Raghavendra Rajkumar: ಏ.29ಕ್ಕೆ ರಾಘಣ್ಣ ನಟನೆಯ 'ರಾಜಿ' ಬಿಡುಗಡೆ

By Govindaraj SFirst Published Apr 22, 2022, 9:12 PM IST
Highlights

ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘ರಾಜಿ’ ಚಿತ್ರ ಏಪ್ರಿಲ್‌ 29ಕ್ಕೆ ತೆರೆಗೆ ಬರುತ್ತಿದೆ. ಪ್ರೀತಿ ಎಸ್‌ ಬಾಬು ನಿರ್ದೇಶನದ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭ ಕೋರಿದ್ದು ಶ್ರೀನಗರ ಕಿಟ್ಟಿ, ವಿಜಯ್‌ ರಾಘವೇಂದ್ರ.

ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ನಟನೆಯ ‘ರಾಜಿ’ (Raaji) ಚಿತ್ರ ಏಪ್ರಿಲ್‌ 29ಕ್ಕೆ ತೆರೆಗೆ ಬರುತ್ತಿದೆ. ಪ್ರೀತಿ ಎಸ್‌ ಬಾಬು (Preethi S Babu) ನಿರ್ದೇಶನದ ಈ ಚಿತ್ರದ ಆಡಿಯೋ ಬಿಡುಗಡೆ (Audio Release) ಮಾಡಿ ಶುಭ ಕೋರಿದ್ದು ಶ್ರೀನಗರ ಕಿಟ್ಟಿ (Srinagar Kitty), ವಿಜಯ್‌ ರಾಘವೇಂದ್ರ (Vijay Raghavendra). ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದ ವರ್ಷ ಅಕ್ಟೋಬರ್ 30 ರಂದು ನಿಗದಿಯಾಗಿತ್ತು. ನನ್ನ ತಮ್ಮ ಅಪ್ಪು (Puneeth Rajkumar) ಕ್ಲ್ಯಾಪ್ ಮಾಡಲು ಬರಬೇಕಿತ್ತು. 

ಆದರೆ ಅಕ್ಟೋಬರ್ 29 ಅಪ್ಪು ನಮ್ಮನ್ನು ಬಿಟ್ಟು ದೂರವಾದ. ಒಂದು ನಿಮಿಷ ನನ್ನ ಎದೆ ನಿಂತು. ಮತ್ತೇ ಬಡೆಯಲು ಆರಂಭವಾದ ದಿನವದು. ಆನಂತರ ಕೆಲವು ದಿನಗಳ ನಂತರ ಮುಹೂರ್ತ (Muhurta) ನಡೆಯಿತು. ಅದೇ ಕಂಠೀರವ ಸ್ಟುಡಿಯೋದಲ್ಲಿ (Kanteerava Studio). ಅಪ್ಪು ಸಮಾಧಿ ಬಳಿ. ಈಗ ಕಾಕತಾಳೀಯವಾಗಿ ಇದೇ ಇಪ್ಪತ್ತೊಂಭತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಪ್ಪುವಿನ ಏಳನೇ ತಿಂಗಳ ಪುಣ್ಯತಿಥಿಯಂದು. ಸಿನಿಮಾ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಪ್ರೇಕ್ಷಕರ ಹೇಳುತ್ತಾರೆ ಎಂದರು ರಾಘವೇಂದ್ರ ರಾಜಕುಮಾರ್. ನಾನು ಇಪ್ಪತ್ತೈದು ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿದ್ದೀನಿ. 

Latest Videos

Raghavendra Rajkumar: ಸಂಸಾರ ಸಾಗರ ಚಿತ್ರದ ಮುಹೂರ್ತ: ಪ್ರಮುಖ ಪಾತ್ರದಲ್ಲಿ ರಾಘಣ್ಣ

ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೀನಿ. ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಪಿ.ವಿ.ಆರ್ ಸ್ವಾಮಿ ಅವರ ಮೂಲಕ ರಾಘಣ್ಣ ಅವರ ಪರಿಚಯವಾಯಿತು. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲಾ ದೂರವಾಯಿತು. ಅವರ ಮೇಲಿನ ಗೌರವ ಇಮ್ಮಡಿಯಾಯಿತು. ಅಂತಹ ಸರಳ ವ್ಯಕ್ತಿ ನಮ್ಮ ರಾಘಣ್ಣ. ದಾಂಪತ್ಯದ ಮಹತ್ವ ಸಾರುವ ಕಥೆ ಇದು. 'ರಾಜಿ' ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್, ಜಿ ಎಂದರೆ ಜೀವಿತ ಎಂದು. ಬಸವರಾಜು ಮೈಸೂರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. 

Raghavendra Rajkumar: ನನಗೆ ಮೂರು ಹೆಣ್ಣುಮಕ್ಕಳು, ತಮ್ಮನ ಹೆಂಡತಿಯೂ ಒಬ್ಬ ಮಗಳು!

ಇದೇ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕಿ, ನಟಿ ಪ್ರೀತಿ ಎಸ್ ಬಾಬು ತಿಳಿಸಿದರು. ಚಿತ್ರದಲ್ಲಿ ಏಳು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಡಾ. ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಬರೆದಿದ್ದಾರೆ ಎಂದು ಸಂಗೀತ ಸಂಯೋಜಕ ಉಪಾಸನ ಮೋಹನ್ ತಿಳಿಸಿದರು.ಚಿತ್ರ ನಿರ್ಮಾಣವಾದ ಬಗ್ಗೆ ಬಸವರಾಜ್ ಮೈಸೂರು ಹಾಗೂ ತಮ್ಮ ಅಭಿನಯದ ಕುರಿತು ಪ್ರತಾಪ್ ಸಿಂಹ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಶ್ರೀನಗರ ಕಿಟ್ಟಿ, ವಿಜಯ ರಾಘವೇಂದ್ರ, ಡಾ||ವಿ.ನಾಗೇಂದ್ರ ಪ್ರಸಾದ್, ಕೆಂಪ್ಪಣ್ಣ ಚೆಟ್ಟಿ, ಮುನಿರಾಜು ರಾಮಯ್ಯ, ತಬಲಾ ನಾಣಿ, ಸಾಗರ್ ಪುರಾಣಿಕ್ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.

click me!