Published : Apr 07, 2025, 06:56 AM ISTUpdated : Apr 07, 2025, 11:28 PM IST

Karnataka News Live: ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು

ಸಾರಾಂಶ

ಬೆಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ಪರಿಶಿಷ್ಟರಿಗೆ ಮೀಸಲಾಗಿದ್ದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮತ್ತಿತರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರಮುಖ ಪ್ರತಿಪಕ್ಷ ಬಿಜೆಪಿ ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಲಿದೆ. ಗ್ಯಾರಂಟಿ ಹೆಸರಲ್ಲಿ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರಕ್ಕೆ ಇನ್ನೂ 3 ವರ್ಷ ಸಮಯವಿದ್ದು ಅಲ್ಲಿಯವರೆಗೆ ಪಾಪಿ ಚಿರಾಯು ಎಂಬಂತೆ ಎಷ್ಟು ಪಾಪ ಮಾಡುತ್ತಾರೋ ಮಾಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಮೊಹಮ್ಮದ್‌ ಘೋರಿ, ಘಜನಿ ಮೊಹಮ್ಮದ್‌ನಂಥವರು ಕೂತು ಲೂಟಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Karnataka News Live: ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು

11:28 PM (IST) Apr 07

ಆರ್‌ಸಿಬಿ ಕೆಣಕಿ ಉಳಿದವರಿಲ್ಲ, ಪಾಂಡ್ಯ-ತಿಲಕ್‌ಗೆ ಬ್ರೇಕ್ ಹಾಕಿ ಮುಂಬೈ ಸೋಲಿಸಿದ ಬೆಂಗಳೂರು

ಆರ್‌ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನಲ್ಲಿ ಘರ್ಜಿಸಿದೆ.  ಇತ್ತ ಅಭಿಮಾನಿಗಳು ಭರ್ಜರಿ ಸಂಭ್ರಮದಲ್ಲಿ ಮುಳುಗಿದ್ದಾರೆ. 

ಪೂರ್ತಿ ಓದಿ

11:12 PM (IST) Apr 07

ಚಿನ್ನ ಬಿಡಿ, ಈ ವರ್ಷವೇ ಇನ್ನೊಂದು ವಸ್ತು ರೇಟ್‌ ಹೆಚ್ಚಾಗತ್ತೆ, ಖರೀದಿಸಿ, ಆಸ್ತಿ ಮಾಡಿ-ಖ್ಯಾತ ವಿಶ್ಲೇಷಕ!

ಚಿನ್ನದ ಬೆಲೆ ಹೆಚ್ಚಾಗುತ್ತಿದೆ. ಹೇಗೆ ಚಿನ್ನ ಖರೀದಿ ಮಾಡೋದು ಅಂತ ಕೆಲವರು ಯೋಚನೆ ಮಾಡ್ತಿದ್ದಾರೆ. ಹೀಗಿರುವಾಗ ಇನ್ನೊಂದು ಲೋಹದ ರೇಟ್‌ ಹೆಚ್ಚಾಗಲಿದ್ದು, ಆಸ್ತಿಯಾಗಿ ಮಾರ್ಪಡಲಿದೆಯಂತೆ. 

ಪೂರ್ತಿ ಓದಿ

10:38 PM (IST) Apr 07

ಇಂಟರ್‌ನೆಟ್‌ ಬಗ್ಗೆ ಗೊತ್ತಿಲ್ಲದಿದ್ರೂ ತಿಂಗಳಿಗೆ 5-6 ಲಕ್ಷ ದುಡಿಯುತ್ತಿರೋ 74 ವರ್ಷದ ಅಜ್ಜಿ; ನಿಮ್ಮ ಹತ್ರ ಆಗಲ್ವಾ?

ಅನೇಕರು ಇಂದು ಏನು ದುಡಿಮೆ ಮಾಡೋದು? ಹೇಗೆ ದುಡಿಯೋದು ಎಂದು ಯೋಚನೆ ಮಾಡುತ್ತಿರುತ್ತಾರೆ. ಆದರೆ 74 ವರ್ಷದ ಅಜ್ಜಿ ಮಾತ್ರ ತಿಂಗಳಿಗೆ 5-6 ಲಜ್ಷ ರೂಪಾಯಿ ಹಣ ಗಳಿಸುತ್ತಿದ್ದಾರೆ. ಹೇಗದು? 

ಪೂರ್ತಿ ಓದಿ

09:45 PM (IST) Apr 07

ಹಿರಿಯ ಪತ್ರಕರ್ತ ರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಹೆಚ್‌ಡಿ ಕುಮಾರಸ್ವಾಮಿ

ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ. ರಾಮಯ್ಯ ನಿವಾಸಕ್ಕೆ ಹೆಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. 
 

ಪೂರ್ತಿ ಓದಿ

09:18 PM (IST) Apr 07

ಮುಂಬೈಗೆ ನಡುಕ, ವಾಂಖೆಡೆಯಲ್ಲಿ ಚೇಸಿಂಗ್ ಸುಲಭವಾದರೂ ಆರ್‌ಸಿಬಿ ಗೆಲುವಿಗೆ 221 ರನ್ ಸಾಕು

ಆರ್‌ಸಿಬಿ ಸಿಡಿಸಿದ  221 ರನ್‌ನಿಂದ ಗೆಲುವು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್. ವಾಂಖಡೆಯಲ್ಲೇ ಚೇಸಿಂಗ್ ವರವಾಗಿದ್ದರೂ ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೇಗೆ? 

ಪೂರ್ತಿ ಓದಿ

09:00 PM (IST) Apr 07

ಬರೋಬ್ಬರಿ 754 ಕೋಟಿ ರೂ ಬ್ಯಾಂಕ್ ವಂಚನೆ, ಯುಪಿ ಮಾಜಿ ಶಾಸಕ ವಿನಯ್ ಶಂಕರ್ ಬಂಧನ!

₹754 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ವಿನಯ್ ಶಂಕರ್ ತಿವಾರಿಯವರನ್ನು ಇಡಿ ಬಂಧಿಸಿದೆ. ಗೋರಖ್‌ಪುರ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಲಕ್ನೋದಲ್ಲಿ ಬಂಧಿಸಲಾಗಿದೆ. ತಿವಾರಿ ಕುಟುಂಬದ 30.86 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಪೂರ್ತಿ ಓದಿ

08:34 PM (IST) Apr 07

ಐಡಿಬಿಐ ಬ್ಯಾಂಕ್‌ ನಲ್ಲಿ ಖಾಲಿ ಇರುವ 119 ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 2ಲಕ್ಷದವರೆಗೆ ವೇತನ!

IDBI ಬ್ಯಾಂಕ್ ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 119 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 20, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

08:30 PM (IST) Apr 07

ವಾರದಲ್ಲಿ 70 ಗಂಟೆ ಕೆಲಸ ಅಂದ್ರೆ ಮಕ್ಳು ಮಾಡ್ಕೋಬೇಡಿ, ಮೂರ್ತಿ-ಸುಬ್ರಹ್ಮಣ್ಯನ್‌ಗೆ ನಮಿತಾ ಠಕ್ಕರ್

ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಾದರೆ ಮಕ್ಕಳು ಮಾಡಿಕೊಳ್ಳಬೇಡಿ ಎಂದು ಯುವ ಉದ್ಯಮಿ ನಮಿತಾ ಥಾಪರ್, ನಾರಾಯಣಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯನ್‌ಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಮಿತಾ ಥಾಪರ್ ಹೇಳಿದ್ದೇನು? 

ಪೂರ್ತಿ ಓದಿ

08:09 PM (IST) Apr 07

Karnataka 2nd PUC results 2025: ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ, ರಿಸಲ್ಟ್ ನೋಡುವುದು ಹೇಗೆ?

2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 8 ರಂದು ಪ್ರಕಟವಾಗಲಿದೆ. ಫಲಿತಾಂಶವನ್ನು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಕಳೆದ ವರ್ಷದ ಫಲಿತಾಂಶ ಮತ್ತು ಜಿಲ್ಲಾವಾರು ಫಲಿತಾಂಶದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಪೂರ್ತಿ ಓದಿ

07:52 PM (IST) Apr 07

ಬರಗಾಲ ನಿರ್ವಹಣೆಯಲ್ಲಿ ಭಾರತಕ್ಕೆ ಮಾದರಿಯಾಗುವತ್ತ ತೊಟ್ಟು ನೀರಿಲ್ಲದ ಧಾರಾಶಿವ ಜಿಲ್ಲೆ

ಒಣಗಿದ ಭೂಮಿ, ಕುಡಿಯಲು ನೀರೆ ಇಲ್ಲ, ಇನ್ನು ಬೆಳೆ, ಕೃಷಿ ದೂರದ ಮಾತು. ಬರೋಬ್ಬರಿ 734 ಗ್ರಾಮಗಳಿರುವ ದೊಡ್ಡ ಜಿಲ್ಲೆ. ಇಲ್ಲಿ ಬರಗಾಲ ಸರ್ವೆ ಸಾಮಾನ್ಯ. ಆದರೆ ಇಲ್ಲಿನ ಗ್ರಾಮಸ್ಥರ ಆಸಕ್ತಿ ಜೊತೆಗೆ ಸರ್ಕಾರದ ಸಹಭಾಗಿತ್ವ ಹೊಸ ಭಾಷ್ಯ ಬರೆಯುತ್ತಿದೆ. 
 

ಪೂರ್ತಿ ಓದಿ

07:11 PM (IST) Apr 07

ಒಂದೇ ವೈರಲ್‌ ರಿಯಾಕ್ಷನ್‌ಗೆ 800 ರಿಂದ 3 ಲಕ್ಷ ಫಾಲೋವರ್ಸ್‌, ಸ್ವಿಗ್ಗಿ ಬ್ರ್ಯಾಂಡ್‌ ಡೀಲ್‌ ಒಪ್ಪಿಕೊಂಡ ಆರ್ಯಪ್ರಿಯಾ ಭುಯಾನ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಪಂದ್ಯದಲ್ಲಿನ ರಿಯಾಕ್ಷನ್‌ನಿಂದ ವೈರಲ್ ಆದ ಆರ್ಯಪ್ರಿಯಾ ಈಗ ಸ್ವಿಗ್ಗಿ, ಯೆಸ್‌ ಮೇಡಮ್‌ನಂತಹ ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಧೋನಿ ಔಟಾದಾಗ ತೋರಿದ ರಿಯಾಕ್ಷನ್‌ನಿಂದ ಇವರ ಫಾಲೋವರ್‌ಗಳ ಸಂಖ್ಯೆ 800 ರಿಂದ 3 ಲಕ್ಷಕ್ಕೆ ಏರಿದೆ.

ಪೂರ್ತಿ ಓದಿ

07:07 PM (IST) Apr 07

IPL 2025 ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್, ಅಭಮಾನಿಗಳ ಆತಂಕಕ್ಕೆ ಕಾರಣ ಏನು?

ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಇದೀಗ ಮುಂಬೈ ಇಂಡಿಯನ್ಸ್ ವಿರುದ್ದ ಟಾಸ್ ಸೋತಿದೆ. ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಈ ಟಾಸ್ ಸೋಲು ಆರ್‌ಸಿಬಿ ಕಳೆದ ಪಂದ್ಯದಲ್ಲಿ ಎದುರಾದ ಸವಾಲು ಮತ್ತೆ ತಂದಿದೆಯಾ? 

ಪೂರ್ತಿ ಓದಿ

06:45 PM (IST) Apr 07

ಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆವ ಸಾತ್ವಿಕ ಕೋಳಿಯಿದು! ಕೆ.ಜಿ ಚಿಕನ್​ಗೆ 11 ಸಾವಿರ ರೂ...

ಇದು ಮಾಮೂಲಿ ಕೋಳಿಯಲ್ಲ, ಬದಲಿಗೆ ಸಾತ್ವಿಕ ಕೋಳಿ. ಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆಯುವ ಈ ಕೋಳಿಯ ವಿಶೇಷತೆ ಇಲ್ಲಿದೆ.. 
 

ಪೂರ್ತಿ ಓದಿ

06:43 PM (IST) Apr 07

ಪ್ರತಿಷ್ಠಿತ ಜಿಮ್‌ಗೆ ಸೇರಿದ ಒಬ್ಬಂಟಿ ಯುವತಿ; ಹೆಣ್ಣು, ಹೊನ್ನು ಬಲವಂತವಾಗಿ ಅನುಭವಿಸಿದ ಜಿಮ್ ಟ್ರೇನರ್!

ಒಬ್ಬಂಟಿಯಾಗಿ ಜಿಮ್‌ಗೆ ಸೇರಿದ ಯುವತಿಯನ್ನು ತರಬೇತುದಾರನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾಳೆ. ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದು, ದೈಹಿಕವಾಗಿ ಬಳಸಿಕೊಂಡಿದ್ದಲ್ಲದೇ, 23 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

06:34 PM (IST) Apr 07

ಗೋವಾ ಪ್ರವಾಸಕ್ಕೆ ಹೋಗೋರಿಗೆ ಹೊಸ ನಿಯಮ ಜಾರಿ; ರೂಲ್ಸ್ ಮೀರಿದರೆ ವಾಹನ ಸೀಜ್, ಜೈಲೂಟ ಫಿಕ್ಸ್!

ಗೋವಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರವು ರಸ್ತೆ ಬದಿಯಲ್ಲಿ ಅಡುಗೆ ಮಾಡುವಂತಿಲ್ಲ ಎಂದು ಹೊಸ ನಿಯಮ ಜಾರಿ ಮಾಡಿದೆ. ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು.

ಪೂರ್ತಿ ಓದಿ

06:33 PM (IST) Apr 07

ಮಲಗೋ ಮುನ್ನ ಸ್ವಲ್ಪ ಮೊಬೈಲ್ ನೋಡ್ತೀರಾ? ನಿಮಗೆ ಶೇ.59ರಷ್ಟು ಇನ್ಸೋಮ್ನಿಯಾ ರಿಸ್ಕ್ ಹೆಚ್ಚು

ನೀವು ಮಲಗುವ ಮುನ್ನ ಮೊಬೈಲ್ ನೋಡುವ ಅಭ್ಯಾಸವಿದೆಯಾ? ಇದು ಸಾಮಾನ್ಯ ಬಿಡಿ. ಆದರೆ ಮಲಗುವ ಮುನ್ನ ನೀವು 1 ಗಂಟೆ ಮೊಬೈಲ್ ನೋಡಿದರೆ ನಿಮಗೆ ಶೇಕಡಾ 59 ರಷ್ಟು ಇನ್ಸೋಮ್ನಿಯಾ ರಿಸ್ಕ್ ಹಾಗೂ 24 ನಿಮಿಷ ನಿದ್ದೆ ಕಡಿತ ಸಮಸ್ಯೆ ಎದುರಾಗುತ್ತೆ. ಇದು ವೈದ್ಯರ ಅಧ್ಯಯನ ವರದಿ.

ಪೂರ್ತಿ ಓದಿ

06:17 PM (IST) Apr 07

ನೋಡಿ ಗೋಲ್ಡ್‌ ಖರೀದಿ ಮಾಡೋ ಟೈಮ್‌ ಬಂದೇ ಬಿಡ್ತು, ಒಂದೇ ದಿನ 2500 ರೂಪಾಯಿ ಕುಸಿತ ಕಂಡ ಚಿನ್ನ!

ಷೇರು ಮಾರುಕಟ್ಟೆ ಕುಸಿತದೊಂದಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹೂಡಿಕೆದಾರರು ಲಾಭ ಬುಕ್ ಮಾಡುತ್ತಿರುವುದರಿಂದ ಬೆಲೆಗಳು ಕುಸಿಯುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪೂರ್ತಿ ಓದಿ

05:56 PM (IST) Apr 07

Farting: ಕೂತ್ರೆ ನಿಂತ್ರೆ ಹೂಸು ಬಿಡೋರ ಗಮನಕ್ಕೆ, ಹೀಗ್ ಮಾಡಿದ್ರೆ ಒಳ್ಳೇದು

Health Tips in Kannada: ಮೀಟಿಂಗ್, ಪಾರ್ಟಿ ಇರಲಿ, ಟ್ರಾವೆಲ್ ಏನೇ ಇರಲಿ. ಹೂಸು ಬಂದರೆ ಅವಮಾನದಲ್ಲಿ ಒದ್ದಾಡಿ ಸಾಯೋ ಹಾಗಾಗುತ್ತದೆ. ಹೂಸು ಬಿಡುವವರನ್ನು ನೋಡಿ ಕೆಟ್ಟದಾಗಿ ಮಾತಾಡುವವರಿದ್ದಾರೆ. ಹೂಸು ಬಂದಾಗ ಹೊರ ಬಿಡಲಾಗದೇ, ಒಳಗೂ ಇಟ್ಟುಕೊಳ್ಳಲಾಗದೇ ಒದ್ದಾಡುತ್ತಿದ್ದರೆ ಇಲ್ಲಿದೆ ಪರಿಹಾರ.

ಪೂರ್ತಿ ಓದಿ

05:52 PM (IST) Apr 07

ಚಾಂಪಿಯನ್ಸ್ ಟ್ರೋಫಿ ಸೋತ ಇಂಗ್ಲೆಂಡ್‌ ತಂಡದಲ್ಲಿ ಮೇಜರ್ ಸರ್ಜರಿ: ಐಪಿಎಲ್‌ನಿಂದ ಬ್ಯಾನ್ ಆದ ಆಟಗಾರ ಈಗ ಕ್ಯಾಪ್ಟನ್!

ಚಾಂಪಿಯನ್ಸ್ ಟ್ರೋಫಿಯಲ್ಲಿನ ಸೋಲಿನ ನಂತರ ಜೋಸ್ ಬಟ್ಲರ್ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಹ್ಯಾರಿ ಬ್ರೂಕ್ ಅವರನ್ನು ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

ಪೂರ್ತಿ ಓದಿ

05:49 PM (IST) Apr 07

ರಾಜ್ಯದ ಮಾಲಿನ್ಯಕಾರಕ ಕಾರ್ಖಾನೆ ಮುಚ್ಚಲು ತೀರ್ಮಾನ; ಐಐಟಿ ತಪಾಸಣೆಗೆ ಆದೇಶಿಸಿದ ಸರ್ಕಾರ!

ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿನ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲು ಸಚಿವ ಎಂ.ಬಿ. ಪಾಟೀಲ ಅವರು ಸೂಚನೆ ನೀಡಿದ್ದಾರೆ. ಐಐಎಸ್ಸಿ ಮತ್ತು ಐಐಟಿ ತರಹದ ಸಂಸ್ಥೆಗಳಿಂದ ವಿಸ್ತೃತ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಪೂರ್ತಿ ಓದಿ

05:43 PM (IST) Apr 07

ವಿದೇಶದಲ್ಲಿ ಬ್ಯಾನ್ ಆದರೂ ಭಾರತದಲ್ಲಿ ಫುಲ್ ಫೇಮಸ್ ಆಗಿರುವ ವಸ್ತುಗಳು!

ಕೆಲವು ವಸ್ತುಗಳು ಬೇರೆ ದೇಶದಲ್ಲಿ ಬ್ಯಾನ್ ಆದ್ರೂ ಇಂಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಫೇಮಸ್. ಕೆಚಪ್, ಕಿಂಡರ್ ಜಾಯ್ ಇಂದ ಹಿಡಿದು ಚ್ಯವನಪ್ರಾಶ್ ವರೆಗೂ ಎಲ್ಲದರ ಬಗ್ಗೆ ತಿಳ್ಕೊಂಡ್ರೆ ಶಾಕ್ ಆಗ್ತೀರಾ.

ಪೂರ್ತಿ ಓದಿ

05:29 PM (IST) Apr 07

ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಪುನರಾರಂಭ!

ಹುಬ್ಬಳ್ಳಿಯಿಂದ ರಾಮೇಶ್ವರಂಗೆ ವಾರಕ್ಕೊಮ್ಮೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 12 ರಿಂದ ಪುನಃ ಪ್ರಾರಂಭಿಸಲಾಗಿದೆ. ಈ ರೈಲು ಸೇವೆಯನ್ನು ಏಪ್ರಿಲ್ 26 ರವರೆಗೆ ರದ್ದುಗೊಳಿಸಲಾಗಿತ್ತು.

ಪೂರ್ತಿ ಓದಿ

05:01 PM (IST) Apr 07

ಮತೊಬ್ಬ ಕ್ರೀಡಾಪಟು ಬಾಳಲ್ಲಿ ಬಿರುಗಾಳಿ, ವಿಚ್ಛೇದನದತ್ತ ಬಾಕ್ಸರ್ ಮೇರಿ ಕೋಮ್

ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್ ಸೇರಿದಂತೆ ಕೆಲ ಕ್ರೀಡಾಪಟುಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇದರ ಬೆನ್ನಲ್ಲೇ ದೇಶದ ಹೆಮ್ಮೆಯ ಕುಸ್ತಿಪಟು ಮೇರಿ ಕೋಮ್ ವಿಚ್ಚೇದನತ್ತ ಸಾಗಿದ್ದಾರೆ. ಪ್ರೀತಿಸಿ ಮದುವೆಯಾದ ಇವರ ಬಾಳಲ್ಲಿ ಏನಾಯ್ತು?

ಪೂರ್ತಿ ಓದಿ

04:50 PM (IST) Apr 07

ಬುರ್ಖಾದೊಳಗೆ ಕೈಹಾಕಿದಷ್ಟೂ ಉದುರಿದ ಲಕ್ಷಾಂತರ ಮೌಲ್ಯದ ಕದ್ದ ವಸ್ತು- ವಿಡಿಯೋ ನೋಡಿದವರು ಸುಸ್ತೋ ಸುಸ್ತು!

ಪಾಕಿಸ್ತಾನದ ಮಹಿಳೆಯೊಬ್ಬಳು ಬುರ್ಖಾದಲ್ಲಿ ಲಕ್ಷಾಂತರ ಮೌಲ್ಯದ ಕದ್ದ ವಸ್ತುಗಳನ್ನು ಸಾಗಿಸುತ್ತಿದ್ದು, ಆಕೆ ಸಿಕ್ಕಿಬಿದ್ದಾಗ ಏನಾಯ್ತು ನೋಡಿ... ವಿಡಿಯೋ ವೈರಲ್ ಆಗಿದೆ.
 

ಪೂರ್ತಿ ಓದಿ

04:46 PM (IST) Apr 07

ಚಿಕ್ಕಬಳ್ಳಾಪುರಕ್ಕೆ ಗೃಹಸಚಿವ ಭೇಟಿ, ಆಂಧ್ರಗಡಿಯಿಂದ ಡ್ರಗ್ಸ್ ಬರದಂತೆ ಕಡಿವಾಣಕ್ಕೆ ಸೂಚನೆ

ಗೃಹ ಸಚಿವ ಪರಮೇಶ್ವರ ಚಿಕ್ಕಬಳ್ಳಾಪುರದಲ್ಲಿ ಅಪಘಾತ ವಲಯಗಳ ನಿಯಂತ್ರಣಕ್ಕೆ ಸೂಚನೆ ನೀಡಿದ್ದಾರೆ. ಡ್ರಗ್ಸ್ ನಿಯಂತ್ರಣ, ಪೋಕ್ಸೋ ಪ್ರಕರಣಗಳ ಬಗ್ಗೆಯೂ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತವನ್ನು ಅವರು ಶ್ಲಾಘಿಸಿದ್ದಾರೆ.

ಪೂರ್ತಿ ಓದಿ

04:46 PM (IST) Apr 07

Breaking: ಗೃಹಬಳಕೆಯ ಸಿಲಿಂಡರ್‌ ದರ 50 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ, ಮಧ್ಯರಾತ್ರಿಯಿಂದ ಜಾರಿ

ಕೇಂದ್ರ ಸರ್ಕಾರ ಗೃಹಬಳಕೆಯ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಿಸಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಈ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪೂರಿ ತಿಳಿಸಿದ್ದಾರೆ.

ಪೂರ್ತಿ ಓದಿ

04:40 PM (IST) Apr 07

ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿಗೆ ಮುತ್ತಿಟ್ಟ ಯುವಕ; ಪ್ರಸ್ತನೂ ಮಾಡಿಸಿಬಿಡಿ ಪೊಲೀಸರೇ?

ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಯನ್ನು ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಯುವಕನೊಬ್ಬ ಮುತ್ತಿಟ್ಟಿದ್ದಾನೆ. ಭದ್ರತೆಯ ನಡುವೆಯೂ ಘಟನೆ ನಡೆದಿದ್ದು, ಪೊಲೀಸರೇ ಈಗ ಮುತ್ತು ಕೊಟ್ಟಿದ್ದಾನೆ, ಮುಂದೆ ಪ್ರಸ್ತವನ್ನೂ ಮಾಡಿಸ್ತೀರಾ? ಎಂದು ಟೀಕಿಸಿದ್ದಾರೆ

ಪೂರ್ತಿ ಓದಿ

04:34 PM (IST) Apr 07

ಕೊನೆಗೂ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡ್ಬಿಟ್ರಾ ಧನುಶ್ರೀ; ಸ್ಯಾಮ್ ಸಮೀರ್‌ ಅಷ್ಟು ದುಡ್ಡು ಮಾಡಿದಾನ ಎಂದ ನೆಟ್ಟಿಗರು

ವೈರಲ್ ಆಯ್ತು ಧನುಶ್ರೀ ರೀಲ್ ವಿಡಿಯೋ. ಜೊತೆಗಿರುವುದು ಬಾಯ್‌ಫ್ರೆಂಡ್‌ ಅಂತಿದ್ದಾರೆ ನೆಟ್ಟಿಗರು.

ಪೂರ್ತಿ ಓದಿ

04:27 PM (IST) Apr 07

ಕೌಟುಂಬಿಕ ಕಲಹ: ಪತ್ನಿಯಿಂದ ದೂರಾಗಿ ವಾಸಿಸುತ್ತಿದ್ದ ಬೆಂಗಳೂರು ಎಂಎನ್‌ಸಿ ಉದ್ಯೋಗಿ ಸಾವಿಗೆ ಶರಣು

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೂರ್ತಿ ಓದಿ

03:49 PM (IST) Apr 07

ಬೆಂಗಳೂರಿನ ರಸ್ತೆಯಲ್ಲಿ ಕನ್ನಡ ಮಾತಾಡಿದ ಜಮ್ಮು-ಕಾಶ್ಮೀರದ ಹುಡುಗಿ! ಹಿಂದಿ ಭಾಷಿಕರಿಗೆ ಚಳಿ ಬಿಡಿಸಿದ್ದೇ ಅದ್ಭುತ!

ಬೆಂಗಳೂರಿನಲ್ಲಿ ಜಮ್ಮು-ಕಾಶ್ಮೀರದ ಯುವತಿಯೊಬ್ಬಳು ಕನ್ನಡದಲ್ಲಿ ಮಾತನಾಡಿ ಹಿಂದಿ ಹೇರಿಕೆ ಮಾಡುವವರ ವಿರುದ್ಧ ಧ್ವನಿ ಎತ್ತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಕಲಿಯುವ ಅಗತ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಪೂರ್ತಿ ಓದಿ

03:45 PM (IST) Apr 07

ವಿಮಾನದಲ್ಲೇ 89 ವರ್ಷದ ವೃದ್ಧೆ ಸಾವು: ಮುಂಬೈ ವಾರಾಣಾಸಿ ಇಂಡಿಗೋ ಫ್ಲೈಟ್ ತುರ್ತು ಲ್ಯಾಂಡಿಂಗ್

ಮುಂಬೈನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ವೃದ್ಧೆಯೊಬ್ಬರು ಅಸ್ವಸ್ಥರಾದ ಕಾರಣ ಔರಂಗಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಆಯಿತು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವೃದ್ಧೆ ಸಾವನ್ನಪ್ಪಿದ್ದಾರೆ.

ಪೂರ್ತಿ ಓದಿ

03:32 PM (IST) Apr 07

Breaking: ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್‌, ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 2 ರೂಪಾಯಿ ಏರಿಸಿದ್ದರಿಂದ, ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.

ಪೂರ್ತಿ ಓದಿ

03:17 PM (IST) Apr 07

ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ, 'ದೊಡ್ಡ ನಗರದಲ್ಲಿ ಇದೆಲ್ಲ ಆಗ್ತಾ ಇರುತ್ತೆ' ಎಂದ ಗೃಹ ಸಚಿವ ಪರಮೇಶ್ವರ್‌!

ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಗೃಹ ಸಚಿವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಸಚಿವರು ಹೇಳಿದ್ದಾರೆ, ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

03:12 PM (IST) Apr 07

ಗಾಜಾದಲ್ಲಿ ನರಮೇಧಕ್ಕೆ ತಾಂತ್ರಿಕ ನೆರವು: ಮೈಕ್ರೋಸಾಫ್ಟ್ 50ನೇ ವಾರ್ಷಿಕೋತ್ಸವದಲ್ಲಿ ಯುವತಿಯ ಗಲಾಟೆ

ಮೈಕ್ರೋಸಾಫ್ಟ್‌ನ 50ನೇ ವಾರ್ಷಿಕೋತ್ಸವದಲ್ಲಿ, ಭಾರತೀಯ ಮೂಲದ ಉದ್ಯೋಗಿಯೊಬ್ಬರು ಗಾಜಾದಲ್ಲಿ ನರಮೇಧಕ್ಕೆ ಮೈಕ್ರೋಸಾಫ್ಟ್‌ನ ತಂತ್ರಜ್ಞಾನ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಈ ಘಟನೆಯ ನಂತರ, ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಪೂರ್ತಿ ಓದಿ

03:08 PM (IST) Apr 07

ಹಜ್ ಯಾತ್ರೆಗೆ ಮುಂದಾದ ಭಾರತೀಯ ಮುಸ್ಲಿಮರಿಗೆ ಶಾಕ್, ವೀಸಾ ನಿಷೇಧಿಸಿದ ಸೌದಿ ಅರೆಬಿಯಾ

ಹಜ್ ಯಾತ್ರೆಗೆ ತೆರಳಲು ಮುಂದಾಗಿರುವ ಭಾರತೀಯ ಮುಸ್ಲಮರಿಗೆ ಸೌದಿ ಅರೆಬಿಯಾ ಶಾಕ್ ನೀಡಿದೆ. ಇದೀಗ ಭಾರತದ ಮುಸ್ಲಿಮರಿಗೆ ಹಜ್ ವೀಸಾ ನಿಷೇಧಿಸಿದೆ. ದಿಢೀರ್ ಈ ನಿರ್ಧಾರ ಕೈಗೊಂಡಿದ್ದೇಕೆ?

ಪೂರ್ತಿ ಓದಿ

02:53 PM (IST) Apr 07

ರಜತ್, ವಿನಯ್ ಮಚ್ಚಿನ ರೀಲ್ಸ್ ಕೇಸಿಗೂ ಉಂಟು, ರೇಣುಕಾಸ್ವಾಮಿ ಮರ್ಡರ್ ಕೇಸಿನ ನಂಟು!

ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ, ಕಾಟೇರ ಸಿನಿಮಾದ ದರ್ಶನ್ ರೀತಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ನಂತರ, ಆ ಮಚ್ಚನ್ನು ರೇಣುಕಾಸ್ವಾಮಿ ಕೊಲೆ ನಡೆದ ಜಾಗದಲ್ಲಿ ಎಸೆದಿದ್ದಾರೆ ಎಂಬುದನ್ನು ಬಾಯಿ ಬಿಟ್ಟಿದ್ದಾರೆ.

ಪೂರ್ತಿ ಓದಿ

02:07 PM (IST) Apr 07

ಬಾಣಂತನದ ನಂತರ ಉದುರಲು ಶುರುವಾಗುವ ಕೂದಲಿನ ಆರೈಕೆಗೆ ಸೂಪರ್‌ ಟಿಪ್ಸ್‌

ಬಾಣಂತನದ ನಂತರ ಮಗು ನಗಲು ಶುರು ಮಾಡುತ್ತಿದ್ದಂತೆ ತಾಯಿಯ ಕೂದಲು ಉದುರಲು ಶುರುವಾಗುತ್ತದೆ ಎಂದು ಹಳ್ಳಿ ಕಡೆ ಜನ ಹೇಳುವುದನ್ನು ಕೇಳಬಹುದು. ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಈ ಸಮಯದಲ್ಲಿ ಉದರುವ ಕೂದಲನ್ನು ನಿಯಂತ್ರಣಕ್ಕೆ ತರಬಹುದು. 

ಪೂರ್ತಿ ಓದಿ

01:50 PM (IST) Apr 07

ಕಾರಣಿಕ ಕ್ಷೇತ್ರ ಮಧೂರು ದೇವಸ್ಥಾನದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗ! ಏನಿದರ ವಿಶೇ‍ಷ

ಕಾಸರಗೋಡಿನ ಮಧೂರು ಮದನಂತೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ನಟಿ ಅನುಷ್ಕಾ ಶೆಟ್ಟಿ ಮೂಡಪ್ಪ ಸೇವೆ ಸಲ್ಲಿಸಿದ್ದಾರೆ. 14 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು 33 ವರ್ಷಗಳ ಬಳಿಕ ಸಿದ್ದಿವಿನಾಯಕನಿಗೆ ಮೂಡಪ್ಪ ಸೇವೆ ನಡೆಯುತ್ತಿದೆ.

ಪೂರ್ತಿ ಓದಿ

01:38 PM (IST) Apr 07

ಪೆಟ್ರೋಲ್‌ನಿಂದ ಜನರ ಸುಡುತ್ತಿರುವ ಸರ್ಕಾರ, ಒಂದು ಲೀಟರ್‌ಗೆ ₹43 ಟ್ಯಾಕ್ಸ್‌, ರಾಜ್ಯಕ್ಕೆಷ್ಟು, ಕೇಂದ್ರಕ್ಕೆಷ್ಟು?

ಕನಾಟಕದಲ್ಲಿ ಪೆಟ್ರೋಲ್ ಬೆಲೆ 103.80 ರೂಪಾಯಿ ಇದ್ದು, ಇದರಲ್ಲಿ 43 ರೂಪಾಯಿ ತೆರಿಗೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು, ಮೂಲ ಬೆಲೆ, ಮತ್ತು ಡೀಲರ್ ಕಮಿಷನ್ ಸೇರಿದಂತೆ ಬೆಲೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಪೂರ್ತಿ ಓದಿ

01:38 PM (IST) Apr 07

ಪುರುಷರೇ ಅತೀ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ? ಈಗ್ಲೇ ಬಿಟ್ಟುಬಿಡಿ! ಏನೇನು ಅನಾಹುತ ಆಗಬಹುದು ನೋಡಿ

ಅಪ್ಪನಾಗುವುದೆಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಿದ್ಧತೆಯನ್ನು ಒಳಗೊಂಡ ಪ್ರಕ್ರಿಯೆ ಆಗಿದೆ. ಆದರೆ, ವೀರ್ಯದ ಪ್ರಮಾಣ ಗರಿಷ್ಠವಾಗಿರೋದು ಯಾವ ವಯಸ್ಸಿನಲ್ಲಿ? ಯಾವಾಗ ಮಗು ಮಾಡಿಕೊಂಡರೆ ಒಳ್ಳೇದು? ಇದಕ್ಕೆ ಬಿಸಿನೀರಿನ ಸ್ನಾನ ಪರಿಣಾಮ ಬೀರಲಿದೆಯೇ ಎಂಬ ವಿವರ ಇTಲ್ಲಿದೆ.

ಪೂರ್ತಿ ಓದಿ

More Trending News