Published : May 30, 2025, 07:32 AM ISTUpdated : May 30, 2025, 11:00 PM IST

Karnataka News Live: ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಪಾಕ್‌ ಎಂದಿಗೂ ಒಪ್ಪಿಕೊಳ್ಳೋದಿಲ್ಲ ಎಂದ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌!

ಸಾರಾಂಶ

ಬೆಂಗಳೂರು(ಮೇ.30) ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಇದರ ಪರಿಣಾಮ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ರಜೆ ಘೋಷಿಸಲಾಗಿದೆ. ಇತ್ತ ಮಂಗಳೂರು ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದೆ. ಭಾರಿ ಪ್ರಮಾಣದ ನೀರು ರಸ್ತೆಗಳಲ್ಲಿ ಹರಿಯುತ್ತಿದೆ.

Asim Munir

11:00 PM (IST) May 30

ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಪಾಕ್‌ ಎಂದಿಗೂ ಒಪ್ಪಿಕೊಳ್ಳೋದಿಲ್ಲ ಎಂದ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌!

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಿಂಧೂ ಜಲ ಒಪ್ಪಂದದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Read Full Story

10:47 PM (IST) May 30

ಶೀಘ್ರದಲ್ಲೇ ಖಾದ್ಯ ತೈಲಗಳ ಬೆಲೆಯಲ್ಲಿ ಭಾರೀ ಇಳಿಕೆ, ಆಮದು ಸುಂಕ ಶೇ.10ರಷ್ಟು ಕಡಿತ ಮಾಡಿದ ಕೇಂದ್ರ ಸರ್ಕಾರ!

ಆಹಾರದ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಸಂಸ್ಕರಣಾ ಉದ್ಯಮಕ್ಕೆ ಸಹಾಯ ಮಾಡಲು ಭಾರತ ಸರ್ಕಾರವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.

Read Full Story

10:26 PM (IST) May 30

ಶತಮಾನದ ಅಂತ್ಯದ ವೇಳೆಗೆ ಹಿಂದೂ ಕುಶ್ ಹಿಮಾಲಯದ ಶೇ. 75 ರಷ್ಟು ಮಂಜುಗಡ್ಡೆ ಕಳೆದುಕೊಳ್ಳಲಿದೆ - ವರದಿ

ಜಾಗತಿಕ ತಾಪಮಾನ ಏರಿಕೆಯಿಂದ ಹಿಂದೂ ಕುಶ್ ಹಿಮಾಲಯವು ತನ್ನ ಮಂಜುಗಡ್ಡೆಯ 75% ನಷ್ಟು ಭಾಗವನ್ನು ಕಳೆದುಕೊಳ್ಳಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಿದರೆ, ಹಿಮನದಿಯ ಮಂಜುಗಡ್ಡೆಯ 40-45% ರಷ್ಟನ್ನು ಉಳಿಸಬಹುದು. 

Read Full Story

10:23 PM (IST) May 30

ಮುದ್ದು ಮಗಳು ‘ಪರಿ’ ಜೊತೆ ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣಾ -ಮಿಲನಾ

ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಅವರು ತಮ್ಮ ಮುದ್ದಿನ ಮಗಳ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಫೋಟೊ ವೈರಲ್ ಆಗುತ್ತಿದೆ.

Read Full Story

09:49 PM (IST) May 30

Viral Video - ವೇದಿಕೆಯಲ್ಲಿ ಮೋದಿ ಹೆಸರು ಮರೆತ ಬಿಹಾರ ಸಿಎಂ, ಅಟಲ್‌ ಬಿಹಾರಿ ವಾಜಪೇಯಿ ಎಂದ ನಿತೀಶ್‌ ಕುಮಾರ್‌!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಟಲ್ ಬಿಹಾರಿ ವಾಜಪೇಯಿ ಎಂದು ಕರೆದ ವಿಡಿಯೋ ವೈರಲ್ ಆಗಿದೆ. ಕರಕಟ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದ್ದು, ನಿತೀಶ್ ಕುಮಾರ್ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರು.
Read Full Story

09:16 PM (IST) May 30

ರಾಜ್ಯಗಳಿಗೆ 81,735 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆಗೆ ಕೇಂದ್ರ ಅನುಮೋದನೆ!

ಕೇಂದ್ರ ಸರ್ಕಾರವು ರಾಜ್ಯಗಳಿಗೆ ₹81,735 ಕೋಟಿ ಹೆಚ್ಚುವರಿ ತೆರಿಗೆ ವಿಕೇಂದ್ರೀಕರಣ ಕಂತನ್ನು ಜೂನ್ 2 ರಂದು ಬಿಡುಗಡೆ ಮಾಡಲಿದೆ. ಇದು ಜೂನ್ 10 ರಂದು ಬಿಡುಗಡೆಯಾಗುವ ನಿಯಮಿತ ಮಾಸಿಕ ಕಂತಿಗೆ ಹೆಚ್ಚುವರಿಯಾಗಿದೆ. 

Read Full Story

09:05 PM (IST) May 30

IRCTC ಕೇರಳ ಟ್ರಿಪ್ - ಕಡಿಮೆ ಹಣಕ್ಕೆ ಬೆಸ್ಟ್ ಪ್ಯಾಕೇಜ್!

IRCTCಯ ವಿಶೇಷ ಕೇರಳ ಪ್ರವಾಸ ಪ್ಯಾಕೇಜ್, ಕೇವಲ ₹25,120 ರಿಂದ ಪ್ರಾರಂಭ! 6 ರಾತ್ರಿ, 7 ದಿನಗಳು, ಮುನ್ನಾರ್ ನಿಂದ ಅಲ್ಲೆಪ್ಪೆಯವರೆಗೆ, ಎಲ್ಲವೂ ಸೇರಿದೆ. ಬೇಗ ಬುಕ್ ಮಾಡಿ!
Read Full Story

09:02 PM (IST) May 30

ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ 2 ಅತ್ಯಂತ ಭಾರೀ ಮಳೆಯ ಅಲರ್ಟ್‌ ನೀಡಿದ ಐಎಂಡಿ!

ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. 

Read Full Story

08:44 PM (IST) May 30

ಭಾರತದ ಸೇನೆ ನಾಲಾಯಕ್‌ ಎಂದಿದ್ದ ಶಾಹಿದ್‌ ಅಫ್ರಿದಿಗೆ ದುಬೈನಲ್ಲಿ ಆತ್ಮೀಯ ಸ್ವಾಗತ ನೀಡಿದ ಕೇರಳ ಕಮ್ಯುನಿಟಿ!

ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕೇರಳದ ಸಮುದಾಯ ಅತ್ಯಂತ ವೈಭವದಿಂದ ಸ್ವಾಗತಿಸಿದ್ದು, ನೆಟ್ಟಿಗರಿಂದ ನೆಗೆಟಿವ್‌ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

Read Full Story

08:37 PM (IST) May 30

ಇಂಡಿಗೊದಿಂದ ಬೆಂಗಳೂರಿನಲ್ಲಿ ₹1,100 ಕೋಟಿ ಹೂಡಿಕೆ; ಏಷ್ಯಾದ ಅತಿದೊಡ್ಡ ಎಂಆರ್‌ಒ ನಿರ್ಮಾಣ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ ₹1,100 ಕೋಟಿಗೂ ಹೆಚ್ಚು ಹೂಡಿಕೆ ಮಾಡಿ ಎಂಆರ್‌ಒ ಸೌಲಭ್ಯ ಸ್ಥಾಪಿಸಲಿದೆ. ಈ ಯೋಜನೆಯು ಉದ್ಯೋಗ ಸೃಷ್ಟಿಗೆ ಪೂರಕವಾಗಲಿದ್ದು, ಬೆಂಗಳೂರನ್ನು ಏಷ್ಯಾದ 'ಎಂಆರ್‌ಒ' ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ.
Read Full Story

08:01 PM (IST) May 30

10 ವರ್ಷಕ್ಕೂ ಅಧಿಕ ಕಾಲ ಸೇವೆ ಮಾಡಿ NPS ಆಯ್ಕೆ ಮಾಡಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರಿಗೆ ಗುಡ್‌ ನ್ಯೂಸ್‌!

ಮಾರ್ಚ್ 31, 2025 ರ ಮೊದಲು ನಿವೃತ್ತರಾದ NPS ಚಂದಾದಾರರಿಗೆ ಏಕೀಕೃತ ಪಿಂಚಣಿ ಯೋಜನೆಯಡಿ ಹೆಚ್ಚುವರಿ ಪ್ರಯೋಜನಗಳನ್ನು ಘೋಷಿಸಲಾಗಿದೆ.
Read Full Story

06:57 PM (IST) May 30

ಪರಿಶಿಷ್ಟ ಜಾತಿ ದತ್ತಾಂಶ ಒಳಮೀಸಲಾತಿ ಬಿಟ್ಟು ಬೇರಾವ ಯೋಜನೆಗೂ ಬಳಸೊಲ್ಲ; ಪಿ.ಎಂ. ನರೇಂದ್ರಸ್ವಾಮಿ!

ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ದತ್ತಾಂಶವನ್ನು ಒಳಮೀಸಲಾತಿಯ ಹೊರತಾಗಿ ಇತರ ಯೋಜನೆಗಳಿಗೆ ಬಳಸುವುದಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಯಶಸ್ವಿಯಾಗಲು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಅವರು ಹೇಳಿದರು.
Read Full Story

06:51 PM (IST) May 30

ಐಪಿಎಲ್ 2025 ರಲ್ಲಿ ಆರೆಂಜ್‌ ಕ್ಯಾಪ್‌, ಪರ್ಪಲ್‌ ಕ್ಯಾಪ್‌ಗಾಗಿ ಸೆಣಸುತ್ತಿರುವ ಅಗ್ರ 4 ಸ್ಪರ್ಧಿಗಳು

ಆಶಿಶ್ ನೆಹ್ರಾ ರವರ ಅನುಗ್ರಹ, ಗುರು ಕೃಪಾಕಟಾಕ್ಷದ ಮಾರ್ಗದರ್ಶನದಲ್ಲಿ, ತರಬೇತಿ ಪಡೆಯುತ್ತಿರುವ ಗುಜರಾತ್ ಟೈಟಾನ್ಸ್ ಆಟಗಾರರು ಐಪಿಎಲ್ 2025 ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆನೆ ನಡೆದದ್ದೇ ದಾರಿ ಎನ್ನುತ್ತಿದ್ದಾರೆ.

Read Full Story

06:45 PM (IST) May 30

ತಮಿಳುನಾಡಿನ ದಂತ ಚಿಕಿತ್ಸಾಲಯದಿಂದ ಮಾರಕ ಬ್ಯಾಕ್ಟೀರಿಯಾ - 8 ಸಾವು!

ತಿರುಪತ್ತೂರಿನ ಒಂದು ದಂತ ಚಿಕಿತ್ಸಾಲಯದಲ್ಲಿ ಶುದ್ಧೀಕರಣವಿಲ್ಲದ ಸಲೈನ್ ಬಾಟಲಿಗಳ ಬಳಕೆಯಿಂದ ಮಾರಕ ಬ್ಯಾಕ್ಟೀರಿಯಾ ಹರಡಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. 'ದಿ ಲ್ಯಾನ್ಸೆಟ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

Read Full Story

06:26 PM (IST) May 30

ಮಲಯಾಳಂ ಸಿನಿಮಾ ಪ್ರಿಯರೇ? ಹಾಗಿದ್ರೆ ನೀವು OTTಯಲ್ಲಿ ಈ ಸಿನಿಮಾ ನೋಡಿ

ತುಡರುಂ ಸಿನಿಮಾದಿಂದ ಹಿಡಿದು ಜೆರ್ರಿ ಸಿನಿಮಾವರೆಗೂ ಈ ವಾರ ಮಲಯಾಳಂ ನ ಈ ಸೂಪರ್ ಥ್ರಿಲ್ಲರ್ ಸಿನಿಮಾಗಳು OTTಗೆ ಬರಲಿದೆ. ಮಿಸ್ ಮಾಡದೇ ಸಿನಿಮಾ ನೋಡಿ.

Read Full Story

06:10 PM (IST) May 30

ಈ ವಿಟಮಿನ್ ಕೊರತೆಯಾದ್ರೆ ಲಟ ಲಟ ಮೂಳೆಯೇ ಮುರೀಬಹುದು, ಮಾಡಬೇಕಾದ್ದೇನು?

ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಗತ್ಯ, ಮುಖ್ಯವಾಗಿ ಸೂರ್ಯನ ಬಿಸಿಲು ಮತ್ತು ಕೆಲವು ಆಹಾರಗಳಿಂದ ಪಡೆಯುತ್ತೇವೆ. ವಿಟಮಿನ್ ಡಿ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಮೂಳೆಗಳ ಆರೋಗ್ಯ ಕಾಪಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Read Full Story

06:02 PM (IST) May 30

'ಗುರುದಕ್ಷಿಣೆ ರೂಪದಲ್ಲಿ ನನಗೆ ಪಿಒಕೆ ಬೇಕು..' ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿಗೆ ಹೇಳಿದ ಜಗದ್ಗರು ರಾಮಭದ್ರಾಚಾರ್ಯ!

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಜಗದ್ಗುರು ರಾಮಭದ್ರಾಚಾರ್ಯರಿಂದ ಗುರುದೀಕ್ಷೆ ಪಡೆದರು. ರಾಮಭದ್ರಾಚಾರ್ಯರು ಗುರುದಕ್ಷಿಣೆಯಾಗಿ ಪಿಒಕೆ ಕೇಳಿದರು, ಇದಕ್ಕೆ ಸೇನಾ ಮುಖ್ಯಸ್ಥರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
Read Full Story

05:43 PM (IST) May 30

ಗ್ಯಾಸ್ ಡೆಲಿವರಿ ನೀಡಲು ಬಂದ ಡೆಲಿವರಿ ಬಾಯ್‌ನಿಂದ ಮಹಿಳೆಯ ಮೇಲೆ ಅತ್ಯಾ*ಚಾರ ಯತ್ನ

ಚಾಮರಾಜನಗರದಲ್ಲಿ ಗ್ಯಾಸ್ ಡೆಲಿವರಿ ನೀಡಲು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾ*ಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿದೆ.

Read Full Story

05:37 PM (IST) May 30

ಸೆಬಿಯಿಂದ ಬ್ಯಾನ್ ಆಗಿರುವ ಬಾಲಿವುಡ್‌ ನಟನ ಪತ್ನಿ ಮಾರಿಯಾ ಗೊರೆಟ್ಟಿ ಯಾರು?

ಅರ್ಶದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ಮೇಲೆ SEBI ಒಂದು ವರ್ಷ ನಿಷೇಧ ಹೇರಿದೆ. ಸಾಧನಾ ಬ್ರಾಡ್‌ಕಾಸ್ಟ್ ಷೇರುಗಳ ತಪ್ಪುದಾರಿಗೆಳೆಯುವ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
Read Full Story

05:23 PM (IST) May 30

ದಾಖಲೆಗಳ ಸೀಸನ್‌ - ಐಪಿಎಲ್‌ ಫೈನಲ್‌ವರೆಗಿನ ಹಾದಿಯಲ್ಲಿ ಆರ್‌ಸಿಬಿ ಮಾಡಿರುವ ಮಹಾ ರೆಕಾರ್ಡ್‌ಗಳು!

ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವರ್ಷಗಳ ಬಳಿಕ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ, ಆರ್‌ಸಿಬಿ ತಂಡವು ತಮ್ಮ ನಾಲ್ಕನೇ ಫೈನಲ್‌ಗೆ ಅರ್ಹತೆ ಪಡೆದಿದೆ. ತಂಡದ ಈ ಯಶಸ್ಸಿಗೆ ಕೊಹ್ಲಿ, ಪಟಿದಾರ್ ಸೇರಿದಂತೆ ಹಲವು ಆಟಗಾರರ ಪ್ರದರ್ಶನ ಕಾರಣವಾಗಿದೆ.
Read Full Story

04:54 PM (IST) May 30

RCB ಈ ಬಾರಿ IPL ಟ್ರೋಫಿ ಗೆಲ್ಲಲಿದ್ಯಾ? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ Greenstone Lobo!

ಈಗ ನಾಲ್ಕು ತಂಡಗಳಿದ್ದು, ಅವುಗಳಲ್ಲಿ ಯಾವ ತಂಡ ಈ ಬಾರಿಯ ಐಪಿಎಲ್‌ ಟ್ರೋಫಿ ಗೆಲ್ಲಲಿದೆ? 

Read Full Story

04:33 PM (IST) May 30

ಆಟಿಕೆಯಂತೆ ಟೊಯೋಟಾ ಫಾರ್ಚೂನರ್ ಕಾರನ್ನು ನದಿಯಿಂದ ಮೇಲೆಳೆದ ಆನೆ - ವೀಡಿಯೋ ವೈರಲ್

ಕೇರಳದಲ್ಲಿ ನಡೆದ ಒಂದು ಅಪಘಾತದಲ್ಲಿ ನದಿಗೆ ಬಿದ್ದ ಟೊಯೋಟಾ ಫಾರ್ಚುನರ್ ಕಾರನ್ನು ಆನೆಯೊಂದು ಮೇಲೆತ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಯ ಬಲಪರಾಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Read Full Story

04:28 PM (IST) May 30

ಶಿವಮೊಗ್ಗ ಪ್ರಿಯಕರನೊಂದಿಗೆ ವಿಷ ಸೇವಿಸಿದ ಮಹಿಳೆ ಸಾವು - ಇಬ್ಬರು ಮಕ್ಕಳು ಅನಾಥ

ಶಿವಮೊಗ್ಗ ಜಿಲ್ಲೆಯಲ್ಲಿ ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಮಹಿಳೆಯ ಸಹೋದರಿ ಪ್ರಿಯಕರನ ವಿರುದ್ಧ ಆರೋಪ ಮಾಡಿದ್ದಾರೆ.
Read Full Story

04:23 PM (IST) May 30

ವಾಸ್ತು - ಬಾಗಿಲು ಯಾವ ದಿಕ್ಕಲ್ಲಿದ್ದರೆ ಯಾವ ರಾಶಿಗೆ ಶುಭ?

ಮನೆಯ ಮುಖ್ಯ ದ್ವಾರವು ವಾಸ್ತು ಪ್ರಕಾರ ಇಂಥದ್ದೇ ದಿಕ್ಕಲ್ಲಿದ್ದರೆ ಶುಭ. ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟ ಎದುರಾಗಬಹುದು. ವಾಸ್ತು ಪ್ರಕಾರ ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆ ಮುಖ್ಯ ದ್ವಾರವಿದ್ದರೆ ಶುಭ.

Read Full Story

04:21 PM (IST) May 30

ಸಿಂಧೂ ಜಲ ಒಪ್ಪಂದದ ರೆಡ್‌ ಲೈನ್‌ ದಾಟಲು ಭಾರತಕ್ಕೆ ಬಿಡೋದಿಲ್ಲ ಎಂದ ಪಾಕಿಸ್ತಾನ!

ನೀರನ್ನು ಅಸ್ತ್ರವನ್ನಾಗಿ ಮಾಡುವ ಭಾರತದ ಯೋಜನೆಯನ್ನು ತಿರಸ್ಕರಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಸಿಂಧೂ ನದಿ ನೀರು ಒಪ್ಪಂದದ ರೆಡ್‌ಲೈನ್‌ ದಾಟಲು ಭಾರತಕ್ಕೆ ಬಿಡೋದಿಲ್ಲ ಎಂದಿದ್ದಾರೆ.

Read Full Story

04:12 PM (IST) May 30

ಅಮ್ಮಾ ಅಂದ್ರೆ ಸುಮ್ಮನೇನಾ? ಮೂರು ಬಾರಿ ಮಗನಿಗೆ ಮರುಜನ್ಮ ನೀಡಿದ ಮಹಾತಾಯಿ ಈಕೆ!

ಅಮ್ಮಾ ಎಂದರೇನೇ ತ್ಯಾಗಕ್ಕೆ ಮತ್ತೊಂದು ಹೆಸರು ಎನ್ನುವುದನ್ನು ಸಾಬೀತು ಮಾಡಿದ್ದಾರೆ ಇಲ್ಲೊಬ್ಬ ಮಹಿಳೆ. ಮಗನಿಗೆ ಮೂರು ಬಾರಿ ಮರುಜನ್ಮ ನೀಡಿರುವ ಮಹಾತಾಯಿಯ ಸ್ಟೋರಿ ಕೇಳಿ...

Read Full Story

03:52 PM (IST) May 30

ಬೆಂಗಳೂರಿನಲ್ಲಿ ಮೇ 31ರವರೆಗೆ ವಿದ್ಯುತ್ ಕಡಿತ - ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ

ಬೆಸ್ಕಾಂ ನಿರ್ವಹಣೆ ಕಾರ್ಯಗಳಿಂದಾಗಿ ಮೇ 31ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಹೊಸಕೋಟೆ ಮತ್ತು ವಿಜಯಪುರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಈ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ ಮಿತ್ರ ಆಪ್ ಮೂಲಕ ದೂರು ನೀಡಬಹುದು.
Read Full Story

03:46 PM (IST) May 30

ಹುಲಿ ಜೊತೆ ಸೆಲ್ಫಿ ತೆಗೆಯಲು ಮುಂದಾದ ಪ್ರವಾಸಿಗನ ಮೇಲೆ ದಾಳಿ - ಕೊನೆ ಸೆಲ್ಫಿ ಆಗೋಗ್ತಿತ್ತು - ವೀಡಿಯೋ ವೈರಲ್

ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್‌ನಲ್ಲಿ ಭಾರತೀಯ ಪ್ರವಾಸಿಗರೊಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿದೆ..

Read Full Story

03:43 PM (IST) May 30

ಚಿನ್ನದ ಸಾಲ ಮಾರ್ಗಸೂಚಿಗಳನ್ನು RBI ಪರಿಶೀಲಿಸಿದೆ

ಏಪ್ರಿಲ್ 9 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲಗಳ ಕುರಿತು ಸಮಗ್ರ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Read Full Story

03:27 PM (IST) May 30

ಬೇಡದ ಜಾಗದಲ್ಲಿ ಬೇಡದ ವಿಷ್ಯ ಮಾತಾಡಿರೋದು ಸರಿಯಲ್ಲ‌ - ಕಮಲ್ ಹಾಸನ್ ವಿವಾದಕ್ಕೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ!

'ಕಮಲ್ ಹಾಸನ್ ಕ್ಷಮೆ ಕೇಳಿ ದೊಡ್ಡೋರು ಆಗಬಹುದಿತ್ತು.. ಬೇಡದ ಜಾಗದಲ್ಲಿ.. ಬೇಡದ ವಿಷ್ಯ ಮಾತಾಡಿರೋದು ಸರಿಯಲ್ಲ‌.. ಪ್ರೀತಿ ಇರೋ ಕಡೆ.. ಕ್ಷಮೆ ಮತ್ತು ಗೌರವನೂ ಇರಬೇಕು. ಈ ಥರಾ ಹೇಳಿಕೆಯಿಂದ ಬೇರೆ ನಟರಿಗೂ ತೊಂದರೆ…

Read Full Story

03:23 PM (IST) May 30

ಆರ್​ಬಿಸಿ ಗೆಲುವಿಗಾಗಿ ದಾಂಪತ್ಯವನ್ನೇ ಪಣಕ್ಕಿಟ್ಟಳಾ ಈಕೆ? ಹಲ್​ಚಲ್​ ಸೃಷ್ಟಿಸಿದೆ ಈ ಸಂದೇಶ!

ಆರ್​ಬಿಸಿ ತಂಡ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಿಸಿದರೆ, ಮಹಿಳೆಯೊಬ್ಬಳು ತನ್ನ ದಾಂಪತ್ಯವನ್ನೇ ಪಣಕ್ಕಿಟ್ಟಿದ್ದಾಳೆ. ಏನಿದು ವಿಷ್ಯ?

Read Full Story

03:20 PM (IST) May 30

ಮಂಗಳೂರು ಮನೆ ಕುಸಿತದಲ್ಲಿ 2 ಮಕ್ಕಳು ಸಾವು; ಗಂಭೀರ ಸ್ಥಿತಿಯಲ್ಲೂ ಮಕ್ಕಳೆಲ್ಲಿ ಎಂದು ಕೇಳಿದ ತಾಯಿ!

ಉಳ್ಳಾಲದ ಭೂಕುಸಿತದಲ್ಲಿ ಮನೆ ಕುಸಿದು ಮೂವರು ಸಾವು. ತಾಯಿ ಅಶ್ವಿನಿ ಮಕ್ಕಳನ್ನು ರಕ್ಷಿಸಲು ಗೋಡೆ ತಡೆದು ಪ್ರಜ್ಞೆ ಕಳೆದುಕೊಂಡರು. ರಕ್ಷಣಾ ಕಾರ್ಯಾಚರಣೆ ತಡವಾದ ಕಾರಣ ಇಬ್ಬರು ಮಕ್ಕಳು ಮೃತಪಟ್ಟರು. ಅಶ್ವಿನಿ ಸ್ಥಿತಿ ಗಂಭೀರ, ಮಕ್ಕಳ ಸಾವಿನ ವಿಚಾರ ಮುಚ್ಚಿಡಲಾಗಿದೆ. ಗಂಡ, ಮಾವನಿಗೂ ಗಾಯ.

Read Full Story

03:18 PM (IST) May 30

ಪ್ರಧಾನಿ ಮೋದಿ ಕಾಲಿಗೆರಗಿ ಆಶೀರ್ವಾದ ಪಡೆದ ಐಪಿಎಲ್ ಸೆನ್ಸೇಶನ್ ವೈಭವ್ ಸೂರ್ಯವಂಶಿ

ಐಪಿಎಲ್ ಟೂರ್ನಿಯ ಸೆನ್ಸೇಶನ್, 14 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಕ್ರಿಕೆಟಿನ ಪೋಷಕರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯವಂಶಿ ಮೋದಿ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ.

Read Full Story

02:36 PM (IST) May 30

ಕಾಂಗ್ರೆಸ್ ಸರ್ಕಾರಕ್ಕೆ ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ; ಹೆಚ್‌ಡಿಕೆ

ಕರಾವಳಿ ಪ್ರದೇಶದಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು, ಕಾಂಗ್ರೆಸ್ ಸರ್ಕಾರ ಕೊಲೆಗಳಲ್ಲಿ 'ರಾಜಕೀಯ ಕೂಳು' ಬೇಯಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

Read Full Story

02:07 PM (IST) May 30

'ಕಪ್ಪು ನಮ್ದೇ' ಆದ್ಮೇಲೆ ಈಗೇನಿದ್ರೂ 'ರಾಜಧಾನಿನೂ ನಮ್ದೇ'... RCB ಫ್ಯಾನ್ಸ್​ ಹೊಸ ಕೂಗು!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಫೈನಲ್​ ಪ್ರವೇಶಿಸುತ್ತಿದ್ದಂತೆಯೇ ಕಪ್ಪು ನಮ್ದೇ ಎನ್ನೋದು ಗ್ಯಾರೆಂಟಿಯಾಗಿದೆ. ಇದರ ಜೊತೆಗೀಗ 'ರಾಜಧಾನಿನೂ ನಮ್ದೇ' ಎನ್ನೋ ಕೂಗು ಬಂದಿದೆ. ಅದೇನದು ನೋಡಿ!

Read Full Story

01:59 PM (IST) May 30

ಚೀನಾಕ್ಕೆ ಮತ್ತೆ ವಿಮಾನ ಕಳುಸ್ತಿದೆ ಬೋಯಿಂಗ್, ಸಿಇಓ ಅಧಿಕೃತ ಹೇಳಿಕೆ

ಸಿಎನ್‌ಬಿಸಿ ವರದಿಯ ಪ್ರಕಾರ, ದಕ್ಷಿಣ ಕೆರೊಲಿನಾದಲ್ಲಿ ತಯಾರಾದ ವೈಡ್-ಬಾಡಿ ಡ್ರೀಮ್‌ಲೈನರ್ ವಿಮಾನಗಳಿಗೆ ಇಟಲಿ ಮತ್ತು ಜಪಾನ್‌ನಿಂದ ಆಮದು ಮಾಡಿಕೊಂಡ ಘಟಕಗಳ ಮೇಲೆ ಬೋಯಿಂಗ್ ಸುಂಕವನ್ನು ಪಾವತಿಸುತ್ತಿದೆ ಎಂದು ಓರ್ಟ್‌ಬರ್ಗ್ ಹೇಳಿದ್ದಾರೆ.
Read Full Story

01:29 PM (IST) May 30

ಕೇರಳದ ವ್ಯಕ್ತಿಗೆ ದುಬೈನಲ್ಲಿ ಎರಡೆರಡು ಜಾಕ್‌ಪಾಟ್‌ - 8.5 ಕೋಟಿ ಲಾಟರಿ ಗೆದ್ದ ಮಲೆಯಾಳಿ

ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಅದೃಷ್ಟಲಕ್ಷ್ಮಿ ಎರಡೆರಡು ಬಾರಿ ಒಲಿದಿದ್ದಾಳೆ. ಅವರಿಗೆ ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ $1 ಮಿಲಿಯನ್ ಲಾಟರಿ ಹೊಡೆದಿದೆ. 

Read Full Story

01:17 PM (IST) May 30

ಆರು ವರ್ಷಗಳಲ್ಲಿ 6.68 ಲಕ್ಷಕ್ಕೂ ಹೆಚ್ಚು ಜನರು ಈ ಕಾರನ್ನು ಖರೀದಿಸಿದ್ದಾರೆ

2019 ರಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ 6,68,000 ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಯಶಸ್ಸನ್ನು ಕಂಡಿದೆ. ಸ್ಟೈಲಿಶ್ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯಿಂದಾಗಿ ಈ ಕಾರು ಜನಪ್ರಿಯವಾಗಿದೆ. ಹೊಸ ತಲೆಮಾರಿನ ವೆನ್ಯೂ 2025 ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಬಹುದು.

Read Full Story

01:09 PM (IST) May 30

ಈ ಬಾರಿ ಆರ್‌ಸಿಬಿ ಚಾಂಪಿಯನ್ ಕಿರೀಟ ಖಚಿತ, ಕಾರಣ 14ರಲ್ಲಿ 11ರ ಸೀಕ್ರೆಟ್

ಐಪಿಎಲ್ 2025 ಫೈನಲ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲುತ್ತಾ? ಚಾಂಪಿಯನ್ ಪಟ್ಟ ಖಚಿತ ಎನ್ನುತ್ತಿದ್ದಾರೆ. ಫ್ಯಾನ್ಸ್. ಕಾರಣ 14ರಲ್ಲಿ 11ರ ಲೆಕ್ಕ ಮುಂದಿಟ್ಟಿದ್ದಾರೆ. ಏನಿದು 14ರಲ್ಲಿ 11 ಸ್ಟ್ಯಾಟ್ಸ್

Read Full Story

01:01 PM (IST) May 30

'ಕನ್ಯತ್ವ' ಒಂದು ರಾತ್ರಿಯ ಆಸ್ತಿ... ಎನ್ನುತ್ತಲೇ ಪುರುಷರಿಗೆ ಸಲಹೆ ಕೊಟ್ಟು ವಿವಾದ ಸೃಷ್ಟಿಸಿದ ಪ್ರಿಯಾಂಕಾ ಚೋಪ್ರಾ!

'ಕನ್ಯತ್ವ' ಒಂದು ರಾತ್ರಿಯ ಆಸ್ತಿ... ಎನ್ನುತ್ತಲೇ ಮದುವೆಯಾಗುವ ಗಂಡುಮಕ್ಕಳಿಗೆ ಉಚಿತ ಸಲಹೆ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಅವರು ಹೇಳಿದ್ದೇನು ನೋಡಿ!

Read Full Story

More Trending News