ನಟಿ ರಮ್ಯಾ ಅವರಿಗೆ 'ಮೋಹಕ ತಾರೆ' ಎಂಬ ಬಿರುದು ಹೇಗೆ ಬಂತು ಎಂಬ ಕುತೂಹಲಕ್ಕೆ ಈ ಲೇಖನ ಉತ್ತರಿಸುತ್ತದೆ. ಬಾಲಕನೊಬ್ಬ ರಮ್ಯಾಗೆ ಈ ಬಿರುದನ್ನು ನೀಡಿದ್ದು, ಆ ಘಟನೆ ರಮ್ಯಾ ಅವರ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ನೀಡಿತು.
ಕನ್ನಡ ಚಿತ್ರರಂಗದಲ್ಲಿ ಬಹುದಿನಗಳ ಕಾಲ ಸ್ಟಾರ್ ನಟಿಯಾಗಿ ಮೆರೆದ ರಮ್ಯ ಅವರಿಗೆ 'ಮೋಹಕ ತಾರೆ' ಎಂಬ ಬಿರುದು ಕೂಡ ಇದೆ. ದಿವ್ಯ ಸ್ಪಂದನಾ ಆಗಿ ಕನ್ನಡ ಚಿತ್ರರಂಗದ 'ಅಭಿ' ಸಿನಿಮಾಗೆ ಕಾಲಿಟ್ಟ ನಂತರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು 'ರಮ್ಯ' ಎಂದು ಹೆಸರಿಟ್ಟಿದ್ದರು. ಆದರೆ, ಮೋಹಕ ತಾರೆ ಬಿರುದು ಯಾರು ಕೊಟ್ಟಿದ್ದು, ಸಿನಿಮಾದ ಗಂಧ ಗಾಳಿಯೂ ಗೊತ್ತಿಲ್ಲದ ವ್ಯಕ್ತಿ ಎನ್ನುವುದು ಭಾರೀ ಆಶ್ಚರ್ಯ ಮೂಡಿಸುತ್ತದೆ.
ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದ ಅನೇಕ ನಟ-ನಟಿಯರು ಸಿನಿಮಾಗೆ ಬಂದ ನಂತರ ತಮ್ಮ ಮೂಲ ಹೆಸರುಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಜೊತೆಗೆ, ಅನೇಕ ನಟ-ನಟಿಯರು ಒಳ್ಳೆಯ ಬಿರುದುಗಳನ್ನು ಕೂಡ ಪಡೆದಿಕೊಂಡಿದ್ದಾರೆ. ಅನೇಕ ನಟಿಯರಿಗೆ ಪಾರ್ವತಮ್ಮ ರಾಜ್ ಕುಮಾರ್ ಅವರು ಸಿನಿಮಾಗೆ ಅಗತ್ಯವಾಗಿರುವ ಹೆಸರುಗಳನ್ನು ಇಟ್ಟಿದ್ದಾರೆ. ಕನ್ನಡ ಸಿನಿಮಾ ನಟಿ ರಮ್ಯ ಅವರ ಮೂಲ ಹೆಸರು ದಿವ್ಯ ಸ್ಪಂದನ ಅಗಿದೆ. ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕ ಕಾಲಿಟ್ಟ ದಿವ್ಯ ಸ್ಪಂದನಾಗೆ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ರಮ್ಯ ಎಂದು ಹೆಸರು ಬದಲಾಯಿಸಿದರು. ಆದರೆ, ಸರ್ಕಾರಿ ದಾಖಲೆಗಳಲ್ಲಿ ಈಗಲೂ ದಿವ್ಯ ಸ್ಪಂದನ ಎಂಬ ಹೆಸರಿದೆ.
ಇದನ್ನೂ ಓದಿ: ಸೀರೆಯಲ್ಲಿ ಶ್ರೀರಸ್ತು ಶುಭಮಸ್ತು ದೀಪಿಕಾ ಮಾದಕ ಡಾನ್ಸ್: ಅತ್ತೆಯಂಗೆ ನೀನೂ ಮಗು ಮಾಡ್ಕೋ ಅಂತಿರೋ ಫ್ಯಾನ್ಸ್!
ರಮ್ಯ ಅವರಿಗೆ ಮೋಹಕ ತಾರೆ ಎಂಬ ಬಿರುದು ಕೊಟ್ಟವರು ಯಾರು ಎಂಬ ಪ್ರಶ್ನೆಗೆ ಅನೇಕರು ರಾಜ್ ಕುಮಾರ್ ಕುಟುಂಬದ ಪಾರ್ವತಮ್ಮ ರಾಜ್ ಕುಮಾರ್ ಎಂದುಕೊಂಡಿದ್ದಾರೆ. ಅಥವಾ ಬೇರೆ ಯಾವುದಾದರೂ ನಿರ್ದೇಶಕರು ಎಂದು ಭಾವಿಸಿದ್ದಾರೆ. ಆದರೆ ಅಸಲಿಯಾಗಿ ರಮ್ಯ ಅವರಿಗೆ ಮೋಹಕತಾರೆ ಬಿರುದು ಕೊಟ್ಟಿದ್ದು, ಕೇವಲ 11 ವರ್ಷದ ಬಾಲಕ ಮನೋಜವಂ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಲಿಟ್ಲ್ ಚಾಂಪ್ಸ್ ಸ್ಪರ್ಧೆಯ ಕಂಟೆಸ್ಟೆಂಟ್ ಆಗಿದ್ದ ಮನೋಜವಂ ಈ ಬಿರುದು ಕೊಟ್ಟಿದ್ದಾನೆ.
ಸರಿಗಮಪ ಸ್ಪರ್ಧೆಯಲ್ಲಿ ಗೌರಮ್ಮ ಸಿನಿಮಾದ ಹಾಡು ಹೇಳುವಾಗ ಈ ಚಿತ್ರದಲ್ಲಿ ನಟಿಸಿದ್ದ ರಮ್ಯ ಅವರ ಹೆಸರು ಹೇಳುತ್ತಾ, 'ಮೋಹಕ ತಾರೆ ರಮ್ಯ' ಎಂದು ಹೇಳುತ್ತಾನೆ. ಜೊತೆಗೆ, ರಿಯಲ್ ಸ್ಟಾರ್ ಉಪೆಂದ್ರ ಅವರ ಹೆಸರನ್ನೂ ಹೇಳುತ್ತಾರೆ. ಈ ಕಾರ್ಯಕ್ರಮಕ್ಕೆ ಸ್ವತಃ ರಮ್ಯ ಅವರೂ ಹೋಗಿದ್ದು, ತನಗೆ ಬಾಲಕ ಮನೋಜವಂ 'ಮೋಹಕ ತಾರೆ' ಎಂದು ಹೇಳಿದ್ದನ್ನು ಕೇಳಿ ಸಂತಸ ವ್ಯಕ್ತಪಡಿಸುತ್ತಾರೆ. ಜೊತೆಗೆ, ತಮ್ಮ ಸಿನಿಮಾಗಳಲ್ಲಿ ಹೆಸರನ್ನು ಸೇರಿಸುವಾಗ ಮೋಹಕ ತಾರೆ ಎಂಬುದನ್ನು ಕೂಡ ಸೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಂಕರ್ ಅನುಶ್ರೀ ನಿರೂಪಣೆ ಸಂಬಳವನ್ನೇ ಮೀರಿಸುತ್ತಾ ಯೂಟ್ಯೂಬ್ ಆದಾಯ? ಲೆಕ್ಕಾಚಾರ ಬಿಚ್ಚಿಟ್ಟ ಪ್ರಶಾಂತ್!
ಇತ್ತೀಚೆಗೆ ರಾಜ್ ಕುಟುಂಬದ ಹಿರಿಯ ಮಗ ಶಿವ ರಾಜ್ ಕುಮಾರ್ ಅವರು ರಾಜ್ ಬಿ ಶೆಟ್ಟಿ ಅವರಿಗೆ ಸೋಲ್ ಸ್ಟಾರ್ ಎಂದು ಬಿರುದು ಕೊಟ್ಟಿದ್ದಾರೆ. ಇದೇ ರೀತಿ ಹಲವು ಸಂದರ್ಭಗಳಲ್ಲಿ. ಸಿನಿಮಾ ನಟ ನಟಿಯರಿಗೆ ಬಿರುದು ಬಾವಲಿಗಳು ಕೊಡಲಾಗಿದೆ. ಆದರೆ, ಇಂತಹ ಬಿರುದುಗಳನ್ನು ಸಿನಿಮಾ ಬಿಟ್ಟು ಬೇರೆ ನಿಜ ಜೀವನದಲ್ಲಿ ಎಲ್ಲಿಯೂ ಬಳಕೆ ಮಾಡುವಂತಿಲ್ಲ. ಇದು ಸಂವಿಧಾನಕ್ಕೆ ವಿರುದ್ಧ ಆಗಿರುತ್ತದೆ.