
ಮಂಜು ಕವಿ (Manju Kavi) ನಿರ್ದೇಶನದ ‘ಸಂಸಾರ ಸಾಗರ’ (Samsara Sagara) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಚಿತ್ರದ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಮಂಜು ಕವಿ ಸಿನಿಮಾ ಬಗ್ಗೆ ಮಾತನಾಡಿ, ‘ಮೂವರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಪ್ರೀತಿಸಿ ಮದುವೆಯಾದ ಬಳಿಕ ನಡೆಯುವ ಸಂಸಾರದ ಕಲಹವನ್ನಿಟ್ಟು ಸಿನಿಮಾ ಮಾಡಲಾಗಿದೆ’ ಎಂದರು. ದೀಕ್ಷಿತ್ ಧನುಷ್ ಹಾಗೂ ಆನಂದ್ ಆರ್ಯ ಈ ಚಿತ್ರದ ನಾಯಕರು. ರಕ್ಷ, ಭೂಮಿಕ ಹಾಗೂ ಲಕ್ಷ ಶೆಟ್ಟಿ ನಾಯಕಿಯರು. ಎಸ್ ನಾರಾಯಣ್, ಟೆನ್ನಿಸ್ ಕೃಷ್ಣ, ರೇಖಾದಾಸ್ ಸೇರಿದಂತೆ ಹಿರಿಯ ಕಲಾವಿದರ ದಂಡು ಈ ಚಿತ್ರದಲ್ಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮೊದಲು ನಿರ್ದೇಶಕ ಮಿರಕಲ್ ಮಂಜು ಮಾತನಾಡಿದರು. ಮೊದಲು ಅವಕಾಶ ನೀಡಿದ ನಿರ್ಮಾಪಕ ನಟರಾಜ್ ಹಾಗೂ ಕೋಮಲ ನಟರಾಜ್ ಅವರಿಗೆ ವಂದಿಸುತ್ತೇನೆ. ನನ್ನ ಮೊದಲ ನಿರ್ದೇಶನದ 'ಮಾರಕಾಸ್ತ್ರ' ಚಿತ್ರದ ನಿರ್ಮಾಪಕರು ಇವರೆ. ಈಗ ಎರಡನೇ ಚಿತ್ರ ನಿರ್ದೇಶಿಸಲು ಹೇಳಿದ್ದಾರೆ. ಚಿತ್ರಕ್ಕೆ ಚಾಲನೆ ನೀಡಿದ್ದೇವೆ. ಕೆಲವು ದಿನಗಳ ಬಳಿಕ ಚಿತ್ರೀಕರಣ ಆರಂಭಿಸಲಿದ್ದೇವೆ. ಮೂರು ಜೋಡಿಗಳ ಸುತ್ತ ನಮ್ಮ ಚಿತ್ರದ ಕಥೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾದಾಗ ಇದ್ದ ಪ್ರೀತಿ ನಂತರ ಕಡಿಮೆಯಾಗುತ್ತಿದೆ. ಆ ರೀತಿಯಾದಾಗ ಎಲ್ಲರ ಸಂಸಾರದಲ್ಲಿ ಏನಾಗುತ್ತದೆ? ಎಂಬುದೇ ಚಿತ್ರದ ಕಥಾಹಂದರ.
ವೀರೇಶ್ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಿದ್ದೇಕೆ ಎಂದು ಕಾರಣ ಬಿಚ್ಚಿಟ್ಟ ನಟ ರಾಘಣ್ಣ
ನನಗೆ ಮೊದಲಿಂದಲೂ ದೊಡ್ಡ ಮನೆ ಮೇಲೆ ಪ್ರೀತಿ. ಅಂತಹ ಮನೆಯ ಸರಳ ವ್ಯಕ್ತಿ ರಾಘಣ್ಣ ನಮ್ಮ ಸಿನಿಮಾದಲ್ಲಿ ನಟಿಸುತ್ತಿರುವುದು ನಮಗೆಲ್ಲಾ ಹೆಮ್ಮೆ ಎಂದರು ನಿರ್ದೇಶಕ ಮಿರಕಲ್ ಮಂಜು. ನನಗೆ ನಿರ್ದೇಶಕರು ಹೇಳಿದ ಕಥೆ ಹಿಡಿಸಿತು. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು.ಎಲ್ಲರೂ ಇಷ್ಟಪಡುವ ಕಥೆ ಆಯ್ಕೆ ಮಾಡಿಕೊಂಡಿದ್ದೇವೆ. ಕೌಟುಂಬಿಕ ಕಥಾಹಂದರ ಎನ್ನಬಹುದು. ಉತ್ತಮ ಚಿತ್ರವನ್ನು ಜನಕ್ಕೆ ನೀಡುವ ಆಸೆ ನಮ್ಮದು. ಈ ನಮ್ಮ ಆಸೆ ನಿಮ್ಮ ಮೂಲಕ ಜನಕ್ಕೆ ತಲುಪಲಿ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ನಟರಾಜ್.
ಇತ್ತೀಚಿನ ದಿನಗಳಲ್ಲಿ ಹಿರಿಯ ಪೋಷಕ ಕಲಾವಿದರಿಗೆ ಅಷ್ಟು ಅವಕಾಶ ಸಿಗುತ್ತಿಲ್ಲ. ಈ ಚಿತ್ರದ ನಿರ್ಮಾಪಕ-ನಿರ್ದೇಶಕರು ಸಾಕಷ್ಟು ಹಿರಿಯ ಕಲಾವಿದರಿಗೆ ಅವಕಾಶ ನೀಡಿದ್ದಾರೆ ಅವರಿಗೆ ನನ್ನ ಧನ್ಯವಾದವೆಂದರು ಟೆನ್ನಿಸ್ ಕೃಷ್ಣ. ನನಗೆ ಈ ಚಿತ್ರದಲ್ಲಿ ನಟಿಸಲು ಅವಾಕಾಶ ಕಲ್ಪಿಸಿದ ಟೆನ್ನಿಸ್ ಕೃಷ್ಣ ಹಾಗೂ ಚಿತ್ರತಂಡಕ್ಕೆ ನಾನು ಆಭಾರಿ. ಇದು ನನ್ನ ಹಾಗೂ ಟೆನ್ನಿಸ್ ಕೃಷ್ಣ ಜೋಡಿಯ ನೂರ ಒಂದನೇ ಚಿತ್ರ ಎಂದರು ರೇಖಾದಾಸ್. ಚಿತ್ರದ ಮೂವರು ನಾಯಕರು, ನಾಯಕಿಯರು ಹಾಗೂ ಚಿತ್ರತಂಡದ ಸದಸ್ಯರು 'ಸಂಸಾರ ಸಾಗರ'ದ ಬಗ್ಗೆ ಮಾತನಾಡಿದರು. ಕೋಮಲ್ ನಟರಾಜ್ ಚಿತ್ರದ ನಿರ್ಮಾಪಕರು. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಚಿತ್ರದ ಲಿರಿಕಲ್ ಆಡಿಯೋ ನೋಡಬಹುದು.
Raghavendra Rajkumar: ಅಪ್ಪು ನೆನಪಲ್ಲಿ ಒಂದು ಲಕ್ಷ ಸಸಿ ನೆಡಲು ನಿರ್ಧಾರ
ಚೋಳ ಚಿತ್ರದ ಫಸ್ಟ್ ಲುಕ್ ಬಿಡುಗಡೆ: ಅಂಜನ್ ನಾಯಕನಾಗಿ ನಟಿಸಿರುವ ‘ಚೋಳ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಡಿಎಂ ಸುರೇಶ್ ಈ ಚಿತ್ರದ ನಿರ್ದೇಶಕ, ನಿರ್ಮಾಪಕ. ದಿಶಾ ಪಾಂಡೆ, ರಚನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ತಂದೆ ತಾಯಿಯ ನೆಚ್ಚಿನ ಮಗನಾಗಿ ಇರುವ ನಾಯಕ, ಯಾಕೆ ರೌಡಿ ಆಗುತ್ತಾನೆ ಎಂಬುದು ಚಿತ್ರದ ಕತೆ’ ಎನ್ನುತ್ತಾರೆ ನಿರ್ದೇಶಕರು. ಅವಿನಾಶ್, ಶೋಭರಾಜ್, ದಿನೇಶ್ ಮಂಗಳೂರು, ಅಚ್ಯುತ್ ಕುಮಾರ್, ಧರ್ಮ, ಶಶಿಕಲಾ, ಅಭಿನಯ ಮುಖ್ಯ ಪಾತ್ರಧಾರಿಗಳು. ಲಾಯ್ ವ್ಯಾಲೆಂಟಿನ್ ಸಲ್ಡಾನಾ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.