ತುಂಬಾ ಆರೋಗ್ಯವಾಗಿರುವ ನನಗೆ ಸಮಸ್ಯೆ ಆಗಿದ್ದೇ ದೊಡ್ಡ ಶಾಕ್. ನಿಜಕ್ಕೂ ಹುಟ್ಟು ಹಬ್ಬದ ದಿನ ಏನ್ ಆಯ್ತು?
2012ರಲ್ಲಿ ಲವ್‌ಲೀ ಅಂತ ತೆಲುಗು ಸಿನಿಮಾ ಮಾಡಿ 2014ರಲ್ಲಿ ಚಂದ್ರಲೇಖ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸುಂದರಿ ಶಾನ್ವಿ ಶ್ರೀವಾಸ್ತವ್. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಾನ್ವಿ ತಮ್ಮ ಹುಟ್ಟುಹಬ್ಬದ ದಿನ ಎದುರಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
'ಡಿಸೆಂಬರ್‌ನಲ್ಲಿ ನನ್ನ ಹುಟ್ಟುಹಬ್ಬದ ಮರು ದಿನ ನನ್ನ ಕಿಬ್ಬೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು ಒಂದು ಇಂಚು ಕೂಡ ಸರಿಸಲು ಆಗುತ್ತಿಲ್ಲ. ತಕ್ಷಣವೇ ಡಾಕ್ಟರ್‌ನ ಭೇಟಿ ಮಾಡಿದೆ, ಸೋನೋಗ್ರಾಫಿ ಮಾಡಿಸಬೇಕು ಎಂದರು ಏಕೆಂದರೆ ಅಂದು ಶನಿವಾರ ಆಗಿತ್ತು 1 ಗಂಟೆ ನಂತರ ವರ್ಕಿಂಗ್ ಇರಲ್ಲ ಎಂದು. ಆದಷ್ಟು ಬೇಗ MRI ಮತ್ತು ಕ್ಯಾನ್ಸರ್ ಟೆಸ್ಟ್ ಮಾಡಿ ಎಂದುಬಿಟ್ಟರು. ನನಗೆ ಏನೂ ಅರ್ಥವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ತಲೆ ಕೆಡಿಸಿಕೊಳ್ಳಬೇಡಿ ರಿಪೋರ್ಟ್ ಬರಲಿ ಸದ್ಯಕ್ಕೆ ಮಲ್ಟಿಪಲ್ ಸಿಸ್ಟ್‌ಗಳು ಇದೆ ಅಂದ್ರು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ ಶಾನ್ವಿ.
ಆಸ್ಪತ್ರೆಗೆ ದಾಖಲಾದ ರೀಲ್ಸ್ ರೇಷ್ಮಾ; ಸಣ್ಣಗಾಗೋಕೆ ಅನ್ನ ಬಿಟ್ಟಿದ್ದೇ ಕಾರಣವಾಯ್ತಾ?
'ಆಯ್ತು ಎಲ್ಲಾ ರೀತಿ ಸ್ಕ್ಯಾನ್ ಮತ್ತು ಟೆಸ್ಟ್ ಮಾಡಿಸುತ್ತೀನಿ ಅದಾದ ಮೇಲೆ ಏನು ಎಂದು ಪ್ರಶ್ನೆ ಮಾಡಿದಾಗ ಬಹುಷ ಆಪರೇಷನ್ ಮಾಡಬೇಕಾಗುತ್ತದೆ ನಿಮ್ಮ ಓವರಿಸ್ (ಅಂಡಾಶಯಗಳು) ತೆಗೆಯಬೇಕು ಅಂದರು. ಅಯ್ಯೋ ನಿನ್ನೆ ನನ್ನ ಹುಟ್ಟುಹಬ್ಬವಿತ್ತು ನಾನು ತುಂಬಾ ಖುಷಿಯಾಗಿದ್ದೆ ಈಗ ನೋಡಿದರೆ ಈ ತರ ಸುದ್ದಿ ಕೊಡುತ್ತಿದ್ದಾರೆ. ಅಲ್ಲದೆ ಸಿಸ್ಟ್ ಬರ್ಸ್ಟ್ ಆಗಿದ್ದ ಕಾರಣ ನೋವು ಹೆಚ್ಚಾಗಿತ್ತು' ಎಂದು ಶಾನ್ವಿ ಹೇಳಿದ್ದಾರೆ.
22ನೇ ವಯಸ್ಸಿಗೆ ಮದ್ವೆ ಮಾಡಿಬಿಟ್ಟರು, ಸುಮಾರು ಒಡವೆ ಕಳೆದುಬಿಟ್ಟಿದ್ದೀನಿ: ನಟ ಕೋಮಲ್
'ರಾತ್ರಿ 10 ಗಂಟೆಗೆ ರಿಪೋರ್ಟ್ ಬಂತು ಅದನ್ನು ನೋಡಿದ ಮೇಲೆ ಆಪರೇಷನ್ ಬೇಡ ಅಂದರು. ಖುಷಿ ಆಯ್ತು ಆದರೆ ಗುಳ್ಳೆಗಳು (Cyst)ಗಾಗಿ ಮಾತ್ರೆಗಳು ಹೆಚ್ಚಾಗಿ ಸ್ವೀಕರಿಸುವ ಪರಿಸ್ಥಿತಿ ಎದುರಾಯ್ತು. ಸುಮಾರು 6 ತಿಂಗಳ ಕಾಲ ತುಂಬಾ ಮಾತ್ರೆಗಳನ್ನು ತೆಗೆದುಕೊಂಡೆ ಅದಾದ ಮೇಲೆ ಮಾತ್ರೆಗಳ ಸೈಡ್ ಎಫೆಕ್ಟ್‌ಗಳು ಹೆಚ್ಚಿತ್ತು. ಅಲ್ಲಿ ಅರ್ಥವಾಯ್ತು ಮೊದಲು ನನ್ನ ಆರೋಗ್ಯವನ್ನು ನೋಡಿಕೊಳ್ಳಬೇಕು. ತಲೆಯಲ್ಲಿ ಆಲೋಚನೆಗಳು ಬದಲಾದರೆ ನಮ್ಮ ದೇಹದಲ್ಲಿ ಗೊತ್ತಾಗುತ್ತದೆ. ಕೇವಲ 6 ತಿಂಗಳಲ್ಲಿ ಏನು ನೀನು 10 ವರ್ಷ ಚಿಕ್ಕವಳಂತೆ ಕಾಣಿಸುತ್ತಿರುವೆ ಎಂದು ಅನೇಕರು. ಅಲ್ಲಿಂದ ಒಂದು ರೂಟಿನ್‌ಗೆ ಫಿಕ್ಸ್ ಆದೆ' ಎಂದಿದ್ದಾರೆ ಶಾನ್ವಿ.