ಹೋಗೋಲೇ ನೀನೊಬ್ಬ ಬಾಕಿ ಇದ್ದೆ: ಯಶ್‌ ಬ್ಯಾಡ್‌ ಬಾಯ್‌ ಎಂದ ಪುತ್ರ, ವಿಡಿಯೋ ವೈರಲ್

Published : Jul 17, 2022, 10:33 AM IST
ಹೋಗೋಲೇ ನೀನೊಬ್ಬ ಬಾಕಿ ಇದ್ದೆ: ಯಶ್‌ ಬ್ಯಾಡ್‌ ಬಾಯ್‌ ಎಂದ ಪುತ್ರ, ವಿಡಿಯೋ ವೈರಲ್

ಸಾರಾಂಶ

ಮಗನ ಮುದ್ದಾದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್. ರಾಖಿ ಬಾಯ್‌ನ ರಿಯಲ್ ಎಂದುಕೊಂಡ್ನಾ ಯಥರ್ವ್?

ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಐರಾ ಮತ್ತು ಯಥರ್ವ್‌ ತುಂಟಾಟದ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಸ್ಟಾರ್‌ಗಳ ಜೊತೆ ಅಭಿಮಾನಿಗಳು ಎಷ್ಟು ಕನೆಕ್ಟ್‌ ಆಗಿದ್ದಾರೋ ಅಷ್ಟೇ ಅವರ ಮಕ್ಕಳ ಜೊತೆ ಕನೆಕ್ಟ್‌ ಆಗಿದ್ದಾರೆ. ಒಂದು ತಿಂಗಳಾದರೂ ಐರಾ ಅಥವಾ ಯಥರ್ವ್‌ ಫೋಟೋ ನೋಡಿಲ್ಲ ಅಂದ್ರೆ ಪರ್ಸನಲ್ ಆಗಿ ಮೆಸೇಜ್ ಮಾಡಿ ವಿಚಾರಿಸುತ್ತಾರೆ. ಹೀಗಾಗಿ ಸ್ಟಾರ್ ಕಿಡ್‌ ಲಿಸ್ಟ್‌ನಲ್ಲಿ ಐರಾ ಮೊದಲ ಸ್ಥಾನ ಪಡೆದರೆ ಯಥರ್ವ್‌ ಎರಡನೇ ಸ್ಥಾನ ಪಡೆಯುತ್ತಾನೆ.

'The verdict is out' ಎಂದು ಬರೆದುಕೊಂಡು ರಾಧಿಕಾ ಪಂಡಿತ್ ಪುತ್ರನ ಡಿಫರೆಂಟ್ ವಿಡಿಯೋ ಹಂಚಿಕೊಂಡಿದ್ದಾರೆ. ಅಳುತ್ತಿರುವ ಯಥರ್ವ್‌ ಡಾಡಾ ಬ್ಯಾಡ್‌ ಬಾಯ್ ಮಮ್ಮ ಗುಡ್‌ ಗರ್ಲ್‌ ಎಂದು ಹೇಳಿದ್ದಾನೆ. ಯಶ್‌ ಎಷ್ಟು ಸಲ ಪ್ರಶ್ನೆ ಮಾಡಿದ್ದರೂ ಅದೇ ಕೇಳುತ್ತಿದ್ದ ಕಾರಣ ಹೋಗೋಲೇ ನೀನೋಬ್ಬ ಬಾಕಿ ಇದ್ದೆ ಎಂದು ತಮಾಷೆ ಮಾಡಿದ್ದಾರೆ. ರಾಧಿಕಾರನ್ನು ತಬ್ಬಿಕೊಂಡು ಯಥರ್ವ್‌ ಸಖತ್ ಮುದ್ದಾಗಿ ಕಾಣಿಸುತ್ತಾನೆ, ಅಲ್ಲದೆ ರಾಧಿಕಾ ಕೈಯಲ್ಲಿ ಮಗನ ಟೂಟ್‌ ಬ್ರಶ್‌ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸ್ಟಾರ್ ನಟಿಯಾಗಿ ಕೋಟಿ ಆಸ್ತಿ ಹೊಂದಿದ್ದರೂ ಯಾವುದೇ ಕೊಂಬಿಲ್ಲದೆ ತಾಯಿ ಡ್ಯೂಟಿ ಮಾಡುತ್ತಿರುವುದಕ್ಕೆ ನೀವು ಗ್ರೇಟ್ ಎಂದಿದ್ದಾರೆ. 

ಮದುವೆ ವಾರ್ಷಿಕೋತ್ಸವ; ಮೊಮ್ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ರಾಧಿಕಾ ತಂದೆ-ತಾಯಿ

ಯಶ್‌: ಡಾಡಾ ಇಸ್‌ ಅ ಗುಡ್‌ ಬಾಯ್
ಯಥರ್ವ್‌: ನೋ
ಯಶ್‌: ಮತ್ತೆ ಇನ್ನೇನು?
ಯಥರ್ವ್‌: ಡಾಡಾ ಇಸ್‌ ಅ ಬಾಡ್‌ ಬಾಯ್
ಯಶ್: ಮಮ್ಮಾ?
ಯಥರ್ವ್: ಗುಡ್‌ ಗರ್ಲ್‌
ಯಶ್: ಮಮ್ಮ ಗುಡ್‌ ಗರ್ಲ್‌, ಡಾಡಾ ಬ್ಯಾಡ್‌ ಬಾಯ್‌? ಇಲ್ಲ ಡಾಡಾ ಇಸ್‌ ಅ ಗುಡ್‌ ಬಾಯ್
ಯಥರ್ವ್‌: ನೋ.....
ಯಶ್: ಡಾಡಾ ಗುಡ್ ಬಾಯ್ ಮಗನೇ
ಯಥರ್ವ್‌: ನೋ..
ಯಶ್‌: ಮತ್ತೆ ಇನ್ನೇನು?
ಯಥರ್ವ್‌: ಮಮ್ಮ ಇಸ್‌ ಗುಡ್‌ ಗರ್ಲ್‌ ಮಮ್ಮ ಇಸ್ ಮೈನ್
ಯಶ್: ಡಾಡಾ?
ಯಥರ್ವ್‌: ಬ್ಯಾಡ್ ಬಾಯ್....
ಯಶ್:  ಹೇ...ಯಾಕೆ ಮಗನೇ? ಡಾಡಾನೇ ಗುಡ್‌ ಬಾಯ್ ಎಲ್ಲರಿಗಿಂತ. ಡಾಡಾ ಇಸ್‌ ದಿ ಬೆಸ್ಟ್‌...
ಯಥರ್ವ್‌: ನೋ
ಯಶ್‌: ಡಾಡಾ ಇಸ್‌ ತುಂಬಾ ಸ್ವೀಟ್‌...
ಯಥರ್ವ್‌: ನೋ
ಯಶ್: ಡಾಡಾ ಇಸ್‌ ಟೂ ಗುಡ್
ಯಥರ್ವ್‌: ನೋ
ಯಶ್: ಮತ್ತೆ?
ಯಥರ್ವ್‌: ಡಾಡಾ ಇಸ್‌ ಅ ಬ್ಯಾಡ್ ಬಾಯ್
ಯಶ್: ಮಮ್ಮಾ?
ಯಥರ್ವ್‌: ಗುಡ್‌ ಗರ್ಲ್
ಯಶ್: ಹೋಗೋಲೇ ಬಂದ್ಬಿಟ್ಟಾ ಇವ್ನೊಬ್ಬ ಬಾಕಿ ಇದ್ದ

ಮಕ್ಕಳ ಗ್ಯಾಂಗ್ ಜೊತೆ ರಾಧಿಕಾ ಪಂಡಿತ್; 'ಬಚ್ಚಾ ಪಾರ್ಟಿ' ಎಂದ ಯಶ್ ಪತ್ನಿ

ಅಪ್ಪ ಮಗನ ತುಂಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಥರ್ವ್‌ ಸ್ಟೈಲಿಶ್ ಆಗಿ ಮಾತನಾಡುವ ಇಂಗ್ಲಿಷ್‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ತಾಯಿಯೇ ಮೊದಲ ದೇವರು ಎಂದು ಹೇಳುವ ಹಾಗೆ ರಾಧಿಕಾ ಇಬ್ಬರೂ ಮಕ್ಕಳಿಗೆ ಒಳ್ಳೆಯ ಟ್ರೈನಿಂಗ್ ಕೊಟ್ಟಿದ್ದಾರೆ ಎನ್ನಬಹುದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!