
ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar) ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಅಮೆರಿಕಾ ಅಮೆರಿಕಾ’ (America America) ಬಿಡುಗಡೆಯಾಗಿ 25 ವರ್ಷ ಆದ ಹಿನ್ನೆಲೆಯಲ್ಲಿ ಚಿತ್ರತಂಡ ಸಿಲ್ವರ್ ಜ್ಯುಬಿಲಿ ಸಂಭ್ರಮ ಆಚರಿಸಿದೆ. ನಾಗತಿಹಳ್ಳಿಯವರು ಇಡೀ ತಂಡವನ್ನು ಒಟ್ಟುಗೂಡಿಸಿ ಪ್ರತಿಯೊಬ್ಬರಿಗೂ ಸ್ಮರಣಿಕೆ ನೀಡುವ ಮೂಲಕ ಅಮೆರಿಕಾ ಅಮೆರಿಕಾ ಸಿನಿಮಾದ ಸವಿನೆನಪನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಾವಿದರಾದ ರಮೇಶ್ ಅರವಿಂದ್ (Ramesh Aravind), ಹೇಮಾ ಪಂಚಮುಖಿ, ಅಕ್ಷಯ್ ಆನಂದ್, ನಿರ್ಮಾಪಕ ನಂದಕುಮಾರ್, ಮನೋಮೂರ್ತಿ, ದತ್ತಣ್ಣ ಭಾಗವಹಿಸಿದ್ದರು. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಂಡಕ್ಕೆ ಶುಭಾಶಯ ಸಲ್ಲಿಸಿದರು.
ಅಮೆರಿಕಾ ಅಮೆರಿಕಾ ಸಿನಿಮಾ ನನ್ನ ಸಿನಿ ಜರ್ನಿಯ ಬೆಸ್ಟ್ ಸಿನಿಮಾಗಳಲ್ಲಿ ಒಂದು. ನಾನು, ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕದಲ್ಲಿ ಕನ್ನಡ ಸಿನಿಮಾ ಮಾಡಬೇಕು ಅಂತಾ ಹೋಗಿದ್ವಿ. ಆದರೆ ಅಮೆರಿಕಾದಲ್ಲಿ ಆದ ಅನುಭವಗಳು ಮರೆಯೋದಿಕ್ಕೆ ಆಗೋಲ್ಲ ಎಂದರು. ಇದರ ಜೊತೆಗೆ ಈ ಸಿನಿಮಾಗಾಗಿ ಎರಡನೇ ಬಾರಿ ವೀಸಾ ಮಾಡಿಸಿದ್ದು, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಾಯಕಿ ಹೇಮಾ ಅವರನ್ನು ಬದಲಾವಣೆ ಮಾಡಬೇಕು ಅಂದಾಗ ಎದುರಾದ ಚಾಲೆಂಜ್ ಮತ್ತು ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ನನ್ನ ಪಾತ್ರದ ರಮೇಶ್ ಅರವಿಂದ್ ತಮ್ಮದೇ ಮಾತುಗಳಲ್ಲಿ ವರ್ಣಿಸಿದರು.
Shivaji Surathkal 2 ಚಿತ್ರದಲ್ಲಿ ರಮೇಶ್ ಅರವಿಂದ್ ಪುತ್ರಿ ಪಾತ್ರದಲ್ಲಿ ಆರಾಧ್ಯ
ನನ್ನ ಜೀವನದಲ್ಲಿ ಮರೆಯಲಾಗದಂತ ದಿನ 11-04-1997. ನಮ್ಮೆಲ್ಲರ ಮೆಚ್ಚಿನ ಚಿತ್ರಕ್ಕೆ 'ಅಮೆರಿಕಾ ಅಮೆರಿಕಾ' ತೆರೆಮೇಲೆ ಬಂದು ಇಂದಿಗೆ 25 ವಸಂತವನ್ನು ಪೂರೈಸಿದೆ. ನಿಮ್ಮ ಮನಸ್ಸಿಗೆ ಶಾಶ್ವತವಾಗಿ ಸಂತೋಷ ಆನಂದ ನೀಡಿದ ದಿನ. ಚಿತ್ರತಂಡದ ಏಲ್ಲಾ ಸದಸ್ಯರಿಗೆ ಅಭಿನಂದನೆಗಳು. ನನಗೆ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕಾಗಿ ನಾಗತೀಹಳ್ಳಿ ಚಂದ್ರಶೇಖರ್, ದತ್ತಣ್ಣ ಅವರಿಗೆ ವಂದನೆಗಳು.ನನ್ನ ತಂದೆತಾಯಿಗೆ ನಾನು ಚಿರಋಣಿ, ಕಲಾರಸಿಕರೆ ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಹೇಮಾ ಪ್ರಭಾತ್ ಹೇಳಿದ್ದಾರೆ.
ನಟ ರಮೇಶ್ ಅರವಿಂದ್ ಅವರು ಕೂಡ ಕಳೆದ ವರ್ಷ 'ಅಮೆರಿಕಾ ಅಮೆರಿಕಾ' ಸಿನಿಮಾದ ಮುಹೂರ್ತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಾಗತೀಹಳ್ಳಿ ಚಂದ್ರಶೇಖರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ 'ಅಮೆರಿಕಾ ಅಮೆರಿಕಾ' ಸಿನಿಮಾದ ವಿಡಿಯೋ ಹಂಚಿಕೊಂಡು, 25 ವರ್ಷದ ಮಧುರ ನೆನಪು. ಕಾಲು ಶತಮಾನದಾದ್ಯಂತ ಕೃತಜ್ಞತೆಗಳು" ಎಂದು ಕಳೆದ ವರ್ಷ ಮುಹೂರ್ತವಾಗಿ 25 ವರ್ಷ ತುಂಬಿತು ಎಂದು ಹೇಳಿದ್ದರು. ಚಿತ್ರದಲ್ಲಿ ರಮೇಶ್ ಅರವಿಂದ್ ಹಾಗೂ ಹೇಮಾ ಪ್ರಭಾತ್, ಅಕ್ಷಯ್ ಆನಂದ್, ಎಚ್‌ಜಿ ದತ್ತಾತ್ರೇಯ, ವೈಶಾಲಿ ಕಾಸರವಳ್ಳಿ, ಸಿಆರ್ ಸಿಂಹ, ಶಿವರಾಮ್ ಮುಂತಾದವರು ನಟಿಸಿದ್ದರು.
ಈ ಕಥೆ ಹೊಳೆದಿದ್ದು ಹೇಗೆ?: ಈ ಅದ್ಭುತ ಸಿನಿಮಾದ ಕಥೆ ಹೊಳೆದಿದ್ದು ಹೇಗೆ ಎನ್ನುವುದನ್ನು ನಾಗತಿಹಳ್ಳಿ ಈ ಹಿಂದೆಯೇ ವಿವರಿಸಿದ್ದರು. 'ನನ್ನ ಪತ್ನಿ ಅಮೆರಿಕಾದಲ್ಲಿ ಸಾಫ್ಟ್ ವೇರ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು, ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ನಾನು ಬೇಸಿಗೆ ರಜೆಯಲ್ಲಿ ಅಮೆರಿಕಾಗೆ ಭೇಟಿ ನೀಡುತ್ತಿದ್ದೆ, ಆಗ ನನಗೆ ಈ ಐಡಿಯಾ ಹೊಳೆಯಿತು' ಎಂದು ಹೇಳಿದ್ದರು.
Ramesh Aravind: 'ಅಮೃತವರ್ಷಿಣಿ' ಚಿತ್ರಕ್ಕೆ 25 ವರ್ಷ: ಸಂತಸ ಹಂಚಿಕೊಂಡ ರಮೇಶ್
75 ಲಕ್ಷದಲ್ಲಿ ತಯಾರಾದ ಸಿನಿಮಾ: ಆ ಕಾಲದಲ್ಲೇ ಅಮೆರಿಕಾಗೆ ಹೋಗಿ ಸಿನಿಮಾ ಮಾಡಿದ ಖ್ಯಾತಿ ನಾಗತಿಹಳ್ಳಿ ಅವರದ್ದು. ಆ ಕಾಲದಲ್ಲಿ ಈ ಸಿನಿಮಾ 75 ಲಕ್ಷದಲ್ಲಿ ತಯಾರಾಗಿತ್ತು. ವಿದೇಶದಲ್ಲಿ ಚಿತ್ರೀಕರಣ ಮಾಡಿ ಬಂದಿದ್ದರೂ ಈ ಚಿತ್ರದ ಬಜೆಟ್ ಆಗಿನ ಸಮಯಕ್ಕೆ ಸುಮಾರು 70 ರಿಂದ 75 ಲಕ್ಷ. ಈ ಚಿತ್ರ 5 ಕೋಟಿ ರೂಪಾಯಿವರೆಗೂ ಬಿಸಿನೆಸ್ ಮಾಡಿದೆ ಎಂದು ವರದಿಗಳು ಹೇಳಿವೆ. ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆಯೂ ಈ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.