ಚಂದ್ರನ ಬೆಳಕಲ್ಲಿ ಮಿಂದೆದ್ದ ಕೇದಾರನಾಥ ಧಾಮ್ ಫೋಟೋಗಳನ್ನು ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಧಾಮವು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಾಲಯವು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪೂಜಿಸಲ್ಪಟ್ಟಿದೆ. ಭಾರತದಲ್ಲಿರುವ 12 ಶಿವನ ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಪ್ರಮುಖವಾದುದು. ಈ ಕಾರಣದಿಂದಲೇ ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಸಂದರ್ಶಿಸಬೇಕು ಎನ್ನುವ ಬಯಕೆ ವ್ಯಕ್ತಪಡಿಸುತ್ತಾರೆ. ಕೇದಾರನಾಥ ಎಂಬ ಹೆಸರಿನಿಂದ ಕರೆಯಲ್ಪಡುವ ಮಹಾಶಿವನು ಇಲ್ಲಿ ನೆಲೆಸಿದ್ದಾನೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಇದು ಪ್ರಮುಖವಾದುದು ಎಂದು ನಂಬಲಾಗಿದೆ.
ಇಂತಿಪ್ಪ ಕೇದಾರನಾಥ ಧಾಮದಲ್ಲಿನ ಅಪರೂಪದ ದೃಶ್ಯವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಚಂದ್ರನ ಬೆಳಕಿನಲ್ಲಿ ಮೃದುವಾಗಿ ಹೊಳೆಯುತ್ತಿರುವ ಕೇದಾರನಾಥ ಧಾಮವನ್ನು ಈ ವೈರಲ್ ಫೋಟೋಗಳಲ್ಲಿ ನೋಡಬಹುದಾಗಿದೆ. ಹಿಮದಿಂದ ಆವೃತವಾದ ಹಿಮಾಲಯದಲ್ಲಿ ನೆಲೆಸಿರುವ ಪೂಜ್ಯ ದೇವಾಲಯವನ್ನು ತೋರಿಸುವ ಚಿತ್ರವು ಈ ಪವಿತ್ರ ಸ್ಥಳದ ಪ್ರಶಾಂತತೆ ಮತ್ತು ಗಾಂಭೀರ್ಯವನ್ನು ಎತ್ತಿ ತೋರಿಸುತ್ತದೆ. ಅಷ್ಟಕ್ಕೂ, ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದೀಗ ಹಿಮದ ನಡುವಿನ ಈ ಸುಂದರ ದೃಶ್ಯಕಾವ್ಯವನ್ನು ಆನಂದ್ ಮಹೀಂದ್ರಾ ಅವರು ಶೇರ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಕೇದಾರನಾಥದ ಆಧ್ಯಾತ್ಮಿಕ ಮತ್ತು ನೈಸರ್ಗಿಕ ವೈಭವದ ಚಿತ್ರಣವನ್ನು ಅನೇಕರು ಶ್ಲಾಘಿಸಿದ್ದಾರೆ.
ವಿಡಿಯೋ ಮಾಡಲು ಹೋದ್ರೆ ಡಾ.ಬ್ರೋ ಕೈಕಟ್ಟಿ ಬಾಕ್ಸಿಂಗ್ ಗ್ರೌಂಡ್‌ಗೆ ಇಳಿಸೋದಾ ನೈಜೇರಿಯನ್‌ಗಳು?
ಇನ್ನು ಕೇದಾರನಾಥದ ಕುರಿತು ಹೇಳುವುದಾದರೆ, ಇಲ್ಲಿ ಚಿಕ್ಕದಾಗಿರುವ ನಾಲ್ಕು ಆಲಯಗಳು ಇವೆ. ಅವುಗಳನ್ನು ಛೋಟಾ ಚಾರ್ ಧಾಮ್ ಎಂದು ಕರೆಯಲಾಗುತ್ತದೆ. ಇಲ್ಲಿ, ಗಂಗೋತ್ರಿ, ಯಮನೋತ್ರಿ, ಕೇದಾರನಾಥ ಹಾಗೂ ಬದರಿನಾಥ ಅಲಯಗಳಿವೆ. ಇದು ಅರ್ಧ ವರ್ಷ ಅಂದರೆ 6 ತಿಂಗಳು ಮಾತ್ರ ತೆರೆಯಲ್ಪಡುತ್ತದೆ. ಕೇದಾರನಾಥ ದೇವಾಲಯ, ಸೋನಪ್ರಯಾಗ, ವಾಸುಕಿ ತಾಲ್, ಶ್ರೀ ಶಂಕರಾಚಾರ್ಯ ಸಮಾಧಿ, ಭೈರವನಾಥ ದೇವಾಲಯ, ಚಂದ್ರಶಿಲಾ ಸೇರಿದಂತೆ ಇನ್ನು ಸಾಕಷ್ಟು ಪವಿತ್ರವಾದ ಸ್ಥಳಗಳು ಇಲ್ಲಿವೆ. ಈ ನಾಲ್ಕು ಯಾತ್ರೆಗಳು 1,607 ಕಿ.ಮೀ ದೂರವನ್ನು ಹೊಂದಿದೆ.
ಇನ್ನು ಕೇದಾರನಾಥದ ಪುರಾಣದಲ್ಲಿನ ಉಲ್ಲೇಖದ ಕುರಿತು ಹೇಳುವುದಾದರೆ, ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ನಿರ್ಮಿಸಿದರು ಎಂಬ ಐತಿಹ್ಯವಿದೆ. ಪುರಾಣ ಗ್ರಂಥಗಳ ಪ್ರಕಾರ, ಸತ್ಯಯುಗದಲ್ಲಿ ವಿಷ್ಣುವು ನರ ಮತ್ತು ನಾರಾಯಣನಾಗಿ ಅವತಾರ ತಾಳಿದನು. ಆತ ಅಲಕನಂದಾ ನದಿಯ ದಡದಲ್ಲಿರುವ ನರ ಮತ್ತು ನಾರಾಯಣ ಪರ್ವತದ ಮೇಲೆ ಶಿವನಿಗಾಗಿ ತಪಸ್ಸು ಮಾಡಿದಾಗ, ಶಿವ ಪ್ರತ್ಯಕ್ಷನಾದ. ಶಿವ ವರ ಕೇಳಿದಾಗ, ನರ ಮತ್ತು ನಾರಾಯಣರು, ನಮಗೆ ಬೇರೇನೂ ಬೇಡ, ಇಲ್ಲಿ ಬಂದು ನೆಲೆಸಿ ಎಂದು ವರ ಕೇಳಿದ್ದರಂತೆ. ಆಗ ಶಿವನು ಶಿವಲಿಂಗದ ರೂಪದಲ್ಲಿ ಸ್ವತಃ ಪ್ರಕಟಗೊಳ್ಳುವುದಾಗಿ ವರವನ್ನು ನೀಡಿ ಶಿವಲಿಂಗದ ರೂಪದಲ್ಲಿ ಸ್ವಯಂ ಸ್ಥಾಪನೆಯಾದ ಎನ್ನಲಾಗುತ್ತದೆ. ಶಿವಲಿಂಗವು ಕಾಣಿಸಿಕೊಂಡ ಸ್ಥಳದಲ್ಲಿ ಕೇದಾರ ಎಂಬ ರಾಜನಿದ್ದನು ಮತ್ತು ಭೂಮಿಯ ಈ ಭಾಗವನ್ನು ಕೇದಾರ ಖಂಡ ಎಂದು ಕರೆಯಲಾಯಿತು. ಹಾಗಾಗಿ ಶಿವನ ಈ ಜ್ಯೋತಿರ್ಲಿಂಗವನ್ನು ಕೇದಾರನಾಥ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತದೆ.
ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್ನಿಂದ ಬೆರಳು ಕತ್ತರಿಸಿದ್ರು! ವಿಡಿಯೋ ನೋಡಿ ಫ್ಯಾನ್ಸ್ ಶಾಕ್