ಕೊಹ್ಲಿ ನಿರ್ವಹಿಸುತ್ತಾರಾ ಆ 3 ಜವಾಬ್ದಾರಿ..?

Dec 2, 2018, 12:50 PM IST

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ದೀರ್ಘಕಾಲದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಈಗಾಗಲೇ ಟಿ20 ಸರಣಿ ಮುಕ್ತಾಯವಾಗಿದ್ದು, ಡಿಸೆಂಬರ್ 06ರಿಂದ ಟೆಸ್ಟ್ ಸರಣಿ ಆಡಲು ಸಜ್ಜಾಗಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಾಲ್ಕನೇ ವೇಗದ ಬೌಲರ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು. ಏಕೆಂದರೆ ಆಸಿಸ್ ಪಿಚ್’ನಲ್ಲಿ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಅವರಂತಹ ಬೌಲರ್’ಗಳ ಅವಶ್ಯಕತೆಯಿತ್ತು. ಆದರೆ ಹಾರ್ದಿಕ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ನಡೆಸುವ ಮೂಲಕ ಗಮನಸೆಳೆದಿದ್ದಾರೆ. ಕ್ಯಾಪ್ಟನ್, ಬ್ಯಾಟಿಂಗ್ ಜತೆಗೆ ಸಾಂದರ್ಭಿಕ ಬೌಲರ್ ಆಗಿಯೂ ಕೊಹ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.