ಬೆಂಗಳೂರು: ಕೇಂದ್ರ ಸರ್ಕಾರವು ಅಂಬಾನಿ, ಅದಾನಿ ಗುಲಾಮ ಎಂಬುದು ಈಗಲೂ ನಮ್ಮ ಅಭಿಪ್ರಾಯ. ಆದರೆ ನ್ಯಾಯಯುತವಾಗಿ ರಾಜ್ಯದಲ್ಲಿ ಅವರಿಗೆ ಗುತ್ತಿಗೆ ಸಿಕ್ಕಿದರೆ ನಾವು ಏನೂ ಮಾಡಲಾಗುವುದಿಲ್ಲ. ಅದಾನಿ ಅವರು ನಮ್ಮ ಸರ್ಕಾರಿ ಗುತ್ತಿಗೆದಾರ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನ್ಯಾಯಯುತವಾಗಿ ಅದಾನಿ ಅವರಿಗೆ ನಮ್ಮ ಸರ್ಕಾರದ ಪ್ರತಿಷ್ಠಿತ ಯೋಜನೆಯ ಟೆಂಡರ್ ಸಿಕ್ಕಿದೆ. ಹೀಗಾಗಿ ಅವರು ಸೌಜನ್ಯಕ್ಕೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಬಹುದು ಎಂದು ಸಮರ್ಥಿಸಿಕೊಂಡರು.
ರಾಹುಲ್ ಗಾಂಧಿ ಅವರು ಅಂಬಾನಿ, ಅದಾನಿ ಅವರನ್ನು ಬೈಯುತ್ತಿರುತ್ತಾರೆ ಎಂಬ ಪ್ರಶ್ನೆಗೆ, ‘ಈಗಲೂ ನಮ್ಮ ಅಭಿಪ್ರಾಯಕ್ಕೆ ನಾವು ಬದ್ಧರಿದ್ದೇವೆ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಗುಲಾಮ ಎಂಬುದನ್ನು ಈಗಲೂ ಹೇಳುತ್ತೇವೆ’ ಎಂದರು.
ಅದಾನಿಗೆ ಈಗ ಟೆಂಡರ್ ಸಿಕ್ಕಿದೆ. ಬಿಜೆಪಿ ನಾಯಕರು ಸುರಂಗ ರಸ್ತೆ ಮಾಡಬೇಕು ಎನ್ನುತ್ತಾರೋ ಅಥವಾ ಇಲ್ಲ ಎನ್ನುತ್ತಾರೋ? ಬಿಜೆಪಿ ಸಂಸದರು ಈ ಹಿಂದೆ ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅವರ ನೆಂಟರಿಗೆ ಸಿಕ್ಕಿದೆ. ನೆಂಟರು, ಬೀಗರು ಟೆಂಡರ್ ಹಾಕಬಹುದು. ನಾವು ಬೇಡ ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದರು.
ಅದಾನಿ ಬಗ್ಗೆ ನಮ್ಮ ಅಭಿಪ್ರಾಯ ಏನೇ ಇರಬಹುದು. ನಮ್ಮ ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ನಾನೇನಾದರೂ ಮಾಡಲು ಆಗುತ್ತಾ? ಕಾನೂನು ಪಾಲನೆ ಮಾಡಬೇಕು ಅಷ್ಟೇ.
10:35 PM (IST) Aug 25
ಸ್ಯಾಂಡಲ್‌ವುಡ್ 'ಕಾಮಿಡಿ ಕಿಂಗ್' ನಟ ಚಿಕ್ಕಣ್ಣ ಮದುವೆ ಇದೇ ತಿಂಗಳು 29 ಹಾಗೂ 30ಕ್ಕೆ ನಡೆಯಲಿದೆ. ಈ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಿದ್ದ ನಟ ಚಿಕ್ಕಣ್ಣ ಅವರು 'ಎಲ್ಲರೂ ನನ್ನ ಮದುವೆ ಬನ್ನಿ. ಯಾರು ಬರೋಕೆ ಆಗಲ್ವೋ ಅವರು ಮನೆಯಿಂದಲೇ ನನ್ನನ್ನ ಹರಸಿ' ಎಂದು ಹೇಳಿದ್ದಾರೆ.
08:31 PM (IST) Aug 25
30 ಸಾವಿರ ರೂಪಾಯಿ ಸಂಬಳ ಪಡೆಯುವವರು "20-4-10" ಸೂತ್ರವನ್ನು ಅನುಸರಿಸುವ ಮೂಲಕ ಮತ್ತು ಬಜೆಟ್ ಕಾರನ್ನು ಆಯ್ಕೆ ಮಾಡುವ ಮೂಲಕ ಕಾರ್ ಖರೀದಿಸಬಹುದು. ಡೌನ್ ಪೇಮೆಂಟ್, ಇಎಂಐ ಮಿತಿ ಮತ್ತು ಕಾರಿನ ನಿರ್ವಹಣಾ ವೆಚ್ಚಗಳನ್ನು ಮೊದಲೇ ಯೋಜಿಸುವುದು ಕಾರ್ ಖರೀದಿಯ ಕನಸನ್ನು ಸುಲಭಗೊಳಿಸುತ್ತದೆ.
08:07 PM (IST) Aug 25
ಯಶ್ ಅಭಿನಯದ ವಿಶ್ವಮಟ್ಟದ ಟಾಕ್ಸಿಕ್ ಸಿನಿಮಾ ನಾಳೆ ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಬೆಂಗಳೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭವಾಗಲಿರುವುದು ವಿಶೇಷ. ಇಡೀ ಕರ್ನಾಟಕದಾದ್ಯಂತ ಒಟ್ಟೂ ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ಪ್ರದರ್ಶನ ಆಗಲಿದೆ? ಈ ಸ್ಟೋರಿ ನೋಡಿ..
07:20 PM (IST) Aug 25
ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ವಿದ್ಯಾರ್ಥಿನಿ ಕಿಡಿಗೇಡಿಯೊಬ್ಬನ ಬ್ಲ್ಯಾಕ್‌ಮೇಲ್ ಹಾಗೂ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು 'ನಾನು ಕರೆದಾಗ ಬರಬೇಕು' ಎಂದು ಬೆದರಿಸುತ್ತಿದ್ದ ಆರೋಪಿ ವಿರುದ್ಧ ಕ್ರಮ ಜರೂಗಿಸಲಾಗಿದೆ.
06:59 PM (IST) Aug 25
ಸದ್ಯಕ್ಕೆ ಊರ್ವಶಿ ಚಿತ್ರಮಂದಿರ ನೆಲಸಮವಾಗುವುದು ತಪ್ಪಿದೆ. ಸುಪ್ರೀಂ ಕೋರ್ಟ್ ಸೂಚಿಸಿದಂತೆ ಅಗತ್ಯ ಪ್ರಮಾಣಪತ್ರವನ್ನು ತಕ್ಷಣವೇ ಸಲ್ಲಿಸಲು ಹೈಕೋರ್ಟ್ ಆಡಳಿತ ಮಂಡಳಿಗೆ ಸೂಚಿಸಿದೆ. ಈ ಸುದ್ದಿಯಿಂದಾಗಿ ಬೆಂಗಳೂರಿನ ಸಾವಿರಾರು ಸಿನಿಮಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮೂರಿನ ಐತಿಹಾಸಿಕ ಹೆಗ್ಗುರುತೊಂದು ಸದ್ಯಕ್ಕೆ ಉಳಿದುಕೊಂಡಿದೆ.
06:24 PM (IST) Aug 25
ಗಾಯಕಿ ಅರ್ಚನಾ ಉಡುಪ ಅವರು ರಾಯಲ್ ಎನ್‌ಫೀಲ್ಡ್‌ನ ಮೊಟ್ಟಮೊದಲ ಎಲೆಕ್ಟ್ರಿಕ್ ಬೈಕ್ 'ಫ್ಲೈಯಿಂಗ್ ಫೆಲಾ' ಖರೀದಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಈ ಲೇಖನವು ಅವರ ಸಂತಸದ ಕ್ಷಣಗಳ ಜೊತೆಗೆ, ಈ ಹೊಸ ಎಲೆಕ್ಟ್ರಿಕ್ ಬೈಕ್‌ನ ಬೆಲೆ, ಬ್ಯಾಟರಿ, ವೇಗ, ಮತ್ತು ವಿನ್ಯಾಸದ ವಿವರ ಇಲ್ಲಿದೆ.
05:16 PM (IST) Aug 25
04:35 PM (IST) Aug 25
ಈ ವೇಳೆ ನಟ ಯಶ್ ಅವರು ‘ಎಲ್ಲರಿಗೂ ಒಳ್ಳೆಯದಾಗಲಿ, ಮುಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಇರಲಿ.. ನಾನು ಯಾವಾಗ್ಲೂ ಬರ್ತೀನಿ, ಪ್ರತಿ ವರ್ಷ ಬರ್ತೀನಿ.. ನನ್ನ ಎಲ್ಲಾ ಸಿನಿಮಾ ಬಿಡುಗಡೆ ಸಮಯದಲ್ಲೂ ಬರ್ತಿನಿ’ಎಂದಿದ್ದಾರೆ. ಜೊತೆಗೆ, ಮತ್ತೊಂದು ಗುಟ್ಟು ರಟ್ಟು ಮಾಡಿದ್ದಾರೆ..
03:11 PM (IST) Aug 25
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಾಳೆ ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗದೆ. ಇದೀಗ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ಬೆಂಗಳೂರು ನ್ಯಾಯಾಲಯದಿಂದ 'ಜಾನ್ ಡೋ' (John Doe) ಆದೇಶ ಹೊರಡಿಸಲಾಗಿದೆ.
02:42 PM (IST) Aug 25
ತಮ್ಮ ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ನಟ ಯಶ್ ಅವರು, ಟಾಕ್ಸಿಕ್ ಸಿನಿಮಾದ ಮಹೂರ್ತದ ಸಮಯದಲ್ಲೂ ಹೋಗಿ ಭೇಟಿಯಾಗಿದ್ದರು.
02:15 PM (IST) Aug 25
ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಬಳಿಯ 'ಬರುವೆ' ಗ್ರಾಮದ ಪಿಕಲ್ಸ್, ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಸುಧೀಂದ್ರ ಹೆಬ್ಬಾರ್ ಅವರು ತಮ್ಮ ತಾಯಿಯ ಪಾಕವಿಧಾನದಿಂದ ಆರಂಭಿಸಿದ ಈ ಉದ್ಯಮವು ಇಂದು ದಿನಕ್ಕೆ 500-600 ಕೆಜಿ ಉಪ್ಪಿನಕಾಯಿ ಮಾರಾಟ ಮಾಡಿ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.
12:55 PM (IST) Aug 25
12:32 PM (IST) Aug 25
12:29 PM (IST) Aug 25
11:47 AM (IST) Aug 25
ಇಡೀ ಜಗತ್ತು ಸದ್ಯಕ್ಕೆ 'ಟಾಕ್ಸಿಕ್ ಮಯ'. ನಾಳೆಯಿಂದ, ಅಂದರೆ 26 ಆಗಸ್ಟ್ 2026ರಿಂದ ವಿಶ್ವದಾದ್ಯಂತ ಬಿಡುಗಡೆಯಾಗ್ತಿರೋ ಯಶ್ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ 'ಜಾಕಿ 42' ಕೂಡ ಕಮಾಲ್ ಮಾಡಲಿದೆ. ಹೇಗೆ ನೋಡಿ..
11:36 AM (IST) Aug 25
KrantiVeera Sangolli Rayanna Railway Station Bengaluru ಕೆಂಗೇರಿ-ರಾಮನಗರಂ ಭಾಗದಲ್ಲಿ ಹಳಿ ನವೀಕರಣ ಕಾಮಗಾರಿಯಿಂದಾಗಿ, 2026ರ ಆಗಸ್ಟ್ 29ರಿಂದ 2027ರ ಫೆಬ್ರವರಿ 19ರವರೆಗೆ ನಿಗದಿತ ದಿನಗಳಲ್ಲಿ ಮೇಮು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
10:57 AM (IST) Aug 25
ಅಕ್ರಮ ಖಾತೆ ಪ್ರಕರಣದ ಆರೋಪಿಯೊಬ್ಬನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ರಾಜಾತಿಥ್ಯ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ ವೇಳೆ, ಯಾವುದೇ ಆರೋಗ್ಯ ಸಮಸ್ಯೆಯಿಲ್ಲದ ಕೈದಿಯು ಯುವತಿಯೊಂದಿಗೆ ವಿಶೇಷ ಕೊಠಡಿಯಲ್ಲಿದ್ದು, ವಿಐಪಿ ಚಿಕಿತ್ಸೆ ಪಡೆಯುತ್ತಿರುವುದು ಪತ್ತೆಯಾಗಿದೆ.
10:44 AM (IST) Aug 25
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ರಾಮಮಂದಿರ ಹುಂಡಿ ಕಳ್ಳತನ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ, ಮತ್ತು ಧಾರ್ಮಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ಮಠ-ಮಾನ್ಯಗಳಲ್ಲಿ ಆರ್ಥಿಕ ಪಾರದರ್ಶಕತೆಯ ಅಗತ್ಯವನ್ನು ಒತ್ತಿಹೇಳಿದ ಅವರು, ದಲಿತ ಕೇರಿಗೆ ಭೇಟಿ ನೀಡುವುದು ತಮಗೆ ಹೊಸದಲ್ಲ ಎಂದರು
10:21 AM (IST) Aug 25
09:47 AM (IST) Aug 25
ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆರು ರೈತರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಾಡಿಗೆ ಕಾರು ಚಾಲಕ ದೂರು ನೀಡಿರುವುದು ಅನುಮಾನಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
09:11 AM (IST) Aug 25
ಮಂಗಳೂರು ರೈಲ್ವೆ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದು ಸಂಪೂರ್ಣ ಆಡಳಿತಾತ್ಮಕ ಬದಲಾವಣೆಯಾಗಿದ್ದು, ಇದರಿಂದ ಕೇರಳ ಯಾವುದೇ ನಿಲ್ದಾಣಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ
08:04 AM (IST) Aug 25
ಹಳ್ಳಿಗೇರಿಯಲ್ಲಿ ನಡೆದ ಕ್ಷೇತ್ರ ಕಾರ್ಯಾಗಾರದಲ್ಲಿ, 35ಕ್ಕೂ ಹೆಚ್ಚು ಕೀಟ ಮತ್ತು 28ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಯಶಸ್ವಿ ಕಾರ್ಯಕ್ರಮದ ಫಲವಾಗಿ, ಸ್ಥಳೀಯ ಜೀವವೈವಿಧ್ಯ ದಾಖಲಾತಿಯ ಮಹತ್ವವನ್ನು ಸಾರುವುದರ ಜೊತೆಗೆ, ಅಪರೂಪದ ಕೀಟ ಪ್ರಪಂಚದ ಉದ್ಯಾನ ನಿರ್ಮಾಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
07:44 AM (IST) Aug 25
KWIN City ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ 5000 ಎಕರೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ, ಟೊಯೊಟಾ ಸೇರಿದಂತೆ 14 ಅಗ್ರಗಣ್ಯ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ.