'ಗಿರ್ಕಿ' ಟೀಸರ್‌ ಬಿಡುಗಡೆ ಮಾಡಿದ ಕಾಮಿಡಿ ಕಿಂಗ್ ಶರಣ್

By Govindaraj S  |  First Published Apr 16, 2022, 10:50 AM IST

ಹಾಸ್ಯ ನಟರಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ತರಂಗ ವಿಶ್ವ ಈಗ ಹೀರೋ ಆಗಿದ್ದಾರೆ. ವಿಲೋಕ್‌ ಮತ್ತೊಬ್ಬ ನಾಯಕ. ಚಿತ್ರದ ಹೆಸರು ‘ಗಿರ್ಕಿ’. ಇತ್ತೀಚೆಗಷ್ಟೆ ಈ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ನಟ ಶರಣ್‌ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.


ಹಾಸ್ಯ ನಟರಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ತರಂಗ ವಿಶ್ವ (Taranga Vishwa) ಈಗ ಹೀರೋ ಆಗಿದ್ದಾರೆ. ವಿಲೋಕ್‌ ಮತ್ತೊಬ್ಬ ನಾಯಕ. ಚಿತ್ರದ ಹೆಸರು ‘ಗಿರ್ಕಿ’ (Girki). ಇತ್ತೀಚೆಗಷ್ಟೆ ಈ ಚಿತ್ರದ ಟೀಸರ್‌ (Teaser) ಬಿಡುಗಡೆ ಆಗಿದೆ. ನಟ ಶರಣ್‌ (Sharan) ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಟೀಸರ್ ಬಿಡುಗಡೆ ಮಾಡಿ ಶರಣ್ ಮಾತನಾಡುತ್ತಾ ವಿಶ್ವ ನನ್ನ ಬಹುಕಾಲದ ಗೆಳೆಯ, ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭ ಅಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. 

ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದುಕಣುತ್ತಿದೆ. ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು. ನಮ್ಮ ಸ್ನೇಹಕ್ಕೆ ಬೆಲೆಕೊಟ್ಟು ಬಂದಿರುವ ಶರಣ್‌ಗೆ ಧನ್ಯವಾದ. ನಾನು ಈ ಬೆಳವಣಿಗೆಗೆ ನನ್ನ ತಂದೆಯ ಪ್ರೋತ್ಸಾಹ ಕಾರಣ. ನಿರ್ಮಾಣದ ಜೊತೆಗೆ ನಾನು ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮೇನಲ್ಲಿ ಬಿಡುಗಡೆಯಾಗಲಿದೆ ಎಂದರು ವಿಶ್ವ. 'ಗಿರ್ಕಿ' ಎಂದರೆ ಸುತ್ತಾಟ ಹಾಗೂ ಪರ್ಯಟನೆ. ಒಂದೇ ಥರಹದ ಕಥೆಯಲ್ಲ.

Tap to resize

Latest Videos

Comedy Gangs: ಇಂದಿನಿಂದ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ 'ಕಾಮಿಡಿ ಗ್ಯಾಂಗ್ಸ್‌'

ಲವ್, ಕಾಮಿಡಿ, ಕೌಟುಂಬಿಕ ಎಲ್ಲಾ ತರಹದ ಮಿಶ್ರಣ ಈ 'ಗಿರ್ಕಿ'. ಹೆಚ್ಚಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಚಿತ್ರ ಚೆನ್ನಾಗಿದೆ. ನೋಡಿ ಹರಸಿ ಎನ್ನುತ್ತಾರೆ ನಿರ್ದೇಶಕ ವೀರೇಶ್ ಪಿ.ಎಂ. ಹಿಂದೆ ಇದೇ ಸಭಾಂಗಣದಲ್ಲಿ ನಾನು ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವೊಂದರ ಸಮಾರಂಭ ನಡೆದಿತ್ತು. ಆ ತಂಡದವರು ನನ್ನ ವೇದಿಕೆಗೆ ಕರೆಯದೆ ಅವಮಾನ ಮಾಡಿದ್ದರು. ಅದನ್ನು ಗಮನಿಸಿದ್ದ ವಿಶ್ವ ಅವರು, ನಿನ್ನನ್ನು ಹೀರೋ ಮಾಡುತ್ತೇನೆ ಎಂದಿದ್ದರು. ಅಂದಂತೆ ಈಗ ಹೀರೋ ಮಾಡಿದ್ದಾರೆ ಅವರಿಗೆ ಹಾಗೂ ಇಡೀ ತಂಡಕ್ಕೆ ನಾನು ಆಭಾರಿ ಎಂದು ನಾಯಕ ವಿಲೋಕ್ ತಿಳಿಸಿದರು. 

ನಾಯಕಿಯರಾದ ದಿವ್ಯ ಉರುಡುಗ (Divya Uruduga) ಹಾಗೂ ರಾಶಿ ಮಹದೇವ್ (Rashi Mahadev) ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಸಂಗೀತದ ಬಗ್ಗೆ ವೀರ ಸಮರ್ಥ್ ಮಾತನಾಡಿದರು. ವಾಸುಕಿ ಭುವನ್‌, ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ವೀರೇಶ್‌ ಪಿ ಎಂ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್‌ ಚಿತ್ರದ ನಾಯಕಿಯರು. ವೀರ ಸಮರ್ಥ್ ಸಂಗೀತ ನೀಡಿದ್ದಾರೆ. ಚಿತ್ರದ ನಿರ್ದೇಶಕ ವೀರೇಶ್‌ ಈ ಹಿಂದೆ ನಿರ್ದೇಶಕ ಯೋಗರಾಜ್‌ ಭಟ್‌ ಅವರ ಚಿತ್ರಗಳಿಗೆ ಕೆಲಸ ಮಾಡಿದ್ದಾರಂತೆ. ರಂಗಾಯಣ ರಘು, ದತ್ತಣ್ಣ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಮತ್ತೆ ಬರುತ್ತಾ ಮಜಾ ಟಾಕೀಸ್; ಟಾಕಿಂಗ್ ಸ್ಟಾರ್ ಸೃಜನ್ ಹೇಳಿದ್ದೇನು?

ಲವ್‌, ಕಾಮಿಡಿ, ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಇಷ್ಟೇ ಅಂಶಗಳ ನಡುವೆ ತಿರುಗುವುದರಿಂದ ಚಿತ್ರಕ್ಕೆ ಗಿರ್ಕಿ ಎನ್ನುವ ಹೆಸರು ಇಡಲಾಗಿದೆ’ ಎಂಬುದು ನಿರ್ದೇಶಕರು ಕೊಡುವ ವಿವರಣೆ. ತರಂಗ ವಿಶ್ವ ಅವರದ್ದು ಪೊಲೀಸ್‌ ದಪ್ಪೆದಾರನ ಪಾತ್ರ. ‘ಮೊದಲ ಬಾರಿಗೆ ಒಂದು ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಪಾತ್ರದ ಹೆಸರು ವಜ್ರಮುನಿ ಎಂಬುದು. ಒಳ್ಳೆಯ ಪಾತ್ರ’ ಎಂಬುದು ತರಂಗ ವಿಶ್ವ ಅವರ ಮಾತು. ಯೋಗರಾಜ್‌ಭಟ್‌ ಹಾಗೂ ಜಯಂತ್‌ ಕಾಯ್ಕಣಿ ಮೂರು ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ನವೀನ್‌ ಅವರ ಛಾಯಾಗ್ರಹಣವಿದೆ.  ಸದ್ಯ ಚಿತ್ರ ಬಿಡುಗಡೆ ಹಂತವನ್ನು ತಲುಪಿದ್ದು , ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ಗಿರ್ಕಿ ರಾರಾಜಿಸಲಿದೆ. 
 

click me!