Published : Apr 03, 2026, 05:43 AM ISTUpdated : Apr 03, 2026, 09:55 PM IST

State News Live: ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ - ಶಾಸಕ ಯತ್ನಾಳ ವಾಗ್ದಾಳಿ

ಸಾರಾಂಶ

ಬೆಂಗಳೂರು (ಏ.3): ಗ್ಯಾಸ್‌ಗಾಗಿ ರಾಜ್ಯದಲ್ಲಿ ಆಟೋ ಚಾಲಕರ ಯುದ್ಧ ಆರಂಭವಾಗಿದ್ದು, ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ ಮಾಡುತ್ತಿದ್ದಾರೆ. ಬಹುತೇಕ ಕಡೆ ‘ನೋ ಸ್ಟಾಕ್‌’ ಬೋರ್ಡ್‌ ಬಿದ್ದಿದೆ. ಬೆಂಗಳೂರಲ್ಲಿ ಗ್ಯಾಸ್‌ಗಾಗಿ ಬಂಕ್‌ಗಳ ಮುಂದೆ ಕಿ.ಮೀ. ಗಟ್ಟಲೇ ಆಟೋಗಳ ಕ್ಯೂ ಕಾಣುತ್ತಿದೆ. ರಿಕ್ಷಾ ಡ್ರೈವರ್‌ಗಳಿಂದ ಪ್ರತಿಭಟನೆ ಕೂಡ ನಡೆದಿದ್ದು, ದುಡಿಮೆ ಮಾಡಲಾಗದೆ ಬಂಕ್‌ ಮುಂದೆ ಸಮಯ ದೂಡುವ ಪರಿಸ್ಥಿತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

09:55 PM (IST) Apr 03

ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ - ಶಾಸಕ ಯತ್ನಾಳ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕಿಲ್ಲ. ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ಸಿಗರೆಲ್ಲರೂ ಮೋದಿ ಕಾಲಿನ ಧೂಳು ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

Read Full Story

09:35 PM (IST) Apr 03

ಬಿಜೆಪಿಗರಿಗೆ ಧೈರ್ಯ ಇದ್ದರೆ ಹಿಂದಿ ಜಾರಿ ಮಾಡ್ತೇವೆ ಎನ್ನಲಿ - ಸಚಿವ ಮಧು ಬಂಗಾರಪ್ಪ ಸವಾಲು

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಧೈರ್ಯವಿದ್ದರೆ, ಶಿಕ್ಷಣದಲ್ಲಿ ಮತ್ತೆ ಹಿಂದಿಗೆ ಮಹತ್ವ ನೀಡುತ್ತೇವೆ ಎಂದು ಘೋಷಿಸಲಿ ಎಂದು ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದ್ದಾರೆ.

Read Full Story

08:49 PM (IST) Apr 03

ಸಚಿವ ವಿ. ಸೋಮಣ್ಣ ಭಾಷಣಕ್ಕೆ ಬಾಗಲಕೋಟೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ; ಉಪ ಚುನಾವಣೆಯಲ್ಲಿ ವಾಗ್ವಾದ!

ಬಾಗಲಕೋಟೆಯ ಐಹೊಳೆ ಗ್ರಾಮದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಭಾಷಣ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಬೈಕ್ ರೇಸ್ ಮತ್ತು ಕೇಕೆ ಹಾಕಿ ಗದ್ದಲ ಸೃಷ್ಟಿಸಿದ್ದರಿಂದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

Read Full Story

08:34 PM (IST) Apr 03

ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಗೆಲ್ಲುತ್ತೆ ಎಂಬ ಭಯ ಶುರು - ಬಿ.ವೈ.ವಿಜಯೇಂದ್ರ

ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರವೂ ಬಿಜೆಪಿಯ ಐತಿಹಾಸಿಕ ಗೆಲುವು ಸಾಕ್ಷಿಯಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Read Full Story

08:08 PM (IST) Apr 03

Heatstroke - ಬೇಸಿಗೆಯ ಯಮ 'ಹೀಟ್‌ಸ್ಟ್ರೋಕ್'! ಇದರಿಂದ ಪಾರಾಗುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಬೇಸಿಗೆಯಲ್ಲಿ ತೆಳುವಾದ, ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಕಡು ಬಣ್ಣದ ಬಟ್ಟೆಗಳನ್ನು ಬಿಟ್ಟು, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಆಹಾರದಲ್ಲಿ, ಸುಲಭವಾಗಿ ಜೀರ್ಣವಾಗುವ ಮತ್ತು ಹೆಚ್ಚು ನೀರಿನಂಶವಿರುವ ಆಹಾರಗಳನ್ನು ಸೇರಿಸಿಕೊಳ್ಳಬೇಕು.

Read Full Story

07:43 PM (IST) Apr 03

ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕು - ಡಾ.ಮುಖ್ಯಮಂತ್ರಿ ಚಂದ್ರು

ಗೆಲುವಿಗೆ ಚಲಾಯಿತ ಮತಗಳ ಪೈಕಿ ಶೇ.50ರಷ್ಟನ್ನು ನಿಗದಿಪಡಿಸಬೇಕು. ಮತದಾರರಿಗೆ ಚುನಾಯಿತ ಪ್ರತಿನಿಧಿಗಳನ್ನು ವಾಪಸ್‌ ಕರೆಸಿಕೊಳ್ಳುವ ಅಧಿಕಾರ ಇರಬೇಕು ಎಂದು ಖ್ಯಾತ ಚಲನಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

Read Full Story

07:29 PM (IST) Apr 03

ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ - ಫ್ಯಾನ್ಸ್​ಗೆ Amrthadhaare ಸಿಂಪಲ್​ ಸುನಿ ಬಿಗ್​ ಆಫರ್​

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಮದುವೆ ನಡೆದಿದೆ. ಈ ನಡುವೆ ಸುನಿ ಪಾತ್ರಧಾರಿ ಯಶ್ವಂತ್, ತಮ್ಮ ಮತ್ತು ಮಲ್ಲಿ ಪಾತ್ರಧಾರಿ ಅನ್ವಿತಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಾಗೂ ತಮಗೆ ಬಂದ ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. 

Read Full Story

07:27 PM (IST) Apr 03

ಬಾಗಲಕೋಟೆಯಲ್ಲೇ ಚರ್ಚೆಗೆ ಬನ್ನಿ - ಸಂಸದ ಕಾರಜೋಳರಿಂದ ಸಚಿವ ಎಂ.ಬಿ.ಪಾಟೀಲ್‌ಗೆ ಪ್ರತಿ ಸವಾಲು

ಸಿಎಂ, ಡಿಸಿಎಂ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಸಿಎಂ, ಡಿಸಿಎಂ ಅವರ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Read Full Story

07:14 PM (IST) Apr 03

ಹಾವುಗಳಿಗೆ ಮೃತ್ಯು ಸಮಾನ ಈ ಗಿಡದ ವಾಸನೆ! ಮನೆ ಮುಂದೆ ಈ ಗಿಡ ಇದ್ರೆ ಯಾವ ಹಾವು ಅಪ್ಪಿ-ತಪ್ಪಿಯೂ ಬರೋದಿಲ್ಲ;

Natural Snake Repellent Plant: ಮನೆಯ ಸುತ್ತಮುತ್ತ ಹಾವುಗಳು ಓಡಾಡುತ್ತಿದ್ದರೆ ಅಥವಾ ಮನೆಗೆ ನುಗ್ಗಿದರೆ, ಆ ಭಯದಲ್ಲೇ ಮನೆಯಲ್ಲಿ ಇರಲು ಹೆದರಿಕೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಹಾವಳಿ ಇನ್ನಷ್ಟು ಹೆಚ್ಚಾಗಿರುತ್ತದೆ. ಹಾಗಾದರೆ ಏನು ಮಾಡಬಹುದು? ಇಲ್ಲಿದೆ ಟಿಪ್ಸ್. 

Read Full Story

06:48 PM (IST) Apr 03

ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಡ್ರಾಮಾ ಜ್ಯೂನಿಯರ್ಸ್‌ ಸೂರಜ್;‌ ಲಕ್ಷ್ಮೀ ನಾಯ್ಕ್‌ಗೆ ವಿಡಿಯೋ ಮಾಡೋ ಆಸೆಯಿತ್ತಂತೆ

ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ಲಕ್ಷ್ಮೀ ಅಜ್ಜಿ ಅವರು ನಿಧನರಾಗಿದ್ದಾರೆ. ಇವರು ಯಲ್ಲಾಪುರದ ಮಂಚಿಕೇರಿಯವರು. ಡ್ರಾಮಾ ಜೂನಿಯರ್ ಶೋನಲ್ಲಿ ಭಾಗವಹಿಸಿದ್ದ ಸೂರಜ್ ಜೊತೆ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು. ಈಗ ಸೂರಜ್‌ ಅವರು ಅಜ್ಜಿಯ ಕೊನೇ ವಿಡಿಯೋ ಹಂಚಿಕೊಂಡಿದ್ದಾರೆ.

 

Read Full Story

05:45 PM (IST) Apr 03

ಮಗನಿಗೋಸ್ಕರ ಎಂಬ್ರಾಯಡರಿ ಫ್ಯಾಕ್ಟರಿ ಮಾಡಿ, 6 ಕೋಟಿ ರೂ. ನಷ್ಟ ಕಂಡ ನಟ ರಮೇಶ್‌ ಭಟ್! ಅಂಥದ್ದೇನಾಯ್ತು?

Actor Ramesh Bhat: ಯಜಮಾನ ಧಾರಾವಾಹಿ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ, ಖ್ಯಾತ ಸಿನಿಮಾ ನಟ ರಮೇಶ್‌ ಭಟ್‌ ಅವರು ಆಂಬ್ರಾಯಡರಿ ಫ್ಯಾಕ್ಟರಿ ಕಟ್ಟಿದ್ದು, ಆರು ಕೋಟಿ ರೂಪಾಯಿ ಕಳೆದುಕೊಂಡ ಕಥೆಯನ್ನು Beyond Limits ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

 

Read Full Story

05:40 PM (IST) Apr 03

ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ - ಆಗಿದ್ದೇನು

ಬಿಗ್​ಬಾಸ್​ 12ರ ಕ್ಯೂಟ್ ಜೋಡಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ತಮ್ಮಿಬ್ಬರ ನಡುವೆ ಸ್ನೇಹವಷ್ಟೇ ಇದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, 'ಗಿಚ್ಚಿ ಗಿಲಿಗಿಲಿ ಜ್ಯೂನಿಯರ್' ಶೋನಲ್ಲಿ ನಿರೂಪಕಿ ಅನುಪಮಾ ಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಇಬ್ಬರೂ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. 

Read Full Story

05:13 PM (IST) Apr 03

ಮಡಿಕೇರಿಯ ಭಾಗಮಂಡಲದಲ್ಲಿ ನಡೆಯುವ ರೋಚಕ ಕತೆ ಪೀಟರ್ - ನಿರ್ದೇಶಕ ಸುಕೇಶ್ ಶೆಟ್ಟಿ

ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ನೋಡಿ ತಲ್ಲೀನರಾಗಬೇಕು. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್‌ನಲ್ಲಿಯೂ ಪೀಟರ್‌ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ.

Read Full Story

05:08 PM (IST) Apr 03

ಹನಿಮೂನ್​ ಮೂಡ್​ನಲ್ಲಿ Amrathadhaare ಮಲ್ಲಿ - ಆದ್ರೆ ರಿಯಲ್​ ಲೈಫ್​ನಲ್ಲಿ ಬಿರುಗಾಳಿ- ಆಗಿದ್ದೇನು

ಅಮೃತಧಾರೆ ಧಾರಾವಾಹಿಯ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಅವರ ತೆರೆಯ ಮೇಲಿನ ಮತ್ತು ನಿಜ ಜೀವನದ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿವರಿಸುತ್ತದೆ. ಧಾರಾವಾಹಿಯಲ್ಲಿ ಮಧುಚಂದ್ರದ ಸಂಭ್ರಮದಲ್ಲಿದ್ದರೆ, ನಿಜ ಜೀವನದಲ್ಲಿ ಅವರು ತಮ್ಮ ಪ್ರೀತಿಯಲ್ಲಿನ ನೋವು ಮತ್ತು ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ

Read Full Story

04:53 PM (IST) Apr 03

ಕಾಂಟ್ರವರ್ಸಿ ಮಾಡೋರ ವಿರುದ್ಧ ನಾನು ಯುದ್ಧಕ್ಕೆ ನಿಂತ್ರೆ ಆಗೋದೇ ಬೇರೆ- ಗುಡುಗಿದ ನಟಿ ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ ಅವರು, ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಗರಂ ಆಗಿದ್ದಾರೆ. ಕಾಂಟ್ರವರ್ಸಿ ಮಾಡುವವರ ವಿರುದ್ಧ ಯುದ್ಧಕ್ಕೆ ನಿಂತರೆ ಅವರಿಗೆ ನರಕ ತೋರಿಸುವುದಾಗಿ ಸಂದರ್ಶನವೊಂದರಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Read Full Story

04:40 PM (IST) Apr 03

ಸ್ಟಾರ್‌ ಗಿರಿಯ ಧರ್ಮ ಸಂಕಟಗಳು - ಫ್ಯಾನ್ ಫಾಲೋಯಿಂಗ್‌ vs ಬಾಕ್ಸ್ ಆಫೀಸ್‌ - ನಿಜವಾದ ಸ್ಟಾರ್‌ ಯಾರು?

ಒಂದು ಚಿತ್ರರಂಗ ಉ‍ಳಿಯುವುದು ಕತೆಯಿಂದ, ಬೆಳೆಯುವುದು ಸ್ಟಾರ್‌ಗಳಿಂದ. ಆದರೆ ಸದ್ಯ ಕತೆಗಾರರಿಗೂ ಮರ್ಯಾದೆ ಇಲ್ಲ, ಸ್ಟಾರ್‌ಗಳಿಗೆ ಅಂಥಾ ದೊಡ್ಡ ಹುಮ್ಮಸ್ಸು ಇದ್ದಂತೆ ಕಾಣಿಸುತ್ತಿಲ್ಲ. ಅದಕ್ಕೆ ಯಾರು ಕಾರಣ, ಏನು ಕಾರಣ, ಪರಿಹಾರ ಏನು?

Read Full Story

04:25 PM (IST) Apr 03

ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ ನಲ್ಲಿದ್ದ ಬ್ಯಾಗ್ ತೆರೆದ ಕರ್ನಾಟಕ ಅಧಿಕಾರಿಗಳೇ ಶಾಕ್!

ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಯು ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಜನರಲ್ ಬೋಗಿಯಲ್ಲಿದ್ದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಿಯರ್ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಅಕ್ರಮ ಮದ್ಯ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ನಡೆದಿದೆ.
Read Full Story

03:54 PM (IST) Apr 03

ಬೆದರಿಕೆ ಹಾಕಿದ ಆರೋಪ - ಹೆಚ್‌ಡಿ ಕುಮಾರಸ್ವಾಮಿ-ಚಂದ್ರಶೇಖರ್ ಸಂಘರ್ಷಕ್ಕೆ ಕೋರ್ಟ್‌ನಿಂದಲೇ ಮಧ್ಯಸ್ಥಿಕೆದಾರ

ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಮಧ್ಯಸ್ಥಿಕೆದಾರರನ್ನು ನೇಮಿಸುವುದಾಗಿ ತಿಳಿಸಿದೆ.
Read Full Story

03:44 PM (IST) Apr 03

18 ನೇ ವಯಸ್ಸಿಗೆ ಸಾಧನೆ ಮಾಡಿರೋ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಹುಡುಗಿ ನೇಹಾ ಗುಪ್ತ ಅನೇಕರಿಗೆ ಮಾದರಿ!

Kannada Youtuber Sam Sameer GF Neha Gupta: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌, ಈಗಾಗಲೇ ಮದುವೆ ಆಗೋಕೆ ಹುಡುಗಿ ಫಿಕ್ಸ್‌ ಮಾಡಿಕೊಂಡಿದ್ದಾರೆ. 1 ವಾರದ ಹಿಂದೆ ಇವರು ಹುಡುಗಿ ನೋಡೋ ಶಾಸ್ತ್ರ ಮಾಡಿ, ಮದುವೆ ಫಿಕ್ಸ್‌ ಮಾಡಿಕೊಂಡಿದ್ದಾರೆ. ನೇಹಾ ಗುಪ್ತ ಸಾಧನೆ ಅನೇಕರಿಗೆ ಗೊತ್ತಿಲ್ಲ.

 

Read Full Story

03:34 PM (IST) Apr 03

ಚಿತ್ರದುರ್ಗ - ಅತ್ತೆ ಮಗಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾದ ಅಳಿಯ, ಮದುವೆ ಒಪ್ಪದ ಪೋಷಕರಿಂದ ರಕ್ತಸಿಕ್ತ ಸಂಧಾನ!

ಚಿತ್ರದುರ್ಗದ ಭರಮಸಾಗರದಲ್ಲಿ ಪ್ರೇಮ ವಿವಾಹದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ರಾಜಿ ಸಂಧಾನವು ಗುಂಪು ಘರ್ಷಣೆಗೆ ತಿರುಗಿದೆ. ಈ ಗಲಾಟೆಯಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ತೀವ್ರ ಸ್ವರೂಪ ಪಡೆದಿದೆ.
Read Full Story

01:58 PM (IST) Apr 03

ಹುಬ್ಬಳ್ಳಿ - ಸರಕು ಸಾಗಾಣಿಕೆಯಲ್ಲಿ ನೈಋತ್ಯ ರೈಲ್ವೆ ದೇಶಕ್ಕೆ ಟಾಪ್, 9487 ಕೋಟಿ ರೂ ದಾಟಿದ ಆದಾಯ, ಏನೆಲ್ಲ ಸಾಗಿಸಿದೆ?

ಪ್ರಸಕ್ತ ಸಾಲಿನಲ್ಲಿ ನೈಋತ್ಯ ರೈಲ್ವೆ ವಲಯವು 52.46 ಮಿಲಿಯನ್ ಟನ್ ಸರಕು ಸಾಗಿಸಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ₹9,487.88 ಕೋಟಿ ಆದಾಯ ಗಳಿಸಿದ್ದು, ಪ್ರಯಾಣಿಕರ ಸೇವೆ ಮತ್ತು ಸಮಯಪಾಲನೆಯಲ್ಲೂ ಉತ್ತಮ ಸಾಧನೆ ಮಾಡಿದೆ. ಆದಾಗ್ಯೂ, ಭೂಮಿ ಹಸ್ತಾಂತರ ವಿಳಂಬದಂತಹ ಕೆಲವು ಯೋಜನೆಗಳು ಸವಾಲಾಗಿವೆ.
Read Full Story

01:52 PM (IST) Apr 03

ಹಾಗೆ ನೋಡಬೇಡ್ರಪ್ಪ, ನಾಚಿಕೆ ಆಗ್ತದೆ ಎನ್ನುತ್ತಲೇ ರಾಘು ಜೊತೆ Bigg Boss ರಕ್ಷಿತಾ ಶೆಟ್ಟಿ ಸಕತ್​ ಸ್ಟೆಪ್​

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ' ಖ್ಯಾತಿಯ ರಾಘವೇಂದ್ರ ಅವರು 'ಸೇವಂತಿಯೇ ಸೇವಂತಿಯೇ' ಹಾಡಿಗೆ ಜೊತೆಯಾಗಿ ಡಾನ್ಸ್ ಮಾಡಿದ್ದಾರೆ. ಸ್ತ್ರೀವೇಷದಿಂದಲೇ ಪರಿಚಿತರಾದ ರಾಘವೇಂದ್ರ ಅವರು ತಮ್ಮ ನಿಜ ವೇಷದಲ್ಲಿ ಕಾಣಿಸಿಕೊಂಡಿದ್ದು, ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ

Read Full Story

01:29 PM (IST) Apr 03

ಬಳ್ಳಾರಿ - ಮದುವೆಯಾದ ತಿಂಗಳಲ್ಲೇ ಮರೆಯಾದ ನವಜೋಡಿ - ಜಾತ್ರೆಗೆಂದು ಹೊರಟವರಿಗೆ ಕಾದಿತ್ತು ಕರಾಳ ವಿಧಿ!

ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಬೆಂಗಳೂರಿನ ಪವನ್ ಮತ್ತು ಬಳ್ಳಾರಿಯ ರಕ್ಷಿತಾ, ಊರ ಜಾತ್ರೆಗೆಂದು ಕಾರಿನಲ್ಲಿ ಬರುವಾಗ ದೊಡ್ಡಬಳ್ಳಾಪುರ ಬಳಿ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತ ಘಟನೆಯು ಎರಡೂ ಕುಟುಂಬಗಳಲ್ಲಿ ಮತ್ತು ಗ್ರಾಮದಲ್ಲಿ తీవ్ర ಶೋಕವನ್ನುಂಟುಮಾಡಿದೆ.
Read Full Story

01:20 PM (IST) Apr 03

ಕೊಡಗು - ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ ತಂಡದಿಂದ ಮಹಿಳೆ ನಿಗೂಢ ನಾಪತ್ತೆ! 2 ದಿನದಿಂದ ಶರಣ್ಯಗಾಗಿ ಹುಡುಕಾಟ

ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ, ಅವರ ಯಾವುದೇ ಸುಳಿವು ಲಭ್ಯವಾಗಿಲ್ಲ.
Read Full Story

01:00 PM (IST) Apr 03

Amruthadhaare ಜೈದೇವ್​- ಹಳೆ ಮಲ್ಲಿ ರಿಯಲ್​ ಮದ್ವೆ ಯಾವಾಗ, ಹೇಗೆ, ಎಲ್ಲಿ? ಜೋಡಿ ಹೇಳಿದ್ದೇನು

'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ್ ಪಾತ್ರಕ್ಕೆ ಸಂಕಷ್ಟ ಎದುರಾಗಿದ್ದರೆ, ನಿಜ ಜೀವನದಲ್ಲಿ ನಟ ರಾಣವ್ ಗೌಡ ಮದುವೆಗೆ ಸಿದ್ಧರಾಗಿದ್ದಾರೆ. ಅವರು ಇದೇ ಧಾರಾವಾಹಿಯ ಹಳೆಯ ಮಲ್ಲಿ, ನಟಿ ರಾಧಾ ಭಗವತಿ ಅವರನ್ನು ಇದೇ ವರ್ಷ ಸರಳವಾಗಿ ವಿವಾಹವಾಗುವುದಾಗಿ ಖಚಿತಪಡಿಸಿದ್ದಾರೆ.
Read Full Story

12:25 PM (IST) Apr 03

ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!

ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಪ್ರೇಮ ಪ್ರಕರಣವು ಲವ್ ಜಿಹಾದ್ ಆರೋಪಕ್ಕೆ ತಿರುಗಿದೆ. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
Read Full Story

11:37 AM (IST) Apr 03

ನಿಂತಲ್ಲೇ ನಡುಗಿದ ಪಾಕ್‌, ಚೀನಿಗಳು ಗಡಗಡ - ಎಂಟ್ರಿ ಆಗಲಿದೆ ಶತ್ರುಗಳ ಎದೆಸೀಳೋ ಅಣ್ವಸ್ತ್ರ ಧಾರಿ ಜಲಾಂತರ್ಗಾಮಿ ಅರಿಧಮನ್

ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್ ಅರಿಧಮನ್ ಮತ್ತು ಅತ್ಯಾಧುನಿಕ ಯುದ್ಧನೌಕೆ 'ತಾರಾಗಿರಿ'ಯನ್ನು ಶೀಘ್ರದಲ್ಲೇ ಸೇರ್ಪಡೆಗೊಳಿಸಲಿದೆ. ಈ ಸೇರ್ಪಡೆಯು ಭಾರತದ ನ್ಯೂಕ್ಲಿಯರ್ ಟ್ರೈಡ್ ಸಾಮರ್ಥ್ಯವನ್ನು ಬಲಪಡಿಸುವುದೆ.

Read Full Story

11:18 AM (IST) Apr 03

ಸಾಗರದಲ್ಲಿ ಕೆಫೆ ಮಾಲೀಕನಿಂದ ಅಡುಗೆಯವನ ಭೀಕರ ಕೊಲೆ, ಕಾರಿನಲ್ಲಿ ಶವವಿಟ್ಟು ಇಡೀ ದಿನ ಸುತ್ತಾಟ!

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ, ಹಣಕಾಸಿನ ವಿವಾದಕ್ಕೆ ಕೆಫೆ ಮಾಲೀಕನೊಬ್ಬ ತನ್ನ ಉದ್ಯೋಗಿಯನ್ನು ಕೊಲೆ ಮಾಡಿದ್ದಾನೆ. ನಂತರ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಕಾರಿನಲ್ಲಿಟ್ಟುಕೊಂಡು ಊರೆಲ್ಲಾ ಸುತ್ತಾಡಿ, ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
Read Full Story

10:29 AM (IST) Apr 03

ಬಳ್ಳಾರಿ - ಮೇಲಾಧಿಕಾರಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕೀಳು ಮಟ್ಟದ ಕೆಲಸಕ್ಕಿಳಿದು ಲಾಕ್ ಆದ SDC!

ಅಮಾನತುಗೊಂಡಿದ್ದಕ್ಕೆ ಮೇಲಾಧಿಕಾರಿ ಮೇಲೆ ಸೇಡು ತೀರಿಸಿಕೊಳ್ಳಲು, ದ್ವಿತೀಯ ದರ್ಜೆ ಸಹಾಯಕನೊಬ್ಬ ಮಹಿಳಾ ತಹಶೀಲ್ದಾರ್ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿದ್ದಾನೆ. ಅಪರ ಜಿಲ್ಲಾಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬರೆದ ಪತ್ರದ ಸತ್ಯಾಸತ್ಯತೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Read Full Story

09:55 AM (IST) Apr 03

ಸಾವಿರಾರು ಕೋಟಿ ಬಂಡವಾಳ ಹೂಡಿದ್ದ Hombale Films-ರಿಷಬ್‌ ಶೆಟ್ಟಿ ಮನಸ್ತಾಪ; ಕಾರಣ ಬಿಚ್ಚಿಟ್ಟ ಪ್ರಮೋದ್‌ ಶೆಟ್ಟಿ

Hombale Films: ನಟ ರಿಷಬ್‌ ಶೆಟ್ಟಿ ಅವರು ಆರಂಭದಲ್ಲಿ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್‌ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ಆ ಬಳಿಕ ಎಲ್ಲ ಸ್ನೇಹಿತರು, ಹೊಂಬಾಳೆ ಫಿಲ್ಮ್ಸ್‌ ಗ್ಯಾಂಗ್‌ನ್ನು ಅನ್‌ಫಾಲೋ ಮಾಡಿದ್ದರು. ಈಗ ಈ ಬಗ್ಗೆ ಪ್ರಮೋದ್‌ ಶೆಟ್ಟಿ ಮಾತನಾಡಿದ್ದಾರೆ.

 

Read Full Story

09:33 AM (IST) Apr 03

ಕೊಲ್ಲಿ ಯುದ್ಧ - ಹುಬ್ಬಳ್ಳಿಯ ಸಿರಿಂಜ್‌, ನೀಡಲ್‌ ಫ್ಯಾಕ್ಟರಿಗೆ ಹೊಡೆತ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಪೆಟ್ರೋಲಿಯಂ ಉಪ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಸಿರಿಂಜ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಇದರಿಂದ ಹುಬ್ಬಳ್ಳಿಯ ಪ್ರಮುಖ ಸಿರಿಂಜ್ ತಯಾರಿಕಾ ಘಟಕ ಸೇರಿದಂತೆ ದೇಶದ ಹಲವೆಡೆ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದೆ. 

Read Full Story

09:15 AM (IST) Apr 03

ಬೀದರ್ ಎಸ್‌ಪಿ ಕಿರುಕುಳ ಆರೋಪ, ಪೇಸ್‌ಬುಕ್ ಲೈವ್‌ನಲ್ಲೇ ಆತ್ಮ*ಹತ್ಯೆಗೆ ಯತ್ನಿಸಿದ ಯೂಟ್ಯೂಬರ್!

ಬೀದರ್ ಜಿಲ್ಲೆಯ ಯೂಟ್ಯೂಬರ್ ಸಲ್ಮಾನ್ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಕೆಲ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಫೇಸ್‌ಬುಕ್ ಲೈವ್‌ನಲ್ಲಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಂತಿ ಸಭೆಯ ಹೆಸರಿನಲ್ಲಿ ಕರೆಸಿ ಅವಮಾನಿಸಿ, ಎನ್‌ಕೌಂಟರ್ ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story

09:06 AM (IST) Apr 03

ರಾಯಚೂರು - ಗೃಹಿಣಿ ಆ*ತ್ಮಹ*ತ್ಯೆ ಪ್ರಕರಣ, ಆರೋಪಿಗಳನ್ನು ಬಂಧಿಸದ ಪೊಲೀಸರ ನಡೆಗೆ ಆಕ್ರೋಶ!

ರಾಯಚೂರಿನ ಜಿನ್ನಾಪುರ ಗ್ರಾಮದಲ್ಲಿ ಸಾಲದ ವಿಚಾರವಾಗಿ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಪತಿಯನ್ನು ಮಾತ್ರ ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತರ ಕುಟುಂಬಸ್ಥರು ಕವಿತಾಳ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story

07:40 AM (IST) Apr 03

ಬ್ಯುಸಿನೆಸ್‌ ಕಾರಿಡಾರ್‌ ಯೋಜನೆಗೆ ಬಿಡಿಎದಿಂದ ಟೆಂಡರ್‌

ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಬಿಬಿಸಿ- ಪಿಆರ್‌ಆರ್‌1) ಯೋಜನೆಗೆ ಸಂಬಂಧಿಸಿದಂತೆ ತುಮಕೂರು ರಸ್ತೆ ಮತ್ತು ನಗರದ ಹೊರ ವಲಯದಲ್ಲಿರುವ ಬಳ್ಳಾರಿ ರಸ್ತೆ ಸಂಪರ್ಕಿಸುವ 19.80 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಟೆಂಡರ್‌

Read Full Story

07:36 AM (IST) Apr 03

ಕಲಬುರಗಿಯಲ್ಲಿ ಮಾಜಿ ಸಚಿವರ ಅಳಿಯನ ಬರ್ಬರ ಹ*ತ್ಯೆ - ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿದ ದುಷ್ಕರ್ಮಿಗಳು!

ಕಲಬುರಗಿಯಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಸಂಬಂಧಿ, ಉದ್ಯಮಿ ಅನಿಲ್ ರಾಠೋಡ್ ಅವರನ್ನು ಅವರ ಕಚೇರಿಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಹಣಕಾಸಿನ ವೈಷಮ್ಯವೇ ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Read Full Story

06:54 AM (IST) Apr 03

ಮಾಧ್ಯಮಗಳ ವಿರುದ್ಧ ಪರಪ್ಪನ ಅಗ್ರಹಾರ ಜೈಲಿನಿಂದಲೇ ಸೇಡು ತೀರಿಸಿಕೊಳ್ಳುವ ಯತ್ನದಲ್ಲಿ ದರ್ಶನ್‌!

ರೇಣುಕಾಸ್ವಾಮಿ ಕೊಲೆ ಪ್ರಕರಣದ ವರದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ನಟ ದರ್ಶನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

Read Full Story

06:38 AM (IST) Apr 03

ಸಂತ್ರಸ್ತೆ ಜತೆ ಮದುವೆಯಾಗಲು ಆರೋಪಿಗೆ 23 ದಿನ ಜಾಮೀನು!

ವಿವಾಹವಾಗುವುದಾಗಿ ಯುವತಿಗೆ ಮೋಸ ಮಾಡಿದ್ದ ವ್ಯಕ್ತಿಗೆ ಅದೇ ಹುಡುಗಿಯ ಜೊತೆ ಮದುವೆಯಾಗಲು ಕರ್ನಾಟಕ ಹೈಕೋರ್ಟ್‌ 23 ದಿನ ಜಾಮೀನು ನೀಡಿದೆ. ಕೇಸ್‌ ದಾಖಲು ಬಳಿಕ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತು.

 

Read Full Story

06:23 AM (IST) Apr 03

ಬೆಂಗಳೂರು ಕರಗದಲ್ಲಿ ಇನ್ಸ್‌ಪೆಕ್ಟರ್‌ ವರ್ಗಾವಣೆ ಕೋರಿ ಹರಕೆ ಬಾಳೆಹಣ್ಣು ಎಸೆದ ಪೊಲೀಸ್‌ ಸಿಬ್ಬಂದಿ!

ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವವು ವೈಭವದಿಂದ ಸಂಪನ್ನಗೊಂಡಿದ್ದು, ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ವರ್ಗಾವಣೆ ವಿಘ್ನ ನಿವಾರಣೆಗೆ ಹರಕೆ ಹೊತ್ತಿರುವುದು ವೈರಲ್ ಆಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಕರಗವು ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿತು.

Read Full Story

06:17 AM (IST) Apr 03

ಚಂದ್ರನತ್ತ 4 ಗಗನಯಾನಿಗಳ ಐತಿಹಾಸಿಕ ಪ್ರಯಾಣ ಆರಂಭ

50 ವರ್ಷಗಳ ಬಳಿಕ ಚಂದ್ರನ ಬಳಿಗೆ ಹೋಗುವ ಹುಮ್ಮಸ್ಸಿನಲ್ಲಿ ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್‌ ಕ್ಯಾಪ್ಸ್ಯೂಲ್‌ ಜತೆ 33 ಅಡಿಯ ಎಸ್‌ಎಲ್‌ಎಸ್‌ ರಾಕೆಟ್‌ ಗುರುವಾರ ಮುಂಜಾನೆ 4.05ಕ್ಕೆ(ಭಾರತೀಯ ಕಾಲಮಾನ) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ

Read Full Story

06:09 AM (IST) Apr 03

ಲೋಕಸಭಾ ಸ್ಥಾನ ಹೆಚ್ಚಳ, ಮಹಿಳಾ ಮೀಸಲಿಗೆ 3 ದಿನ ಅಧಿವೇಶನ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಆದಷ್ಟು ಶೀಘ್ರ ಜಾರಿಗೊಳಿಸಲುದ್ದೇಶಿಸಿರುವ ಕೇಂದ್ರ ಸರ್ಕಾರವು ಏ.16ರಿಂದ ಮೂರು ದಿನಗಳ ಕಾಲ ನಡೆಸಲುದ್ದೇಶಿಸಿದೆ

Read Full Story

More Trending News