ಫೇಸ್‌ಬುಕ್‌ ಲೈವ್‌ನಲ್ಲಿ ಕಣ್ಣೀರಿಟ್ಟ ನಟ; ಒಳ್ಳೆ ಹುಡುಗ ಪ್ರಥಮ್ 'ನಟ ಭಯಂಕರ' ಆಟ ಹೇಗಿದೆ?

Published : Feb 07, 2023, 11:55 AM IST
ಫೇಸ್‌ಬುಕ್‌ ಲೈವ್‌ನಲ್ಲಿ ಕಣ್ಣೀರಿಟ್ಟ ನಟ; ಒಳ್ಳೆ ಹುಡುಗ ಪ್ರಥಮ್ 'ನಟ ಭಯಂಕರ' ಆಟ ಹೇಗಿದೆ?

ಸಾರಾಂಶ

ಬಲವಂತದಿಂದ ಸಿನಿಮಾ ಸೋಲಿಸಬೇಡಿ ಒಮ್ಮೆ ಚಿತ್ರಮಂದಿರಲ್ಲಿ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡ ಪ್ರಥಮ್....

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ನಟಿಸಿ, ನಿರ್ದೇಶಿಸಿರುವ ನಟ ಭಯಂಕರ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಕಂಡಿದೆ. ಸಿನಿಮಾ ಅದ್ಭುತವಾಗಿದ್ದರೂ ಥಿಯೇಟರ್‌ನಲ್ಲಿ ಒಂದು ಸಲವೂ ನೋಡದೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ನೆಗೆಟಿವ್ ಕಾಮೆಂಟ್ ಮಾಡುತ್ತಿರುವುದಕ್ಕೆ ಪ್ರಥಮ್ ಬೇಸರ ವ್ಯಕ್ತ ಪಡಿಸಿದ್ದಾರೆ. 

'ನಾನು ಎರಡೇ ಏರಡು ಮಾತುಗಳನ್ನು ಹೇಳಲು ಲೈವ್‌ಗೆ ಬಂದಿರುವ ದಯವಿಟ್ಟು ಗಮನಿಸಿ ನೋಡಿ. ಯಾವತ್ತೂ ಯಾರ ಬಳಿಯೂ ಕೈ ಚಾಚಿಲ್ಲ ಏಕೆಂದರೆ ಕೇಳಿದರೆ ಮನುಷ್ಯ ಸಣ್ಣವನಾಗುತ್ತಾನೆ ಅನ್ನೋ ನಂಬಿಕೆ ನಮ್ಮದು. ಶ್ರೀಮನ್ನಾರಾಯಣ ಕೇವಲ 3 ಹೆಜ್ಜೆಯನ್ನು ಬಲಿಚಕ್ರವರ್ತಿ ಬಳಿ ಕೇಳಿದಕ್ಕೆ ವಾಮನ ಆಗಿಬಿಟ್ಟ ಕೇವಲ 3 ಹೆಜ್ಜೆಗೆ ಅಂದ್ಮೇಲೆ ನಾವೆಲ್ಲಾ ಯಾವ ಲೆಕ್ಕ? ಅದಿಕ್ಕೆ ಯಾರ ಬಳಿಯೂ ಸಹಾಯ ಕೇಳದೆ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಬದುಕಿದ್ದೀವಿ. ಬಹಳ ಕಷ್ಟ ದಿನಗಳಲ್ಲಿ ನಟ ಭಯಂಕರ ಸಿನಿಮಾ ಮಾಡಿರುವೆ ಎಲ್ಲಾ ಜನ ಕೈ ಹಿಡಿದಿದ್ದಾರೆ ಸಿನಿಮಾ ನೋಡಿದ ಪ್ರತಿಯೊಬ್ಬರು ಪಾಸಿಟಿವ್ ಆಗಿ ಹೇಳುತ್ತಿದ್ದಾರೆ. ಯಾರು ನಟ ಭಯಂಕರ ಸಿನಿಮಾ ನೋಡಿದ್ದಾರೆ ಅವರಿಗೆ ಧನ್ಯವಾದಗಳನ್ನು ಹೇಳಬೇಕು ನಮ್ಮನ್ನು ಒಪ್ಪಿಕೊಂಡಿರುವುದಕ್ಕೆ' ಎಂದು ಪ್ರಥಮ್ ಮಾತನಾಡಿದ್ದಾರೆ.

ಪ್ರಥಮ್ ಅಭಿನಯದ 'ನಟ ಭಯಂಕರ' ಸಿನಿಮಾ ರಿಲೀಸ್: ಚಿತ್ರದ ಬಗ್ಗೆ ಸ್ಯಾಂಡಲ್ವುಡ್ ಸ್ಟಾರ್ಸ್ ಹೇಳಿದ್ದೇನು?

'ಬಹಳಷ್ಟು ಚಾಲೆಂಜ್‌ಗಳನ್ನು ಎದುರಿಸಿ ಈ ಸಿನಿಮಾವನ್ನು ಈ ಹಂತಕ್ಕೆ ತಂದಿರುವೆ. ಕಷ್ಟಗಳನ್ನು ಎದುರಿಸಿದ್ದೀನಿ, ಈ ರೀತಿ ಹೇಳುವುದಕ್ಕೆ ಮುಜುಗರ ಆಗುತ್ತದೆ ಆದರೂ ಒಂದು ಸಲ ಬಂದು ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿ. ಏಕಾಂಗಿ ಹೋರಾಟದಲ್ಲಿ ಬಹಳಷ್ಟು ಸಲ ಸೋತಿರುವೆ....ಯಾಕೆ ಇದೆಲ್ಲಾ ಹೇಳುತ್ತಿರುವೆ ಅಂದ್ರೆ ಕೇಲವ ಒಬ್ಬ ಕನ್ನಡಿಗ ಒಬ್ಬ ಪತ್ರಕರ್ತ ಒಬ್ಬ ನಿರ್ದೇಶಕ ಸಿನಿಮಾ ನೋಡಿಕೊಂಡು ಬಂದು ನನ್ನ ಹಣೆ ಬರಹ ಬರೆಯುತ್ತಾರೆ ಅಂದ್ರೆ ನನಗೆ ಸಮಸ್ಯೆ ಇಲ್ಲ. ಒಬ್ಬ ಪತ್ರಕರ್ತ ಶುಕ್ರವಾರ ಸಿನಿಮಾ ನೋಡಿ ಭಾನುವಾರ ಸಿನಿಮಾ ಹೇಗಿದೆ ಎಂದು ಬರೆಯುತ್ತಾರೆ ಅಂದ್ರೆ ಅದರ ಬಗ್ಗೆ ನನಗೆ ಭಯವಿಲ್ಲ. ಯಾವುದೋ ಯಾವುದೋ ಏಜೆನ್ಸಿಯಲ್ಲಿ ಖರೀದಿ ಮಾಡಬೇಕು ಅಲ್ಲಿ ಅಷ್ಟು ಕೊಡಬೇಕು ಇಲ್ಲಿ ಅಷ್ಟು ಕೊಡಬೇಕು ಎನ್ನುತ್ತಾರೆ ಆದರೆ ಇದೆಲ್ಲಾ ಹೇಗೆ ನಡೆಯುತ್ತದೆ ಎಂದು ನನಗೆ ಗೊತ್ತಿಲ್ಲ. ನಾನೊಬ್ಬ ಪೆದ್ದ ತುಂಬಾ ಕಷ್ಟ ದಿನಗಳನ್ನು ಕಳೆದುಕೊಂಡು ಇಲ್ಲಿಗೆ ಬಂದಿರುವೆ ದುಯವಿಟ್ಟು ಒಂದು ಸಲ ಟ್ರೈಲರ್ ನೋಡಿ ಅದು ಇಷ್ಟವಿಲ್ಲ ಅಂದ್ರೆ ಸಿನಿಮಾ ನೋಡಿರುವವರ ಬಳಿ ಸಿನಿಮಾ ಹೇಗಿದೆ ಎಂದು ಕೇಳಿ ಪ್ರಾಮಾಣಿಕವಾಗಿಲ್ಲ ನೋಡಲು ಯೋಗ್ಯವೇ ಇಲ್ಲ ಅಂದ್ರೆ ನೋಡಬೇಡಿ' ಎಂದು ಪ್ರಥಮ್ ಹೇಳಿದ್ದಾರೆ.

Nata Bhayankara Review ಒಳ್ಳೆ ಹುಡುಗ ಪ್ರಥಮನ ಭಯಂಕರ ಆಟಗಳು

'ಬಿಗ್ ಬಾಸ್ ರಿಯಾಲಿಟಿ ಶೋ ಆದ್ಮೇಲೆ ನಾನು ಕೇಳುತ್ತಿರುವ ಮೊದಲ ಸಹಾಯವಿದು. ಮೊನ್ನೆತನಕ ಸಿನಿಮಾ ನನ್ನದು ಈಗ ಅದು ನಿಮ್ಮ ಸಿನಿಮಾ ಬಹಳ ಕಷ್ಟ ದಿನಗಳನ್ನು ಕಳೆದುಕೊಂಡು ಮಾಡಿರುವ ಸಿನಿಮಾ. ನೀವು ನನ್ನ ಹಣೆ ಬರಹ ಬರೆದರ ಸಮಸ್ಯೆ ಇಲ್ಲ ಏಜೆನ್ಸಿಗಳು ಮಾಡುತ್ತಿರುವುದು ಸರಿಯಲ್ಲ. ಜನ ಕರೆದುಕೊಂಡು ಬಂದು ಸಿನಿಮಾ ತೋರಿಸುವುದು ಡೌವ್‌ ಬಿಲ್ಡಪ್, ನನ್ನ ಬಳಿ ಹಣವಿಲ್ಲ ಹೆಚ್ಚಿಗೆ ಖರ್ಚು ಮಾಡಿ ಸುಳ್ಳು ತೋರಿಸುವುದಕ್ಕೆ ಮನಸ್ಸಿನಲ್ಲ. ಒಂದು ಸಲ ನನ್ನ ಕೈ ಹಿಡಿಯಿರಿ ಜನರು ಚಿತ್ರಮಂದಿರಕ್ಕೆ ಬಂದ್ರೆ ಖುಷಿಯಾಗುತ್ತದೆ. ಸಮಾಜದಲ್ಲಿ ಇಷ್ಟು ದಿನ ನಾನು ಪ್ರಾಮಾಣಿಕವಾಗಿ ಬದುಕಿರುವೆ ಅಂದ್ರೆ ಸಹಾಯ ಮಾಡಿ. ಕಾಮೆಂಟ್‌ಗಳಿಗೆ ಉತ್ತರ ಬಂದ್ರೆ ತಪ್ಪು ತಿಳಿದುಕೊಳ್ಳಬೇಡಿ ನಾನು ಫೋನ್‌ ನೋಡುವುದಿಲ್ಲ ನಮ್ಮ ಹುಡುಗರು ಮಾಡಿರುವುದು. ಸೋಲುವುದಕ್ಕೆ ಬೇಸರವಿಲ್ಲ ಆದರೆ ಬಲವಂತವಾಗಿ ಸೋಲುವುದಕ್ಕೆ ಬೇಸರ' ಎಂದಿದ್ದಾರೆ ಪ್ರಥಮ್.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?