ಖಳನಾಯಕ-2 ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರಾ? ಸಾಕಷ್ಟು ಸದ್ದು ಮಾಡುತ್ತಿರುವ ಈ ವಿಷಯದ ಕುರಿತು ನಿರ್ದೇಶಕ ಸುಭಾಷ್ ಘಾಯ್ ಹೇಳಿದ್ದೇನು?
ಸದ್ಯ ಎಲ್ಲೆಲ್ಲೂ ನಟ ಯಶ್ ಅವರದ್ದೇ ಹವಾ. ಸ್ಯಾಂಡಲ್ವುಡ್ನಿಂದ ಬಾಲಿವುಡ್ಗೆ ಹಾರಿದ ಮೇಲೆ ಇವರ ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಹಿಂದಿಯ ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಿಡುಗಡೆ ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸುತ್ತಿರುವುದು. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್ನಲ್ಲಿ ಆಗಲಿದೆಯಂತೆ. ಈಗ ಸೆಟ್ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಯಶ್ ರಾಮಾಯಣ ಚಿತ್ರಕ್ಕೆ ಸಂಭಾವನೆನೇ ಪಡೆಯುತ್ತಿಲ್ಲ ಎನ್ನುವುದೂ ಸುದ್ದಿಯಾಗಿದೆ. ಅದರ ಬದಲು ಯಶ್ ಅವರು, ಚಿತ್ರದ ನಿರ್ಮಾಪಕರಾಗುತ್ತಿದ್ದಾರೆ ಎನ್ನುವುದು. ಅಂದರೆ, ಯಶ್, ಸಂಭಾವನೆ ಬದಲು ಸಹ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಇದರ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿರುವ ನಡುವೆಯೇ ಖಳನಾಯಕ್-2 ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಷಯಗಳು ಬರುತ್ತಿವೆ. ಅದೇನೆಂದರೆ, 1993ರಲ್ಲಿ ಸಂಜಯ್ ದತ್ತ ನಾಯಕರಾಗಿ ನಟಿಸಿರುವ ಬ್ಲಾಕ್ಬಸ್ಟರ್ ಖಳನಾಯಕ್ ಚಿತ್ರದ ಪಾರ್ಟ್-2 ಅನ್ನು ನಿರ್ದೇಶಕ ಸುಭಾಷ್ ಘಾಯ್ ಮಾಡಲು ಹೊರಟಿದ್ದಾರೆ. ಆಗ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಇದೀಗ ಪಾರ್ಟ್-2 31 ವರ್ಷಗಳ ಬಳಿಕ ಬರುತ್ತಿದ್ದು, ಸುಭಾಷ್ ಹೊಸ ಪಾತ್ರವರ್ಗದೊಂದಿಗೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಕೂಡ ಫೈನಲ್ ಆಗಿದೆ ಎಂದು ಸುದ್ದಿಯಾಗಿತ್ತು. ಅದರಲ್ಲಿ ನಾಯಕನಾಗಿ ಯಶ್ ಅವರ ಹೆಸರೂ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅಂದಹಾಗೆ 3.75 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಿಸಲಾಗಿದ್ದ ಖಳನಾಯಕ್ ಚಿತ್ರವು 31 ವರ್ಷಗಳ ಹಿಂದೆಯೇ 25 ಸಾವಿರ ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಅದರ ಸೀಕ್ವೆಲ್ ರೆಡಿಯಾಗುತ್ತಿದೆ.
'ರಾಮಾಯಣ'ಕ್ಕೆ ಸಂಭಾವನೆ ಬೇಡವೆಂದ ನಟ ಯಶ್, ಆದ್ರೆ ಇಲ್ಲಿದೆ ಇನ್ನೊಂದು ಟ್ವಿಸ್ಟ್, ಏನದು?
ಖಳನಾಯಕ ಚಿತ್ರದಲ್ಲಿ ಸಂಜಯ್ ದತ್ ಮಾಡಿದ ಬಲ್ಲು ಬಲರಾಮ್ ಪಾತ್ರಕ್ಕೆ ಈಗ ಸುಭಾಷ್ ಅವರು ಹೊಸಬರನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಪಾತ್ರಕ್ಕೆ ರಣವೀರ್ ಸಿಂಗ್, ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿದೆ. ಜೊತೆಗೆ ಯಶ್ ಅವರ ಬಗ್ಗೆಯೂ ಸುಭಾಷ್ ಅವರು ಪ್ಲ್ಯಾನ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಹೆಸರೂ ಅವರ ತಲೆಯಲ್ಲಿ ಓಡುತ್ತಿದೆ ಎಂದೇ ಸುದ್ದಿಯಾಗುತ್ತಿದೆ. ಯಶ್ ಅವರೇ ಫೈನಲ್ ಆಗುತ್ತಾರೆ, ಈ ಮೂಲಕ ಬಾಲಿವುಡ್ನ ಇನ್ನೊಂದು ಚಿತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಅಭಿಮಾನಿಗಳು ಸಕತ್ ಖುಷಿಯಲ್ಲಿದ್ದಾರೆ. ಆದರೆ ಇದೀಗ ಸುಭಾಷ್ ಘಾಯ್ ಅವರು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಲ್ಲು ಬಲರಾಮ್ ಪಾತ್ರದ ಕುರಿತು ಸಾಕಷ್ಟು ಸುದ್ದಿಗಳು ಬರುತ್ತಿವೆ. ಹೊಸ ಮುಖಗಳನ್ನು ನಾನು ಹುಡುಕುತ್ತಿರುವುದಾಗಿ ಹೇಳಲಾಗುತ್ತಿದೆ. ಆದರೆ ಖಳನಾಯಕ್ ಸೀಕ್ವೆಲ್ ಮಾಡಲು ಬಯಸುತ್ತಿರುವುದು ನಿಜ. ಆದರೆ ಈ ಚಿತ್ರದಲ್ಲಿ ಸಂಜಯ್ ದತ್ ಅವರೇ ಇರಲಿದ್ದಾರೆ ಎಂದಿದ್ದಾರೆ. ಈ ಮೂಲಕ ಹೊಸಬರನ್ನು ಸುಭಾಷ್ ಘಾಯ್ ಅವರು ಬಲ್ಲು ಬಲರಾಮ್ ಪಾತ್ರಕ್ಕೆ ನೋಡುತ್ತಿಲ್ಲ ಎಂದು ಸ್ಪಷ್ಟವಾದಂತಿದೆ. ಇದರ ಹೊರತಾಗಿಯೂ ಸುಭಾಷ್ ಘಾಯ್ ಯಶ್ ಸೇರಿದಂತೆ ಕೆಲವು ನಾಯಕರನ್ನು ಅಪ್ರೋಚ್ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದ್ದು, ಇದು ಬೇರೆ ಪಾತ್ರಕ್ಕಾ ಅಥವಾ ಇನ್ನೇನಾದರೂ ಟ್ವಿಸ್ಟ್ ಇರಲಿದೆಯಾ ಎನ್ನುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಂದಹಾಗೆ, ಕಳೆದ ವರ್ಷವಷ್ಟೇ ಖಳನಾಯಕ್ ಚಿತ್ರ 30ನೇ ವಾರ್ಷಿಕೋತ್ಸವವನ್ನು ಮಾಧುರಿ ದೀಕ್ಷಿತ್, ಸಂಜಯ್ ದತ್, ಜಾಕಿ ಶ್ರಾಫ್, ಅನುಪಮ್ ಖೇರ್ ಮೊದಲಾದವರು ಭರ್ಜರಿಯಾಗಿ ಆಚರಿಸಿದ್ದು, ಇದರ ವಿಡಿಯೋಗಳು ಸಕತ್ ವೈರಲ್ ಆಗಿದ್ದವು.
ಯಶ್, ರಣಬೀರ್-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್ ಸೆಟ್ ಹೀಗಿದೆ ನೋಡಿ: ವಿಡಿಯೋ ವೈರಲ್