Published : Feb 16, 2026, 06:54 AM ISTUpdated : Feb 16, 2026, 10:09 PM IST

Karnataka News Live: ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ

ಸಾರಾಂಶ

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್‌ಮ್ಯಾನ್‌ ಹುದ್ದೆಯನ್ನು ‘ಫೈರ್‌ ಫೈಟರ್‌’ ಮತ್ತು ಲೀಡಿಂಗ್‌ ಫೈರ್‌ಮ್ಯಾನ್‌ ಹುದ್ದೆಯನ್ನು ‘ಲೀಡಿಂಗ್‌ ಫೈಯರ್‌ ಫೈಟರ್‌’ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೇಂದ್ರ ಗೃಹ ಮಂತ್ರಾಲಯದ ಸ್ಟ್ಯಾಂಡಿಂಗ್‌ ಫೈರ್‌ ಅಡ್ವೈಸರಿ ಕಮಿಟಿ(ಎಸ್‌ಎಫ್‌ಎಸಿ) ಸಭೆಯ ತೀರ್ಮಾನದಂತೆ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಎರಡೂ ಹುದ್ದೆಗಳ ಹೆಸರನ್ನು ಬದಲಿಸಿದೆ. 

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ(ವೃಂದ ಮತ್ತು ನೇಮಕಾತಿ) ನಿಯಮಗಳು 2013ರ ಸಮಗ್ರ ಪರಿಷ್ಕರಣೆ ವೇಳೆ ಈ ಮರು ನಾಮಕರಣವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ

10:09 PM (IST) Feb 16

ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ

ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನೀಶನ್ ಕಡ್ಡಾಯ, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏನಿದು ಹೊಸ ಫೇಸ್ ರಕಗ್ನೀಶನ್ ನಿಯಮ, ಪೋಷಕರು ಏನು ಮಾಡಬೇಕು, ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

 

Read Full Story

09:25 PM (IST) Feb 16

Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್ - ​ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್​

ನಟ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಅವರು ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿದ್ದಾರೆ. ದರ್ಶನ್ ಅವರ ಹೆಸರನ್ನು ಉಗುರಿನ ಮೇಲೆ ಬರೆದುಕೊಂಡು, ಅವರ ಶೀಘ್ರ ಬಿಡುಗಡೆಗಾಗಿ ಹಾರೈಸಿದ್ದಾರೆ.
Read Full Story

09:04 PM (IST) Feb 16

ಶಿವಮೊಗ್ಗದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ - ಬೈಕ್‌ನಿಂದ ಬಿದ್ದು ಮೊಬೈಲ್ ಶೋರೂಮ್ ಉದ್ಯೋಗಿ ಸಾವು!

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ, ಗುರುತುಗಳಿಲ್ಲದ ರಸ್ತೆ ಉಬ್ಬಿನಲ್ಲಿ ಬೈಕ್ ಹಾರಿಬಿದ್ದ ಪರಿಣಾಮ 28 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು. ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

Read Full Story

09:02 PM (IST) Feb 16

ಸುಖಮಯ ದಾಂಪತ್ಯಕ್ಕೆ ಕ್ವಾಲಿಟಿ ಎಷ್ಟಿರಬೇಕು, ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ Nivedita Gowda!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ಆರ್ಥಿಕವಾಗಿ ಸದೃಢಳಾಗಲು ಯಾವುದೇ ಪಾತ್ರಕ್ಕೂ ಸೈ ಎಂದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಾಂಪತ್ಯ ಜೀವನದ ಬಗ್ಗೆ ಟಿಪ್ಸ್ ನೀಡಿರುವ ಅವರ ವಿಡಿಯೋ ವೈರಲ್​ ಆಗಿದೆ. 

Read Full Story

08:46 PM (IST) Feb 16

ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್ - 7ನೇ ಕ್ಲಾಸ್ ಬಾಲಕ ಸಾವು

ಭೋಪಾಲ್‌ನಲ್ಲಿ, ಸ್ನಾನಕ್ಕೆ ನೀರು ಬಿಸಿ ಮಾಡಲು ಇಮ್ಮರ್ಶನ್ ರಾಡ್ ಬಳಸುತ್ತಿದ್ದ 13 ವರ್ಷದ ಬಾಲಕ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾನೆ. ನೀರು ಬಿಸಿಯಾಗಿದೆಯೇ ಎಂದು ಪರೀಕ್ಷಿಸಲು ವಿದ್ಯುತ್ ಸಂಪರ್ಕ ಇರುವಾಗಲೇ ಬಕೆಟ್‌ಗೆ ಕೈ ಹಾಕಿದಾಗ ಈ ದುರಂತ ಸಂಭವಿಸಿದೆ. 

Read Full Story

08:36 PM (IST) Feb 16

ಈ ವಾರದಲ್ಲಿ ಆರ್‌ಸಿಬಿ ಮಾಲೀಕತ್ವ ಅಂತಿಮ, 9 ಬಿಡ್ಡರ್ ಪೈಕಿ ವಿಜಯ್ ಮಲ್ಯ ಇದ್ದಾರಾ?

ಈ ವಾರದಲ್ಲಿ ಆರ್‌ಸಿಬಿ ಮಾಲೀಕತ್ವ ಅಂತಿಮ, 9 ಬಿಡ್ಡರ್ ಪೈಕಿ ವಿಜಯ್ ಮಲ್ಯ ಇದ್ದಾರಾ? ಆರ್‌ಸಿಬಿ ಮಾಲೀಕರಾಗಲು ಉದ್ಯಮಿಗಳು, ಕೆಲ ಸಂಸ್ಥೆಗಳು ಆಸಕ್ತಿ ತೋರಿದೆ. ಈ ವಾರ ಹರಾಜು ನಡೆಯಲಿದೆ. 9-10 ಬಿಡ್ಡರ್ ಪೈಕಿ ವಿಜಯ್ ಮಲ್ಯ ಬಿಡ್ಡಿಂಗ್ ಲಿಸ್ಟ್‌ನಲ್ಲಿದ್ದಾರ?

 

Read Full Story

08:11 PM (IST) Feb 16

ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ - ರಕ್ಷಣೆ ಕೋರಿ ಮನವಿ

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಸೋದರಿಯರು, ಹಿಂದೂ ಸೋದರ ಸಂಬಂಧಿಗಳನ್ನು ವಿವಾಹವಾಗಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಅವರು ಪೊಲೀಸ್ ರಕ್ಷಣೆ ಕೋರಿ ವೀಡಿಯೋ ಬಿಡುಗಡೆ ಮಾಡಿದ್ದಾರೆ. 

Read Full Story

08:05 PM (IST) Feb 16

ಉತ್ತರ ಕರ್ನಾಟಕಕ್ಕೆ ಸಂತಸದ ಸುದ್ದಿ, ಬಳ್ಳಾರಿ–ಹೊಸಪೇಟೆ ನಡುವೆ 3ನೇ ಮತ್ತು 4ನೇ ರೈಲ್ವೆ ಮಾರ್ಗಕ್ಕೆ ಕೇಂದ್ರ ಅನುಮೋದನೆ

ಕೇಂದ್ರ ಸಚಿವ ಸಂಪುಟವು ಬಳ್ಳಾರಿ–ಹೊಸಪೇಟೆ ನಡುವೆ ಮೂರನೇ ಮತ್ತು ನಾಲ್ಕನೇ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯು ಪ್ರಸ್ತುತ ಜೋಡಿ ಹಳಿಯನ್ನು ಚತುಷ್ಪಥಕ್ಕೆ ಮೇಲ್ದರ್ಜೆಗೇರಿಸಲಿದ್ದು, ಇದರಿಂದ ಸರಕು ಸಾಗಣೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.
Read Full Story

07:50 PM (IST) Feb 16

Yash Movie ಕೆಜಿಎಫ್‌ ಬಗ್ಗೆ ವಿಡಿಯೋ ಮಾಡಿದ್ದ ಬಳಿಕ ಆಗಿದ್ದೇನು? ಧ್ರುವ್ ರಾಠಿ ಬಿಚ್ಚಿಟ್ಟ ಅಚ್ಚರಿಯ ಸತ್ಯ!

ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಧ್ರುವ್ ರಾಠಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕುರಿತು ತಾವು ಮಾಡಿದ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದ ಜನರು ತಮ್ಮ ನೆಚ್ಚಿನ ನಟರು ಮತ್ತು ಸಿನಿಮಾಗಳ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Read Full Story

07:39 PM (IST) Feb 16

ಶೀಘ್ರದಲ್ಲೇ ಜಯನಗರದ 42 ರಸ್ತೆಗಳಲ್ಲಿ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ಜಾರಿ, ಎಲ್ಲೆಲ್ಲಿ? ಎಷ್ಟು ಟಿಕೆಟ್?

ಜಯನಗರದಲ್ಲಿ ಶೀಘ್ರದಲ್ಲೇ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 42 ರಸ್ತೆಗಳಲ್ಲಿ ಕಾರು, ದ್ವಿಚಕ್ರ ವಾಹನಗಳಿಗೆ ಶುಲ್ಕ ಸಹಿತ ನಿಲುಗಡೆ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅಕ್ರಮ ಪಾರ್ಕಿಂಗ್ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.

Read Full Story

07:12 PM (IST) Feb 16

ರೈಲು ಪ್ರಯಾಣಿಕರಿಗೆ ಕಠಿಣ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ಈ ತಪ್ಪು ಮಾಡಿದರೆ ತಕ್ಷಣವೇ ಟಿಕೆಟ್ ರದ್ದು!!

ಭಾರತೀಯ ರೈಲ್ವೆಯು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ನಿಗದಿತ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಕಾಯ್ದಿರಿಸಿದ ಟಿಕೆಟ್ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಅಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ಪ್ರಮುಖ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ.
Read Full Story

06:48 PM (IST) Feb 16

ಲೈಕ್ಸ್ ಮತ್ತು ವ್ಯೂವ್ಸ್‌ಗೆ ರೈಲ್ವೆ ಹಳಿ ಬಳಿ ರೀಲ್ಸ್ ಮಾಡಿ, ಪೊಲೀಸರ ಅತಿಥಿಯಾದ ಇನ್‌ಸ್ಟಾಗ್ರಾಮ್ ರಾಜ!

ಬಳ್ಳಾರಿಯಲ್ಲಿ, ರೈಲ್ವೆ ಬ್ರಿಡ್ಜ್ ಮೇಲೆ ಅಪಾಯಕಾರಿಯಾಗಿ ರೀಲ್ಸ್ ಮಾಡುತ್ತಿದ್ದ ವಿಶ್ವನಾಥ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ, ಬ್ರೂಸ್‌ಪೇಟೆ ಪೊಲೀಸರು ಪತ್ತೆಹಚ್ಚಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ಕ್ರಮ ಕೈಗೊಂಡಿದ್ದಾರೆ.

Read Full Story

06:36 PM (IST) Feb 16

ಹಕ್ಕುಪತ್ರ ದರ್ಖಾಸ್ತು ಮಂಜೂರಾತಿ - ಕಡಬ ತಾಲೂಕು ರಾಜ್ಯಕ್ಕೇ ಪ್ರಥಮ, ಬೆಳ್ತಂಗಡಿ ದ್ವಿತೀಯ, ಕಾರ್ಕಳಕ್ಕೆ ಆರನೇ ಸ್ಥಾನ

ರಾಜ್ಯ ಸರ್ಕಾರದ ಹಕ್ಕುಪತ್ರ ಮಂಜೂರಾತಿ ಮತ್ತು ಪೋಡಿ ಯೋಜನೆ ಅನುಷ್ಠಾನದಲ್ಲಿ ಕಾರ್ಕಳ ತಾಲೂಕು ರಾಜ್ಯದ 236 ತಾಲೂಕುಗಳ ಪೈಕಿ ಆರನೇ ಸ್ಥಾನ ಪಡೆದಿದೆ. ತಂತ್ರಾಂಶದ ಮೂಲಕ 7,578 ಖಾತೆದಾರರಿಗೆ ಯಶಸ್ವಿಯಾಗಿ ಅನುಬಂಧ-1 ವಿತರಿಸಿ, ಪಾರದರ್ಶಕ ಮತ್ತು ವೇಗದ ಸೇವೆ ಒದಗಿಸುವ ಮೂಲಕ ಈ ಸಾಧನೆ ಮಾಡಲಾಗಿದೆ.
Read Full Story

06:33 PM (IST) Feb 16

ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್

ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್ ಸಿಗಲಿದೆ. ಕನ್ನಡ ಮಾತ್ರವಲ್ಲ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಯಶ್ ಟಾಕ್ಸಿಕ್ ತಂಡ ಇದೇ ತಿಂಗಳಲ್ಲಿ ಸಿಹಿ ಸುದ್ದಿ ನೀಡುತ್ತಿದೆ.

Read Full Story

05:59 PM (IST) Feb 16

ಶಿವನ ದರ್ಶನಕ್ಕಾಗಿ ಜನ ಕ್ಯೂ ನಿಂತಿರುವ ಈ ನೆಲ ಭಾರತದಲ್ಲ - ಶಿವನ ಆರಾಧಕರಿರುವ ಆ ವಿದೇಶಿ ನೆಲ ಯಾವುದು?

ನಿನ್ನೆ ಮಹಾಶಿವರಾತ್ರಿಯನ್ನು ದೇಶದೆಲ್ಲೆಡೆಯ ಜನ ಸಂಭ್ರಮ ಸಡಗರದಿಂದ ಆಚರಿಸಿದ್ರು, ಸರತಿ ಸಾಲಿನಲ್ಲಿ ನಿಂತು ಜನ ದೇವರ ದರ್ಶನ ಪಡೆದರು. ಸನಾತನ ಧರ್ಮದ ಗಂಧಗಾಳಿ ಇಲ್ಲದ ದೂರದ ದೇಶದಲ್ಲೂ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

05:53 PM (IST) Feb 16

Rajpal Yadav Bail - ಕೊನೆಗೂ ಹೋರಾಟಕ್ಕೆ ಫಲ; ನಟ ರಾಜ್‌ಪಾಲ್ ಯಾದವ್‌ಗೆ ಸಿಕ್ತು ಮಧ್ಯಂತರ ಜಾಮೀನು!

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಮಧ್ಯಂತರ ಶಿಕ್ಷೆಯನ್ನು ಅಮಾನತುಗೊಳಿಸಿದೆ. ದೂರುದಾರರ ಬ್ಯಾಂಕ್ ಖಾತೆಗೆ 1.5 ಕೋಟಿ ರೂಪಾಯಿ ಜಮಾ ಮಾಡಿರುವುದನ್ನು ಗಮನಿಸಿದ ನ್ಯಾಯಾಲಯ, ನಟನಿಗೆ ತಾತ್ಕಾಲಿಕ ಬಿಡುಗಡೆ ನೀಡಿದೆ.
Read Full Story

05:44 PM (IST) Feb 16

ಶಿವಮೊಗ್ಗ ವಿಮಾನ ನಿಲ್ದಾಣ ಲೈಸೆನ್ಸ್ ನವೀಕರಣ ಪೂರ್ಣ - ನೈಟ್ ಲ್ಯಾಂಡಿಂಗ್ ಕಾಮಗಾರಿ ಈ ವಾರ ಆರಂಭ

ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ಅನ್ನು ₹20 ಲಕ್ಷ ದಂಡ ಪಾವತಿಸಿ ನವೀಕರಿಸಲಾಗಿದೆ. ಈ ವಾರದಿಂದಲೇ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭವಾಗಲಿದ್ದು, ಉಡಾನ್ ಯೋಜನೆ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
Read Full Story

05:34 PM (IST) Feb 16

Bhagyalakshmi Serial - ಎಲ್ರಿಗೂ ಶಾಕ್‌ ನೀಡುವಂಥ ನಿರ್ಧಾರ ತಗೊಂಡ ಭಾಗ್ಯ; ಮೂಕವಿಸ್ಮಿತರಾದ ಮನೆಯವ್ರು

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆ ಮುಂದೆ ತಾಂಡವ್‌ ಕ್ಷಮೆ ಕೇಳಿದ್ದೂ ಆಯ್ತು, ಶ್ರೇಷ್ಠ ಬಂದು ಇನ್ನೊಂದಿಷ್ಟು ರಾಮಾಯಣ ಮಾಡಿದ್ದೂ ಆಯ್ತು. ಅಷ್ಟೇ ಯಾಕೆ? ಶ್ರೇಷ್ಠಾಳಿಗೆ ತಾಂಡವ್‌ ಬಾರಿಸಿದ್ದೂ ಆಯ್ತು.

 

Read Full Story

05:13 PM (IST) Feb 16

ಆ ಗುಟ್ಟು ರಟ್ಟು! ಫಿಕ್ಸ್​ ಆಯ್ತಾ ಗಿಲ್ಲಿ ನಟ -ಕಾವ್ಯ ಕಲ್ಯಾಣ? ಏನಿದು ಹೊಸ ಸುದ್ದಿ?

ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ಮತ್ತು ಕಾವ್ಯ ಕೇವಲ ಸ್ನೇಹಿತರು ಎನ್ನುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಹಂಪಿ ಉತ್ಸವದಲ್ಲಿ, ಗಿಲ್ಲಿ ಮದುವೆಯ 'ಮುಯ್ಯಿ' ಬಗ್ಗೆ ಮಾತನಾಡಿದ್ದು, ಇವರಿಬ್ಬರ ಮದುವೆ ಗಾಸಿಪ್‌ಗೆ ಮತ್ತಷ್ಟು ಪುಷ್ಟಿ ನೀಡಿದೆ.
Read Full Story

04:57 PM (IST) Feb 16

ಏನ್ ಶರೀಫ್ ಭಾಯ್, ಶಿವರಾತ್ರಿ ದಿನ ನನ್ನ ಅಪವಿತ್ರ ಮಾಡ್ಬಿಟ್ಟೆಲ್ಲಾ..! ವೆಜ್ ಬಿರಿಯಾನಿಗೆ ಚಿಕನ್ ಕೊಟ್ಟಿದ್ದು ಸರಿನಾ?

ಮಹಾಶಿವರಾತ್ರಿ ದಿನ 'ಶರೀಫ್ ಭಾಯ್ ಬಿರಿಯಾನಿ'ಯಿಂದ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು ಪತ್ತೆಯಾಗಿದೆ. 'ವೆಜ್' ಎಂದು ಲೇಬಲ್ ಮಾಡಿದ್ದರೂ ಮಾಂಸದ ತುಂಡು ಸಿಕ್ಕಿರುವುದು ಗ್ರಾಹಕರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

04:53 PM (IST) Feb 16

ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಆಹ್ವಾನ ಪತ್ರಿಕೆ ಕೈಸೇರಿತು! ಇನ್ನೇನಿದ್ರೂ ಓಲಗ ಊದೋದಷ್ಟೇ!

Rashmika mandanna: ವರ್ಷಗಳಿಂದ ನಟಿ ರಶ್ಮಿಕಾ, ನಟ ವಿಜಯ ದೇವರಕೊಂಡ ಅವರು ಮದುವೆ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ಎರಡು ತಿಂಗಳಿಂದ ಈ ಜೋಡಿ ಮದುವೆ ಬಗ್ಗೆ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲದೆ ಇವರ ಮದುವೆ ತಯಾರಿಗೆಂಡು ಮಾಡಿದ ಮಂಟಪದ ವಿಡಿಯೋ ಕೂಡ ವೈರಲ್‌ ಆಗಿತ್ತು.

 

Read Full Story

04:51 PM (IST) Feb 16

49ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ನ ಕಾಟೇರ! ಜೈಲಲ್ಲಿ ದರ್ಶನ್ ಮೊದಲ ಬರ್ತ್​ಡೇ, ಏನಿವತ್ತು ಸ್ಪೆಷಲ್?

ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್, ತಮ್ಮ 49ನೇ ಹುಟ್ಟುಹಬ್ಬವನ್ನು ಕಂಬಿಗಳ ಹಿಂದೆ ಕಳೆಯುತ್ತಿದ್ದಾರೆ. ಈ ಕರಾಳ ಜನ್ಮದಿನದಂದು ದರ್ಶನ್ ಒಂಟಿಯಾಗಿದ್ದರೆ, ಹೊರಗಡೆ ಅವರ ಅಭಿಮಾನಿಗಳು ಅನ್ನದಾನ, ರಕ್ತದಾನ ಹಾಗೂ ಪೂಜೆಗಳ ಮೂಲಕ ತಮ್ಮ ನಾಯಕನಿಗೆ ಶುಭ ಕೋರುತ್ತಿದ್ದಾರೆ.
Read Full Story

04:10 PM (IST) Feb 16

ಅಯ್ಯೋ ಚಿನ್ನು ಪಾಪು ಬಿಟ್ಟೋಗ್ಬಿಟ್ಟೆಲ್ಲಾ ಆಂತಾ ಆಕೆ ಗೆಳೆಯನೂ ಪ್ರಾಣಬಿಟ್ಟ - ಪೊಲೀಸರಿಗೆ ಸಿಕ್ಕಿದ್ದು ಆತನ ಶವ!

ಕಾಸರಗೋಡಿನ ಜನಪ್ರಿಯ ಇನ್‌ಸ್ಟಾಗ್ರಾಂ ತಾರೆ ಚಿನ್ನು ಪಾಪು ಅಲಿಯಾಸ್ ರೇಷ್ಮಾ ಅವರ ಆತ್ಮ*ಹತ್ಯೆಯ ಬೆನ್ನಲ್ಲೇ, ಆಕೆಯ ಆಪ್ತ ಸ್ನೇಹಿತ ಸಂದೇಶ್ ಕೂಡ ಸಾವಿಗೆ ಶರಣಾಗಿದ್ದಾರೆ. ಒಂದು ವಾರದ ಅಂತರದಲ್ಲಿ ನಡೆದ ಈ ಜೋಡಿ ಸಾವುಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read Full Story

04:06 PM (IST) Feb 16

ಕೊಪ್ಪಳ - ವಿದೇಶಿ ಮಹಿಳೆಯ ಅ*ತ್ಯಾ*ಚಾರ,ಕೊಲೆ ಪ್ರಕರಣ 3 ಆರೋಪಿಗಳಿಗೆ ಮರಣದಂಡನೆ ವಿಧಿಸಿ ಗಂಗಾವತಿ ಕೋರ್ಟ್ ಐತಿಹಾಸಿಕ ತೀರ್ಪು

ಗಂಗಾವತಿ ತಾಲೂಕಿನ ಸಾಣಾಪೂರದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾ*ಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 3 ಆರೋಪಿಗಳಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಘಟನೆ ನಡೆದ 9 ತಿಂಗಳೊಳಗೆ ನ್ಯಾಯಮೂರ್ತಿ  ಅವರು ಈ ಐತಿಹಾಸಿಕ ತೀರ್ಪು ನೀಡಿದ್ದಾರೆ.

Read Full Story

03:24 PM (IST) Feb 16

ಕಾಂಗ್ರೆಸ್ ವಿಕೆಟ್ ಪತನ - ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್!

ಚುನಾವಣಾ ಅಕ್ರಮಗಳ ಆರೋಪದ ಮೇಲೆ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧು ಎಂದು ಘೋಷಿಸಿದೆ. ಪ್ರತಿಸ್ಪರ್ಧಿ ಸಿ. ಮುನಿರಾಜು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ತೀರ್ಪು ಬಂದಿದ್ದು, ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.
Read Full Story

03:17 PM (IST) Feb 16

ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನ ಗಲಾಟೆ, ಅಧಿಕಾರಿಯ ಕಣ್ಣಿಗೆ ಮುಷ್ಠಿ ಹೊಡೆದು ಗುದ್ದಿ ದರ್ಪ!

ಹಂಪಿ ಉತ್ಸವದ ಕೊನೆಯ ದಿನ, ನಟಿ ರಚಿತಾ ರಾಮ್ ಅವರ ಕಾರು ಚಾಲಕ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಗೂಂಡಾ ವರ್ತನೆಯಿಂದ ಅಧಿಕಾರಿಯ ಕಣ್ಣಿಗೆ ಗಾಯವಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:58 PM (IST) Feb 16

Bengaluru - ಬ್ಯಾಂಕ್‌ ಲಾಕರಲ್ಲಿದ್ದ ಚಿನ್ನ ಎಗರಿಸಿ ಬೆಟ್ಟಿಂಗ್‌ ಆಟ! ₹4 ಕೋಟಿ ಮೌಲ್ಯದ ಆಭರಣ ಕದ್ದ ಮ್ಯಾನೇಜರ್‌!

ಬೆಂಗಳೂರಿನಲ್ಲಿ, ಸರ್ಕಾರಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕನೊಬ್ಬ ಗ್ರಾಹಕರ ಲಾಕರ್‌ನಿಂದ ₹4.12 ಕೋಟಿ ಮೌಲ್ಯದ ಚಿನ್ನವನ್ನು ಕದ್ದಿದ್ದಾನೆ. ಈ ಚಿನ್ನವನ್ನು ಅಡವಿಟ್ಟು ಬಂದ ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿದ್ದು, ಸದ್ಯ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.  

Read Full Story

01:55 PM (IST) Feb 16

ಕೊನೆಗೂ ಫಲಿಸಿದ ಪ್ರಾರ್ಥನೆ, ಕನ್ನಡ ಧಾರಾವಾಹಿ ನಟಿ ರಶ್ಮಿ ಲೀಲಾ ಇನ್ನಿಲ್ಲ!

Actress Rashmi Leela: ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ರಶ್ಮಿಲೀಲಾ ಅವರು ಅಸು ನೀಗಿದ್ದಾರೆ. ಹಾಗಾದರೆ ರಶ್ಮಿಲೀಲಾಗೆ ಏನಾಗಿತ್ತು? ಇವರ ಪತಿ ಸಾರಕ್ಕಿ ಮಂಜು ಅವರು ಸಂಭಾಷಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ. 

Read Full Story

01:35 PM (IST) Feb 16

ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ - 7 ಕಾರ್ಮಿಕರು ಸಜೀವ ದಹನ

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿನ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 8 ಕಾರ್ಮಿಕರು ಸಜೀವ ದಹನಗೊಂಡಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 

Read Full Story

01:28 PM (IST) Feb 16

ಶಿವರಾತ್ರಿಯಂದೇ ಗೋಕರ್ಣದ ಆತ್ಮಲಿಂಗ ದರ್ಶನ ಪಡೆದು ಶಿವೈಕ್ಯನಾದ ಭಕ್ತ!

Gokarna Temple: ಗೋಕರ್ಣದ ಆತ್ಮಲಿಂಗ ಮಹಾಬಲೇಶ್ವರ ದೇವಸ್ಥಾನದ ದರ್ಶನವನ್ನು ಪಡೆದು ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಅಸು ನೀಗಿದ್ದಾರೆ. ಹೌದು, ಈ ಬಗ್ಗೆ ವರದಿಯಾಗಿದೆ. ಹಾಗಾದರೆ ಅವರಿಗೆ ಏನಾಗಿತ್ತು?

 

Read Full Story

01:23 PM (IST) Feb 16

ನಟ ದರ್ಶನ್ ಬರ್ತ್‌ಡೇ ಆಚರಿಸಲು ಬಂದ ಅಭಿಮಾನಿಗೆ ಕಪಾಳಮೋಕ್ಷ; ಪೊಲೀಸರ ಜೊತೆ ಕಿರಿಕ್

ಜೈಲುಪಾಲಾಗಿರುವನಟ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಈ ವೇಳೆ ದರ್ಶನ್ ನಿವಾಸದ ಬಳಿ ಅಭಿಮಾನಿಯೊಬ್ಬನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದು, ಪತ್ನಿ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಂನಲ್ಲಿ ಪತಿಗಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story

01:17 PM (IST) Feb 16

ದರ್ಶನ್ ಬರ್ತಡೇ ದಿನವೇ ಪವಿತ್ರಾ ಗೌಡಗೆ ಶಾಕ್ ಕೊಟ್ಟ ಕೋರ್ಟ್; ಮಗಳ ಪರೀಕ್ಷೆ ಕಾರಣಕ್ಕೂ ಸಿಗಲಿಲ್ಲ ಜಾಮೀನು!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ, ಮಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರಣ ನೀಡಿ ಸಲ್ಲಿಸಿದ್ದ ಹಂಗಾಮಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಗೆಳೆಯ ನಟ ದರ್ಶನ್ ಬರ್ತಡೇ ದಿನವೇ  ಪವಿತ್ರಾ ಗೌಡಗೆ ಹಿನ್ನಡೆಯಾಗಿದ್ದು, ಸದ್ಯಕ್ಕೆ ಜೈಲಿನಲ್ಲಿಯೇ ಇರಬೇಕಾಗಿದೆ.

Read Full Story

01:17 PM (IST) Feb 16

ಇಡೀ ಊರೇ ಇಂಡಿಯಾ-ಪಾಕ್ ಪಂದ್ಯದಲ್ಲಿ ಮುಳುಗಿತ್ತು, ಆ ಮನೆಯವ್ರು ಶಿವರಾತ್ರಿ ಜಾಗರಣೆಗೆ ಹೋದ್ರು, ಕಳ್ಳರು ಬಂದ್ರು ಚಿನ್ನ ದೋಚಿದ್ರು!

ವಿಜಯಪುರದಲ್ಲಿ ಮಹಾಶಿವರಾತ್ರಿ ಜಾಗರಣೆಗಾಗಿ ಕುಟುಂಬವೊಂದು ಹೊರಗೆ ತೆರಳಿದ್ದಾಗ, ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗದು, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಶಾರದಾ ನಗರದಲ್ಲಿ ನಡೆದ ಈ ಘಟನೆ ಸಂಬಂಧ ಗೋಲಗುಂಬಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story

12:58 PM (IST) Feb 16

ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview

( ಸಂದರ್ಶನ-ಜೋಗಿ )

Rakshit Shetty: ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತು. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶ ಇಲ್ಲ. 

Read Full Story

12:52 PM (IST) Feb 16

ಗ್ರೇಟರ್ ಬೆಂಗಳೂರಿನ ರಸ್ತೆಗುಂಡಿಗೆ ಮತ್ತಿಬ್ಬರು ಬಲಿ; ಕೆಲಸಕ್ಕೆ ಹೊರಟ ಮಹಿಳೆ, 2 ವರ್ಷದ ಮಗು ಸಾವು!

ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು 24 ಗಂಟೆಗಳಲ್ಲಿ ಇಬ್ಬರ ಪ್ರಾಣ ತೆಗೆದಿವೆ. ಆಡುಗೋಡಿಯಲ್ಲಿ ಗುಂಡಿಗೆ ಮಹಿಳೆ ಬಲಿಯಾದರೆ, ಕೆ.ಆರ್.ಪುರಂನಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಎರಡು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ.

Read Full Story

12:33 PM (IST) Feb 16

2ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿ; ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ ಮಗ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಿತ್ರದುರ್ಗದ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಟ್ರೇಶ್, ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ನೊಂದು ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story

12:25 PM (IST) Feb 16

ಮಧ್ಯಾಹ್ನ ಸ್ಫೋಟಿಸುವುದಾಗಿ ರಾಜ್ಯದ ಹಲವು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಆಘಾತಕಾರಿ ಇ-ಮೇಲ್‌

ಧಾರವಾಡ, ದಾವಣಗೆರೆ, ಮತ್ತು ಕೊಡಗು ಜಿಲ್ಲೆಗಳ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು, ನ್ಯಾಯಾಲಯದ ಆವರಣಗಳನ್ನು ಖಾಲಿ ಮಾಡಿಸಿ ತೀವ್ರ ಶೋಧ ಕಾರ್ಯ ನಡೆಸಿವೆ.  

Read Full Story

12:02 PM (IST) Feb 16

ಆನಂದಪುರ - ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು

ಜಾನುವಾರಿಗೆ ಮೇವು ಮತ್ತು ಸೊಪ್ಪು ತರಲು ಕಾಡಿಗೆ ಹೋಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಕಡಿದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವನಪ್ಪಿದ ದುರ್ಘಟನೆ ಶನಿವಾರ ನಡೆದಿದೆ.

ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿಯಾದ ಹೇಮಂತ್ (27) ಮೃತ ವ್ಯಕ್ತಿ.

Read Full Story

11:58 AM (IST) Feb 16

ಮಹಾಮಾರಿ ಕಾಯಿಲೆ ಬಂತು, ಆರು ತಿಂಗಳಿಗೆ ಮದುವೆ ಮುಗೀತು - ಗೂಳಿ ಸಿನಿಮಾ ನಟಿ ಮಮತಾ ಹೆಗಲೇರಿದ ಶನಿ! ಪಾಪ..!

Gooli Kannada Movie: ಕಿಚ್ಚ ಸುದೀಪ್‌ ನಟನೆಯ ಗೂಳಿ ಸಿನಿಮಾ ಹೀರೋಯಿನ್‌ ಮಮತಾ ಮೋಹನ್‌ದಾಸ್‌ ಅವರು ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದರು, ಆದರೆ ವೈಯಕ್ತಿಕ ಜೀವನ ಮಾತ್ರ ಸರಿ ಹೋಗಲೇ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ. 

 

Read Full Story

11:37 AM (IST) Feb 16

ಬೇಲೂರು To ಕುಣಿಗಲ್ To ಬಿಹಾರ - ರಿವೀಲ್ ಆಯ್ತು ಆಂಟಿ ಪ್ರಿಯಾಂಕಾ ಖತರ್ನಾಕ್ ಪ್ಲಾನ್‌

ತನ್ನ ಕೊ*ಲೆಯಾಗಿದೆ ಎಂದು ಬಿಂಬಿಸಿ, ಪ್ರಿಯಕರ ಡೇವಿಡ್ ಜೊತೆ 30 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಲು ಪ್ರಿಯಾಂಕಾ ಪ್ಲಾನ್ ಮಾಡಿದ್ದಳು. ಆದರೆ, ಬಿಹಾರಕ್ಕೆ ತೆರಳುವ ಮುನ್ನವೇ ಬೇಲೂರು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಕುಣಿಗಲ್‌ನಲ್ಲಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ.

Read Full Story

More Trending News