'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!

Published : Mar 08, 2024, 12:57 PM IST
'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!

ಸಾರಾಂಶ

ಒಂದು ವರ್ಷದ ಹಿಂದೆ ಮಳೆ ಡೈರೆಕ್ಟರ್​ ಯೋಗರಾಜ್ ಭಟ್ರು ಭರ್ಜರಿ ಸುದ್ದಿ ಕೊಟ್ಟಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಪ್ರಭುದೇವ ಕಾಂಬಿನೇಷನ್​​ನಲ್ಲಿ ಕರಟಕ ದಮನಕ ಸಿನಿಮಾ ಮಾಡುತ್ತೇನೆ ಅಂತ ಅನೌನ್ಸ್ ಮಾಡಿದ್ರು. 

ಒಂದು ವರ್ಷದ ಹಿಂದೆ ಮಳೆ ಡೈರೆಕ್ಟರ್​ ಯೋಗರಾಜ್ ಭಟ್ರು ಭರ್ಜರಿ ಸುದ್ದಿ ಕೊಟ್ಟಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಪ್ರಭುದೇವ ಕಾಂಬಿನೇಷನ್​​ನಲ್ಲಿ ಕರಟಕ ದಮನಕ ಸಿನಿಮಾ ಮಾಡುತ್ತೇನೆ ಅಂತ ಅನೌನ್ಸ್ ಮಾಡಿದ್ರು. ಈ ಸ್ವೀಟ್ ಸುದ್ದಿ ಕೇಳಿ ಶಿವಣ್ಣ ಪ್ರಭುದೇವ ಫ್ಯಾನ್ಸ್​ಗೆ ಆದ ಸಂಭ್ರಮ ಅಷ್ಟಿಸ್ಟಲ್ಲ. ಈಗ ಶಿವಣ್ಣ-ಪ್ರಭುದೇವ ಫ್ಯಾನ್ಸ್​​ ಗೆ ಭರ್ಜರಿ ಬಾಡೂಟ ರೆಡಿಯಾಗಿದೆ. ಈ ವಾರ ಅಂದ್ರೆ ನಾಳೆ ಬೆಳ್ಳಿತೆರೆ ಮೇಳೆ ಕರಟಕ ದಮನಕ ಸಿನಿಮಾ ದರ್ಶನ ಆಗುತ್ತಿದೆ. ಕರಟಕ ದಮನಕ ಸಿನಿಮಾ ಸ್ಯಾಂಪಲ್ಸ್​ಗಳು ಸೌಂಡ್ ಮಾಡಿದೆ. ಹಾಡುಗಳು ಹಿಟ್ ಆಗಿವೆ. ಒಂದ್ ಸಿನಿಮಾ ನೋಡೋಕೆ ಆಹ್ವಾನ ಪತ್ರಿಕೆಯೇ ಸಿನಿಮಾದ ಸಾಂಗ್ಸ್ ಹಾಗು ಟ್ರೈಲರ್​. 

ಅದನ್ನೆಲ್ಲಾ ನೋಡಿರೋ ಸಿನಿ ಪ್ರೇಕ್ಷಕರು ಕರಟಕ ದಮನಕ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ನೋಡೋಕೆ ಮೈನ್ ರೀಸನ್ ಶಿವಣ್ಣ ಹಾಗು ಪ್ರಭುದೇವ. ಫಸ್ಟ್ ದಿ ಫಸ್ಟ್ ಟೈಂ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಈ ಜೋಡಿ. ಕರಟಕ ದಮನಕ ಸಿನಿಮಾದಲ್ಲಿ ಶಿವಣ್ಣ ಪ್ರಭುದೇವ ಜುಗಲ್ಬಂದಿ ಮೇಲೆ ಎಲ್ಲರ ಕಣ್ಣಿದೆ. ಯಾಕಂದ್ರೆ ಇಡೀ ಸಿನಿಮಾ ಪೂರ್ತಿ ಇಬ್ಬರು ಒಟ್ಟೊಟ್ಟಿಗೆ ಇರ್ತಾರೆ. ಇಬ್ಬರ ಕ್ಯಾರೆಕ್ಟರ್​ ತೂಕ ಒಂದೇ ಇದೆಯಂತೆ. ಇನ್ನು ಇಬ್ಬರು ಬಿಗ್ ಸ್ಟಾರ್ಸ್ ಒಂದೇ ಸಿನಿಮಾದಲ್ಲಿದ್ದಾರೆ ಅಂದ್ಮೇಲೆ ಆ ಸಿನಿಮಾ ನೋಡೋಕೆ ರೀಸನ್ ಕಂಡಿತ ಬೇಕಾಗಿಲ್ಲ. ನಿರ್ದೇಶಕ ಯೋಗರಾಜ್ ಭಟ್ ‘ಕರಟಕ ದಮನಕ’ ಸಿನಿಮಾ ಶುರುಮಾಡಿದಾಗಿನಿಂದ ಈ ಸಿನಿಮಾದ ಸ್ಟೋರಿ ಹೇಗಿರುತ್ತೆ.? 

ಶಿವಣ್ಣ ಪ್ರಭುದೇವ ಕ್ಯಾರೆಕ್ಟರ್​ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈ ಸಿನಿಮಾದ ಕತೆ ಎರಡು ಕುತಂತ್ರಿ ನರಿಗಳ ಕಥಯಂತಿರುತ್ತಂತೆ. ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಮಾನವ ರೂಪ ತಾಳಿದ್ರೆ ಏನೆಲ್ಲಾ ಅಗುತ್ತೆ ಅನ್ನೋದೆ ಈ ಸಿನಿಮಾದ ಸ್ಟೋರಿ. ಕರಟಕ ದಮನಕ ಸಿನಿಮಾ ನೋಡೋಕೆ ಇನ್ನೊಂದು ರೀಷನ್ ಕೊಡೋದಾದ್ರೆ ಇದು ರಾಕ್​ಲೈನ್ ಬ್ಯಾನರ್​ನಲ್ಲಿ ಸಿದ್ಧವಾಗಿರೋ ಸಿನಿಮಾ. ರಾಕ್​ಲೈನ್ ಪ್ರೊಡಕ್ಷನ್ ಅಂದ್ರೆ ಹಿಟ್​ ಸಿನಿಮಾಗಳನ್ನ ಕೊಡೋ ನಿರ್ಮಾಣ ಸಂಸ್ಥೆ. 

ಅಯೋಧ್ಯೆಯಲ್ಲಿ ಸ್ಯಾಂಡಲ್‌ವುಡ್ ಶ್ರೀಮನ್ನಾರಾಯಣ: ರಾಮನ ಕಣ್ಣೇ ಮಹಾದ್ಭುತ ಎಂದ ರಕ್ಷಿತ್ ಶೆಟ್ಟಿ!

ಯಾವ್ದೇ ಕಾಂಪ್ರಮೈಸ್ ಇಲ್ಲದೇ ಸಿನಿಮಾಗೆ ಬಂಡವಾಳ ಹೂಡೋ ರಾಕ್​ಲೈನ್ ವೆಂಕಟೇಶ್​ ಈ ಸಿನಿಮಾಗೂ ಎಷ್ಟು ಬೇಕೋ ಅಷ್ಟು ಇನ್ವೆಸ್ಟ್ ಮಾಡಿದ್ದಾರೆ. ಇದರ ಜತೆಗೆ ನಿರ್ದೇಶಕ ಯೋಗರಾಜ್ ಭಟ್. ಇವ್ರ ಸಿನಿಮಾಗಳಿಗೆ ಚಿತ್ರರಂಗದಲ್ಲಿ ಬೇರೆಯದ್ದೇ ಮಾರ್ಕೆಟ್ ಇದೆ. ಯೋಗರಾಜ್ ಭಟ್​ ಸಿನಿಮಾಗನ್ನ ನಂಬಿಕೆ ಇಟ್ಟು ಚಿತ್ರಮಂದಿರಕ್ಕೆ ಹೋಗಿ ನೋಡಬಹುದು. ಹೀಗಾಗಿ ಕರಟಕ ದಮನಕ ಈಗ ಸ್ಪೆಷಲ್ ಎನಿಸಿಕೊಳ್ಳುತ್ತಿದೆ. ನಟಿ ಪ್ರಿಯಾ ಆನಂದ್​, ನಿಶ್ವಿಕಾ ನಾಯ್ಡು, ರಾಕ್​ಲೈನ್ ವೆಂಕಟೇಶ್​ ಸೇರಿ ದೊಡ್ಡ ತಾರಾಗಣ ಸಿನಿಮಾದಲ್ಲಿದೆ. ಒಟ್ಟಿನಲ್ಲಿ ಈ ಶುಭ ಶುಕ್ರವಾರ ಕನ್ನಡ ಸಿನಿ ಪ್ರೇಕ್ಷಕರಿಗಂತು ಕರಟಕ ದಮನಕ ಫುಲ್ ಮಿಲ್ಸ್ ಆಗೋದ್ರಲ್ಲಿ ನೋ ಡೌಟ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?