ಪುನೀತ್ ಜಾಕೆಟ್‌ಗೆ ಫ್ರೇಮ್ ಹಾಕಿಸಿಟ್ಟ ಸಚಿವರ ಪುತ್ರ; ಜಾಕೆಟ್‌ನ ವಿಶೇಷತೆ ಏನು?

Published : Jun 24, 2022, 03:49 PM IST
ಪುನೀತ್ ಜಾಕೆಟ್‌ಗೆ ಫ್ರೇಮ್ ಹಾಕಿಸಿಟ್ಟ ಸಚಿವರ ಪುತ್ರ; ಜಾಕೆಟ್‌ನ ವಿಶೇಷತೆ ಏನು?

ಸಾರಾಂಶ

ಸಚಿವ ಆನಂದ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಪುನೀತ್ ತೊಟ್ಟಿರೋ ಜಾಕೆಟ್ ಒಂದನ್ನು ಫ್ರೇಮ್ ಹಾಕಿಸಿ ತಮ್ಮ ತಂದೆಯ ( ಸಚಿವರ ಹೊಸಪೇಟೆ ಕಾರ್ಯಲಯ) ಕಚೇರಿಯಲ್ಲಿ ಇಡೋ ಮೂಲಕ ಪುನೀತ್ ಮೇಲಿನ ಪ್ರೀತಿಯನ್ನು ಇಮ್ಮಡಿಗೊಳಿಸಿದ್ದಾರೆ.

ಬಳ್ಳಾರಿ / ವಿಜಯನಗರ:  ಅಭಿಮಾನಿಗಳು ಅಂದ್ರೇ ಹಾಗೆಯೇ ಒಮ್ಮೆ ‌ಒಬ್ಬ ನಟ ಇಷ್ಟವಾದ್ರೇ ಸಾಕು ಅವರು ಬದುಕಿದ್ರು ಇಲ್ಲದೇ ಇದ್ರೂ ಅವರನ್ನು ಪ್ರೀತಿಸುತ್ತಲೇ ಇರುತ್ತಾರೆ. ಇದಕ್ಕೆ ಈಗಾಗಲೇ ಡಾ. ರಾಜಕುಮಾರ್ (Dr.Rajkumar) ಮತ್ತು ಶಂಕರನಾಗ್ (Shankarnag) ಸೇರಿದಂತೆ ಹಲವು ನಾಯಕ ನಟರು ಉದಾಹರಣೆಯಾಗಿದ್ದಾರೆ. ಇದೀಗ ಇದಕ್ಕೆ ಹೊಸ ಸೇರ್ಪಡೆಯಾಗಿ ಡಾ. ಪುನೀತ್ ರಾಜ್ ಕುಮಾರ್ (Puneeth Rajkumar). ಹೌದು, ಹೆಚ್ಚು ಕಡಿಮೆ ಪುನೀತ್ ರಾಜ್‌ಕುಮಾರ್ ನಮ್ಮನ್ನು ಬಿಟ್ಟು ಎಂಟತ್ತು ತಿಂಗಳೇ ಕಳೆದಿವೆ. ಆದ್ರೇ, ಇಂದಿಗೂ ನಿತ್ಯ ಒಂದಲ್ಲೊಂದು ಸಂದರ್ಭದಲ್ಲಿ ಅವರನ್ನು ಜನರು ನೆನೆಸುತ್ತಲೇ ಇರುತ್ತಾರೆ.  ಇದೀಗ ಅವರ ನೆನಪಿಗಾಗಿ ಸಚಿವ ಆನಂದ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಪುನೀತ್ ತೊಟ್ಟಿರೋ ಜಾಕೆಟ್ (Jacket ) ಒಂದನ್ನು ಫ್ರೇಮ್ ಹಾಕಿಸಿ ತಮ್ಮ ತಂದೆಯ ( ಸಚಿವರ ಹೊಸಪೇಟೆ ಕಾರ್ಯಲಯ) ಕಚೇರಿಯಲ್ಲಿ ಇಡೋ ಮೂಲಕ ಪುನೀತ್ ಮೇಲಿನ ಪ್ರೀತಿಯನ್ನು ಇಮ್ಮಡಿಗೊಳಿಸಿದ್ದಾರೆ.

ಸಚಿವರ ಕಚೇರಿಯಲ್ಲಿ ರಾರಾಜಿಸುತ್ತಿರೋ ಪುನೀತ್ ಜಾಕೆಟ್

ಹೌದು, ಹೊಸಪೇಟೆಗೂ ದೊಡ್ಡ ಮನೆ ಕುಟುಂಬಕ್ಕೂ ಎಲ್ಲಿಲ್ಲದ ಸಂಬಂಧ ಅದರಲ್ಲೂ ಪುನೀತ್ ರಾಜ್ಕುಮಾರ್ ಅಂದ್ರೇ ಇಲ್ಲಿಯ ಜನರಿಗೆ ಪಂಚಪ್ರಾಣ. ಪುನೀತ್ ಸವಿನೆನಪಿಗಾಗಿ ಪುನೀತ್ ಅವರ ಪುತ್ಥಳಿಯನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಿದ್ದಾರೆ. ಇದೀಗ ಪುನೀತ್ ತೊಟ್ಟಿರೋ ಜಾಕೆಟ್ ಗೌರವ ಸಲ್ಲಿಸೋ ಮೂಲಕ ಅವರನ್ನು ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ ಅನ್ನೋದನ್ನ ಸಾಭಿತು ಮಾಡ್ತಿದ್ದಾರೆ.

ಗುಮ್ಮಟನಗರಿಯಲ್ಲಿ ಕಾರಹುಣ್ಣಿಮೆ; ಎತ್ತಿನ ಮೇಲೆ ಅಪ್ಪು ಭಾವಚಿತ್ರ ಬಿಡಿಸಿ ರೈತನಿಂದ ಮೆರವಣಿಗೆ

    ಅರಸು ಸಿನಿಮಾದಲ್ಲಿ ತೊಟ್ಟಿರೋ ಜಾಕೆಟ್

    ಅರಸು (Arasu) ಸಿನಿಮಾದಲ್ಲಿ ತೊಟ್ಟ ಜಾಕೆಟ್ ಅನ್ನು ಹೊಸಪೇಟೆಯ ಅಭಿಮಾನಿಗೆ ವಿಶ್ವ ಎನ್ನುವವರಿಗೆ  ಪುನೀತ್ ರಾಜ್ ಕುಮಾರ್ ಕೊಟ್ಟಿದ್ದರು. ಆ ಜಾಕೆಟ್ ಗೆ ಫ್ರೇಮ್ ಹಾಕಿಸಿರೋ ಸಚಿವ ಆನಂದ ಸಿಂಗ್  ಪುತ್ರ  ಸಿದ್ಧಾರ್ಥ್ ಸಿಂಗ್ ಅದನ್ನು ತಮ್ಮ ಕಚೇರಿಯಲ್ಲಿ ಹಾಕಿದ್ದಾರೆ. ಇನ್ನೂ ವಿಶೇಷವೆಂದ್ರೇ ಅಭಿಮಾನಿ ವಿಶ್ವನಿಗೆ ಕೊಟ್ಟ ಜಾಕೆಟ್ ನ್ನು ಪುನೀತ್ ಪುತ್ಥಳಿ ಅನಾವರಣ ವೇಳೆ ಸಿದ್ಧಾರ್ಥ್ ಸಿಂಗ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಸಿದ್ದಾರ್ಥ ಸಿಂಗ್ ಅದನ್ನು ಫ್ರೇಮ್ ಮಾಡಿಸಿ ತಂದೆಯ ಕಚೇರಿಯಲ್ಲಿ ಹಾಕಿಸಿದ್ದಾರೆ.  ಇದು ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸವನ್ನುಂಟು‌ ಮಾಡಿದೆ.

    ಮಕ್ಕಳ ಸಮೇತ 'ವೇದ' ಲಾಂಚ್‌ಗೆ ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್: ಇಲ್ಲಿದೆ ಫೋಟೋಶೂಟ್‌

    ಅಭಿಮಾನಿಗಳು ಪುನೀತ್ ರಾಕ್ ಕಮಾರ್ ಅವರನ್ನು ನಾನಾ ರೀತಿ ಆರಾಧಿಸುತ್ತಾರೆ, ಪೂಜಿಸುತ್ತಾರೆ. ಪುನೀತ್ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಪುನೀತ್ ಫೋಟೋವನ್ನು ದೇವಸ್ಥಾನಕ್ಕೆ ಕೊಂಡೊಯ್ದುು ಪೂಜಿಸುತ್ತಾರೆ.  ಪುನೀತ್ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಾರೆ. ಯಾವೆಲ್ಲ ರೀತಿ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರನ್ನು ಆರಾಧಿಸಬಹುದೊ ಹಾಗೆಲ್ಲ ಆರಾಧನೆ ಮಾಡುತ್ತಾರೆ. ಇದೀಗ ಅಭಿಮಾನಿಯೊಬ್ಬ ಪುನೀತ್ ಧರಿಸಿದ್ದ ಜಾಕೆಟ್ ಅನ್ನು ಫ್ರೇಮ್ ಹಾಕಿಸಿ ಗೋಡೆಯ ಮೇಲಿಟ್ಟಿದ್ದಾರೆ.      

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
    ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?