ತಿಂಡಿಯಿಂದ ತೂಕ ಕಡಿಮೆ ಆಗ್ಬೋದಾ?; ಬಿಗ್ ಬಾಸ್ ಶ್ರುತಿ ಪ್ರಕಾಶ್‌ ಕೊಟ್ಟ ರೆಸಿಪಿ ಹೇಗಿದೆ ನೋಡಿ...

Published : Apr 09, 2025, 08:58 AM ISTUpdated : Apr 09, 2025, 09:03 AM IST
ತಿಂಡಿಯಿಂದ ತೂಕ ಕಡಿಮೆ ಆಗ್ಬೋದಾ?; ಬಿಗ್ ಬಾಸ್ ಶ್ರುತಿ ಪ್ರಕಾಶ್‌ ಕೊಟ್ಟ ರೆಸಿಪಿ ಹೇಗಿದೆ ನೋಡಿ...

ಸಾರಾಂಶ

ಗಾಯಕಿ ಶ್ರುತಿ ಪ್ರಕಾಶ್ ತಮ್ಮ ಫಿಟ್ನೆಸ್ ಗುಟ್ಟನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ ತಿಂಡಿಯ ರೆಸಿಪಿಯನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಹಣ್ಣುಗಳು, ನೆನೆಸಿದ ಬೀಜಗಳು, ಚಿಯಾ ಬೀಜಗಳು, ಪೀನಟ್ ಬಟರ್ ಮತ್ತು ಬಾದಾಮಿ ಹಾಲನ್ನು ಬಳಸಿ ಈ ತಿಂಡಿಯನ್ನು ತಯಾರಿಸುತ್ತಾರೆ. ಇದು ಹೊಟ್ಟೆ ತುಂಬಿರುವಂತೆ ಮಾಡುವುದಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಜನಪ್ರಿಯ ಗಾಯಕಿ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿ ಶ್ರುತಿ ಪ್ರಕಾಶ್‌ ವಾಯ್ಸ್‌ ಆಂಡ್ ಫಿಟ್ನೆಸ್‌ಗೆ ಬೋಲ್ಡ್‌ ಆದವರ ಲೆಕ್ಕವಿಲ್ಲ. ಇದೇನಪ್ಪಾ ಸದಾ ಫಿಟ್ ಆಂಡ್ ಫೈನ್ ಆಗಿರುತ್ತಾರೆ ಹೇಗೆ ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಅನ್ನೋರಿಗೆ ಇಲ್ಲಿದೆ ಉತ್ತರ. ಶ್ರುತಿ ಮನೆಯಲ್ಲಿ ಬಲು ಬೇಗ ತಯಾರಿ ಮಾಡಿಕೊಳ್ಳುವ ತಿಂಡಿ ರೆಸಿಪಿ ಹಂಚಿಕೊಂಡಿದ್ದಾರೆ.

'ತುಂಬಾ ದಿನಗಳಿಂದ ಇದನ್ನು ತಿಂಡಿಯಾ ಸೇವಿಸುತ್ತಿದ್ದೀನಿ. ಒಂದು ಗ್ಲಾಸ್‌ ಜಾರಿನಲ್ಲಿ ತಯಾರಿ ಮಾಡಿಕೊಳ್ಳುವುದಕ್ಕೆ ತುಂಬಾ ಇಷ್ಟ ಪಡುತ್ತೀನಿ. ಸಾಮಾನ್ಯವಾಗಿ ನಾನು ಸೇಬು ಮತ್ತು ಬಾಳೆಹಣ್ಣು ಬಳಸುತ್ತೀನಿ ಆದರೆ ನಿಮಗೆ ಯಾವೆಲ್ಲಾ ಹಣ್ಣುಗಳು ಬೇಕು ಅದನ್ನು ಬಳಸಬಹುದು. ರಾತ್ರಿ ಇಡೀ ನೀರಿನಲ್ಲಿ ನೆನೆಸಿಟ್ಟಿರುವ ದ್ರಾಕ್ಷಿ, ಬಾದಾಮಿ ಮತ್ತು ವಾಲ್‌ನಟ್‌ ಬಳಸಬೇಕು. ಇದಾದ ಮೇಲೆ ಎಲ್ಲಾ ರೀತಿಯ ಸೀಡ್‌ಗಳು (ಸೂರ್ಯಕಾಂತಿ ಬೀಜ,ಕುಂಬಳಕಾಯಿ ಬೀಜ ಮತ್ತು ಇತರೆ) ಅದಾದ ಮೇಲೆ ರಾತ್ರಿ ಮತ್ತೆ ನೀರಿನಲ್ಲಿ ನೆನೆಸಿಟ್ಟ ಚಿಯಾ ಬೀಜಗಳನ್ನು ಬಳಸಬೇಕು. ಇದು ಕೇವಲ ಎರಡು ಸ್ಫೂನ್‌ಗಳು ಮಾತ್ರ ಬಳಸಬೇಕು. ಇದರ ರುಚಿ ಹೆಚ್ಚಿಸಲು ಸಕ್ಕರೆ ಇಲ್ಲದ ಪೀನಟ್‌ ಬಟರ್‌ ಬಳಸಬೇಕು. ನಾನು ಬಳಸುವುದು ಡಾರ್ಕ್‌ ಚಾಲೋಕೇಟ್ ಮತ್ತು ಪೀನಟ್‌ ಬಟರ್. ಇದಾದ ಮೇಲೆ ಎಲ್ಲರಂತೆ ನಾರ್ಮಲ್ ಹಾಲು ಬಳಸುವುದಿಲ್ಲ,  ಬಾದಾಮಿ ಹಾಲು ಮತ್ತು ಚಾಕೋಲೇಟ್ ರುಚಿ ಇರುವ ಹಾಲನ್ನು ಬಳಸುವುದು.' ಎಂದು ವಿಡಿಯೋ ಮೂಲಕ ರೆಸಿಪಿ ಹಂಚಿಕೊಂಡಿದ್ದಾರೆ ಶ್ರುತಿ. 

ಡ್ರೀಮ್‌ ಹುಡುಗ ಅಂತೇನು ಇಲ್ಲ ಈ ಗುಣಗಳಿದ್ದರೆ ಸಾಕು.....;ಮದುವೆ ಸುಳಿವು ಕೊಟ್ರ ಶಿವಣ್ಣ ಪುತ್ರಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಯಾವುದೇ ಕಾರಣಕ್ಕೂ ತಿಂಡಿ ಮಿಸ್ ಮಾಡಬಾರದು. ಸೌತ್ ಇಂಡಿಯನ್ ತಿಂಡಿನೇ ಬೆಸ್ಟ್‌ ಎನ್ನುವ ಈ ಕಾಲದಲ್ಲಿ ಕೊಂಚ ಡಯಟ್ ಫ್ರೀಕ್‌ಗಳು ಇರ್ತಾರೆ. ಅಯ್ಯೋ ತಿಂಡಿ ರೆಡಿ ಮಾಡುವುದಕ್ಕೆ ಸಮಯ ಇಲ್ಲ ಅನ್ನೋರು ಈ ರೀತಿ ಆರೋಗ್ಯಕರ ತಿಂಡಿ ರೆಡಿ ಮಾಡಿಕೊಳ್ಳಬಹುದು. ಶ್ರುತಿ ಪ್ರಕಾಶ್ ತೋರಿಸಿಕೊಟ್ಟಿರುವ ತಿಂಡಿಯನ್ನು ಸೇವಿಸಿದರೆ ಹಲವು ಗಂಟೆಗಳ ಕಾಲ ಹೊಟ್ಟೆ ಹಸಿವಾಗುವುದಿಲ್ಲ ಅಷ್ಟೇ ಅಲ್ಲ ಇದರಿಂದ ನಡುವೆ ತಿನ್ನಬೇಕು ಅನ್ನೋ ಆಸೆ ಕಡಿಮೆ ಆಗುತ್ತದೆ. ಈ ರೀತಿ ತಿಂಡಿ ಸೇವಿಸಿಬಿಟ್ಟರೆ ತಿಂಗಳಲ್ಲಿ ಏನಿಲ್ಲ ಅಂದ್ರೂ ಒಂದೆರಡು ಕೆಜಿ ಕಡಿಮೆ ಆಗೋದು ಗ್ಯಾರಂಟಿ. 

ಅಯ್ಯಯ್ಯೋ ನಾವು ಹಸುವಿನ ಹಾಲು ಮುಟ್ಟ ಏನೇ ಇದ್ರೂ ಬಾದಾಮಿ ಹಾಲು ಮಾತ್ರ: ನಟಿ ಅನುಷ್ಕಾ ಶರ್ಮಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!