ಮೇಘನಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ರಿಯಾಲಿಟಿ ಶೋ ಮುಗಿಸಿ ಮೇಘನಾ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. 'ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನೌನ್ಸ್ ಮಾಡಿದ್ದ ಸಿನಿಮಾಗೆ ಮತ್ತೆ ಕಿಕ್ ಸ್ಟಾರ್ಟ್ ಕೊಡಲಾಗಿದೆ. ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ ಬಳಿಕ ಮೇಘನಾ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಅಂದಹಾಗೆ ಚಿರು ಪತ್ನಿ ಹೊಸ ಸಿನಿಮಾ ಘೋಷಣೆ ಮಾಡಿ ಅನೇಕ ತಿಂಗಳುಗಳೇ ಆಗಿತ್ತು. ಆದರೆ ನಂತರ ಆ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಬಳಿಕ ಮೇಘನಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಕಿರುತೆರೆಯ ರಿಯಾಲಿಟಿ ಶೋನಲ್ಲಿ ಮೇಘನಾ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಡಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಮೇಘನಾ ಕಿರುತೆರೆ ಅಭಿಮಾನಿಗಳ ಮುಂದೆ ಬಂದಿದ್ದರು. ಪತಿ ಚಿರಂಜೀವಿ ಅಗಲಿಕೆಯ ನಂತರ ಮೇಘನಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿರಲಿಲ್ಲ. ಡಾನ್ಸಿಂಗ್ ಶೋ ಮೂಲಕ ಸರ್ಜಾ ಕುಟುಂಬದ ಜೊತೆ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈ ಶೋ ಅದ್ಭುತವಾಗಿ ಮೂಡಿಬಂದಿತ್ತು. ಮೊದಲ ಜಡ್ಜ್ ಆಗಿದ್ದ ಮೇಘನಾ ಕಿರುತೆರೆ ಅಭಿಮಾನಿಗಳ ಮನಗೆದಿದ್ದರು.
ಇದೀಗ ಮೇಘನಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ರಿಯಾಲಿಟಿ ಶೋ ಮುಗಿಸಿ ಮೇಘನಾ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. 'ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನೌನ್ಸ್ ಮಾಡಿದ್ದ ಸಿನಿಮಾಗೆ ಮತ್ತೆ ಕಿಕ್ ಸ್ಟಾರ್ಟ್ ಕೊಡಲಾಗಿದೆ. ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಜುಲೈ 7, ಒಂದು ಸಣ್ಣ ಆಲೋಚನೆ ನಿಜವಾಯಿತು. ನಾವು ಪ್ರಾಜೆಕ್ಟ್ ಅನ್ನು ಅಕ್ಟೋಬರ್ 17, 2021ರಲ್ಲಿ ಅನೌನ್ಸ್ ಮಾಡಿದ್ದೆವು. ಸಾಕಷ್ಟು ಚರ್ಚೆಗಳ ನಂತರ, ಸ್ಕ್ರಿಪ್ಟ್ ಮರುನಿರ್ಮಾಣ, ಲುಕ್ ಟೆಸ್ಟ್ ನಂತರ ಒಟ್ಟಾಗಿ ಸೇರಿ ಕನಸನ್ನು ಪ್ರಾರಂಭಿಸಿದ್ದೇವೆ. ಈ ಸಿನಿಮಾ ನನಗೆ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ಯಾಮರಾ, ರೋಲಿಂಗ್, ಆಕ್ಷನ್' ಎಂದು ಹೇಳಿದ್ದಾರೆ.
ಚಿರು ಸ್ಥಾನವನ್ನು ರಾಯನ್ ಕೂಡ ತುಂಬಿಸಲು ಆಗೋಲ್ಲ: ಮೇಘನಾ ರಾಜ್
ಅಂದಹಾಗೆ ಮೇಘನಾ ಹೊಸ ಸಿನಿಮಾಗೆ ಪನ್ನಗಾಭರಣ ನಿರ್ಮಾಣ ಮಾಡುತ್ತಿದ್ದಾರೆ. ವಿಶಾಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು ಪಿಬಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದವರು ಸೇರಿ ಈ ಚಿತ್ರವನ್ನು ತಯಾರಿಸುತ್ತಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ.
ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎನ್ನುವ ರಾಯನ್; ಮೇಘನಾ ಪುತ್ರನ ಕ್ಯೂಟ್ ವಿಡಿಯೋ ವೈರಲ್
ಮೇಘನಾ ರಾಜ್ ಹೊಸ ಸಿನಿಮಾಗೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಸಿನಿ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ಅಂದಹಾಗೆ ಮೇಘನಾ ಹೊಸ ಸಿನಿಮಾದಲ್ಲಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಮೇಘನಾ ಕೊನೆಯದಾಗಿ ಕುರುಕ್ಷೇತ್ರ ಮತ್ತು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾದಲ್ಲಿ ನಟಿಸಿದ್ದರು. ಕುರುಕ್ಷೇತ್ರ ಸಿನಿಮಾದಲ್ಲಿ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ ಬಳಿಕ ಮೇಘನಾ ಮೊದಲ ಬಾರಿಗೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.