ವಸಿಷ್ಠ ಸಿಂಹ ಮುಂದೆ 'Love...ಲಿ' ಸಿನಿಮಾ: ಮತ್ತೊಂದು ಚಿತ್ರಕ್ಕೆ ಹೀರೋ ಆದ ಕಂಚಿನ ಕಂಠದ ನಟ

By Govindaraj SFirst Published Apr 22, 2022, 9:50 PM IST
Highlights

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಲವ್‌ ಲಿ’ ಎಂಬುದು. ಈಗಷ್ಟೆ ಚಿತ್ರಕ್ಕೆ ಮುಹೂರ್ತ ಆಗಿದೆ. 

ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vasishta Simha) ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಲವ್‌ ಲಿ’ (Loveli) ಎಂಬುದು. ಈಗಷ್ಟೆ ಚಿತ್ರಕ್ಕೆ ಮುಹೂರ್ತ ಆಗಿದೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ವಸಿಷ್ಠ ಸಿಂಹ ಅವರ ಈ ಹೊಸ ಚಿತ್ರವನ್ನು ಚೇತನ್‌ ಕೇಶವ್‌ (Chetan Keshav) ನಿರ್ದೇಶನ ಮಾಡುತ್ತಿದ್ದಾರೆ. ‘ಮಫ್ತಿ’ ನರ್ತನ್‌ ಜತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ರೌಡಿಸಂ ಕತೆಯಾಗಿದ್ದು, ಕತ್ತಲ ಜಗತ್ತಿನ ಹೊಸ ಲೋಕವನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಆ್ಯಕ್ಷನ್‌ ಜತೆಗೆ ರೋಮ್ಯಾಂಟಿಕ್‌ ಪ್ರೇಮ ಕತೆಯೂ ಇದೆ. ಈ ಕಾರಣಕ್ಕೆ ಚಿತ್ರಕ್ಕೆ ‘ಲವ್‌ ಲಿ’ ಎನ್ನುವ ಹೆಸರಿದೆ ಎಂಬುದು ವಸಿಷ್ಠ ಸಿಂಹ ಅವರ ಮಾತುಗಳು. ಒಂದು ಕಡೆ ಖಳನಾಯಕನಾಯಕನಾಗಿ, ಮತ್ತೊಂದು ಕಡೆ ನಾಯಕನಾಗಿ ಮಿಂಚುತ್ತಿರುವ ವಸಿಷ್ಠ ಅವರ ಕೈಯಲ್ಲಿ ಹೆಡ್‌ ಬುಷ್‌, ಸಿಂಬಾ, ತಲ್ವಾರ್‌ ಪೇಟೆ, ಚಿಟ್ಟೆ, ಕಾಲಚಕ್ರ ಮುಂತಾದ ಚಿತ್ರಗಳ ಜತೆಗೆ ಈಗ ‘ಲವ್‌ ಲಿ’ ಕೂಡ ಸೇರಿಕೊಂಡಿದೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್‌ ಶುರುವಾಗಲಿದೆ. ಸದ್ಯದಲ್ಲಿ ಉಳಿದ ತಾರಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ. ಮುಹೂರ್ತದ ಅಂಗವಾಗಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ.

'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಟ್ರೇಲರ್ ರಿಲೀಸ್ ಮಾಡಿದ Vasishta Simha

ಸಿಂಹಾ ಆಡಿಯೋ ಸಂಸ್ಥೆ ಸ್ಥಾಪಿಸಿದ ವಸಿಷ್ಠ ಸಿಂಹ: ವಸಿಷ್ಠ ಸಿಂಹ ತಮ್ಮ ಬಹುದಿನಗಳ ಕನಸಾಗಿದ್ದ ಸಿಂಹಾ ಆಡಿಯೋ ಸಂಸ್ಥೆಯನ್ನು ಆರಂಭಿಸಿದ್ದಾರೆ. ಹಂಸಲೇಖ, ಧನಂಜಯ ಸಿಂಹಾ ಆಡಿಯೋ ಸಂಸ್ಥೆಯ ಲೋಗೋವನ್ನು ಅನಾವರಣ ಮಾಡಿ ಸಂಸ್ಥೆಗೆ ಚಾಲನೆ ನೀಡಿದ್ದಾರೆ. ಸಿಂಹಾ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಮೊದಲ ಹಾಡಾಗಿ ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ನೀನೇ ಬೇಕು ಹಾಡು ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಂಸಲೇಖ, ‘ವಸಿಷ್ಠ ನನ್ನ ವಿದ್ಯಾರ್ಥಿಯಾಗಿದ್ದ. ಕಂಠ ಚೆನ್ನಾಗಿದೆ ನಟನೆ ಕಡೆಗೂ ಆಸಕ್ತಿ ತೋರಿಸು ಎಂದಿದ್ದೆ. 

ವಸಿಷ್ಠ ಮೂಲಕ ಕನ್ನಡಕ್ಕೆ ಟೋನ್‌ ವಾಯ್‌್ಸ ಬಂದಿದೆ. ಈಗ ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾನೆ. ಶುಭವಾಗಲಿ’ ಎಂದರು. ಧನಂಜಯ್‌, ‘ನೀನೇ ಬೇಕು ಹಾಡಿನಲ್ಲಿ ವಸಿಷ್ಠ ಲವರ್‌ ಬಾಯ್‌ ಆಗಿ ಮುದ್ದಾಗಿ ಕಾಣಿಸುತ್ತಿದ್ದಾನೆ. ಲವರ್‌ ಬಾಯ್‌ ಪಾತ್ರದಲ್ಲಿ ಇಷ್ಟುಚೆನ್ನಾಗಿ ಕಾಣಿಸ್ತಾನೆ ಅಂತ ಗೊತ್ತಿರಲಿಲ್ಲ. ನನ್ನ ಗೆಳೆಯ ತುಂಬಾ ಒಳ್ಳೆಯ ನಟ. ಅಷ್ಟುಒಳ್ಳೆಯ ನಟ ನನ್ನ ಗೆಳೆಯ ಅನ್ನುವುದೇ ನನಗೆ ಹೆಮ್ಮೆ’ ಎಂದರು. ವಸಿಷ್ಠ ಸಿಂಹ, ‘ರಾತ್ರಿ ರೈಲು ಹತ್ತಿ ಬೆಂಗಳೂರಿಗೆ ಬಂದವನು ನಾನು. ಹಂಸಲೇಖ ಗುರುಗಳನ್ನು ನೋಡಬಹುದಲ್ಲ ಅಂತ ಅವರು ನಡೆಸುತ್ತಿದ್ದ ಸಮ್ಮರ್‌ ಕ್ಯಾಂಪ್‌ ಸೇರಿದ್ದೆ. 

ವಿಭಿನ್ನ ಪಾತ್ರದಿಂದ ವೀಕ್ಷಕರು ನೋಡುವ ರೀತಿ ಬದಲಾಗುತ್ತದೆ: Vasishta Simha

ಆ ಕ್ಯಾಂಪ್‌ನ ಸರ್ಟಿಫಿಕೇಟ್‌ ಕೊಡುವಾಗ ಸ್ಟುಡಿಯೋಗೆ ಬಂದು ನೋಡು ಅಂದ್ರು. ಸ್ಟುಡಿಯೋಗೆ ಹೋಗಿ ಹಾಡಿದೆ. 5 ವರ್ಷ ಜೊತೆಗಿರುವ ಸ್ಟಾರ್‌ ಮಾಡ್ತೀನಿ ಅಂದ್ರು. ಅಲ್ಲಿಂದ ಜರ್ನಿ ಇಲ್ಲಿಯವರೆಗೆ ಬಂದಿದೆ. ಕಾಲಚಕ್ರ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ವಿಲನ್‌ ಆಗಿದ್ದವನು ಹೀರೋ ಆಗುವಾಗ ಕೆಲವು ನೆಗೆಟಿವ್‌ ಮಾತು ಕೇಳಿ ಬರುತ್ತದೆ. ಆ ಮಾತುಗಳೇ ನನಗೆ ಸ್ಫೂರ್ತಿ. ನಮ್ಮ ಆಡಿಯೋ ಸಂಸ್ಥೆ ಸಿಂಹಾ ಆಡಿಯೋಗೆ ನಿಮ್ಮೆಲ್ಲರ ಬೆಂಬಲ ಇರಲಿ’ ಎಂದರು. ಕಾಲಚಕ್ರ ಚಿತ್ರದ ನಿರ್ದೇಶಕ, ನಿರ್ಮಾಪಕ ಸುಮಂತ್‌ ಕ್ರಾಂತಿ, ನಾಯಕಿ ರಕ್ಷಾ, ಛಾಯಾಗ್ರಹಣ ಎಲ್‌ಎನ್‌ ಸೂರಿ ಮತ್ತು ಚಿತ್ರತಂಡ ಹಾಜರಿತ್ತು.

click me!