ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

Published : Apr 22, 2024, 01:49 PM ISTUpdated : Apr 22, 2024, 01:56 PM IST
ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಸಾರಾಂಶ

ವರನಟ ಡಾ ರಾಜ್‌ಕುಮಾರ್ ಅವರು ಆ ಚಳುವಳಿಗೆ ಧುಮುಕಿದ್ದು ಹೇಗೆ? ಗೋಕಾಕ ಚಳುವಳಿಯ ನೇತೃತ್ವ ವಹಿಸಲು ಡಾ ರಾಜ್‌ಕುಮಾರ್ ಅವರಿಗೆ ಪ್ರೇರೇಪಣೆ ನೀಡಿದ್ದು ಯಾರು? ಡಾ ರಾಜ್‌ಕುಮಾರ್ ಅವರು ಇದ್ದಕ್ಕಿದ್ದಂತೆ ಗೋಕಾಕ್ ಚಳುವಳಿಯಲ್ಲಿ..

ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕರಾದ ಇಂದ್ರಜಿತ್ ಲಂಕೇಶ್ (Indrajit Lankesh) ಸಂದರ್ಶನವೊಂದರಲ್ಲಿ ಗೋಕಾಕ್ ಚಳುವಳಿಗೆ ಸಂಬಂಧಪಟ್ಟ ಗುಟ್ಟೊಂದನ್ನು ಬಹಿರಂಗಗೊಳಿಸಿದ್ದಾರೆ. ನಮಗೆಲ್ಲರಿಗೂ ಗೊತ್ತಿರುವಂತೆ , 1980ರಲ್ಲಿ ಡಾ ರಾಜ್‌ಕುಮಾರ್ ನೇತೃತ್ವದಲ್ಲಿ ಕನ್ನಡ ಭಾಷೆ, ಕರ್ನಾಟಕದಲ್ಲಿ ಪಠ್ಯಪುಸ್ತಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಸೇರಿದಂತೆ 'ತ್ರಿಭಾಷಾ ಸೂತ್ರ' ಅಳವಡಿಕೆ ಮುಂತಾದ ಹತ್ತುಹಲವು ಸಂಗತಿಗಳು ನಡೆದವು.

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ಗೋಕಾಕ್ ಚಳುವಳಿಯ ಉದ್ದೇಶ 'ಕರ್ನಾಟಕದಲ್ಲಿ ಸಾರ್ವಜನಿಕ ಜೀವನ, ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು' ಎಂಬುದಾಗಿತ್ತು. ಬಹುತೇಕ ಎಲ್ಲರಿಗೂ ಗೋಕಾಕ್ ಚಳುವಳಿಯ ನಾಯಕತ್ವದ ವಹಿಸಿದ್ದು ಡಾ ರಾಜ್‌ಕುಮಾರ್. ಅವರ ಜತೆ ವಿಷ್ಣುವರ್ಧನ್, ಅಂಬರೀಷ್, ಅನಂತ್‌ನಾಗ್ ಸೇರಿದಂತೆ ಬಹಳಷ್ಟು ನಟರು, ಸುಪ್ರಸಿದ್ಧ ಸಾಹಿತಿಗಳು, ಹತ್ತುಹಲವು ಕ್ಷೇತ್ರಗಳಲ್ಲಿ ಹೆಸರುವಾಸಿಯಾದವರು, ಸಾಮಾನ್ಯ ಜನರು ಎಲ್ಲರೂ ಭಾಗಿಯಾಗಿ ಚಳುವಳಿಯನ್ನು ಭಾರೀ ಯಶಸ್ವಿಗೊಳಿಸಿದ್ದರು.

ಅಯ್ಯೋ, ಸ್ಟಾರ್ ಹೀರೋಯಿನ್ ಆದ್ರೂ ರಶ್ಮಿಕಾ ಮಂದಣ್ಣ ಅಮ್ಮನ ಬಳಿ ಇದನ್ನು ಕೇಳೋದು ಮಾತ್ರ ಬಿಟ್ಟಿಲ್ವಂತೆ!

ಆ ಮೂಲಕ ಅಂದು ಪಠ್ಯಕ್ರಮದಲ್ಲಿ ಹಾಗೂ ಸರ್ಕಾರದ ಆಡಳಿತ ಕ್ಷೇತ್ರಗಳ ಸೇವೆಯಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಕ್ಕು ಕನ್ನಡ ಉಳಿಯಿತು, ಬೆಳೆಯಿತು ಮತ್ತು ಕನ್ನಡಿಗರಿಗೊಂದು ಪ್ರಾಮುಖ್ಯತೆ ದೊರಕಿತು. ಆದರೆ, ವರನಟ ಡಾ ರಾಜ್‌ಕುಮಾರ್ ಅವರು ಆ ಚಳುವಳಿಗೆ ಧುಮುಕಿದ್ದು ಹೇಗೆ? ಗೋಕಾಕ ಚಳುವಳಿಯ ನೇತೃತ್ವ ವಹಿಸಲು ಡಾ ರಾಜ್‌ಕುಮಾರ್ ಅವರಿಗೆ ಪ್ರೇರೇಪಣೆ ನೀಡಿದ್ದು ಯಾರು?

ವಿಷ್ಣು ಸೇನೆ ಬಗ್ಗೆ ಅಂದು ಹರಡಿತ್ತು ಕುಹಕದ ಮಾತು, ನಟ ವಿಷ್ಣುವರ್ಧನ್ ಏನಂದಿದ್ರು?

ಡಾ ರಾಜ್‌ಕುಮಾರ್ ಅವರು ಇದ್ದಕ್ಕಿದ್ದಂತೆ ಗೋಕಾಕ್ ಚಳುವಳಿಯಲ್ಲಿ ಭಾಗಿಯಾಗಿದ್ದಷ್ಟೇ ಅಲ್ಲ, ನೇತೃತ್ವ ಕೂಡ ವಹಿಸಲು ಅಂದು ಕಾರಣರಾಗಿದ್ದು ಯಾರು? ಈ ಎಲ್ಲ ಸಂಗತಿಗಳು ಅಂದಿನ ಕೆಲವರಿಗೆ ಗೊತ್ತಿದ್ದಿರಬಹುದು. ಆದರೆ ಇಂದು ಈ ವಿಷಯ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಈ ಬಗ್ಗೆ ಕನ್ನಡದ ಪತ್ರಕರ್ತ, ನಿರ್ಮಾಪಕರು ಹಾಗೂ ನಿರ್ದೇಶಕರಾಗಿರುವ ಇಂದ್ರಜಿತ್ ಲಂಕೇಶ್ ಅವರು ಇಂಟರ್‌ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ. 

ದ್ವಾರಕೀಶ್‌ರನ್ನು ಚಿತ್ರರಂಗಕ್ಕೆ ತಂದವರು ಯಾರು, ಕುಳ್ಳನನ್ನು ಮದ್ರಾಸ್‌ಗೆ ಯಾಕೆ ಕಳಿಸಿದ್ರು?

'ನಮ್ಮಪ್ಪ ಅಂದರೆ ಪಿ ಲಂಕೇಶ್ (P Lankesh) -ಗೋಕಾಕ್ ಚಳುವಳಿಗೆ ಡಾ ರಾಜ್‌.. ಎಂದು ಮುಖಪುಟದಲ್ಲಿ ಬರೆದು, ಲೇಖನ ಬರೆದ್ಬಿಟ್ರು.. ಅಲ್ಲಿ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶೂಟಿಂಗ್‌ ಮಾಡ್ತಾ ಇದ್ರು ಡಾ ರಾಜ್‌ಕುಮಾರ್.. ಗೊತ್ತಾದ ತಕ್ಷಣ, ಡಾ ರಾಜ್‌ಕುಮಾರ್ ಅವ್ರು ಅಲ್ಲಿರೋ ಕೆಲವು ಜನ್ರ ಜೊತೆ ನಮ್ ಕಚೇರಿಗೆ ಬಂದುಬಿಡ್ತಾರೆ. ಬಂದ್ಬಿಟ್ಟು 'ಏನಿದು ಲಂಕೇಶ್, ಈ ಥರ ಮುಖಪುಟದಲ್ಲಿ ಬರೆದುಬಿಟ್ಟಿದೀರಾ? ನಾನ್ಯಾವತ್ತು ಹೇಳ್ದೆ ನಿಮ್ಗೆ ಈ ಥರ ಗೋಕಾಕ್ ಚಳುವಳಿಗೆ ನಾನು ಬರ್ತಾ ಇದೀನಿ ಅಂತ..

ಮುಂಬೈ ಬೆಡಗಿ ದೀಪಿಕಾ ಕನ್ನಡ ಚಿತ್ರಕ್ಕೆ ಆಯ್ಕೆಯಾದ ಸೀಕ್ರೆಟ್ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಆವಾಗ ಒಂದು ಡಿಸ್ಕಶನ್ ಆಗುತ್ತೆ, ಕನ್ನಡ ಸಿನಿಮಾ, ಸಿನಿಮಾರಂಗ ನಿಮ್ಗೆ ಎಲ್ಲಾನೂ ಕೊಟ್ಟಿದೆ. ಕನ್ನಡಿಗರು ನಿಮ್ಗೆ ಎಲ್ಲಾನೂ ಕೊಟ್ಟಿದಾರೆ. ಇವತ್ತು ನೀವು ಕನ್ನಡಿಗರಿಗೋಸ್ಕರ ಹೋರಾಟಕ್ಕೆ ಬರ್ಬೇಕು ನಮ್ಜೊತೆ.. ಆಗ ಟೀ ಕುಡಿತಾ ಒಂದೈದು ನಿಮಿಷ ಯೋಚ್ನೆ ಮಾಡ್ತಾರೆ ಡಾ ರಾಜ್‌, ಇಬ್ರೂ ಕೈ ಕುಲುಕ್ತಾರೆ.. ಮಾರನೆಯ ದಿನದಿಂದಲೇ ಡಾ ರಾಜ್‌ಕುಮಾರ್ ಅವ್ರು ಕರ್ನಾಟಕದ ಪ್ರತಿ ಹಳ್ಳಿಹಳ್ಳಿಗೂ ಹೋಗ್ತಾರೆ..

ವಿಷ್ಣುವರ್ಧನ್‌ಗೆ ಮತ್ತೊಂದು ಸಿನಿಮಾಗೆಂದು ಸೀಕ್ರೆಟ್ಟಾಗಿ ಲಂಡನ್‌ನಿಂದ ಏನೋ ತಂದಿದ್ರು ಪುಟ್ಟಣ್ಣ ಕಣಗಾಲ್?

ಗೋಕಾಕ್ ಚಳುವಳಿಯ ನಾಯಕತ್ವ ವಹಿಸಿ ಡಾ ರಾಜ್‌ಕುಮಾರ್ ಅವ್ರು ಪ್ರತಿ ಹಳ್ಳಿಹಳ್ಳಿಯಲ್ಲು ಹೋರಾಟ ಶುರು ಮಾಡ್ತಾರೆ.. ಅಲ್ಲಿ ಲಕ್ಷಾಂತರ ಜನ ಸೇರಿ, ಅದೊಂದು ದೊಡ್ಡ ಚಳುವಳಿಯಾಗಿ, ಆಗ ಕನ್ನಡ ಭಾಷೆ ಬಗ್ಗೆ , ಕನ್ನಡ ಜನರ ಬಗ್ಗೆ ಅಭಿಮಾನ, ಒಲವು ಹಾಗೆ ಒಂದು ಅವೇರ್‌ನೆಸ್ ಶುರುವಾಗುತ್ತೆ.. ಎಂದಿದ್ದಾರೆ ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕರಾದ ಇಂದ್ರಜಿತ್ ಲಂಕೇಶ್.  

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ