
ಬೆಂಗಳೂರು (ಜು. 15): ಮಯೂರ ಖ್ಯಾತಿಯ ಹಿರಿಯ ಮೇಕಪ್‌ಮನ್ ಕೇಶವಣ್ಣ ವಿಧಿವಶರಾಗಿದ್ದಾರೆ. ಮೇಕಪ್ ಮ್ಯಾನ್ ಎಂ ಎಸ್ ಕೇಶವಣ್ಣ 53 ವರ್ಷಗಳ ಕಾಲ ಕಲಾ ಸೇವೆ ಮಾಡಿದ್ದಾರೆ. ತಂದೆ ಮೇಕಪ್ ಸುಬ್ಬಣ್ಣ ರಾಜ್‍ಕುಮಾರ್ ರವರ ಮೇಕಪ್ ಮ್ಯಾನ್ ಆಗಿದ್ದರು. ಕೇಶವಣ್ಣ 25 ರಿಂದ 30 ವರ್ಷಗಳ ಕಾಲ ರಾಜ್ ಕುಮಾರ್ ರವರ ಕಂಪನಿಯಲ್ಲಿ ಮೇಕಪ್ ಕಲಾವಿದರಾಗಿದ್ದರು. ಈಶ್ವರಿ ಪ್ರೊಡಕ್ಷನಲ್ಲೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಸಿದ್ದರು.
ಇವರ ಮೊದಲ ಮೇಕಪ್ ಮಾಡಿದ್ದು ನರಸಿಂಹ ರಾಜುರವರಿಗೆ, ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರ ಮುನಿ ಹೀಗೆ ಹಲವಾರು ಕಲಾವಿದರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ನಾನಿನ್ನ ಬಿಡಲಾರೆ ಚಿತ್ರಕ್ಕೆ ಅನಂತ್ ನಾಗ್ ರವರಿಗೆ ದೆವ್ವದ ಮೇಕಪ್ ಮಾಡಿದ್ದು ಹಾಗು ಇದೇ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗಿ ಆ ಚಿತ್ರಕ್ಕೂ ಕೇಶವಣ್ಣ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ
ಸಾಕ್ಷಾತ್ಕಾರ, ಹಲಿಯಹಾಲಿನ ಮೇವು, ಮಯೂರ, ಮುರುವರೆ ವಜ್ರ, ಎಲ್ಲಿದ ಪ್ರೇಮ ಲೋಕ, ಶಾಂತಿ ಕ್ರಾಂತಿ ಸಂಗೊಳ್ಳಿ ರಾಯಣ್ಣ ಚಿತ್ರಗಳಲ್ಲಿ ಅವರು ಮೇಕಪ್ ಮ್ಯಾನಾಗಿ ಕೆಲಸ ಮಾಡಿದ್ದು ಕೊನೆಯದಾಗಿ ಕುರುಕ್ಷೇತ್ರ ಚಿತ್ರದಲ್ಲಿ ಕೆಲಸ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.