ಅಂತಾರಾಷ್ಟ್ರೀಯ ಜಾವಾ ಬೈಕ್ ಡೇ ಸಂಭ್ರಮಕ್ಕೆ ಸಜ್ಜಾಗಿದೆ ಬೆಂಗಳೂರು!ಎಲ್ಲಿ ಯಾವಾಗ?

First Published Jul 5, 2018, 6:20 PM IST
Highlights

ಬೈಕ್ ಪ್ರೀಯರಿಗೆ ಜಾವಾ ಹಾಗೂ ಯಢಡಿ ಬೈಕ್ ಅಂದರೆ ಕಿವಿ ನೆಟ್ಟಗಾಗುತ್ತೆ. ರೆಟ್ರೋ ಬೈಕ್ ಎಲ್ಲೇ ಕಂಡರೂ ಒಂದು ಬಾರಿ ಕಣ್ಣರಳಿಸಿ ನೋಡುತ್ತಾರೆ. ಇದೇ ಭಾನುವಾರ ಬೆಂಗಳೂರಿನಲ್ಲಿ ಜಾವಾ ಯಝಡಿ ಬೈಕ್ ಡೇ ಸೆಲೆಬ್ರೇಷನ್ ಆಯೋಜಿಸಲಾಗಿದೆ. ಇದರ ವಿಶೇಷತೆ ಏನು? ಇಲ್ಲಿದೆ ವಿವರ.

ಬೆಂಗಳೂರು(ಜು.05): ಜಾವಾ ಯಝಡಿ ಬೈಕ್ ಡೇ ಸಂಭ್ರಮಾಚರಣೆ ಬೆಂಗಳೂರು ಸಜ್ಜಾಗುತ್ತಿದೆ. ಬೆಂಗಳೂರಿನ ಜಾವಾ ಯಝಡಿ ಮೋಟರ್ ಸೈಕಲ್ ಕ್ಲಬ್ ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಜಾವಾ ಡೇ ಸೆಲೆಬ್ರೇಷನ್‌ ಜುಲೈ 8ರ ಭಾನುವಾರ ನಡೆಯಲಿದೆ.

ಬೆಂಗಳೂರಿನ ವಿಠಲ್ ಮಲ್ಯ ರೋಡ್ ಸಮೀಪದ ಸೆಂಟ್ ಜೊಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಜಾವಾ ಡೇ ಸೆಲೆಬ್ರೇಷನ್ ನಡೆಯಲಿದೆ. ಈ ಬಾರಿ 500ಕ್ಕೂ ಹೆಚ್ಚು ಜಾವಾ ಯಝಡಿ ಬೈಕ್ ಹಾಗೂ1,000 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳೋ ನಿರೀಕ್ಷೆ ಇದೆ.

ಪ್ರತಿ ವರ್ಷ ಜುಲೈ 2ನೇ ವಾರದಲ್ಲಿ ಜಾವಾ ಡೇ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಆಸಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವದ ಅತೀ ದೊಡ್ಡ ಜಾವಾ ಡೇ ಸೆಲೆಬ್ರೇಷನ್ ಆಗಿ ಬೆಂಗಳೂರಿನ ಜಾವಾ ಡೇ ಮಾರ್ಪಟ್ಟಿದೆ.

ಇದನ್ನು ಓದಿ: ರಾಯಲ್ ಎನ್‌ಫೀಲ್ಡ್ ಹಿಂದಿಕ್ಕಿಲು ಮತ್ತೆ ಬರುತ್ತಿದೆ ಜಾವಾ ಬೈಕ್

ಜಾವಾ ಹಾಗೂ ಯಝಡಿ ಭಾರತದ ಅತ್ಯಂತ ಜನಪ್ರೀಯ ಬೈಕ್. 1960 ರಿಂದ 1996ರ ವರೆಗೆ ಭಾರತದಲ್ಲಿ ಜಾವಾ ಹಾಗೂ ಯಝಡಿ ಬೈಕ್ ತಯಾರಿಸಿತ್ತು. 2 ಸ್ಟ್ರೋಕ್ 250 ಸಿಸಿ ಬೈಕ್ ಬಾರಿ ಜನಪ್ರೀಯವಾಗಿತ್ತು. ಇದೀಗ ನೂತನ ಜಾವಾ ಮತ್ತೆ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ.

click me!