'ತಿಥಿ' ಸಿನಿಮಾದ ನಟಿ ಪೂಜಾಗೆ ಕೂಡಿ ಬಂತು ಕಂಕಣಭಾಗ್ಯ; ಹುಡುಗ ಯಾರು?

Published : Jun 24, 2022, 03:00 PM IST
'ತಿಥಿ' ಸಿನಿಮಾದ ನಟಿ ಪೂಜಾಗೆ ಕೂಡಿ ಬಂತು ಕಂಕಣಭಾಗ್ಯ; ಹುಡುಗ ಯಾರು?

ಸಾರಾಂಶ

ನಟಿ ಪೂಜಾಗೆ ಕಂಕಣಭಾಗ್ಯ ಕೂಡಿ ಬಂದಿದೆ.  ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪೂಜಾ (Engaged with Engineer Prem) ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲು ಸಿದ್ಧವಾರಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿದ್ದ ಪೂಜಾ ಓದಿನ ಕಡೆ ಹೆಚ್ಚು ಗಮನ ಹರಿಸಿದ್ದರು. ಬಳಿಕ ಸಿನಿಮಾ ಬಿಟ್ಟು  ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡದ ಹೆಮ್ಮೆಯ ಸಿನಿಮಾ ತಿಥಿ (Tithi) ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡದ ಸಿನಿಮಾವನ್ನು ಬಾಲಿವುಡ್ ಸ್ಟಾರ್ಸ್ ಸೇರಿದಂತೆ ಅನೇಕರು ಕೊಂಡಾಡಿದ್ದರು. ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ಈ ಸಿನಿಮಾ ಮೂಲಕ ಅನೇಕ ಪ್ರತಿಭೆಗಳು ಪರಚಿತರಾಗಿದ್ದರು. ನಾಯಕಿ ಪೂಜಾ (Pooja) ಕೂಡ ಒಬ್ಬರು. ಹಳ್ಳಿ ಹುಡುಗಿಯ ಪಾತ್ರದಲ್ಲಿ ಪೂಜಾ ಪ್ರೇಕ್ಷಕರ ಮನಗೆದಿದ್ದರು.  ಈ ಸಿನಿಮಾ ಬಳಿಕ ಪೂಜಾ ಕೆಲವು ಸಿನಿಮಾಗಳಲ್ಲಿ ನಟಸಿದರು ಆದರು ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿಲ್ಲ. ಇದೀಗ ಪೂಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಸಿನಿಮಾ ವಿಚಾರಕ್ಕಲ್ಲ, ಮದುವೆ ವಿಚಾರವಾಗಿ.

ಹೌದು, ನಟಿ ಪೂಜಾಗೆ ಕಂಕಣಭಾಗ್ಯ ಕೂಡಿ ಬಂದಿದೆ.  ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪೂಜಾ (Engaged with Engineer Prem) ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲು ಸಿದ್ಧವಾರಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿದ್ದ ಪೂಜಾ ಓದಿನ ಕಡೆ ಹೆಚ್ಚು ಗಮನ ಹರಿಸಿದ್ದರು. ಬಳಿಕ ಸಿನಿಮಾ ಬಿಟ್ಟು  ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

ಅಂದಹಾಗೆ ಪೂಜಾ ಮದುವೆಯಾಗುತ್ತಿರುವ ಹುಡುಗ ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮ್. ಈಗಾಗಲೇ ಪ್ರೇಮ್ ಜೊತೆ ಪೂಜಾ ನಿಶ್ಚಿತಾರ್ಥ ನಡೆದಿದ್ದು ಸದ್ಯ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಿಥಿ ಸಿನಿಮಾದ ಕಾವೇರಿಗೆ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಶುಭಾಶಯ ಕೋರಿದ್ದಾರೆ. 

ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

 ಡಿಸೆಂಬರ್ 3 ಮತ್ತು 4 ರಂದು ಪೂಜಾ ಮತ್ತು ಪ್ರೇಮ್ ಮದುವೆ ನೆರವೇರಲಿದೆ. ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾ ಮೂಲಕ ರಾಜ್ಯ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ನಂತರ ಹಲವು ಸಿನಿಮಾಗಳಲ್ಲೂ ನಟಿಸಿದರು. ತಿಥಿ ಸಿನಿಮಾಗೆ ಸಿಕ್ಕಷ್ಟು ಯಶಸ್ಸು ನಂತರದ ಸಿನಿಮಾಗಳಿಗೆ ಸಿಗಲಿಲ್ಲ. ಬಳಿಕ ಸಿನಿಮಾ ರಂಗದಿಂದನೇ ದೂರವಾದರು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.  

ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ಜಾತಕ ಹೇಳುತ್ತೆ ಕೇಳಿ

ತಿಥಿ ಸಿನಿಮಾ ಬಳಿಕಾ ಪೂಜಾ ಮೂಕ ಹಕ್ಕಿ, ದಾರಿ ಯಾವುದಯ್ಯ ವೈಕುಂಠಕ್ಕೆ, ನೀವು ಕರೆ ಮಾಡಿದ ಚಂಚಾದಾರು ಬಿಸಿಯಾಗಿದ್ದಾರೆ ಸಿನಿಮಾಗಳಲ್ಲಿ ನಟಿಸಿದ್ದರು. ಈಗಾಗಲೇ ಸಿನಿಮಾದಿಂದ ದೂರ ಇದ್ದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ಮತ್ತೆ ಬಣ್ಣ ಹಚ್ಚುತ್ತಾರಾ, ಸಿನಿಮಾರಂಗಕ್ಕೆ ಬರ್ತಾರಾ ಎಂದು ಕಾದುನೋಡಬೇಕು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್