ಕೆಜಿಎಫ್‌ ಡಬ್ಬಿಂಗ್‌ಗೆ ವಾರ: ಕಾರಣ ರಿವೀಲ್ ಮಾಡಿದ ಯಶ್ ಡಬ್ಬಿಂಗ್ ಆರ್ಟಿಸ್ಟ್ ಸಚಿನ್ ಗೋಲ್!

Published : Apr 26, 2022, 01:51 PM IST
ಕೆಜಿಎಫ್‌ ಡಬ್ಬಿಂಗ್‌ಗೆ ವಾರ: ಕಾರಣ ರಿವೀಲ್ ಮಾಡಿದ ಯಶ್ ಡಬ್ಬಿಂಗ್ ಆರ್ಟಿಸ್ಟ್ ಸಚಿನ್ ಗೋಲ್!

ಸಾರಾಂಶ

ಹಿಂದಿ ಕೆಜಿಎಫ್‌ ಚಾಪ್ಟರ್ 2 ಸಿನಿಮಾ ಡಬ್ಬಿಂಗ್ ಹೇಗಿತ್ತು? ಎಷ್ಟು ದಿನಗಳ ಬೇಕಿತ್ತು ಎಂದು ಡಬ್ಬಿಂಗ್ ಆರ್ಟಿಸ್ಟ್‌ ಸಚಿನ್ ಗೋಲ್‌ ರಿವೀಲ್ ಮಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ ಕೆಜಿಎಫ್. ಹೊಂಬಾಳೆ ಫಿಲ್ಮ್ಸ್‌ (Hombale films) ಸಿನಿಮಾದ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಕೆಜಿಎಫ್‌ ಚಾಪ್ಟರ್ 2 (KGF Chapter 2) ಸಿನಿಮಾ 11 ದಿನಗಳಲ್ಲಿ 883 ಕೋಟಿ ಗಳಿಸಿಕೊಂಡಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಸಾಲಿನಲ್ಲಿ6ನೇ ಸ್ಥಾನ ಪಡೆದುಕೊಂಡಿದೆ. ಈ ವಾರಾಂತ್ಯದ ವೇಳೆಗೆ ಸಿನಿಮಾ1000 ಕೋಟಿ ರು. ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಸಿನಿಮಾ ಯಶಸ್ವಿಯಾಗಿದೆ. ಹಿಂದಿ ಕೆಜಿಎಫ್ ಸಿನಿಮಾದಲ್ಲಿ ಯಶ್‌ಗೆ ಸಚಿನ್ ಗೋಲ್ (Sachin Gole) ಡಬ್ಬಿಂಗ್ ಮಾಡಿದ್ದಾರೆ. ಯಶ್‌ಗೆ ಧ್ವನಿ ನೀಡುವುದು ಎಷ್ಟು ಕಷ್ಟ, ಹೆಚ್ಚಿನ ಸಮಯ ತೆಗೆದುಕೊಳ್ಳುವುದಕ್ಕೆ ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ.

'ಹಿಂದಿ ಕೆಜಿಎಫ್‌ ಚಾಪ್ಟರ್ 1 ಮತ್ತು 2ರಲ್ಲಿ ಯಶ್‌ಗೆ ನಾನು ಡಬ್ಬಿಂಗ್ ಮಾಡಿದ್ದೀನಿ. ಯಶ್‌ ಸರ್‌ ಅವರೇ ನನ್ನನ್ನು ಆಯ್ಕೆ ಮಾಡಿರುವುದು ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಮಾಡಬೇಕು ಅಂದುಕೊಂಡಿದ್ದರು ಅದರೆ ಬಾಹುಬಲಿ ಹಿಂದಿ ಭಾಷೆಗೆ ಬಂದು ರೆಸ್ಪಾನ್ಸ್‌ ನೋಡಿ ಕೆಜಿಎಫ್‌ ಕೂಡ ಮಾಡಲಾಗಿತ್ತು. ಡಬ್ಬಿಂಗ್ ಆರ್ಟಿಸ್ಟ್‌ನ ಆಯ್ಕೆ ಮಾಡುವಾಗ ಅವರಿಗೆ shrill ಅಥವಾ heavy ಧ್ವನಿ ಬೇಡ ಪಕ್ಕಾ ಮುಂಬೈ ಶೈಲಿ ಮಾತನಾಡುವವರು ಬೇಕು ಎಂದರು. ಯಶ್ ಅವರು ಕೆಲವೊಂದು ಚಿತ್ರಗಳಿಗೆ ನಾನು ಈ ಹಿಂದೆ ಡಬ್ ಮಾಡಿದ್ದೆ ಹೀಗಾಗಿ ಕೆಜಿಎಫ್‌ಗೆ ನನ್ನನ್ನು ಆಯ್ಕೆ ಮಾಡಿದರು. ಆಡಿಷನ್‌ ಕೂಡ ಮಾಡಿದ್ದರು' ಎಂದು  ಸಚಿನ್ ಗೋಲ್ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಕನ್ನಡಿಗರಿಗೆ ತೆಲುಗು ಚೆನ್ನಾಗಿ ಅರ್ಥವಾಗುತ್ತೆ, ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡಲ್ಲ: ನಟ ನಾನಿ

'ಕೆಜಿಎಫ್‌ ಚಾಪ್ಟರ್‌ 1 ಹಿಟ್ ಆಗಿರುವ ಕಾರಣ ಡಬ್ಬಿಂಗ್ ಆರ್ಟಿಸ್ಟ್‌ಗಳನ್ನು ಬದಲಾಯಿಸಿಲ್ಲ. ನಮ್ಮ ಡಬ್ಬಿಂಗ್ ಆರ್ಟಿಸ್ಟ್‌ಗಳಲ್ಲಿ ಒಬ್ಬರಾಗಿರುವ ರವಿ ರಾಜೇಶ್‌ ಅಗಲಿದರು ಹೀಗಾಗಿ ಅವರ ಬದಲಿಗೆ ಒಬ್ಬರನ್ನು ಆಯ್ಕೆ ಮಾಡಲಾಗಿತ್ತು. ಹೆಚ್ಚಿಗೆ ಸಮಯ ನೀಡಿ ನೀವು ಡಬ್ಬಿಂಗ್ ಮಾಡಿ ಎಂದು ತಂಡ ಹೇಳಿತ್ತು. ಕೆಜಿಎಫ್ ಚಿತ್ರಕ್ಕೆ ನನ್ನ ಬೆಸ್ಟ್‌ ನೀಡಲೇ ಬೇಕು. ಧ್ವನಿಯಲ್ಲಿ ಯಾವ ಬದಲಾವಣೆ ಕೂಡ ಆಗಿಲ್ಲ. ಒಂದು ಸಿನಿಮಾ ಡಬ್ ಮಾಡುವುದಕ್ಕೆ ನಾನು ಮೂರ್ನಾಲ್ಕು ಗಂಟೆ ತೆಗೆದುಕೊಳ್ಳುವೆ ಆದರೆ ಕೆಜಿಎಫ್ ದೊಡ್ಡ ಪ್ರಾಜೆಕ್ಟ್ ಆಗಿರುವ ಕಾರಣ ನಾನು ಹೆಚ್ಚಿನ ಸಮಯ ತೆಗೆದುಕೊಂಡೆ. ಒಂದು ವಾರ ಡಬ್ಬಿಂಗ್ ಮಾಡಿದ್ದೀನಿ. ಎಲ್ಲೂ ತಪ್ಪಾಗಿಲ್ಲ ಪರ್ಫೆಕ್ಟ್ ಆಗಿ ಡಬ್ಬಿಂಗ್ ಆಗಿದೆ. ಪ್ರತಿಯೊಂದು ಕ್ಯಾರೆಕ್ಟರ್‌ಗೂ ಸಮಯ ತೆಗೆದುಕೊಂಡು ಮಾಡಲಾಗಿದೆ' ಎಂದು ಸಚಿನ್ ಗೋಲ್ ಹೇಳಿದ್ದಾರೆ.

ಮಾತೃಭಾಷೆ ಮಾನ ಉಳಿಸಿದ ನಟ, ಕನ್ನಡಿಗರ ಹೃದಯ ಗೆದ್ದ Jr NTR

'Violence ಡೈಲಾಗ್ ಹೇಳುವುದಕ್ಕೆ ನಾನು 15 ರಿಂದ 20 ಟೇಕ್‌ ತೆಗೆದುಕೊಂಡಿರುವೆ. ಯಶ್ ಸರ್ ಮತ್ತು ಪ್ರಶಾಂತ್ ನೀಲ್ ಸರ್ ನನ್ನ ಡಬ್ಬಿಂಗ್ ಒಪ್ಪಿಕೊಳ್ಳಬೇಕಿತ್ತು. ನಮ್ಮ ಪೋಡಕ್ಷನ್‌ ಹಡ್‌ ಸೂರಿ ಸರ್‌ ಎಲ್ಲಾ ಆಡಿಯೋನ ಪ್ರಶಾಂತ್‌ಗೆ ಸರ್‌ಗೆ ಕಳುಹಿಸಿ ಚೆಕ್ ಮಾಡಿಕೊಳ್ಳುತ್ತಿದ್ದರು. ಪ್ರತಿಯೊಂದು ಪದಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಸರಿ ತಪ್ಪು ಹೇಳಿದ್ದಾರೆ. ಡಬ್ಬಿಂಗ್‌ ಅದ್ಭುತವಾಗಿ ಬರುವುದುಕ್ಕೆ ಅವರು ಕೂಡ ಕಾರಣ' ಎಂದು ಕೆಜಿಎಫ್‌ ಡಬ್ಬಿಂಗ್ ಬಗ್ಗೆ ಮಾತನಾಡಿದ್ದಾರೆ. 

'ನಾನು ಯಶ್ ಸರ್ ಹೊರತು ಪಡಿಸಿ ಧನುಷ್‌ಗೆ ಡಬ್ಬಿಂಗ್ ಮಾಡಿದ್ದೀನಿ. ಮಾರಿ ಭಾಗ ಒಂದು ಮತ್ತು ಎರಡು, ರೌಡಿ ರಾಥೋಡ್, ಚೆನ್ನೈ ಸೆಂಟ್ರಲ್ ಹೀಗೆ ತುಂಬಾ ಸಿನಿಮಾಗಳಿಗೆ ಡಬ್ ಮಾಡಿದ್ದೀನಿ. ದುಲ್ಕರ್ ಸಲ್ಮಾನ್ ಮತ್ತು ಸಂದೀಪ್‌ ಕಿಶನ್‌ಗೆ ಡಬ್ ಮಾಡಿದ್ದೀನಿ, ರಜನಿಕಾಂತ್ ಸರ್ ಅವರ ಒಂದು ಸಿನಿಮಾ ಡಬ್ ಮಾಡಿದ್ದೀನಿ. ನಾನು ನಟನೆ ಕೂಡ ಮಾಡಿದ್ದೀನಿ.ನಾನು  2005ರಿಂದ ಡಬ್ಬಿಂಗ್ ಕೆಲಸ ಮಾಡುತ್ತಿರುವೆ 2015ರಲ್ಲಿ ಬಾಹುಬಲಿ ಸಮಯದಲ್ಲಿ ಡಬ್ಬಿಂಗ್ ಪೀಕ್ ಆಯ್ತು. ಸೌತ್ ಸಿನಿಮಾಗಳು ಜನಪ್ರಿಯತೆ ಪಡೆಯುತ್ತಿದ್ದಂತೆ ಡಬ್ಬಿಂಗ್‌ಗೆ ಬೇಡಿಕೆ ಹೆಚ್ಚಾಗಿದೆ. ಕಲಾವಿದರಿಗೆ ಅನುಭವ ಹೆಚ್ಚಾಗುತ್ತಿದ್ದಂತೆ ಸಂಭಾನೆ ಹೆಚ್ಚಿ ಡಿಮ್ಯಾಂಡ್ ಮಾಡಬಹುದು. ಹೊಸಬರು ಆರಂಭದಲ್ಲಿ ಎಷ್ಟು ಬರುತ್ತೆ ಅಷ್ಟು ತೆಗೆದುಕೊಳ್ಳಬೇಕು.ನನ್ನ ಮುಖ್ಯ ಗೋಲ್ ಇರುವುದು ನಟಿಸುವುದು ಆದರೆ ಅದೊಂದೇ ಮಾಡಿಕೊಂಡು ಮುಂಬೈನಲ್ಲಿ ಜೀವನ ಮಾಡಲು ಕಷ್ಟ. ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದಲೇ ಡಬ್ ಮಾಡುತ್ತಿದ್ದೆವು' ಎಂದಿದ್ದಾರೆ ಸಚಿನ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?