
ಜ್ಞಾನವನ್ನು ಸಂಪಾದಿಲು ದೇಶ ಸುತ್ತು, ಕೋಶ ಓದು. ಪುಸ್ತಕವನ್ನೇನೋ ಯಾರು ಕೂಡಾ ಓದ್ಬೋದು. ಆದ್ರೆ ಹೆಚ್ಚು ಖರ್ಚು ಮಾಡಿ ಹೊಸ ಹೊಸ ಪ್ರದೇಶಗಳಿಗೆ ಹೋಗಿ ಬರೋಕೆ ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಅದರಲ್ಲೂ ವಿದೇಶಕ್ಕೆ (Foreign) ತೆರಳಲು ಹೆಚ್ಚು ಹಣ ಬೇಕು. ಮೊದಲೇ ಪ್ಲಾನ್ ರೂಪಿಸಿ ಹಣವನ್ನು ಕೂಡಿಡಬೇಕಾಗುತ್ತದೆ. ಲಕ್ಷ ಲಕ್ಷ ಸಂಪಾದಿಸುವವರೇನೋ ವರ್ಷಕ್ಕೊಮ್ಮೆ ವರ್ಲ್ಡ್ ಟೂರ್ (World Tour) ಹೋಗಿ ಬರುತ್ತಾರೆ. ಆದ್ರೆ ಜನಸಾಮಾನ್ಯರಿಂದ ಅದು ಅಸಾಧ್ಯವೆಂದೇ ಹೇಳಲಾಗುತ್ತದೆ. ಆದ್ರೆ ಕೇರಳದಲ್ಲಿ ತರಕಾರಿ ಮಾರುವ ಮಹಿಳೆ (Woman)ಯೊಬ್ಬರು ಹಣವನ್ನು ಉಳಿಸಿ 11 ದೇಶಗಳನ್ನು ಸುತ್ತಿ ಬಂದಿದ್ದಾರೆ ಅಂದ್ರೆ ನೀವು ನಂಬ್ತೀರಾ ? ಅಚ್ಚರಿಯೆನಿಸಿದರೂ ಇದು ನಿಜ.
ಬಾಲ್ಯದಿಂದಲೇ ದೇಶ-ವಿದೇಶ ಸುತ್ತುವ ಕನಸು ಕಂಡಿದ್ದ ಮೋಲಿ
ಕೇರಳದಲ್ಲಿ ದಿನಸಿ ಅಂಗಡಿ ನಡೆಸುತ್ತಿರುವ ಮಹಿಳೆ ಮೋಲಿ ಜಾಯ್ ತಮ್ಮ ಸೇವಿಂಗ್ಸ್‌ನಲ್ಲಿ ಹನ್ನೊಂದು ದೇಶಗಳನ್ನು ಸುತ್ತಿ ಬಂದಿದ್ದಾರೆ. ಮೋಲಿ ಜಾಯ್, ತಮ್ಮ ಬಾಲ್ಯದಿಂದಲೂ, ಪ್ರಪಂಚದಾದ್ಯಂತ ಪ್ರಯಾಣಿ (Travel)ಸಬೇಕೆಂದು ಕನಸು ಕಂಡಿದ್ದರು. ಎರ್ನಾಕುಲಂನ ತಿರುವಂಕುಳಂನಲ್ಲಿ ಕಡಿಮೆ ಆದಾಯದ ಕುಟುಂಬದಲ್ಲಿ ಜನಿಸಿದ ಆಕೆಗೆ ಆರ್ಥಿಕ ಸಮಸ್ಯೆಯಿಂದ ಶಾಲಾ ಪ್ರವಾಸಕ್ಕೆ ಹೋಗಲು ಸಹ ಸಾಧ್ಯವಾಗಲಿಲ್ಲ. 10ನೇ ತರಗತಿಗೆ ಆಕೆಯ ಶಿಕ್ಷಣ (Education) ಸ್ಥಗಿತಗೊಂಡಿತು. ಅವರು ಚಿತ್ರಪುಳ ಮೂಲದ ಜಾಯ್ ಅವರನ್ನು ವಿವಾಹವಾದರು ಮತ್ತು 1996 ರಲ್ಲಿ ದಂಪತಿಗಳು (Couple) ಜೀವನೋಪಾಯಕ್ಕಾಗಿ ಕಿರಾಣಿ ಅಂಗಡಿಯನ್ನು ಸ್ಥಾಪಿಸಿದರು. ಆಗೊಮ್ಮೆ ಈಗೊಮ್ಮೆ, ಅವರು ದಕ್ಷಿಣ ಭಾರತದೊಳಗೆ ಸಣ್ಣ ಪ್ರವಾಸಗಳಿಗೆ ಹೋಗುತ್ತಿದ್ದರು. ಆದರೆ ವಿದೇಶದಲ್ಲಿ ಹೋಗುವ ಆಸೆ ಮಾತ್ರ ಕನಸಾಗಿಯೇ ಉಳಿದಿತ್ತು.
ಉದ್ಯೋಗಿಗಳನ್ನು ಬಾಲಿ ಪ್ರವಾಸ ಕರೆದೊಯ್ದ ಸಂಸ್ಥೆ: ಕಂಪನಿ ಸೇರಲು ನೆಟ್ಟಿಗರ ಕ್ಯೂ
2004ರಲ್ಲಿ ಜಾಯ್ ಅವರ ಅನಿರೀಕ್ಷಿತ ಸಾವಿನ ನಂತರ ಎಲ್ಲವೂ ಸ್ಥಗಿತಗೊಂಡಿತು. ಆ ಸಮಯದಲ್ಲಿ ಮೋಲಿ ಅವರ ಮಕ್ಕಳು, 20 ಮತ್ತು 18, ಇನ್ನೂ ಓದುತ್ತಿದ್ದರು. ದುಡ್ಡು ಮಾಡುವ ಸಲುವಾಗಿ ಮೊಲಿ ಒಬ್ಬರೇ ಅಂಗಡಿಯನ್ನು ನೋಡಿಕೊಳ್ಳಲು ಆರಂಭಿಸಿದರು. ಆದರೆ ಮಗನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿತು ಮತ್ತು ಮಗಳ ಮದುವೆಯಾಯಿತು. ಮೋಲಿ ಒಂಟಿಯಾಗಿ ಜೀವನ ಸಾಗಿಸಬೇಕಾಯಿತು. ನಮ್ಮ ಅಂಗಡಿಯಲ್ಲಿ ಮಾರಾಟವಾಗುವ ನಿಯತಕಾಲಿಕೆಗಳಲ್ಲಿನ ಪ್ರವಾಸ ಕಥನಗಳನ್ನು ನಾನು ಯಾವಾಗಲೂ ಓದುತ್ತೇನೆ. ಇದು ನನ್ನ ಪ್ರಯಾಣದ ಉತ್ಸಾಹವನ್ನು ಉಳಿಸಿಕೊಂಡಿದೆ ಮತ್ತು ದೂರದ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡಿತು ಎಂದು 61 ವರ್ಷದ ಮೋಲಿ ಹೇಳುತ್ತಾರೆ.
ದಿನಸಿ ಅಂಗಡಿ ನಡೆಸಿ ಹಣ ಉಳಿತಾಯ, 11 ದೇಶಗಳಿಗೆ ಪ್ರಯಾಣ
ಯುರೋಪ್‌ಗೆ ತಮ್ಮ ಮೊದಲ ಪ್ರವಾಸದ ಮೊದಲು, ಮೋಲಿ ಮತ್ತು ಅವಳ ಆಪ್ತ ಗೆಳತಿ ಮೇರಿ ದಕ್ಷಿಣ ಭಾರತದಾದ್ಯಂತ ಪಳನಿ, ಮಧುರೈ, ಊಟಿ, ಕೊಡೈಕೆನಾಲ್, ಮೈಸೂರು ಮತ್ತು ಕೋವಲಂ ಸೇರಿದಂತೆ ಹಲವಾರು ಸ್ಥಳಗಳಿಗೆ ಪ್ರಯಾಣಿಸಿದ್ದರು. ಮೇರಿ ನನ್ನನ್ನು ಮೊದಲು ವಿದೇಶಿ ಪ್ರವಾಸಕ್ಕೆ ಆಹ್ವಾನಿಸಿದಳು, ಅದೂ ಯುರೋಪಿಗೆ. ಖರ್ಚಿನ ಬಗ್ಗೆ ಸ್ವಲ್ಪ ಚಿಂತೆಯಿತ್ತು. ಆದರೆ ಪ್ರಯಾಣ ಮಾಡುವ ಆಸೆ ಅದಕ್ಕಿಂತ ಮೇಲಿತ್ತು. ನನ್ನ ಮಗ ಮತ್ತು ಮಗಳು ಸಂಪೂರ್ಣ ಬೆಂಬಲವನ್ನು ನೀಡಿದರು. ನಾನು ಮುಂದೆ ಹೋಗಿ 15 ದಿನಗಳಲ್ಲಿ ಇಟಲಿ, ಫ್ರಾನ್ಸ್, ವ್ಯಾಟಿಕನ್, ಸ್ವಿಟ್ಜರ್ಲೆಂಡ್ ಮತ್ತು ಜರ್ಮನಿಯನ್ನು ಸುತ್ತಲು ಪಾಸ್‌ಪೋರ್ಟ್ ತೆಗೆದುಕೊಂಡೆ ಎಂದು ಮೋಲಿ ಹೇಳುತ್ತಾರೆ.
ಈ ಲಕ್ಸುರಿ ಹೊಟೇಲ್‌ನಲ್ಲಿ ಎಲ್ಲವೂ ಫ್ರೀ, ಆದ್ರೆ ಕಂಡೀಷನ್ಸ್ ಅಪ್ಲೈ !
ವಿವಿಧ ರಾಜ್ಯಗಳ ವಯೋವೃದ್ಧ ದಂಪತಿಗಳ ನಡುವೆ ಮೊಲಿ ಒಂಟಿ ಮಹಿಳೆಯಾಗಿ ನಿಂತಿದ್ದರು. ನಾನು ಪ್ರಯಾಣವನ್ನು ಸಂಪೂರ್ಣವಾಗಿ ಆನಂದಿಸಿದೆ ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಂಡೆ. ಇದು ಪ್ರವಾಸದ ಅತ್ಯುತ್ತಮ ಭಾಗವಾಗಿದೆ. ನನ್ನ ಇಂಗ್ಲಿಷ್‌ನಲ್ಲಿನ ಅಲ್ಪ ಜ್ಞಾನವೂ ಪ್ರಯಾಣದ ಸಮಯದಲ್ಲಿ ಸಹಾಯ ಮಾಡಿತು, ಎಂದು ಮೋಲಿ ಹೇಳುತ್ತಾರೆ, ಅವರು ಕಳೆದ ಹತ್ತು ವರ್ಷಗಳಲ್ಲಿ 10 ಲಕ್ಷ ರೂಪಾಯಿಗಳನ್ನು ಉಳಿಸಿದ್ದಾರೆ ಮತ್ತು 11 ದೇಶಗಳಲ್ಲಿ ಪ್ರಯಾಣಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.