ಬುಡಕಟ್ಟು ಜನರು ಮಾಡರ್ನ್‌ ಆಗ್ಲಿ ಅಂತ ಇಂಟರ್ನೆಟ್‌ ಕೊಟ್ಟಿದ್ದೇ ತಪ್ಪಾಯ್ತು!

By Roopa HegdeFirst Published Jun 6, 2024, 5:25 PM IST
Highlights

ಇಂಟರ್ನೆಟ್ ಬಳಕೆ ಹೇಗೆ ಮಾಡ್ಬೇಕು ಎಂಬುದು ಗೊತ್ತಿದ್ರೆ ಮಾತ್ರ ಅಭಿವೃದ್ಧಿ ಸಾಧ್ಯ. ಕಾಡು ಜನಾಂಗ ಅಭಿವೃದ್ಧಿ ಆಗ್ಲಿ ಅಂತ ಎಲೋನ್ ಮಸ್ಕ್ ಕಂಪನಿ ಇಂಟರ್ನೆಟ್ ನೀಡಿದ್ರೆ ಬುಡಕಟ್ಟು ಜನಾಂಗ ಬೇರೆಯದೇ ಕೆಲಸ ಮಾಡ್ತಿದೆ. ಇದನ್ನು ನೋಡಿ ಅಲ್ಲಿನ ಹಿರಿಯರು ದಂಗಾಗಿದ್ದಾರೆ. 
 

ವಿಶ್ವದಲ್ಲಿ ಬುಡಕಟ್ಟು ಜನಾಂಗದ ಸಂಖ್ಯೆ (World Tribal Population) ಸಾಕಷ್ಟಿದೆ. ದಟ್ಟ ಅರಣ್ಯದಲ್ಲಿ ಕೆಲ ಜನಾಂಗ ವಾಸ ಮಾಡ್ತಿದೆ. ಅವರು ಮುಖ್ಯವಾಹಿನಿ ಜೊತೆ ಸಂಪರ್ಕ ಹೊಂದಿಲ್ಲ. ಹಾಗಾಗಿಯೇ ಅವರನ್ನು ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಕೆಲ ಕಾಡು ಜನಾಂಗ ಹೊರ ಪ್ರಪಂಚದ ಜೊತೆ ಸಂಪರ್ಕ ಬೆಳೆಸಿದ್ದು, ನಿಧಾನವಾಗಿ ತನ್ನ ಜೀವನ ಶೈಲಿಯನ್ನು ಬದಲಿಸಿಕೊಳ್ತಿದೆ. ಕಾಡಿನ ಮಧ್ಯೆ ಇರುವ ಈ ಜನಾಂಗಗಳನ್ನು ಸಂಪರ್ಕಿಸೋದು ಸುಲಭವಲ್ಲ. ಅನೇಕ ಎನ್ ಜಿಒಗಳು ಹಾಗೂ ಸರ್ಕಾರ ಅವರನ್ನು ಪತ್ತೆ ಮಾಡಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಕಾಡಿನ ಮಧ್ಯೆ ಇರುವ ಜನಾಂಗದ ಜನರು ನಗರಕ್ಕೆ ಬರಲು ಇಷ್ಟಪಡೋದಿಲ್ಲ. ಹಾಗಾಗಿ ಅವರಿಗೆ ಅಗತ್ಯವಾದ ವಸ್ತುಗಳನ್ನು ಸರ್ಕಾರ ಅವರಿದ್ದಲ್ಲಿಗೆ ಒದಗಿಸುತ್ತಿದೆ. ಅಮೆಜಾನ್ ಕಾಡುಗಳಲ್ಲಿ ಮಾರುಬೊ ಜನಾಂಗವೊಂದು ವಾಸ ಮಾಡುತ್ತಿದೆ. ಅವರನ್ನು ಮಾಡರ್ನ್ ಮಾಡುವ ಉದ್ದೇಶದಿಂದ ಎಲಾನ್ ಮಸ್ಕ್ ಕಂಪನಿ ಸ್ಟಾರ್ ಲಿಂಕ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿದೆ. ಇಂಟರ್ನೆಟ್ ಬಂದಿದ್ದೆ ತಡ ಮಾರಬೊ ಜನಾಂಗದಲ್ಲಿ ಸಂಪೂರ್ಣ ಬದಲಾವಣೆ ಕಂಡು ಬಂದಿದೆ. ಇಲ್ಲಿ ಕೆಟ್ಟ ಕೆಲಸಕ್ಕೆ ಇಂಟರ್ನೆಟ್ ಬಳಕೆಯಾಗ್ತಿರೋದು ಇದೆ.

ಬುಡಕಟ್ಟು (Tribe) ಜನಾಂಗವನ್ನು ಹಾಳು ಮಾಡಿದ ಇಂಟರ್ನೆಟ್ (Internet) : ಮಾರುಬೊ (Marubo) ಜನಾಂಗ, ಬ್ರೆಜಿಲ್‌ನ ಇಟುಯಿ ನದಿಯ ದಡದ ಅಲ್ಲಲ್ಲಿ ನೆಲೆಸಿದೆ. ಮಾಹಿತಿ ಪ್ರಕಾರ, ಮಾರುಬೊ ಜನಾಂಗದ ಜನರು ಈಗ ಇಂಟರ್ನೆಟ್ ಚಟಕ್ಕೆ ಬಿದ್ದಿದ್ದಾರೆ. ಕೊಳಕು ಸಿನಿಮಾ ವೀಕ್ಷಣೆ ಹಾಗೂ ಸಾಮಾಜಿಕ ಜಾಲತಾಣಗಳನ್ನು ಸ್ಕ್ರಾಲ್ ಮಾಡೋದ್ರಲ್ಲಿಯೇ ಅವರು ಸಮಯ ಕಳೆಯುತ್ತಿದ್ದಾರೆ. ಇಷ್ಟೇ ಅಲ್ಲ ಈ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆನ್ಲೈನ್ ಮೋಸಕ್ಕೆ ಒಳಗಾಗ್ತಿದ್ದಾರೆ. ಆರಂಭದಲ್ಲಿ ಮಾರುಬೊ ಜನಾಂಗದವರು ಇಂಟರ್ನೆಟನ್ನು ಸರಿಯಾದ ಕೆಲಸಕ್ಕೆ ಬಳಕೆ ಮಾಡುತ್ತಿದ್ದರು. ಅದ್ರ ಮಹತ್ವವನ್ನು ಅವರು ಅರಿತಿದ್ದರು. ದೂರವಿದ್ರೂ ಸಂಬಂಧಿಕರು, ಸ್ನೇಹಿತರನ್ನು ಇಂಟರ್ನೆಟ್ ಮೂಲಕ ಸಂಪರ್ಕಿಸಬಹುದು ಎಂಬುದನ್ನು ಅವರು ಅರಿತಿದ್ದರು. ಆದ್ರೆ ಸಮಯ ಕಳೆದಂತೆ ಇಂಟರ್ನೆಟ್ ತಪ್ಪಾಗಿ ಬಳಕೆಯಾಗಲು ಶುರುವಾಗಿದೆ. 

Latest Videos

ತೋಳದಂತೆ ಕಾಣೋಕೆ 20 ಲಕ್ಷ ಖರ್ಚು ಮಾಡಿದ ಜಪಾನ್ ವ್ಯಕ್ತಿ!

ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿ ಇರ್ತಿದ್ದ ಮಾರುಬೊ ಜನಾಂಗದ ಜನರು ಇಂಟರ್ನೆಟ್ ಬರ್ತಿದ್ದಂತೆ ಆಲಸಿಯಾಗಿದ್ದಾರೆ. ಯಾವುದೇ ಕೆಲಸದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಇಲ್ಲಿನ ಯುವಜನತೆ ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡುತ್ತ, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ದೃಶ್ಯಗಳನ್ನು (Obscene Videos on Social Media) ಸ್ಕ್ರೋಲ್ ಮಾಡ್ತಾ ಸಮಯ ಹಾಳು ಮಾಡ್ತಿದ್ದಾರೆಂದು ಅಲ್ಲಿನ ಹಿರಿಯರು ಆರೋಪಿಸಿದ್ದಾರೆ. 

ಮಾರುಬೊ ಜನಾಂಗದ ಜೀವನ ಶೈಲಿ (Lifestyle) ಸಂಪೂರ್ಣ ಬದಲಾಗಿದೆ ಎಂದು 40 ವರ್ಷದ ಎನೋಕೆ ಮಾರುಬೊ ಹೇಳಿದ್ದಾರೆ. ಮೊಬೈಲ್ ನೋಡ್ತಾ ಕಾಲ ಕಳೆಯುತ್ತಿರುವ ಜನರು, ಬೇಟೆಯಾಡದೆ, ಮೀನು ಹಿಡಿಯದೆ, ಗಿಡ ನೆಡದೆ ಇದ್ರೆ ಜೀವನ ಕಷ್ಟ ಎಂದಿದ್ದಾರೆ. ಅಶ್ಲೀಲ ಸಿನಿಮಾ ವೀಕ್ಷಣೆ ಮಾಡ್ತಿರುವ ಕಾರಣ ಇಲ್ಲಿನ ಜನರ ಲೈಂಗಿಕ ಜೀವನದಲ್ಲೂ (Sexual Life) ಬದಲಾವಣೆ ಕಂಡು ಬಂದಿದೆ. ಗ್ರೂಪ್ ಚಾಟ್ ನಲ್ಲಿ ಅವರು ಅಶ್ಲೀಲ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಯುವಕರ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆಲ್ಫ್ರೆಡೊ ಮಾರುಬೊ ಹೇಳಿದ್ದಾರೆ. 

ಪ್ರಿವೆಡ್ಡಿಂಗ್‌ಗಾಗಿ ಇಟಲಿಯ ಒಂದಿಡೀ ಖ್ಯಾತ ಪಟ್ಟಣವನ್ನೇ ಬುಕ್ ಮಾಡಿದ ಅಂಬಾನಿ ಕುಟುಂಬ!

ಇಂಟರ್ನೆಟ್ (internet) ಬಂದ ಆರಂಭದಲ್ಲಿ ಖುಷಿಯಾಗಿತ್ತು. ಆದ್ರೀಗ ಭಯವಾಗ್ತಿದೆ. ತಮ್ಮ ಸಂಪ್ರದಾಯ (Tradition), ಸಂಸ್ಕೃತಿಯನ್ನು (Culture) ತೊರೆದು ಜನಾಂಗದ ಜನರು ಅತಿ ಎನ್ನುವಷ್ಟು ಬದಲಾಗ್ತಿದ್ದಾರೆ. ಇಂಟರ್ನೆಟ್ ಇಲ್ಲದೆ ಜೀವನ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ನಿತ್ಯ ಜೀವನದಲ್ಲಿ ಎಷ್ಟು ಅಗತ್ಯವೋ ಅಷ್ಟಕ್ಕೆ ಮಾತ್ರ ಅದನ್ನು ಬಳಸಿದ್ರೆ ಒಳ್ಳೆಯದು. ಆದ್ರೆ ಅದನ್ನು ನಮ್ಮ ಜನಾಂಗದವರು ದುರುಪಯೋಗಪಡಿಸಿಕೊಳ್ತಿದ್ದಾರೆಂದು ಮಾರುಬೊ ಜನಾಂಗದ ಇನ್ನೊಬ್ಬರು ನೋವು ತೋಡಿಕೊಂಡಿದ್ದಾರೆ. 

click me!