12 ಕಿ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು; ಉದ್ಘಾಟನೆ ಬಗ್ಗೆ ಸಚಿವ ಆರ್ ಅಶೋಕ್ ಹೇಳಿದ್ದೇನು?

By Shruthi KrishnaFirst Published Feb 6, 2023, 2:47 PM IST
Highlights

12 ಕೀ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡಲಾಗಿದ್ದು ಉದ್ಘಾಟನೆಯ ಬಗ್ಗೆ ಕಂದಾಯ ಸಚಿವ ಆರ್ ಅಶೋರ್ ಮಾತನಾಡಿದ್ದಾರೆ.  

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ. ಅಭಿಮಾನಿಗಳ ದೇವರು ಅಪ್ಪು ಹೆಸರಲ್ಲಿ ಅನೇಕ ಉತ್ತಮ ಕೆಲಸಗಳು ನಡೆಯುತ್ತಿವೆ, ಅನೇಕ ಸಾಮಾಜ ಸೇವೆಗಳನ್ನು ಮಾಡಲಾಗುತ್ತಿದೆ. ಅಪ್ಪು ಹೆಸರನ್ನು ಶಾಶ್ವತವಾಗಿ ಇರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಪುನೀತ್ ರಾಜ್ ಕುಮಾರ್ ಹೆಸರಿನ ರಸ್ತೆ ಉದ್ಘಾಟನೆ ಸಿದ್ಧವಾಗಿದೆ. ಈ ಬಗ್ಗೆ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ಧಿಗೋಷ್ಠಿ ಆಯೋಜಿಸಲಾಗಿತ್ತು.  ಸಚಿವ ಆರ್ ಅಶೋಕ್ ನೇತೃತ್ವದಲ್ಲಿ  ಸುದ್ದಿಗೋಷ್ಠಿ ನಡೆದಿದ್ದು ಪುನೀತ್ ರಾಜ್ ಕುಮಾರ್ ರಸ್ತೆ ಉದ್ಘಾಟನೆ ದಿನಾಂಕ ಬಹಿರಂಗ ಪಡಿಸಲಾಯಿತು. 

ನಾಯಂಡಹಳ್ಳಿ ಜಂಕ್ಷನ್ ನಿಂದ‌ ವೆಗಾ ಸಿಟಿ ಮಾಲ್ ಜಂಕ್ಷನ್ ವರೆಗೂ ಪುನೀತ್ ರಾಜ್ ಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ.  ಸುಮಾರು  12 ಕಿಲೋಮೀಟರ್ ಉದ್ದ ಇರುವ ಈ ರಸ್ತೆಗೆ ಅಪ್ಪು ಹೆಸರಿಡಲಾಗಿದೆ. ಇಷ್ಟು ಉದ್ದದ ರಸ್ತೆಗೆ ಇದುವರೆಗೂ ಯಾರ ಹೆಸರು ಇಟ್ಟಿಲ್ಲ ಇದೀಗ ಮೊದಲ ಬಾರಿಗೆ ಅಪ್ಪು ಹೆಸರಿಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಬಹಿರಂಗ ಪಡಿಸಿದರು. ಅಂದಹಾಗೆ ಅಪ್ಪು ರಸ್ತೆಯನ್ನು ನಾಳೆ (ಜನವರಿ 7) ರಂದು ಉದ್ಘಾಟನೆ ಮಾಡಲಾಗುತ್ತಿದೆ. 

 ಈ ಬಗ್ಗೆ ಸುದ್ಧಿಗೋಷ್ಠಿ ಮಾತನಾಡಿದ ಆರ್ ಅಶೋಕ್,  'ಸುಮಾರು  12 ಕಿ.ಮೀ ಇರುವ ಈ ರಸ್ತೆಗೆ ಅಪ್ಪು ಹೆಸರಿಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ನಮ್ಮ ಮಧ್ಯೆ ಇಲ್ಲ. ನಾನು ಇತ್ತೀಚಿಗೆ ಲಂಬಾಣಿ ತಾಂಡ್ಯಗಳಿಗೆ ಭೇಟಿ ಕೊಟ್ಟಿದ್ದೆ ಹಳ್ಳಿ ಹಳ್ಳಿಗಳಲೂ ಪುನೀತ್ ರಾಜ್ ಕುಮಾರ್ ಅವರ ಫೋಟೊ ಇದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಸೌಧದ ಮುಂಬಾಗ ಕರ್ನಾಟಕ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.  ನಮ್ಮ ಪುಣ್ಯ ಅನ್ಕೊತೀನಿ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಾಗ ‌ಮಳೆ ಬಂದಿತ್ತುಪುನೀತ್ ಅವರಿಗೂ ಕೊಟ್ಟಗಲೂ ಅಲ್ಲಿ ಮಳೆ ಬಂದು ನಮಗೆ ಆಶಿರ್ವಾದ ಮಾಡಿತು' ಎಂದು ಹೇಳಿದರು. 

ಸಿಂಹಪ್ರಿಯಾ ಆರತಕ್ಷತೆಯಲ್ಲಿ ಪುನೀತ್ ರಾಜ್‌ಕುಮಾರ್; ಫೋಟೋಶಾಪ್‌ ನಿಜವಾಗಬಾರದೆ ಎಂದ ಅಭಿಮಾನಿಗಳು!

'ಬಡವರು, ಅನಾಥಾಶ್ರಮಗಳ ಬಗ್ಗೆ ಕಾಳಜಿ ಇದ್ದಂತ ವ್ಯಕ್ತಿ. ತುಂಬಾ ನಟರು ಪಾನ್ ಮಸಾಲಗಳಿಗೆ ಕೋಟಿ ಕೋಟಿ ಪಡೆದು ಜಾಹಿರಾತಿನಲ್ಲಿ ಕಾಣಿಸ್ತಾರೆ. ಅದ್ರೆ ಅಪ್ಪು ರೈತರಿಗಾಗಿ ನಂದಿನ ಜಾಹಿರಾತಿನಲ್ಲಿ ಫ್ರಿಯಾಗಿ ಕಾಣಿಸಿದ್ರು. ನಾಯಂಡಹಳ್ಳಿ  ಜಕ್ಷಂನ್ ನಿಂದ ವೆಗಾ ಸಿಟಿ ಜಂಕ್ಷನ್ ವರೆಗೂ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡಲು ಕಡತ ಕಳಿಸಿದ್ದೆ. ಮುಖ್ಯಮಂತ್ರಿಗಳು ಅನುಮತಿ ಕೊಟ್ಟಿದ್ದಾರೆ. ಒಟ್ಟು 12 ಕಿಮೀ ರಸ್ತೆಗೆ ಅಪ್ಪು ಹೆಸರು ಹಿಡಲಾಗಿದೆ. ಇಷ್ಟು ಉದ್ದದ ರಸ್ತೆಗೆ ಇದುವರೆಗೂ ಯಾರ ಹೆಸರು ಇಟ್ಟಿಲ್ಲ. ನಾಳೆ ರಸ್ತೆಗೆ ಅಪ್ಪು ಹೆಸರನ್ನಿಟ್ಟು ಉದ್ಘಾಟನೆ ಮಾಡಲಾಗುತ್ತೆ' ಎಂದು ಹೇಳಿದರು. 

'ಹೊಂದಿಸಿ ಬರೆಯಿರಿ' ಚಿತ್ರತಂಡಕ್ಕೆ ಸಾಥ್‌ ಕೊಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ಫೆ. 10ಕ್ಕೆ ಸಿನಿಮಾ ರಿಲೀಸ್

'ಪದ್ಮನಾಭನ ನಗರದ ಅಟಲ್ ಬಿಹಾರ್ ವಾಜಪೇಯಿ ಕ್ರಿಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು  ಹಾಗೂ ಕೆಲವು ಸಚಿವರು, ಇಡೀ ಚಿತ್ರರಂಗ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಅಭಿಮಾನಿಗಳಿಗೆ ಅವಕಾಶ ಇದೆ' ಎಂದು ಆಶೋಕ್ ಹೇಳಿದರು.  ಇದೇ ವೇಳೆ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಬಗ್ಗೆಯೂ ಮಾತನಾಡಿದರು. 'ನಾಳೆ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಲೋಗೋ ಅನಾವರಣ ಮಾಡ್ತಿವಿ. ಫಿಲ್ಮ್ ಫೆಸ್ಟಿವಲ್ ಗೆ  ನಾಲ್ಕು ಕೋಟಿ ಅನುದಾನ ನೀಡಲಾಗಿದೆ' ಎಂದು ಆರ್ ಅಶೋಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಬಾಮ ಹರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್,  ಚೇಂಬರ್ ಪದಾಧಿಕಾರಿಗಳು  ಭಾಗಿಯಾಗಿದ್ದರು. 

 

click me!