ಎಫ್​ಐಆರ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್​ ಕೂಡ ರದ್ದು

By Suvarna News  |  First Published Jan 11, 2024, 12:33 PM IST

ಶ್ರೀರಾಮ, ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನ ಮಾಡಿರುವ ಅನ್ನಪೂರ್ಣಿ ಚಿತ್ರತಂಡ ಇದೀಗ ಕ್ಷಮೆ ಕೋರಿದ್ದು, ಫ್ಲಿಕ್ಸ್​ನಿಂದ ಚಿತ್ರ ತೆಗೆದು ಹಾಕಿದೆ. ಪತ್ರದಲ್ಲಿ ಏನಿದೆ?
 


ಶ್ರೀರಾಮಚಂದ್ರ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ಆರೋಪ ಹೊತ್ತ ಅನ್ನಪೂರ್ಣಿ ಸಿನಿಮಾದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ಈ ಚಿತ್ರದ ಸಹ ನಿರ್ಮಾಪಕರಾಗಿರುವ ಜೀ ಎಂಟರ್​ಟೇನ್​ಮೆಂಟ್​ ಕ್ಷಮೆ ಕೋರಿದೆ. ಈ ಕುರಿತು ವಿಶ್ವ ಹಿಂದೂ ಪರಿಷತ್​ಗೆ ಕ್ಷಮಾಪಣಾ ಪತ್ರವನ್ನು ಸಲ್ಲಿಸಲಾಗಿದೆ. ಹಿಂದೂ ಮತ್ತು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಇದರಿಂದ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. 'ಈ ಚಿತ್ರವನ್ನು ಕೂಡಲೇ ನೆಟ್​ಫ್ಲಿಕ್ಸ್​ನಿಂದ ತೆಗೆದುಹಾಕುವಂತೆ ಕೋರಿಕೊಳ್ಳಲಾಗಿದ್ದು, ಇದಾಗಲೇ ಸ್ಟ್ರೀಮಿಂಗ್​ ಕೂಡ ರದ್ದು ಮಾಡಲಾಗಿದೆ ಎಂದಿರುವ  ಜೀ ಎಂಟರ್​ಟೇನ್​ಮೆಂಟ್ ಹಿಂದೂ ಮತ್ತು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಇದರಿಂದ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದಿದೆ. 

ಸದ್ಯ ಓಟಿಟಿಯಲ್ಲಿ ಸ್ಟ್ರೀಮಿಂಗ್​ ಆಗುತ್ತಿರುವ ಈ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಮಾಡಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ನಟಿ ನಯನತಾರಾ ಸೇರಿದಂತೆ ಸಿನಿಮಾದ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಜವಾನ್​ ಚಿತ್ರದ ಖ್ಯಾತಿಯ ಬಳಿಕ ನಟಿ ನಯನತಾರಾ ಅನ್ನಪೂರ್ಣಿಯಲ್ಲಿ ಕಾಣಿಸಿಕೊಂಡಿದ್ದು, ಅವರ ವಿರುದ್ಧವೂ ಈಗ ದೂರು ದಾಖಲಾಗಿದೆ. ಇದು ಅವರ 75ನೇ ಚಿತ್ರವಾಗಿದೆ. ದೂರು ದಾಖಲಾದ  ಬೆನ್ನಲ್ಲೇ ಇದೀಗ ಸಿನಿಮಾದ ಸಹ ನಿರ್ಮಾಪಕರಾಗಿರುವ ಜೀ ಎಂಟರ್​ಟೇನ್ ಕ್ಷಮಾಪಣೆ ಕೋರಿದೆ.  

Tap to resize

Latest Videos

ಶ್ರೀರಾಮನ ಅವಹೇಳನ, ಲವ್​ ಜಿಹಾದ್​ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್​ಐಆರ್ ದಾಖಲು

 ರಾಮನ ವಿರುದ್ಧ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಈ ಚಿತ್ರವು ಹಿಂದೂ ವಿರೋಧಿಯಾಗಿದೆ. ಅಷ್ಟೇ ಅಲ್ಲದೇ, ಚಿತ್ರವು  ಲವ್ ಜಿಹಾದ್ ಅನ್ನು ಕೂಡ ಉತ್ತೇಜಿಸುತ್ತದೆ ಎಂದು ಆರೋಪಿಸಿರುವ ರಮೇಶ್ ಸೋಲಂಕಿ ಅವರು,  ನಿರ್ಮಾಪಕ, ನಿರ್ದೇಶಕರು ಸೇರಿದಂತೆ  ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದಾರೆ. ಅನ್ನಪೂರ್ಣಿ ಆಹಾರದ ದೇವತೆಯಾಗಿದ್ದು, ನಯನತಾರಾ ಸಂಪ್ರದಾಯವನ್ನು ಮೀರಿಸಿದ್ದಾರೆ ಎಂದು ರಮೇಶ್​ ತಿಳಿಸಿದ್ದಾರೆ. 

ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ವಿಶ್ವವೇ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಸಿನಿಮಾ ಅನ್ನಪೂರ್ಣಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ,  ಈ ಚಿತ್ರದಲ್ಲಿ ಲವ್ ಜಿಹಾದ್ ಪ್ರಚೋದಿಸಲಾಗಿದೆ.  ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸಾಹಾರಿ ಎಂದು ಹೇಳುವ ಮೂಲಕ ನಟಿಯನ್ನು ಮಾಂಸ ತಿನ್ನಲು ಮನವೊಲಿಸಿದ್ದಾನೆ.  ಇದು ಹಿಂದೂ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಅವರು ಆರೋಪಿಸಿದ್ದರು. ಅತ್ತ ಅಯೋಧ್ಯೆಯಲ್ಲಿ ಶತ ಶತಮಾನಗಳ ಕನಸು ಇದೀಗ ನನಸಾಗುತ್ತಿರುವ ಕಾಲ ಕೂಡಿ ಬರುತ್ತಿರುವ ಈ ಹೊತ್ತಿನಲ್ಲಿ ಶ್ರೀರಾಮ ಮಾಂಸಹಾರಿ ಎಂದು ಹೇಳುವ ಮೂಲಕ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್​  ಮೀಡಿಯಾಗಳಲ್ಲಿಯೂ  ಭಾರಿ ಪ್ರಮಾಣದಲ್ಲಿ ಈ ಚಿತ್ರದ ವಿರುದ್ಧ ಅಭಿಯಾನ ಶುರುವಾಗಿದೆ. 

ಸಂಗೀತ ಮಾಂತ್ರಿಕ ಎ.ಆರ್​ ರೆಹಮಾನ್​ @57: ದಿಲೀಪ್,​ ರೆಹಮಾನ್​ ಆಗಿದ್ದು ಏಕೆ? ಹೇಗೆ?

click me!