ಯಶ್​ ಜೊತೆ ಟಾಕ್ಸಿಕ್​ನಲ್ಲಿ ಕರೀನಾ ಕಪೂರ್​ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್​ಡೇಟ್​ ಏನು?

By Suvarna News  |  First Published Jan 11, 2024, 4:13 PM IST

ರಾಕಿಂಗ್​ ಸ್ಟಾರ್​ ಯಶ್​ ಜೊತೆ ಟಾಕ್ಸಿಕ್​ನಲ್ಲಿ ಕರೀನಾ ಕಪೂರ್​ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್​ಡೇಟ್​ ಏನು?
 


ಬಾಲಿವುಡ್​ ಬೇಬೋ,  ಕರೀನಾ ಕಪೂರ್​ ಖಾನ್​ ಅವರು ಯಶ್​ ಅವರ  ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಈ ಮೂಲಕ ನಟಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ.  ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿ, ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಗುತ್ತಿದೆ. ಈ ವಿಷಯ ತಿಳಿದಾಗಿನಿಂದಲೂ ಅತ್ತ ಕರೀನಾ ಕಪೂರ್​ ಅಭಿಮಾನಿಗಳು ಹಾಗೂ ಯಶ್​ ಅವರ ಫ್ಯಾನ್ಸ್​ ಈ ಸುದ್ದಿ ನಿಜನಾ ಎನ್ನುವ ಗೊಂದಲದಲ್ಲಿದ್ದಾರೆ.


ಕೆಲ ತಿಂಗಳ ಹಿಂದೆ ಕರೀನಾ ಕಪೂರ್​ ಖುದ್ದು ಇದರ ಹಿಂಟ್​ ನೀಡಿದ್ದರು.  ಕಾಫಿ ವಿತ್ ಕರಣ್ ಟಾಕ್‌ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಆಗ ಕರಣ್​ ಅವರು, ಕರೀನಾರನ್ನು ಕುರಿತು ನಿಮಗೆ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಪ್ರಶ್ನಿಸಿದ್ದರು. ಆಗ ಕರೀನಾ ಅವರು,  ತಕ್ಷಣ 'ಯಶ್' ಎಂದಿದ್ದರು.  ನೀವು ಹೇಳಿದ ಎಲ್ಲಾ ಸ್ಟಾರ್​ಗಳೂ ಸೂಪರ್​...  ಆದ್ರೆ ನಾನು ಕೆಜಿಎಫ್​ ಹುಡುಗಿ. ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ ಎಂದಿದ್ದರು. ತಾವು ಈ ಚಿತ್ರವನ್ನು ನೋಡಿರುವುದಾಗಿಯೂ ತಿಳಿಸಿದ್ದರು. ಅದರ ಬೆನ್ನಲ್ಲೇ ಯಶ್​ ಅವರ ಮುಂಬರುವ ಚಿತ್ರದಲ್ಲಿ ನಟಿ ನಟಿಸುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗುತ್ತಿದೆ. 

Tap to resize

Latest Videos

ಎಫ್​ಐಆರ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್​ ಕೂಡ ರದ್ದು

ಇದೀಗ ನಟಿ ಈ ಗೊಂದಲಕ್ಕೆ ಪರೋಕ್ಷವಾಗಿ ತೆರೆ ಎಳೆದಿದ್ದಾರೆ. ನೇರವಾಗಿ ಈ ಚಿತ್ರದ ಬಗ್ಗೆ ಉಲ್ಲೇಖ ಮಾಡದೇ ಸಸ್ಪೆನ್ಸ್​ ಇಟ್ಟಿರೋ ನಟಿಯ ಫ್ಯಾನ್ಸ್​ ಕ್ಲಬ್​ ಎಕ್ಸ್​ ಖಾತೆ, ಹೊಸ ಅಪ್​ಡೇಟ್​ ಎನ್ನುವ ಮೂಲಕ ಮಾಹಿತಿಯೊಂದನ್ನು ಶೇರ್​ ಮಾಡಿಕೊಂಡಿದೆ.  ‘ಶೀಘ್ರವೇ ಎಗ್ಸೈಟಿಂಗ್ ವಿಚಾರ ಹೇಳುತ್ತೇನೆ’ ಎಂದು ನಟಿ ಹೇಳಿದ್ದಾರೆ.   ಅಭಿಮಾನಿಗಳ ಉತ್ಸಾಹ ಮತ್ತು ಆಸೆಗಳನ್ನು ನಾವು ಅರ್ಥಮಾಡಿಕೊಂಡಿದ್ದರೂ, ನಟಿಯ ಮುಂದಿನ ಸಿನಿಮಾ ಮತ್ತು ಅದರ ತಾರಾ ಬಳಗದ ಮೇಲೆ ಕಾಯುವಂತೆ ಮಾಧ್ಯಮಗಳಿಗೆ ವಿನಂತಿಸುತ್ತೇವೆ. ಸುಖಾಸುಮ್ಮನೆ ಯಾವುದೇ ಊಹೆ ಊಹೆ ಮಾಡಬೇಡಿ. ಅರೆಬರೆ ಗೊತ್ತಿರುವ ವಿಚಾರ ಪ್ರಕಟಿಸಬೇಡಿ. ಆದರೆ ಬಹಳ ಎಕ್ಸೈಟಿಂಗ್ ವಿಚಾರ ಕಾದಿದೆ. ಅಧಿಕೃತ ಮಾಹಿತಿಗಾಗಿ ಕಾಯಿರಿ ಎಂದು ವಿನಂತಿಸುತ್ತೇವೆ ಎಂದು ಎಕ್ಸ್​ ಖಾತೆಯಲ್ಲಿ ಬರೆಯಲಾಗಿದೆ.
   
ಯಶ್​ ಫ್ಯಾನ್ಸ್​ ಕೂಡ ಟಾಕ್ಸಿಸ್​ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್’ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ.  ಯಶ್ ಅವರು ಹುಟ್ಟುಹಬ್ಬಂದು ಟಾಕ್ಸಿಕ್​  ಕುರಿತು ಅಪ್​ಡೇಟ್​ ಸಿಗಬಹುದು ಎಂದೇ ಫ್ಯಾನ್ಸ್​ ಕಾಯುತ್ತಿದ್ದರು. ಆದರೆ ದುರದೃಷ್ಟವಶಾತ್​ ನಾಲ್ವರು ಅಭಿಮಾನಿಗಳು ಯಶ್​ ಅವರ  ಹುಟ್ಟುಹಬ್ಬಂದೇ ಸಾವನ್ನಪ್ಪಿದ ಕಾರಣ, ಇದರ ಅಪ್​ಡೇಟ್​ ಸಿಗಲಿಲ್ಲ. ಇದೀಗ ನಟಿ ಕರೀನಾ ಕಪೂರ್ ಖಾನ್​ ಕೂಡಿ ಸಸ್ಪೆನ್ಸ್​ ರೀತಿ ಮಾತನಾಡಿದ್ದಾರೆ. ಆದರೆ ಅವರ ಈ ಮಾತು ನೋಡಿದರೆ ಟಾಕ್ಸಿಕ್​ನಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.  

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!
 

Kareena’s team releases official statement amidst rumors of her pairing up with Yash in Toxic pic.twitter.com/QTgzIoYB79

— Kareena Kapoor Khan FC (@KareenaK_FC)
click me!