ಜೈಲೂಟ ತಿಂದು ನಟ ದರ್ಶನ್‌ಗೆ ಫುಡ್ ಪಾಯಿಸನ್? ಅಧಿಕಾರಿಗಳು ಮನೆಯೂಟಕ್ಕೆ ನೋ ಅಂದಿದ್ಯಾಕೆ?
ಇಡೀ ರಾಜ್ಯಕ್ಕೆ ಶಾಕ್ ಕೊಟ್ಟ ಸುದ್ದಿ ಅಂದ್ರೆ ದರ್ಶನ್- ರೇಣುಕಾಸ್ವಾಮಿ ಕೊಲೆ ಪ್ರಕರಣ. ಈ ಪ್ರಕರಣದಲ್ಲಿ ಒಟ್ಟು 17 ಜನರನ್ನು ಪೊಲೀಸ್ ಅಂದರ್ ಮಾಡಿಕೊಂಡಿದ್ದಾರೆ. ನಾಲ್ಕು ಮಂದಿ ತುಮಕೂರು ಜೈಲಿನಲ್ಲಿ, ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 13 ಮಂದಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದಿನದಿಂದ ದಿನಕ್ಕೆ ತನಿಖೆ ಕಠಿಣವಾಗುತ್ತಿದ್ದು. ಈ ಸಮಯದಲ್ಲಿ ನಟ ದರ್ಶನ್‌ಗೆ ಜೈಲೂಟದಿಂದ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ಹೀಗಾಗಿ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ಬೇಡಿ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಮನೆ ಊಟ ಮಾತ್ರವಲ್ಲ ಹಾಸಿಗೆ ಹಾಗೂ ಪುಸ್ತಕ ತರಿಸಿಕೊಳ್ಳಲು ಕೋರಿದ್ದಾರೆ ಎನ್ನಲಾಗಿದೆ.
ದರ್ಶನ್ ಪರ ವಕೀಲರು ಸಲ್ಲಿಸಿರುವ ರಿಟ್ ಅರ್ಜಿ ಅನೇಕರ ಕೈ ಸೇರಿದೆ. ಈ ಅರ್ಜಿಯಲ್ಲಿ ಮನೆಯಲ್ಲಿ ತಯಾರಿಸಿರುವ ಊಟ, ಬಟ್ಟೆ, ಚಮಚ, ಹಾಸಿಗೆ ಮತ್ತು ಪುಸ್ತಕಗಳು..ಇದ್ಯಾವುದನ್ನು ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಅಲ್ಲದೆ ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್‌ಗೆ ಅಜೀರ್ಣವಾಗಿದೆ ಊಟ ಸೇವಿಸಲು ಅತಿಸಾರವಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವಿಪರೀತ ಹೊಟ್ಟೆ ನೋವಿಗೆ ಕ್ಯಾನ್ಸರ್ ಟೆಸ್ಟ್ ಮಾಡಿಸಿದ ನಟಿ ಶಾನ್ವಿ; ಆ 6 ತಿಂಗಳಲ್ಲಿ ಆಗಿದ್ದೇನು?
ಜೈಲಿನಲ್ಲಿ ನೀಡುತ್ತಿರುವ ಆಹಾರದಿಂದ ದರ್ಶನ್‌ಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ ಎಂದು ಜೂಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಇದರಿಂದ ದರ್ಶನ್ ತುಂಬಾ ತೂಕ ಕಡಿಮೆಯಾಗಿದೆ ಎನ್ನಲಾಗಿದೆ. ಜೈಲು ಅಧಿಕಾರಿಗಳ ನಿರಾಕರಣೆ ಕಾಣೂನುಬಾಹಿರ. ಹೀಗೇ ಮುಂದುವರೆದರೆ ದರ್ಶನ್ ತೂಕ ಕಳೆದುಕೊಳ್ಳಬಹುದು ಇದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈ ಕೋರ್ಟ್ ಮುಂದೆ ಮನವಿ ಮಾಡೋದು ಹೊರತು ಪಡಿಸಿ ಮತ್ತೊಂದು ದಾರಿ ಇಲ್ಲ. ಹೀಗಾಗಿ ದರ್ಶನ್ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ ರೀಲ್ಸ್ ರೇಷ್ಮಾ; ಸಣ್ಣಗಾಗೋಕೆ ಅನ್ನ ಬಿಟ್ಟಿದ್ದೇ ಕಾರಣವಾಯ್ತಾ?
ಕೆಲವೊಂದು ಖಾಸಗಿ ವೆಬ್ ಸೈಟ್‌ಗಳು ದರ್ಶನ್ 10 ಕೆಜಿ ಸಣ್ಣಗಾಗಿದ್ದಾರೆ ಎಂದು ವರದಿ ಮಾಡಿದ್ದಾರೆ. ಅಲ್ಲದೆ ಕರಾವಳಿ ಚಿತ್ರದಿಂದ ದರ್ಶನ್ ಹೊರ ಬಂದಿದ್ದಾರೆ ಆ ಸ್ಥಾನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬರಲಿದ್ದಾರೆ ಎಂದು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ಅಭಿಮಾನಿಗಳು ಆತಂಕ ಮತ್ತು ಬೇಸರ ಮನೆ ಮಾಡಿದೆ.