
ಪುನೀತ್ (Puneeth Rajkumar) ಅಗಲಿಕೆ ನಂತರ ತೆರೆಕಂಡ ಜೇಮ್ಸ್ ಚಿತ್ರದ ಅವರ ಪಾತ್ರಕ್ಕೆ ಹೊಸ ತಂತ್ರಜ್ಞಾನದ ಮೂಲಕ ಅಪ್ಪು ಅವರ ಧ್ವನಿಯನ್ನೇ ನೀಡಲಾಗಿದೆ. ಕೊನೆಗೂ ತಮ್ಮ ನೆಚ್ಚಿನ ನಟನ ಧ್ವನಿಯಲ್ಲೇ ಸಿನಿಮಾ ನೋಡಬಹುದಾಗಿದೆ. ಒಟ್ಟು 130 ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಸಿನಿಮಾ ಪ್ರದರ್ಶನ ಆಗುತ್ತಿದೆ. ಮುಂದಿನ ವಾರದಿಂದ ಹೆಚ್ಚುವರಿಯಾಗಿ 30 ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ತಯಾರಿ ಮಾಡಿಕೊಂಡಿದ್ದಾರೆ.
‘ನಾನು ಕೂಡ ಪ್ರೇಕ್ಷಕರ ಜತೆಗೆ ಸಿನಿಮಾ ನೋಡಿದರೆ. ಸಿನಿಮಾ ನೋಡಿ ಹೊರ ಬರುತ್ತಿದ್ದವರು ಭಾವುಕರಾಗಿದ್ದು ಕಂಡಿತು. ಅಭಿಮಾನಿಗಳು ನಮ್ ಬಾಸ್ ಧ್ವನಿಯನ್ನು ಮತ್ತೆ ಕೇಳಿಸಿದ್ದಕ್ಕೆ ಧನ್ಯವಾದಗಳು ಎಂದರು. ಅಪ್ಪು ಅವರ ಕುಟುಂಬ ಈ ಹೊಸ ತಂತ್ರಜ್ಞಾನ ನೋಡಿ ಖುಷಿ ಪಟ್ಟಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.
ಏಪ್ರಿಲ್ 14ರಂದು ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ಗೆ ಎಂಟ್ರಿ ಕೊಟ್ಟಿದೆ. ಈ ನಡುವೆ ಸಿನಿಮಾತಂಡ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಪುನೀತ್ ರಾಜ್ ಕುಮಾರ್ ಅವರ ಧ್ವನಿಯಲ್ಲೇ ಸಿನಿಮಾವನ್ನು ರೀ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಅತ್ಯುತ್ತಮ ತಂತ್ರಜ್ಞಾನ ಬಳಸಿ ಪುನೀತ್ ಧ್ವನಿ ಮಿಕ್ಸ್ ಮಾಡಿ ಮತ್ತೆ ಬಿಡುಗಡೆ ಮಾಡುತ್ತಿದೆ ಸಿನಿಮಾತಂಡ.
ಇದೇ ಶುಕ್ರವಾರ ಏಪ್ರಿಲ್ 22ರಿಂದ ಜೇಮ್ಸ್ ಸಿನಿಮಾ ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಬಗ್ಗೆ ನಿರ್ದೇಶಕ ಚೇತನ್ ಮಾಹಿತಿ ನೀಡಿದ್ದಾರೆ. ಜೊತೆಗೆ ಜೇಮ್ಸ್ ಸಿನಿಮಾವನ್ನು ಪುನೀತ್ ಧ್ವನಿಯಲ್ಲೇ ಬಿಡುಗಡೆ ಮಾಡಲು ಸಹಾಯ ಮಾಡಿದ್ದು ತೆಲುಗು ಸ್ಟಾರ್ ಶ್ರೀಕಾಂತ್ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಅಂದಹಾಗೆ ತೆಲುಗು ನಟ ಶ್ರೀಕಾಂತ್ (Srikanth) ಜೇಮ್ಸ್ ಸಿನಿಮಾದಲ್ಲೂ ನಟಿಸಿದ್ದಾರೆ. 'ಸಿನಿಮಾಗೆ ಶಿವರಾಜ್ ಕುಮಾರ್ (Shivarajkumar) ಧ್ವನಿ ನೀಡಿದ ಬಳಿಕ ಶ್ರೀಕಾಂತ್ ನಿರ್ದೇಶಕ ಚೇತನ್ ಅವರಿಗೆ ಕರೆ ಮಾಡಿ, ಮೂರು ವರ್ಷಗಳಿಂದ ಸತತವಾಗಿ ಪ್ರಯತ್ನ ಪಾಡುತ್ತಿದ್ದಾರೆ. ಹೈದರಾಬಾದ್ ಗೆ ಬಂದು ಸೌಂಡ್ ಇಂಜಿನಿಯರ್ ಶ್ರೀನಿವಾಸ್ ಸರ್ ಅವರು ರಿಸರ್ಚ್ ಮಾಡ್ತಾ ಇದ್ದಾರೆ ಇವರಿಗೆ ಧ್ವನಿ ಕಳುಹಿಸಿ ಎಂದು ಹೇಳಿದರು. ಬಳಿಕ ನಾವು ಅಪ್ಪು ಸರ್ ಅವರ ಸಂದರ್ಶನಗಳು, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ, ಅವರ ಸಿನಿಮಾಗಳ ವಾಯ್ಸ್ ಗಳನ್ನು ಕಲೆಕ್ಟ್ ಮಾಡಿ ಕಳುಹಿಸಿದೆವು. ಮೂರು ವರ್ಷಗಳಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗಿದೆ. ಮೂರು ದಿನಗಳ ಹಿಂದೆ ಕರೆ ಮಾಡಿ ಅಪ್ಪು ಸರ್ ಧ್ವನಿ ಸಿಕ್ಕಿದೆ ಎಂದು ಕರೆ ಮಾಡಿದರು. ನಿಜವಾಗಲು ಶಾಕ್ ಆಯ್ತು. ವಾಯ್ಸ್ ಕ್ಲಿಪ್ಪಿಂಗ್ ಸಹ ಕಳುಹಿಸಿದ್ದರು. ಅದನ್ನು ಕೇಳಿ ನಿಜಕ್ಕೂ ಕಣ್ಣಲ್ಲಿ ನೀರು ಬಂತು. ನಮ್ಮ ದೇವರ ಧ್ವನಿ ಕೇಳಿದ ಹಾಗೆ ಆಯ್ತು. ಹೈದರಾಬಾದ್ ಗೆ ಹೋದ್ವಿ ಅಲ್ಲಿ ವಾಯ್ಸ್ ಮಿಕ್ಸ್ ಮಾಡಿ ಸಂಪೂರ್ಣ ಸಿನಿಮಾ ನೋಡಿದ್ವಿ ಮನಸ್ಸಿಗೆ ಬೇರೆ ತರ ಅನುಭವವಿದು' ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.