ಗರ್ಭಿಣಿ ಮಿಲನಾ ನಾಗರಾಜ್ ಈ ಸಮಯದಲ್ಲಿಯೂ ವರ್ಕೌಟ್ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆ ದಿನನಿತ್ಯದ ಜೀವನಶೈಲಿ ಹೇಗಿರುತ್ತೆ ಎಂಬುದನ್ನು ಸಹ ಮಿಲನಾ ನಾಗರಾಜ್ ಹೇಳಿಕೊಂಡಿದ್ದಾರೆ.
ಬೆಂಗಳೂರು: ಚಂದನವನದ ನಟ ಡಾರ್ಲಿಂಗ್ ಕೃಷ್ಣನ (Actor Darling Krishna) ಮನದರಸಿ ಮಿಲನಾ ನಾಗರಾಜ್ (Actress Milana Nagaraj) ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಗರ್ಭಿಣಿ ಮಿಲನಾ ನಾಗರಾಜ್ ಹೇಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ವಿಡಿಯೋದಲ್ಲಿ ಜಿಮ್ ನಲ್ಲಿ ಮಿಲನಾ ವರ್ಕೌಟ್ ಮಾಡುತ್ತಿರೋದನ್ನು ಗಮನಿಸಬಹುದು. ವಿಡಿಯೋ ನೋಡಿದ ಅಭಿಮಾನಿಗಳು ಹುಷಾರು ಅಕ್ಕ ಎಂದು ಸಲಹೆ ನೀಡಿದ್ದಾರೆ. ಅದೇ ರೀತಿ ಹಲವು ಅಭಿಮಾನಿಗಳು ಆರೋಗ್ಯ ಕಾಪಾಡಿಕೊಳ್ಳಲಿ. ನಾವು ಜೂನಿಯರ್ ಕೃಷ್ಣ ಅಥವಾ ಬೇಬಿ ಮಿಲನಾಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಬೇಬಿಮೂನ್ ಪ್ರವಾಸದಿಂದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಿಂದಿರುಗಿದ್ದರು.
ನಮಗೆ ಶುಭ ಹಾರೈಸಿರುವ ಎಲ್ಲರಿಗೂ ಮೊದಲು ನಾನು ಧನ್ಯವಾದಗಳನ್ನು ಹೇಳುತ್ತೇನೆ. ಈ ಸಮಯದಲ್ಲಿ ಹೇಗೆ ಆರೋಗ್ಯದ ಕಾಪಾಡಿಕೊಳ್ಳುತ್ತೀರಿ ಎಂದು ಕೇಳುತ್ತಿದ್ದೀರಿ. ಅದಕ್ಕೆ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದೇನೆ. ಯೋಗ ಮತ್ತು ಪ್ರಾಣಾಯಾಮ ನನ್ನ ಜೀವನದ ಬಹುದೊಡ್ಡ ಭಾಗವಾಗಿದೆ. ಮೊದಲು ಮೂರು ತಿಂಗಳು ವೈದ್ಯರ ಸಲಹೆ ಮೇರೆಗೆ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಿದ್ದೆ. ಈಗ ಯೋಗ ಶಿಕ್ಷಕರ ನೇತೃತ್ವದಲ್ಲಿ ಆಸನ ಮಾಡಿದ್ದೇನೆ ಎಂದು ಮಿಲನಾ ನಾಗರಾಜ್ ಹೇಳಿಕೊಂಡಿದ್ದಾರೆ.
ಮಗು ಆದ್ಮೇಲೆ 3 ತಿಂಗಳು ಊರಿನಲ್ಲಿರುತ್ತೀನಿ, 5 ತಿಂಗಳು ತುಂಬುತ್ತಿದ್ದಂತೆ ಲವ್ ಮಾಕ್ಟೇಲ್ 3 ಶುರು: ಮಿಲನಾ ನಾಗರಾಜ್
ಇದೆಲ್ಲದರ ಜೊತೆಗೆ ಸ್ವಿಮ್ಮಿಂಗ್, ಧ್ಯಾನ, ಪುಸ್ತಕ ಓದೋದು ಮತ್ತು ಸಂಗೀತ ಕೇಳುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಡಾರ್ಲಿಂಗ್ ಕೃಷ್ಣ ಹಾಗೂ ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ ಎಂದು ಹೇಳುವ ಮೂಲಕ ಪತಿ ತಮಗಾಗಿ ಸಮಯ ಮೀಸಲಿಟ್ಟಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ನಾನು ಈ ಅಭ್ಯಾಸವನ್ನು ಮುಂದುವರಿಸುತ್ತೇನೆ. ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆಯನ್ನು ಆನಂದಿಸುತ್ತಿದ್ದೇನೆ ಎಂದು ಮಿಲನಾ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೇಬಿಮೂನ್‌ಗೆ ವಿದೇಶಕ್ಕೆ ಕೃಷ್ಣ ಮತ್ತು ಮಿಲನಾ ತೆರಳಿದ್ದರು. ವಿದೇಶದಿಂದ ಬಂದ ಬಳಿಕ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದೀಗ ನಾಲ್ಕು ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.ಮಾರ್ಚ್ ತಿಂಗಳಲ್ಲಿ ಮಿಲನ ಮತ್ತು ಕೃಷ್ಣ ತಾವು ಪ್ರೆಗ್ನೆಂಟ್ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಈ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ಪೋಷಕರಾಗಲಿದ್ದಾರೆ.
Photos: ಗರ್ಭಿಣಿ ಪತ್ನಿ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾಂಟಿಕ್ ಫೋಟೋಶೂಟ್