ಇಂದು ತೆರೆಕಾಣುತ್ತಿರುವ ಕರಟಕ ದಮನಕ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ ಪ್ರಭುದೇವ. ನಟನೆ, ನಿರ್ದೇಶನ, ನಿರ್ಮಾಣ ಎಲ್ಲವನ್ನೂ ಬಲ್ಲ ಅವರು ಸದ್ಯ ನ್ಯೂಜಿಲ್ಯಾಂಡಿನಲ್ಲಿದ್ದಾರೆ. ಹಲವು ವರುಷಗಳ ನಂತರ ಕನ್ನಡಕ್ಕೆ ಬರುತ್ತಿರುವ ಬಗ್ಗೆ ಮಾತಾಡಿಸಿದಾಗ ಅವರು ಹೇಳಿದ್ದಿಷ್ಟು.
ಜೋಗಿ
1. " ನನ್ನ ತಂದೆ ಇಲ್ಲಿಯವರೇ. ಹೀಗಾಗಿ ಕನ್ನಡದ ಬಗ್ಗೆ ನನಗೆ ಮೊದಲಿನಿಂದಲೂ ಪ್ರೀತಿ. ಕನ್ನಡದಲ್ಲಿ ಸಿನಿಮಾ ಮಾಡುವುದು ಕೂಡ ಇಷ್ಟ. ಅಂಥದ್ದೊಂದು ಮರು ಅವಕಾಶಕ್ಕಾಗಿ ಕಾಯುತ್ತಿದ್ದೆ. ರಾಕ್‌ಲೈನ್ ವೆಂಕಟೇಶ್ ಅವರೂ ನನಗೆ ಆಪ್ತರೇ. ಹೀಗೆ ನಮ್ಮವರ ಜತೆ ಸಿನಿಮಾ ಮಾಡುವ ಅವಕಾಶ ಬಂದಾಗ ಬಿಡುವುದುಂಟೇ? ತಕ್ಷಣವೇ ಒಪ್ಪಿಕೊಂಡೆ.
2 ಯೋಗರಾಜ ಭಟ್ ಬಹಳ ಒಳ್ಳೆಯ ನಿರ್ದೇಶಕರು. ಅದಕ್ಕಿಂತ ಒಳ್ಳೆಯ ಮನುಷ್ಯರು. ಅವರು ಕತೆ * ಹೇಳುವ ಕ್ರಮವೂ ವಿಭಿನ್ನವಾಗಿರುತ್ತದೆ. ಸೆಟ್‌ನಲ್ಲಿ ನಮ್ಮನ್ನು ಮಾತಾಡಿಸುವ ರೀತಿ, ನಮಗೆ ಸೀನ್ ವಿವರಿಸುವ ಕ್ರಮ ಎಲ್ಲವೂ ಆಪ್ತವಾಗಿದೆ. ಅವರ ಜತೆಗೆ ಕೆಲಸ ಮಾಡುವುದೇ ಒಂದು ಸುಯೋಗ.
'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!
3 ಎಲ್ಲ ಕಡೆಯೂ ಪಾನ್ ಇಂಡಿಯಾ ವೇವ್ ಇದೆ. ಅದರ ನಡುವೆಯೇ ನಾವು ನಮಗೆ ಬೇಕಾದ ಸಿನಿಮಾ ಮಾಡಬೇಕು. ಬದಲಾವಣೆ ಆಗುತ್ತಿರುತ್ತದೆ. ಅದನ್ನು ಒಪ್ಪಿಕೊಳ್ಳಬೇಕು. ಗೋ ವಿತ್ ದ ಫ್ಲೋ ಅನ್ನೋದು ನನ್ನ ನಂಬಿಕೆ. ನಾವಿಲ್ಲಿ ಏಕಾಂಗಿಯಾಗಿ ಏನನ್ನೂ ಬದಲಾಯಿಸಲು ಆಗುವುದಿಲ್ಲ. ಹೀಗಾಗಿ ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು. ಬದಲಾವಣೆ ತಾನಾಗಿ ಆಗುತ್ತಿರುತ್ತದೆ.
4 ಎಲ್ಲರೂ ನನ್ನನ್ನು ನಿಮ್ಮ ತಾರುಣ್ಯದ ಗುಟ್ಟೇನು ಅಂತ ಕೇಳುತ್ತಾರೆ. ಅದಕ್ಕೆ ' ಅಂತ ಗುಟ್ಟುಗಳಿಲ್ಲ. ನಾನು ಹೇಗಿದ್ದೇನೋ ಹಾಗಿದ್ದೇನೆ. ಕೆಲಸ ಮಾಡುತ್ತೇನೆ. ಪಾರ್ಟಿ ಮಾಡುವುದಿಲ್ಲ. ಈ ವೃತ್ತಿಯಲ್ಲಿರುವಾಗ ಮೈಕಟ್ಟು ಚೆನ್ನಾಗಿಟ್ಟುಕೊಳ್ಳುವುದು ಅಗತ್ಯ. ಹಾಗೆ ನೋಡಿದರೆ ಅನೇಕ ನಟರು ನನಗಿಂತ ಚೆನ್ನಾಗಿದ್ದಾರೆ. ನನಗಿಂತ ತಾರುಣ್ಯವಂತರಾಗಿದ್ದಾರೆ.
ಶಿವಣ್ಣನ ಪ್ರೇಮ ಗೀತೆಗೆ ಪ್ರಭುದೇವ ಆಕ್ಷನ್ ಕಟ್: ಕರಕಟ ದಮನಕ ಲವ್ ಸಾಂಗ್ ರಿಲೀಸ್!
5 ಚಿತ್ರ ರಂಗದ ಬದಲಾಗುತ್ತಿದೆ ನಿಜ. ಸಿನಿಮಾ ನೋಡುವ ಕ್ರಮ ಬದಲಾಗುತ್ತಿದೆ. ಓಟಿಟಿ ಬಂದಿದೆ. ದೊಡ್ಡ ಪರದೆಗಿಂತ ಮೊಬೈಲ್ ಸ್ಟೀನು ಜನರಿಗೆ ಹತ್ತಿರವಾಗುತ್ತಿದೆ. ಇವೆಲ್ಲದರ ನಡುವೆಯೇ ನಾವು ಸಿನಿಮಾ ಮಾಡಬೇಕು. ನಮಗೆ ಬೇರೆ ಆಯ್ಕೆ ಇಲ್ಲ. ಹಾಗೆಯೇ ಒಳ್ಳೆಯ ಕಂಟೆಂಟಿಗೂ ಬೇರೆ ಆಯ್ಕೆ ಇಲ್ಲ. ನಾವು ಒಳ್ಳೆಯ ಕಂಟೆಂಟ್ ಕೊಟ್ಟರೆ ನೋಡುತ್ತಾರೆ, ನೋಡಿಯೇ ನೋಡುತ್ತಾರೆ. ಆ ನಂಬಿಕೆ ನನಗಿದೆ. ನಾನು ಮೊದಲೇ ಹೇಳಿದ ಹಾಗೆ ಬದಲಾಗುತ್ತಿರುವ ಕಾಲದ ಜತೆಗೇ ನಾವು ಹೋರಾಡಬೇಕು. ಆ ಸವಾಲು ಎದುರಿಸಿ ಗೆಲ್ಲಬೇಕು. ಗೋ ವಿತ್ ದಿ ಫ್ಲೋ- ಅದೇ ಅಂತಿಮ ವಾಕ್ಯ.
6 ಕರಟಕ ದಮನಕ ಚಿತ್ರದಲ್ಲಿ ನನ್ನದು ಡೋಂಟ್ ಕೇರ್‌ವ್ಯಕ್ತಿಯ ಪಾತ್ರ. ನನಗೆ ಬಹಳ ಇಷ್ಟವಾದ ಪಾತ್ರವೂ ಹೌದು. ಕತೆಯೂ ಚೆನ್ನಾಗಿದೆ.