ ಬಸದಿ 1000 ವರ್ಷಗಳಷ್ಟು ಹಳೆಯದಾಗಿದ್ದು ಈ ಸ್ಥಳಕ್ಕೆ ಐತಿಹಾಸಿಕ ಮಹತ್ವವಿದೆ. ಸಿನಿಮಾ ಗಳಲ್ಲಿ ಈ ಕ್ಷೇತ್ರದ ಚಿತ್ರೀಕರಣ ಬಂದ ಬಳಿಕ ನೂರಾರು ಜನ ವರಂಗ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದರು. 

ಸದ್ಯ ವರಂಗದ ಕುರಿತಾಗಿ ದೇಶದ ಅತ್ಯುನ್ನತ ಉದ್ಯಮಿ ಪತಿಗಳಲ್ಲಿ ಓರ್ವರಾದ ಆನಂದ್ ಮಹೇಂದ್ರ ಟ್ವೀಟ್ ಮಾಡಿದ್ದಾರೆ. ಪ್ರಾಕೃತಿಕವಾಗಿ ಸುಂದರವಾಗಿರುವ ಪ್ರದೇಶ ಎಂದು ಟ್ವೀಟ್ ಮಾಡಿರುವ ಆನಂದ್ ಮಹೇಂದ್ರ ವರಂಗ ಕ್ಷೇತ್ರದ ಕುರಿತಾಗಿ ದೇಶದಾದ್ಯಂತ ಕುತೂಹಲ ಮೂಡುವಂತೆ ಮಾಡಿದ್ದಾರೆ.

 

5. Varanga Village, Karnataka pic.twitter.com/ZcFfKTcVlI

— Colours of Bharat (@ColoursOfBharat)

ಫ್ರೀ ಬಸ್ಸಲ್ಲಿ ಪ್ರಿಯಕರನಿಗಾಗಿ ಹುಬ್ಬಳ್ಳಿಯಿಂದ ಕರಾವಳಿಗೆ ಓಡೋಡಿ ಬಂದ ವಿವಾಹಿತೆ!

ಸದ್ಯ ವರಂಗ ಕ್ಷೇತ್ರದ ಕುರಿತಾಗಿ ಸಾಕಷ್ಟು ಕರೆಗಳು ಬರುತ್ತಿರುವುದು ಆನಂದ್ ಮಹೇಂದ್ರ ಅವರ ಟ್ಟೀಟ್ ನ ಪ್ರಭಾವ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ರಾಜ್ಯದ ಜನತೆಗೆ ಪರಿಚಯ ವಿದ್ದ ವರಂಗ ಕ್ಷೇತ್ರ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.  

ಪ್ರತಿ ಬಾರಿಯೂ ಏನಾದರೂ ಒಂದು ವಿಶೇಷಗಳನ್ನ ಹುಡುಕಿ ತಿಳಿಸುವ ಆನಂದ್ ಮಹೇಂದ್ರ ಅವರು ಈ ಬಾರಿ ಕರ್ನಾಟಕದ ಅದರಲ್ಲೂ ಉಡುಪಿಯ ಈ ಪ್ರದೇಶವನ್ನು ಗುರುತಿಸಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ.

 

This beauty around us just left me speechless…My bucket list for travel in India now overflows…. https://t.co/WXunxChIKg

— anand mahindra (@anandmahindra)
click me!