LIVE NOW
Published : Apr 05, 2026, 06:57 AM ISTUpdated : Apr 05, 2026, 07:42 PM IST

Karnataka News Live 5 April 2026: ಬೆಚ್ಚಿಬಿದ್ದ ಹುಬ್ಬಳ್ಳಿ - ಇನ್ನೊಂದು Love Jihad ಪ್ರಕರಣ- ಪ್ರೀತಿ ಹೆಸರಲ್ಲಿ ರೇ*ಪ್​; ದೂರು ದಾಖಲು

ಸಾರಾಂಶ

ಬಾಗಲಕೋಟೆ: ನೀವು ಅನ್ನದ ರಾಮಯ್ಯ ಅಲ್ಲ, ಚೀಲದ ರಾಮಯ್ಯ. ಅನ್ನ ಕೊಡೋದು ಮೋದಿ ಅವರು. ಅನ್ನದ ರಾಮಯ್ಯ ಅನ್ನಲು ನಿಮಗೆ ಯಾವುದೇ ಅಧಿಕಾರ ಇಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಇವತ್ತು ಮಜಾವಾದಿ ರಾಮಯ್ಯ ಆಗಿದ್ದೀರಾ. 2 ತಿಂಗಳಿನಿಂದ ಗೃಹಲಕ್ಷ್ಮೀ ಹಣ ಕೊಟ್ಟಿಲ್ಲ, ಆರ್ಥಿಕ ಶಿಸ್ತು ಎಲ್ಲಿದೆ? ಸಿದ್ದರಾಮಯ್ಯ ಈ ಬಾರಿ ಎಷ್ಟು ಸಾಲ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

Musiff Miyannavar

07:42 PM (IST) Apr 05

ಬೆಚ್ಚಿಬಿದ್ದ ಹುಬ್ಬಳ್ಳಿ - ಇನ್ನೊಂದು Love Jihad ಪ್ರಕರಣ- ಪ್ರೀತಿ ಹೆಸರಲ್ಲಿ ರೇ*ಪ್​; ದೂರು ದಾಖಲು

ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಅದೇ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾದ ಮುಫೀಸ್ ಮಿಯಾನ್ನಾವರ್ ಎಂಬಾತನ ವಿರುದ್ಧ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಅ*ತ್ಯಾಚಾರ ಎಸಗಿ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಯುವತಿ ದೂರು ನೀಡಿದ್ದಾಳೆ.

Read Full Story

06:13 PM (IST) Apr 05

Tollywood Item Songs - ಸಿನಿಮಾವನ್ನೇ ಡಾಮಿನೇಟ್ ಮಾಡಿದ ಟಾಲಿವುಡ್‌ನ ಬೆಸ್ಟ್ ಐಟಂ ಸಾಂಗ್ಸ್ ಇವು!

ಟಾಲಿವುಡ್ ಸಿನಿಮಾಗಳಲ್ಲಿ ಐಟಂ ಸಾಂಗ್ಸ್‌ಗಳಿಗೆ ಒಂದು ವಿಶೇಷ ಕ್ರೇಜ್ ಇದೆ. ಕೆಲವು ಹಾಡುಗಳು ಇಡೀ ಸಿನಿಮಾವನ್ನೇ ಮೀರಿಸುವಷ್ಟು ಹಿಟ್ ಆಗಿವೆ. ಈ ಫೋಟೋ ಸ್ಟೋರಿಯಲ್ಲಿ ಆ ಹಾಡುಗಳ ಬಗ್ಗೆ ತಿಳಿಯೋಣ.

Read Full Story

05:36 PM (IST) Apr 05

ಪದೇ ಪದೇ ಗರ್ಭಪಾತ; ಪತ್ನಿ ಹಾಸಿಗೆ ಹಿಡಿದರೂ ಪರವಾಗಿಲ್ಲ, ಉಳಿಯಲಿ; ಪ್ರಾರ್ಥಿಸಿದ್ದ ಮಿಮಿಕ್ರಿ ಗೋಪಿ!

Mimicry Gopi: ಮಿಮಿಕ್ರಿ ಗೋಪಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಬಡತನದಲ್ಲಿ ಬೆಳೆದ ಮಿಮಿಕ್ರಿ ಗೋಪಿ ಅವರು ರಾಜಕಾರಣಿಗಳು, ಸೆಲೆಬ್ರಿಟಿಗಳ ಮಿಮಿಕ್ರಿ ಮಾಡಿ ಫೇಮಸ್‌ ಆಗಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಅವರು ಜೋಡಿ ನಂ 1 ಶೋನಲ್ಲಿ ಮಾತನಾಡಿದ್ದಾರೆ.

 

Read Full Story

04:12 PM (IST) Apr 05

2ನೇ ಮದುವೆ, 1 ಗರ್ಭಪಾತ; ಈಗ 3 ವರ್ಷದ ಮಗನಿದ್ದಾನೆ; ಮಾರಣಾಂತಿಕ ಕಾಯಿಲೆಗೆ ತುತ್ತಾದ ಕಿರುತೆರೆ ನಟಿ

Actress Cancer Treatment: ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ದೀಪಿಕಾ ಕಕ್ಕರ್ ಇತ್ತೀಚೆಗೆ ಸಿಸ್ಟ್ ಸರ್ಜರಿ ನಂತರ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಸಮಸ್ಯೆ ಮತ್ತೆ ಮರುಕಳಿಸಿದ್ದು, ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Read Full Story

03:41 PM (IST) Apr 05

2 ನಿಮಿಷದಲ್ಲಿ ಸರಿ ಹೋಗದ ಸಮಸ್ಯೆ ಬಗ್ಗೆ ಯಾಕ್ರೀ ಮಾತಾಡ್ತೀರಿ? ಬೇಸತ್ತ ನಟಿ ಗೀತಾ ಭಾರತಿ ಭಟ್‌ ದಂಪತಿ

ಬ್ರಹ್ಮಗಂಟು ಹಾಗೂ ಲವ್‌ ಮಾಕ್ಟೇಲ್‌ ಸಿನಿಮಾ ಖ್ಯಾತಿಯ ನಟಿ ಗೀತಾ ಭಾರತಿ ಭಟ್‌ ಅವರು ತೂಕದ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ರಾಜಾರಾಮ್‌ ಭಟ್‌ ಜೊತೆ ಗೀತಾ ಮದುವೆಯಾಗಿದೆ. ಆಗಲೂ ಕೆಲವರು ನೆಗೆಟಿವ್‌ ಮಾತನಾಡಿದ್ದರು. ಜೋಡಿ ನಂ 1 ಸೀಸನ್‌ 3 ಶೋನಲ್ಲಿ ಗೀತಾ ಭಾರತಿ ಭಟ್‌ ಮಾತನಾಡಿದ್ದಾರೆ.

 

Read Full Story

03:16 PM (IST) Apr 05

ಆಕ್ಟಿಂಗ್‌ ಬರಲ್ಲ, ಕನ್ನಡ ಗೊತ್ತಿಲ್ಲ; ಟ್ರೋಲ್‌ ಆಗಿದ್ದ Rashmika Mandanna ಈಗ ಇಂಡಿಯನ್‌ ಸಿನಿಮಾ ಆಳ್ತಿದ್ದಾರೆ, ಹೇಗೆ?

Rashmika Mandanna Birthday Celebration: ರಶ್ಮಿಕಾ ಮಂದಣ್ಣ ನಿಜವಾದ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ತಮ್ಮ ಚಾರ್ಮ್, ಬಹುಮುಖ ಪ್ರತಿಭೆಯಿಂದಾಗಿ ಎಲ್ಲ ಭಾಷೆಗಳಲ್ಲೂ ಜನರ ಮನಸ್ಸು ಗೆದ್ದಿದ್ದಾರೆ. ಇಂದು ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

Read Full Story

12:59 PM (IST) Apr 05

ಗಂಡು ಮನೆ ಕಟ್ಟಿದ್ರೆ ಸಾಧನೆ, ಹೆಣ್ಣು ಕಟ್ಟಿದ್ರೆ ಬೇರೆನೆ- ಮೆಂಟಲ್​ ರೇ*ಪ್​ ಬಗ್ಗೆ ಅನುಶ್ರೀ ಹೇಳಿದ್ದೇನು

ಆ್ಯಂಕರ್ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಪಯಣ ಮತ್ತು ಅದರ ಹಿಂದಿನ ನೋವಿನ ಹಾದಿಗಳನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಯಶಸ್ವಿ ಮಹಿಳೆಯರು ಎದುರಿಸುವ ಸವಾಲುಗಳು, ಇಲ್ಲಸಲ್ಲದ ಆರೋಪಗಳು ಮತ್ತು ಆನ್‌ಲೈನ್ ಟ್ರೋಲ್‌ಗಳ ಬಗ್ಗೆ ಅವರು ಆರ್.ಜೆ. ಮಯೂರ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

12:59 PM (IST) Apr 05

ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ!

ನಟಿ ಸುಧಾ ಬೆಳವಾಡಿಯವರು ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ, ಮೊಗ್ಗಿನಮನಸ್ಸು, ಜೋಕ್‌ ಫಾಲ್ಸ್, ಗಾಳಿಪಟ, ಗೂಗ್ಲಿ ಸೇರಿದಂತೆ ಹಲವಾರು ಸಿನಿಮಾಗಳನ್ನು, ಅವರ ಅತ್ಯದ್ಭುತ ನಟನೆಯನ್ನೂ ಇಂದಿಗೂ ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ, ಈ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.

Read Full Story

11:34 AM (IST) Apr 05

OTT Release This Week - ಒಂದು ಕ್ಷಣವೂ ಕಣ್ಣು ಮಿಟುಕಿಸಲಾರದಷ್ಟು ಕುತೂಹಲ; ಟಾಪ್ ಸಸ್ಪೆನ್ಸ್ ಥ್ರಿಲ್ಲರ್‌ಗಳಿವು!

OTT Movies: ಓಟಿಟಿಯಲ್ಲಿ ಸಿನಿಮಾಗಳಿಗೆ ಸಖತ್ ರೆಸ್ಪಾನ್ಸ್ ಸಿಗುತ್ತೆ. ಥಿಯೇಟರ್‌ಗಳಲ್ಲಿ ಡಿಸಾಸ್ಟರ್ ಆದ ಚಿತ್ರಗಳು ಕೂಡ ಓಟಿಟಿಯಲ್ಲಿ ಹಿಟ್ ಆಗೋದು ಕಾಮನ್.ಥಿಯೇಟರ್‌ನಲ್ಲಿ ಸೋತ ಎರಡು ತೆಲುಗು ಚಿತ್ರಗಳು ಪ್ರೈಮ್ ವಿಡಿಯೋದಲ್ಲಿ ಇಂಡಿಯಾ ವೈಡ್ ಟ್ರೆಂಡ್ ಆಗುತ್ತಿವೆ. ಆ ಸಿನಿಮಾಗಳು ಯಾವುವು?

Read Full Story

11:21 AM (IST) Apr 05

ವಿಕಿರಣ ಸೋರಿಕೆಯಾದ್ರೆ ಟೆಹ್ರಾನ್ ಅಷ್ಟೇ ಅಲ್ಲ, ಗಲ್ಫ್ ರಾಷ್ಟ್ರಗಳೂ ಸರ್ವನಾಶ, ಇರಾನ್ ಎಚ್ಚರಿಕೆ

ಅಮೆರಿಕ-ಇಸ್ರೇಲ್ ಇರಾನ್‌ನ ಬುಶೆಹ್ರ್ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಿದ್ದು, ಸಾವು-ನೋವು ಸಂಭವಿಸಿದೆ. ಈ ದಾಳಿಯಿಂದ ವಿಕಿರಣ ಸೋರಿಕೆಯಾದರೆ, ಅದು ಕೇವಲ ಇರಾನ್‌ಗೆ ಮಾತ್ರವಲ್ಲದೆ ಸೌದಿ ಅರೇಬಿಯಾ ಸೇರಿದಂತೆ ಸುತ್ತಮುತ್ತಲಿನ ಗಲ್ಫ್ ರಾಷ್ಟ್ರಗಳಿಗೂ ಮಾರಕವಾಗಲಿದೆ ಎಂದು ಇರಾನ್ ಎಚ್ಚರಿಸಿದೆ.
Read Full Story

11:00 AM (IST) Apr 05

Nandagokula - ಪ್ರಿಯಾಗೆ ಇನ್ಮುಂದೆ ಉಳಿಗಾಲ ಇಲ್ಲ; ವಲ್ಲಭ, ಅಮೂಲ್ಯ ಬಳಿಕ ಮೀನಾ ರೆಬೆಲ್

ಕಲರ್ಸ್ ಕನ್ನಡದ ನಂದಗೋಕುಲ ಧಾರಾವಾಹಿಯಲ್ಲಿ, ಪ್ರಿಯಾ ತನ್ನ ಚಾಡಿ ಮಾತಿನಿಂದ ಮನೆಯಲ್ಲಿ ನೆಮ್ಮದಿ ಕೆಡಿಸಿದ್ದಾಳೆ. ಇದರಿಂದ ಕೋಪಗೊಂಡ ವಲ್ಲಭ, ಅಮೂಲ್ಯ ಮತ್ತು ಮೀನಾ, ಪ್ರಿಯಾಳನ್ನು ನೇರವಾಗಿ ಪ್ರಶ್ನಿಸಿ ಆಕೆಯ ಆಟಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.
Read Full Story

10:28 AM (IST) Apr 05

ಎರಡೂ ಕ್ಷೇತ್ರಗಳನ್ನ ನಾವೇ ಗೆಲ್ತೀವಿ, ,ಯತ್ನಾಳ್ ವಿರುದ್ಧ ಎನ್‌ಎಸ್ ಬೋಸರಾಜು ಕಿಡಿ

ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ಎನ್‌ಎಸ್ ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಮತ್ತು ಗ್ಯಾರಂಟಿ ಯೋಜನೆಗಳು ಪಕ್ಷದ ಗೆಲುವಿಗೆ ಪ್ರಮುಖ ಕಾರಣವಾಗಲಿದ್ದು, ಬಿಜೆಪಿಯ ಅಪಪ್ರಚಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು

Read Full Story

09:43 AM (IST) Apr 05

ಕೊಬ್ಬರಿ ಎಣ್ಣೆಯಿಂದ LPG Gas ಉಳಿತಾಯ, ಸಿಲಿಂಡರ್‌ ಕೂಡ ಬೇಗ ಖಾಲಿ ಆಗೋದಿಲ್ಲ! ವಿಧಾನ ಗೊತ್ತಿರಬೇಕು!

LPG Gas Stove: ಎಲ್‌ಪಿಜಿ ಗ್ಯಾಸ್ ಸ್ಟವ್ ಒಮ್ಮೊಮ್ಮೆ ಸರಿಯಾಗಿ ಉರಿಯೋದಿಲ್ಲ. ಹೀಗಾದಾಗ ಸಿಲಿಂಡರ್ ಗ್ಯಾಸ್ ಉಳಿತಾಯ ಮಾಡಲು ಆಗೋದಿಲ್ಲ. ಕೊಬ್ಬರಿ ಎಣ್ಣೆಯಿಂದ ಸಿಲಿಂಡರ್‌ ಗ್ಯಾಸ್‌ ಉಳಿತಾಯ ಮಾಡಬಹುದು. ಏನು ಮಾಡಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

09:15 AM (IST) Apr 05

Gadag printing industry crisis ಮಧ್ಯಪ್ರಾಚ್ಯ ಯುದ್ಧಕ್ಕೆ ಮುದ್ರಣ ಕಾಶಿ ಗದಗ ತತ್ತರ

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಕರ್ನಾಟಕದ ಮುದ್ರಣ ಕಾಶಿ ಗದಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಚ್ಚಾ ವಸ್ತುಗಳ ಬೆಲೆ ಶೇ. 25ರಷ್ಟು ಹೆಚ್ಚಾಗಿದ್ದು, ಜಿಎಸ್‌ಟಿ ತೆರಿಗೆಯ ಹೊರೆಯೂ ಸೇರಿ ಮುದ್ರಣ ಸಂಸ್ಥೆಗಳು ಬಾಗಿಲು ಮುಚ್ಚುವ ಆತಂಕದಲ್ಲಿವೆ.
Read Full Story

09:07 AM (IST) Apr 05

Bhagyalakshmi Serial - ಮದುವೆಗೆ ರೆಡಿಯಾದ ಭಾಗ್ಯ; ಕೊನೆಗೂ ಆ ದುಷ್ಟನ ಆಸೆ ಈಡೇರಿತಾ? ಪ್ರೀತಿ ಸತ್ತೋಯ್ತಾ?

Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮದುವೆಯದ್ದೇ ಸಮಸ್ಯೆ ಆಗಿದೆ. ಮೊದಲು ಇಷ್ಟವಿಲ್ಲದೆ ತಾಂಡವ್‌ನನ್ನು ಮದುವೆಯಾಗಿ 16 ವರ್ಷ ನರಕ ಅನುಭವಿಸಿದ್ದ ಭಾಗ್ಯ, ಈಗ ಇಷ್ಟದಂತೆ ಮದುವೆ ಆಗಲು ರೆಡಿ. ಇದಕ್ಕೆ ಮಗಳೇ ಅಡ್ಡಿಯಾದಳು. ಈ ಬಗ್ಗೆ ಮಾಹಿತಿಯಿದೆ.

 

Read Full Story

08:51 AM (IST) Apr 05

ಜೆಡಿಎಸ್‌ಗೆ ಪೂರ್ಣ ಬಹುಮತ ದಕ್ಕುತ್ತಿಲ್ಲ; ನನ್ನನ್ನು ಹೊಗಳುವ ಜನರು ಚುನಾವಣೇಲಿ ಮತ ಹಾಕೋಲ್ಲ - ಎಚ್‌ಡಿಕೆ ಬೇಸರ

ಸಿಂಧನೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜನರು ತನ್ನನ್ನು ಹೊಗಳಿದರೂ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರದ ಜೊತೆ ನಿಲ್ಲುವುದಾಗಿ ಹೇಳಿದರು.

Read Full Story

08:22 AM (IST) Apr 05

ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಗೊಂದಲ - ಸಾರಿಗೆ ಇಲಾಖೆಯ ಸ್ಪಷ್ಟನೆ

2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ನಿಯಮವನ್ನು ಹಿಂಪಡೆದಿದೆ ಎಂಬ ಸುಳ್ಳು ಸುದ್ದಿಗಳನ್ನು ನಂಬದಂತೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಹೈಕೋರ್ಟ್ ಕೂಡ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ತಿಳಿಸಿದೆ.

Read Full Story

07:49 AM (IST) Apr 05

ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ, ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಇದನ್ನು ಹಿಂದಿ ಹೇರಿಕೆಯ ಯತ್ನ ಎಂದು ಖಂಡಿಸಿರುವ ಕರವೇ 'ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ' ಘೋಷಣೆಯೊಂದಿಗೆ ರಾಜಭವನ ಮುತ್ತಿಗೆ.

Read Full Story

07:27 AM (IST) Apr 05

ಟೊಮೆಟೋ ಬೆಲೆ ಭಾರೀ ಕುಸಿತ, ಟ್ರ್ಯಾಕ್ಟರ್‌ನಲ್ಲಿ ತುಂಬಿ ಕುರಿ, ಮೇಕೆಗಳಿಗೆ ಸುರಿದ ರೈತರು!

ಹೊಸಪೇಟೆ ಭಾಗದಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಫ್ತು ವ್ಯತ್ಯಯದಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ಸಾಗಾಣಿಕೆ ವೆಚ್ಚವೂ ಸಿಗದ ಕಾರಣ ರೈತರು ಟೊಮ್ಯಾಟೋವನ್ನು ರಸ್ತೆಗೆ ಸುರಿದು, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.

Read Full Story

07:21 AM (IST) Apr 05

ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್

ಕಾರ್ಕಳದ 12 ವರ್ಷದ ಬಾಲಕ ಸಮರ್ಥ್, ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ್ದಾನೆ. ತನ್ನ ಅಜ್ಜ ಮತ್ತು ತಂದೆಯ ಮೂರು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿರುವ ಈ ಬಾಲಕನ ದೈವಾರಾಧನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

More Trending News