ನಾನು ನಟಿಸಿರುವ ಏಳು ಸಿನಿಮಾಗಳಿವೆ. ಎಲ್ಲವನ್ನೂ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದು ಕಷ್ಟಅನಿಸಿತು. ಹಾಗಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವ ನಿರ್ಧಾರ ಮಾಡಿ ‘ಡಿಯರ್ ವಿಕ್ರಮ್’ ಸಿನಿಮಾವನ್ನು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
‘ನಾನು ನಟಿಸಿರುವ ಏಳು ಸಿನಿಮಾಗಳಿವೆ. ಎಲ್ಲವನ್ನೂ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದು ಕಷ್ಟಅನಿಸಿತು. ಹಾಗಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವ ನಿರ್ಧಾರ ಮಾಡಿ ‘ಡಿಯರ್ ವಿಕ್ರಮ್’ ಸಿನಿಮಾವನ್ನು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’. ಹೀಗೆ ಹೇಳಿದ್ದು ನೀನಾಸಂ ಸತೀಶ್. ನಂದೀಶ್ ನಿರ್ದೇಶನದ, ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ, ಸೋನು ಗೌಡ ತಾರಾಗಣವಿರುವ ‘ಡಿಯರ್ ವಿಕ್ರಮ್’ ಸಿನಿಮಾ ಜೂ.30ರಂದು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಕಷ್ಟ ಸುಖ ಹಂಚಿಕೊಂಡರು.
‘ಈ ಸಿನಿಮಾ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವ ಅಂಶಗಳನ್ನು ಇಟ್ಟಿದ್ದೇವೆ. ನಾವು ಹಸಿವಿನಿಂದ ಬಂದವರು. ಹಸಿದವರ ಕತೆ ಹೇಳಿದ್ದೇವೆ. ಕಾಡು ಮೇಡು ಸುತ್ತಿ ಚಿತ್ರೀಕರಣ ಮಾಡಿದ್ದೇವೆ. ನಂದೀಶ್ ಕಷ್ಟಪಟ್ಟು ಜಮೀನು ಅಡವಿಟ್ಟು ಸಿನಿಮಾ ಮಾಡಿದ್ದಾರೆ. ಮೊದಲು ಅವರ ಕಷ್ಟಪರಿಹಾರ ಆಗಬೇಕು. ಅದಕ್ಕೆ ಈ ನಿರ್ಧಾರ ಮಾಡಿದ್ದೇವೆ. ಪರಮ್ ಸರ್ ಒಳ್ಳೆಯ ದುಡ್ಡು ಕೊಟ್ಟು ಸಿನಿಮಾ ಖರೀದಿ ಮಾಡಿದ್ದಾರೆ. ಎಲ್ಲರೂ ವೂಟ್‌ನಲ್ಲಿ ಸಿನಿಮಾ ನೋಡಿ’ ಎಂದರು ಸತೀಶ್.
ನನ್ನ ಮಗಳು ಸಖತ್ ಹೈಪರ್; ಪುತ್ರಿ ಬಗ್ಗೆ ಸತೀಶ್ ನೀನಾಸಂ ಮೊದಲ ಮಾತು
ಕಲರ್ಸ್ ಕನ್ನಡ ವಾಹಿನಿಯ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್, ‘ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಎಲ್ಲಾ ರೀತಿಯ ಕಥೆಗಳು, ವಿಷಯಗಳು ಇರಬೇಕು ಎಂಬ ಉದ್ದೇಶದ ಭಾಗವಾಗಿ ಡಿಯರ್ ವಿಕ್ರಮ್ ರಿಲೀಸ್ ಆಗುತ್ತಿದೆ’ ಎಂದರು. ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕೆ ಎಸ್ ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. 'ಬಿಗಿಯಾದ ಚಿತ್ರಕಥೆ ಹಾಗೂ ಕಲಾವಿದರ ಉತ್ತಮ ನಟನೆಯಿಂದಾಗಿ ಈ ಸಿನಿಮಾ ರೆಗ್ಯುಲರ್ ಕಮರ್ಶಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಕಾಲೇಜು ಕಲಿಸೋ ಪಾಠಗಳೇ ಬೇರೆ, ಜೀವನ ಕಲಿಸೋ ಪಾಠಗಳೇ ಬೇರೆ ಎಂದು ಮನಮುಟ್ಟುವಂತೆ ಹೇಳಲಾಗಿದೆ' ಎನ್ನುತ್ತಾರೆ ನಂದೀಶ್.
ಮಾತ್ರವಲ್ಲದೇ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಬಿಚ್ಚಿಟ್ಟರು. ಶೂಟಿಂಗಿಗೆ ಹೋಗುವಾಗ ಮೊಣಕಾಲೆತ್ತರ ಇದ್ದ ನದಿ ನೀರು ವಾಪಾಸ್ ಬರುವಾಗ ಎದೆ ಮಟ್ಟಕ್ಕೆ ಏರಿದಾಗ ಚಿತ್ರತಂಡಕ್ಕಾದ ಆತಂಕವನ್ನು ಅವರು ನೆನಪಿಸಿಕೊಂಡರು. ಆಗ ಭಯವಾಗಿದ್ದರೂ ಈಗದು ಹಿತವಾದ ನೆನಪು ಎಂದು ಅವರು ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ.
ವರ್ಷಕ್ಕೆ ಎರಡ್ಮೂರು ಅಷ್ಟೆ ಮಾಡೋದು; ಕನ್ನಡದಿಂದ ದೂರ ಉಳಿದಿರುವುದಕ್ಕೆ ಉತ್ತರ ಕೊಟ್ಟ ಶ್ರದ್ಧಾ ಶ್ರೀನಾಥ್
ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ, 'ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ. ಈ ಸಿನಿಮಾ ರಿಲೀಸ್ ಆಗುತ್ತಿರುವುದು ನನಗೆ ತುಂಬ ಖುಷಿ ಆಗಿದೆ. 2017ರಲ್ಲಿ ಈ ಸಿನಿಮಾದ ಕಥೆ ಕೇಳುವಾಗ ನಾನು ಎಷ್ಟು ಎಕ್ಸೈಟ್ ಆಗಿದ್ದೇನೋ, ಈಗಲೂ ಅಷ್ಟೇ ಎಕ್ಸೈಟ್‌ಮೆಂಟ್ ಇದೆ. ಐದು ವರ್ಷದಿಂದಲೂ ಈ ಸಿನಿಮಾ ಬಂದೇ ಬರುತ್ತದೆ ಎಂದು ಎಲ್ಲರಿಗೂ ಹೇಳಿದ್ದೇನೆ. ಈ ಸಿನಿಮಾ ಒಪ್ಪಿಕೊಳ್ಳಲು ಕಥೆಯೇ ಕಾರಣ. ನಾವೆಲ್ಲರೂ ತುಂಬ ತಾಳ್ಮೆಯಿಂದ ಕಾದಿದ್ದೇವೆ ಎಂದು ಅವರು ತಿಳಿಸಿದರು. ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.