ಅಯ್ಯೋ, ಸ್ಟಾರ್ ಹೀರೋಯಿನ್ ಆದ್ರೂ ರಶ್ಮಿಕಾ ಮಂದಣ್ಣ ಅಮ್ಮನ ಬಳಿ ಇದನ್ನು ಕೇಳೋದು ಮಾತ್ರ ಬಿಟ್ಟಿಲ್ವಂತೆ!

Published : Apr 22, 2024, 12:46 PM IST
ಅಯ್ಯೋ, ಸ್ಟಾರ್ ಹೀರೋಯಿನ್ ಆದ್ರೂ ರಶ್ಮಿಕಾ ಮಂದಣ್ಣ ಅಮ್ಮನ ಬಳಿ ಇದನ್ನು ಕೇಳೋದು ಮಾತ್ರ ಬಿಟ್ಟಿಲ್ವಂತೆ!

ಸಾರಾಂಶ

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಟ ರಣಬೀರ್ ಕಪೂರ್ ಜತೆ ನಟಿಸಿರುವ 'ಅನಿಮಲ್' ಚಿತ್ರವು ಸೂಪರ್ ಹಿಟ್ ದಾಖಲಿಸಿದೆ. ಆ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಕೂಡ ಸಖತ್ ಮಿಂಚುತ್ತಿದ್ದಾರೆ. ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ..

ನಟಿ ರಶ್ಮಿಕಾ ಮಂದಣ್ಣ (Rashmika Mandanna)ತಮ್ಮ ಭಾರೀ ಸೀಕ್ರೆಟ್‌ ಒಂದನ್ನು ಬಹಿರಂಗಗೊಳಿಸಿದ್ದಾರೆ. ಇಷ್ಟು ದಿನಗಳೂ ಬಚ್ಚಿಟ್ಟುಕೊಂಡಿದ್ದ ತಮ್ಮ ವೈಯಕ್ತಿಕ ಗುಟ್ಟನ್ನು ರಟ್ಟು ಮಾಡಿದ್ದಾರೆ. ಯಾರೂ ಕೂಡ ಊಹಿಸಲು ಅಸಾಧ್ಯವಾದ ಸಂಗತಿ ಇದು ಎನ್ನಬಹುದು. ಪ್ಯಾನ್ ಇಂಡಿಯಾ ಸ್ಟಾರ್, ನ್ಯಾಷನಲ್ ಕ್ರಶ್ (National Crush), ಸ್ಮೈಲ್ ಕ್ವೀನ್ ಅದೂ ಇದೂ ಅಂತ ಬಿರುದು ಹೊಂದಿರುವ ನಟಿ ರಶ್ಮಿಕಾರ ಈ ಗುಟ್ಟು ತಿಳಿದರೆ ನೀವು ಹಬ್ಬೇರಿಸುವುದು ಖಂಡಿತ. ಹಾಗಿದ್ದರೆ ಏನದು ಅಂಥ ಗುಟ್ಟ? ಯಾಕೆ ರಶ್ಮಿಕಾ ಅದನ್ನು ರಟ್ಟು ಮಾಡಿದ್ದು?

ಹೌದು, ನಟಿ ರಶ್ಮಿಕಾ ಮಂದಣ್ಣ ಅವರು ತಾವು ಧರಿಸುವ ಬಟ್ಟೆಯ ಬಗ್ಗೆ ಹೇಳಿದ್ದಾರೆ. 'ನಾನು ಹೆಚ್ಚಾಗಿ ಧರಿಸುವುದು ನನ್ನ ಅಮ್ಮನ ಬಟ್ಟೆಗಳನ್ನೇ. ನನಗೆ ಅದು ತುಂಬಾ ಕಂಫರ್ಟೇಬಲ್ ಎನಿಸುತ್ತದೆ. ಅದು ಹೇಗೋ ಗೊತ್ತಿಲ್ಲ, ನನ್ನ ಅಮ್ಮ ಒಳ್ಳೆಯ ಫ್ಯಾಭ್ರಿಕ್ ಆಯ್ಕೆ ಮಾಡುತ್ತಾರೆ. ಅದೆಷ್ಟು ಕಂಫರ್ಟೇಬಲ್ ಎನಿಸುತ್ತದೆ ಎಂದರೆ ಅದನ್ನು ಬಿಟ್ಟು ನನ್ನ ಬಳಿ ಇರುವ ಲೆಕ್ಕವಿಲ್ಲದಷ್ಟು ಬಟ್ಟೆಗಳನ್ನು ಧರಿಸಲು ಮನಸ್ಸೇ ಬರುವುದಿಲ್ಲ. 

ನಾನು ಮನೆಗೆ ಹೋದ ತಕ್ಷಣ ಅಮ್ಮನ ಬಳಿ ನಿಂತು 'ನಿನ್ನ ಬಟ್ಟೆ ಕೋಡು, ಕೊಡು..ಎಂದು ಹೇಳುತ್ತೇನೆ.. ನೀನೀಗ ಸ್ಟಾರ್ ನಟಿ, ನನ್ನ ಬಟ್ಟೆಗಳನ್ನು ಹಾಕ್ಕೋತೀಯಾ ಎಂದು ನನ್ನಮ್ಮ ಕೇಳುತ್ತಾರೆ. ನಾನು, ನಾನು ಏನಾದ್ರೂ ಆಗಿರ್ಲಿ, ನಂಗೆ ನಿನ್ನ ಬಟ್ಟೆಗಳು ತುಂಬಾ ಸುಖಕರವಾಗಿ ಅನ್ನಿಸುತ್ತವೆ. ನಂಗೆ ನಿನ್ನ ಬಟ್ಟೆಗಳು ಬೇಕು,ಕೊಡು ಎಂದು ಹೇಳಿ ತೆಗೆದುಕೊಂಡು ಹಾಕಿಕೊಳ್ಳುತ್ತೇನೆ' ಎಂದಿದ್ದಾರೆ ರಶ್ಮಿಕಾ ಮಂದಣ್ಣ. 

ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ಸಿನಿರಂಗ ಪ್ರವೇಶಿಸಿ ಈಗ ತೆಲುಗು, ಮಲಯಾಳಂ, ತಮಿಳು ಹಾಗು ಹಿಂದಿ ಚಿತ್ರರಂಗಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹೆಚ್ಚಾಗಿ ತೆಲುಗು ಹಾಗು ಹಿಂದಿ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರೇ ಹಾಗೆ ಮಾಡುತ್ತಿದ್ದಾರೋ ಅಥವಾ, ಅವರಿಗೆ ಅಲ್ಲಿಂದಲೇ ಹೆಚ್ಚು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಯಾಕೆ ಎಂಬ ಪ್ರಶ್ನೆಗೆ ಬೇರೆಯವರು ಉತ್ತರಿಸುವುದು ಕಷ್ಟ, ಆ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತ್ರ ಕ್ಲಾರಿಫಿಕೇಶನ್ ಕೊಡಬಲ್ಲರು. 

ನಟಿ ರಶ್ಮಿಕಾ ಮಂದಣ್ಣ ಅವರು ನಟಿ ಸಮಂತಾ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಮತ್ತು ಅದನ್ನೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. 'ಪುಷ್ಪಾ' ಎಂಬ ಒಂದೇ ಚಿತ್ರದಲ್ಲಿ ಈ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರೂ ಪರಸ್ಪರ ಗೌರವಾದರ ಹೊಂದಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪಾ ಚಿತ್ರದ ಐಟಂ ಸಾಂಗ್ ಮೂಲಕ ನಟಿ ಸಮಂತಾ ಇಂಟರ್‌ನ್ಯಾಷನಲ್ ಮೆಚ್ಚುಗೆ ಗಳಿಸಿದ್ದರೆ ನಟಿ ರಶ್ಮಿಕಾ ಈ ಚಿತ್ರದ ನಾಯಕಿಯಾಗಿ ಭಾರೀ ಗಮನಸೆಳೆದಿದ್ದಾರೆ. 

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಟ ರಣಬೀರ್ ಕಪೂರ್ ಜತೆ ನಟಿಸಿರುವ 'ಅನಿಮಲ್' ಚಿತ್ರವು ಸೂಪರ್ ಹಿಟ್ ದಾಖಲಿಸಿದೆ. ಆ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಕೂಡ ಸಖತ್ ಮಿಂಚುತ್ತಿದ್ದಾರೆ. ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಇಡೀ ಭಾರತವನ್ನು ಸದ್ಯ ತಮ್ಮ ಚೆಲುವು ಹಾಗೂ ಸ್ಟಾರ್‌ಗಿರಿಯಿಂದ  ಸೆಳೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ರಶ್ಮಿಕಾ ಮಂದಣ್ಣ ಹಾಗು ಅಲ್ಲು ಅರ್ಜುನ್ ಜೋಡಿಯ ಪುಷ್ಪಾ ಸಿನಿಮಾದ ಸೀಕ್ವೆಲ್ 'ಪುಷ್ಪಾ 2' ಶೂಟಿಂಗ್ ಹಂತದಲ್ಲಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಮನೆ ಮಾಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ