ಪತ್ನಿ ಪ್ರಿಯಾಂಕಾಗೆ ಪ್ರಪೋಸ್ ಮಾಡಿದ್ದರೂ ಆಂಕರ್ ಅನುಶ್ರೀ ಮನಸ್ಸಿನಲ್ಲಿದ್ದಾಳೆ ಎಂದ ಉಪ್ಪಿ; ಹಳೆ ವಿಡಿಯೋ ಸಖತ್ ವೈರಲ್

By Vaishnavi Chandrashekar  |  First Published Dec 12, 2024, 6:30 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ಉಪೇಂದ್ರ ಬರ್ತಡೇ ಸೆಲೆಬ್ರೇಷನ್ ವಿಡಿಯೋ. ಪತ್ನಿ ಪ್ರಿಯಾಂಕಾ ಆಯೋಜಿಸಿದ ಸೆಲೆಬ್ರೇಷನ್‌ ಹೇಗಿತ್ತು ಗೊತ್ತಾ?


ರಿಯಲ್ ಸ್ಟಾರ್ ಉಪೇಂದ್ರ 2013ರಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಈ ಬರ್ತಡೇ ಸೆಲೆಬ್ರೇಷನ್‌ನ ಗ್ರಾಂಡ್ ಆಗಿ ಆಯೋಜಿಸಿ ಗಿಫ್ಟ್ ಆಗಿ ನೀಡಿದ್ದು ಪತ್ನಿ ಪ್ರಿಯಾಂಕಾ ಉಪೇಂದ್ರ. ಅನುಶ್ರೀ ಮತ್ತು ದಿಲೀಪ್ ರಾಜ್‌ ಇಡೀ ಕಾರ್ಯಕ್ರದ ನಿರೂಪಣೆ ಮಾಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರ ಬಳಗ ಭಾಗಿಯಾಗಿತ್ತು. ಈ ವೇಳೆ ಉಪ್ಪಿ-ಪ್ರಿಯಾಂಕಾ ಮತ್ತು ಅನುಶ್ರೀ ನಡುವೆ ನಡೆದ ಮಾತುಕತೆ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

'ಪ್ರತಿ ವರ್ಷ ಉಪ್ಪಿ ಹುಟ್ಟುಹಬ್ಬಕ್ಕೆ ಏನ್ ಗಿಫ್ಟ್ ಕೊಡಲಿ ಎಂದು ಯೋಚನೆ ಮಾಡುತ್ತಿರುತ್ತೀನಿ. ಮುಂದಿನ ವರ್ಷ ಏನು ಗಿಫ್ಟ್‌ ಕೊಡಬೇಕು ಅನ್ನೋ ಯೋಚನೆ ಆಗಲೇ ಶುರುವಾಗಿದೆ' ಎಂದು ಕಾರ್ಯಕ್ರಮದ ಕೊನೆಯಲ್ಲಿ ಪ್ರಿಯಾಂಕಾ ಹೇಳುತ್ತಾರೆ. 'ನಾನು ಮೊದಲು ಧನ್ಯಾವದಗಳನ್ನು ಪ್ರಿಯಾಂಕಾ ಹೆಸರು ಮೂಲಕವೇ ಶುರು ಮಾಡಿದ್ದು. ಎಲ್ಲ ಅವರಿಂದಲೇ ಆಗಿರುವುದು...ಇಷ್ಟೋಂದು ಬ್ಯೂಟಿಫುಲ್ ಹೆಂಡತಿ ಇರುವಾಗ ಏನು ಮಾಡಲು ಆಗಲ್ಲ ಮಾತು ಕೇಳಿಕೊಂಡು ಸುಮ್ಮನೆ ನಡೆಯುತ್ತಿರಬೇಕು' ಎಂದು ಉಪ್ಪಿ ಉತ್ತರಿಸುತ್ತಾರೆ. 

Tap to resize

Latest Videos

ಮೋಹನ್ ಬಾಬು ಮನೆ ರಣರಂಗ...ಅಪ್ಪ-ಮಗನ ಮಾರಾಮಾರಿ; ವಿಲನ್ ಆದ ಹೀರೋ!

'ಇಲ್ಲ ಸರ್ ನೀವು ಥ್ಯಾಂಕ್ಯೂ ಪ್ರಿಯಾಂಕಾ ಎಂದು ಪ್ರೀತಿಯಿಂದ ಹೇಳಬೇಕು' ಎಂದು ಅನುಶ್ರೀ ಬೇಡಿಕೆ ಇಟ್ಟಾಗ 'ನೀವು ಈ ಮಾತು ಹೇಳುತ್ತಿದ್ದೀರಾ ಚಾಂದಿನಿ' ಎಂದು ಉಪೇಂದ್ರ ಕರೆಯುತ್ತಾರೆ. ಅಲ್ಲೇ ಅನುಶ್ರೀ ನಾಚಿ ನೀರಾಗುತ್ತಾರೆ. 'ಇದು ಇದು ನನಗೆ ಬೇಕಿತ್ತು ಸರ್...ನಿಮ್ಮ ಮನಸ್ಸಿನಲ್ಲಿ ನಾನಿದ್ದರೆ ಸಾಕು' ಎಂದು ಅನು ಮರು ಉತ್ತರ ನೀಡುತ್ತಾರೆ. ಈ ತಮಾಷೆಯನ್ನು ನೆಟ್ಟಿಗರು ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಆಂಕರ್ ಆಗಿದ್ದ ದಿಲೀಪ್ ರಾಜ್ ಹಠ ಮಾಡಿ ಉಪ್ಪಿ ಕೈಗೆ ಹೂ ಕೊಟ್ಟು ಪ್ರಪೋಸ್ ಮಾಡಲು ಹೇಳುತ್ತಾರೆ. 'ಪ್ರೀತ್ಸೇ ಪ್ರೀತ್ಸೇ ಕಣ್ಣು ಮುಚ್ಚಿ ನನ್ನ ಪ್ರೀತ್ಸೇ' ಎಂದು ಮಂಡಿಯೂರಿ ಉಪೇಂದ್ರ ಪ್ರಪೋಸ್ ಮಾಡುತ್ತಾರೆ. ನಾಚಿಕೊಂಡ ಪ್ರಿಯಾಂಕಾ 'ಈ ಪ್ರಪೋಸಲ್‌ಗೆ ಉತ್ತರ ಏನೆಂದರೆ ಈ ಕಾರ್ಯಕ್ರಮ ಎನ್ನಬಹುದು. ನಾನು ಅವರನ್ನು ಎಷ್ಟು ಇಷ್ಟ ಪಡುತ್ತೀನಿ ಎಂದು ತಿಳಿಯುತ್ತದೆ. ಅಲ್ಲದೆ ಪದಗಳಿಗಿಂತ ನಮ್ಮ ಆಕ್ಷನ್‌ಗಳು ಹೆಚ್ಚು ಮಾತನಾಡುತ್ತದೆ' ಎನ್ನುತ್ತಾರೆ ಪ್ರಿಯಾಂಕಾ. 

ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು

2013ರಲ್ಲಿ ಅನುಶ್ರೀ ನೋಡಲು ಹೇಗಿದ್ದರು, ದಿಲೀಪ್‌ ರಾಜ್ ಜರ್ನಿ ಹಾಗೂ ಉಪ್ಪಿ ಆಂಡ್ ಫ್ಯಾಮಿಲಿಯನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್, ರವಿಚಂದ್ರನ್ ಸೇರಿದಂತೆ ವೇದಿಕೆ ಮೇಲೆ ಇದ್ದ ಅಷ್ಟೂ ಕಲಾವಿದರ ಜರ್ನಿಯನ್ನು ನೆನೆದು ಕಾಮೆಂಟ್ ಮಾಡಿದ್ದಾರೆ. 

ರಚಿತಾ ರಾಮ್‌ಗೆ 'ಲೇಡಿ ಸೂಪರ್ ಸ್ಟಾರ್' ಎಂದ ನಟ; ಈ ಬಿರುದು ಬೇಡ ನಾನು ಬುಲ್ ಬುಲ್ ಆಗೇ ಇರ್ತೀನಿ ಎಂದ ನಟಿ!

 

click me!