ರಾಮಾಚಾರಿ 2.0 ನಟಿಗೆ ಕಂಕಣ ಭಾಗ್ಯ: ಸೈಲೆಂಟಾಗಿ ನಡೆಯಿತು ನಿಶ್ಚಿತಾರ್ಥ- ಹುಡುಗ ಯಾರು?

Published : Mar 07, 2024, 09:58 PM IST
ರಾಮಾಚಾರಿ 2.0 ನಟಿಗೆ ಕಂಕಣ ಭಾಗ್ಯ: ಸೈಲೆಂಟಾಗಿ ನಡೆಯಿತು ನಿಶ್ಚಿತಾರ್ಥ- ಹುಡುಗ ಯಾರು?

ಸಾರಾಂಶ

ರಾಮಾಚಾರಿ 2.0 ನಟಿ, ನನ್ನರಸಿ ರಾಧೆ ಸೀರಿಯಲ್ ಖ್ಯಾತಿಯ ಕೌಸ್ತುಭ ಮಣಿಯ  ನಿಶ್ಚಿತಾರ್ಥ ನಡೆದಿದೆ. ಹುಡುಗ ಯಾರು?  

ನನ್ನರಸಿ ರಾಧೆ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಕೌಸ್ತುಭ ಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಧೆಯಾಗಿ ಮನೆಮನ ಗೆದ್ದಿದ್ದ ನಟಿ ಇದೀಗ  ಸಿದ್ಧಾಂತ್ ಸತೀಶ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅದರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಹಿಂದೆ ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಕೌಸ್ತುಭ ಮಣಿ. ನನ್ನರಸಿ ರಾಧೆ ಸೀರಿಯಲ್​ ಬಳಿಕ  ‘ಗೌರಿ ಶಂಕರ’ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಮದುವೆ ನಿಶ್ಚಯವಾಗುತ್ತಿದ್ದಂತೆಯೇ  ಸೀರಿಯಲ್‌ನಿಂದ ಹೊರಬಂದಿದ್ದರು. ಈ ವಿಚಾರ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತ್ತು. ಈಗ ಈ ಗುಡ್ ನ್ಯೂಸ್​ ಕೊಟ್ಟಿದ್ದಾರೆ. 

ಮಾಂಗಲ್ಯಂ ತಂತುನಾನೇನ, ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿಸಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ‘ರಾಮಾಚಾರಿ 2.0’ ಸಿನಿಮಾದಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಇವರ ಭಾವಿ ಪತಿ ಸಿದ್ಧಾಂತ್​, ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ.  ಇನ್ನೇನು ಸೆಪ್ಟೆಂಬರ್‌ ಅಕ್ಟೋಬರ್‌ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ.  ತೆಲುಗಿಗೆ  ಹಾರಿದ ಮೇಲೆ, ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬರುವ ಮೂಲಕ ವೀಕ್ಷಕರ ಆಸೆಯನ್ನು ಈಡೇರಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಗೌರಿಶಂಕರ ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ನಾಯಕಿಯಾಗಿ ಮಿಂಚಿದರು. ಸದ್ಯ ಕಿರುತೆರೆಯಿಂದ ದೂರ ಉಳಿದಿದ್ದಾರೆ.

ಡ್ರೋನ್‌ ಪ್ರತಾಪ್‌ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು 

ಅಂದಹಾಗೆ ನಟನೆಗೂ ಕಾಲಿಡುವ ಮೊದಲು ಇವರ ಇಂಜಿನಿಯರ್​ ಆಗಿದ್ದರು.  ಫ್ಯಾಷನ್ ಷೋ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಫ್ಯಾಷನ್ ಷೋ ಕಾರ್ಯಕ್ರಮದಲ್ಲಿ ಕೌಸ್ತುಭ ಅವರನ್ನು ಭೇಟಿ ಮಾಡಿದ ಮಾನ್ವಿತಾ ಕಾಮತ್ ಅವರು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕೌಸ್ತುಭ ಮಣಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂಚರ ಆಗಿ ಎರಡು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸಿದ್ದರು. ಗೌರಿಶಂಕರ ಧಾರಾವಾಹಿಯಲ್ಲಿ ನಾಯಕಿ ನಟಿ ಪಾತ್ರದಲ್ಲಿ ನಟಿ ಕೌಸ್ತುಭಮಣಿ ಅವರು ಬಣ್ಣ ಹಚ್ಚಿದ್ದರು. ಆದರೆ, ಕೆಲವೇ ದಿನಗಳಲ್ಲಿ ಧಾರಾವಾಹಿ ತಂಡದಿಂದ ಹೊರಗೆ ಬಂದಿದ್ದರು.  
 
ಸಿದ್ಧಾಂತ್ ಸತೀಶ್ ಎಂಬುವವರ ಜೊತೆ ನಟಿಯ ನಿಶ್ಚಿತಾರ್ಥ ನಡೆದಿದೆ. ಇದೀಗ ಮದುವೆಯಾಗುವ ಹುಡುಗನ ಜೊತೆ ಚೆಂದದ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಅವುಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ. ಇವರಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. 

ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?