ಕೆಲಸ ಸಿಗಲ್ಲ ಅಂತ ಪ್ರೆಗ್ನೆಂಟ್ ಅನ್ನೋ ವಿಚಾರ ಮುಚ್ಚಿಟ್ಟೆ; ನಟಿ ಶ್ರೀಯಾ ಸರನ್ ಶಾಕಿಂಗ್ ಹೇಳಿಕೆ

By Vaishnavi ChandrashekarFirst Published Feb 6, 2023, 1:02 PM IST
Highlights

ಪ್ರೆಗ್ನೆಂಟ್‌ ಎಂದು ಹೇಳಿಬಿಟ್ಟರೆ ಸಿನಿಮಾ ಆಫರ್‌ಗಳು ಕಡಿಮೆ ಆಗುತ್ತದೆ. ಗ್ಲಾಮರ್‌ ಮತ್ತು ಲುಕ್‌ ಈ ಮೀಡಿಯಾದಲ್ಲಿ ಮುಖ್ಯವಾಗುತ್ತದೆ ಎಂದು ನಟಿ ಶ್ರೀಯಾ ಸರನ್...

ಡ್ಯಾನ್ಸ್‌ ಟೀಚರ್‌ ಒತ್ತಾಯಕ್ಕೆ ಬನಾರಸ್‌ನಲ್ಲಿ ವಿಡಿಯೋ ಶೂಟ್‌ ಮಾಡಿದ  ಶ್ರೀಯಾ ಸರನ್ ನೇಹಾ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸಿನಿಮಾ ಸಹಿ ಮಾಡಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡು ವಿದೇಶಿ ಹುಡುಗನನ್ನು ಮದುವೆ ಮಾಡಿಕೊಂಡು ಮಗಳ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಶ್ರೀಯಾ ಯಾಕೆ ಪ್ರೆಗ್ನೆನ್ಸಿ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಪ್ರಶ್ನೆ ಮಾಡಲಾಗಿತ್ತು....ಅದಿಕ್ಕೆ ಕೊಟ್ಟ ಉತ್ತರವಿದು...  

'ಯಾಕೆ ನಾನು ಪ್ರೆಗ್ನೆನ್ಸಿ ಬಗ್ಗೆ ಪ್ರೆಗ್ನೆಂಟ್ ಆದಾಗ ಮಾತನಾಡಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಮಾಧ್ಯಮಗಳಿಂದ ದೂರ ಉಳಿಯಬೇಕು ಎಂದು ನಾನು ತೀರ್ಮಾನ ಮಾಡಿದ್ದೆ ಪ್ರೆಗ್ನೆನ್ಸಿ ಸಮಯವನ್ನು ನನ್ನ ಸಮಯವಾಗಿ ಕಳೆಯಬೇಕು ಅನ್ನೋ ಆಸೆ ತುಂಬಾ ಇತ್ತು. 6 ತಿಂಗಳು ರಾಧಾ ನನ್ನ ಕೈಯಲ್ಲಿದ್ದಾಗ ಜೀವನ ತುಂಬಾ ಎಂಜಾಯ್ ಮಾಡಿರುವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ದಪ್ಪಗಿದ್ದು ಹೇಗೆ ಬೇಕಿದ್ದರೂ ಹಾಗೆ ಜೀವನ ನಡೆಸುವುದು ಖುಷಿ ಕೊಡುತ್ತಿತ್ತು. ಜನರ ಬಗ್ಗೆ ಕಿಂಚಿತ್ತೂ ಕೇರ್ ಮಾಡಿಲ್ಲ ನಾನು. ಹೆಚ್ಚಿಗೆ ಹಂಚಿಕೊಂಡರೆ ಜನರು ನನ್ನ ಬಗ್ಗೆ ಬರೆಯಲು ಶುರು ಮಾಡುತ್ತಾರೆ ಆಗ ಮಗುವಿನ ಮೇಲೆ ಗಮನ ಹರಿಸಲು ಕಷ್ಟವಾಗುತ್ತದೆ ಎಂದು ಈ ನಿರ್ಧಾರ ತೆಗೆದುಕೊಂಡೆ' ಎಂದು ಪಿಂಕ್‌ವಿಲ್ಲ ಸಂದರ್ಶನದಲ್ಲಿ ಶ್ರೀಯಾ ಮಾತನಾಡಿದ್ದಾರೆ.

'ಮತ್ತೊಂದು ರೀತಿಯಲ್ಲಿ ಈ ನಿರ್ಧಾರಕ್ಕೆ ಉತ್ತರ ಕೊಡಬೇಕು ಅಂದರೆ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ್ದರೆ ಜನರು ಅಷ್ಟೇ ಸಮಯ ತೆಗೆದುಕೊಂಡು ನನ್ನನ್ನು ಸಂಪರ್ಕಿಸಲು ನಿರಾಕರಿಸಿ ಕೆಲಸ ಕೊಡಲು ಮುಂದೆ ಬರುವುದಿಲ್ಲ ಅನ್ನೋ ಭಯ ತುಂಬಾ ಇತ್ತು. ಇದು ವಿಶ್ಯುಯಲ್ ಮೀಡಿಯಾ ಜನರು ನೋಡಲು ಈ ರೀತಿನೇ ಇರಬೇಕು ಎಂದು ಜನರು ನಿರೀಕ್ಷೆ ಮಾಡುತ್ತಾರೆ. ಸಮಯ ತೆಗೆದುಕೊಂಡು ಬಂದು ನಾನು ಪ್ರೆಗ್ನೆನ್ಸಿ ಬಗ್ಗೆ ಮಾತನಾಡಲು ಆರಂಭಿಸಿದಾಗ ನಾನು ಕೆಲಸ ಶುರು ಮಾಡಿ ಕೈಯಲ್ಲಿ ಮೂರು ಸಿನಿಮಾಗಳಿತ್ತು ಆಗ ನನ್ನ ಮಗಳಿಗೆ 9 ತಿಂಗಳು ಆಗಿತ್ತು. ಪ್ರೆಗ್ನೆನ್ಸಿ ಸಮಯದಲ್ಲಿ ಗಳಿಸಿದ ತೂಕವನ್ನು ಇಳಿಸಿಕೊಂಡಿದ್ದೆ. ನಾಯಕಿ ಅಂದಮೇಲೆ ನಮ್ಮ ಮೇಲೆ ಆ ಪ್ರೆಶರ್‌ ಇರುತ್ತದೆ ಏಕೆಂದರೆ ನಮ್ಮ ಲುಕ್ ತುಂಬಾ ಮುಖ್ಯವಾಗುತ್ತದೆ' ಎಂದು ಶ್ರೀಯಾ ಹೇಳಿದ್ದಾರೆ.

'ಪ್ರತಿಯೊಬ್ಬ ಹೆಣ್ಣಿಗೂ ಗಂಡಸರು ಋಣಿಯಾಗಿರಬೇಕು ಏಕೆಂದರೆ ಅವರ ಮನೆ ಮಕ್ಕಳು ಮ್ಯಾನೇಜ್ ಮಾಡಲು ಸಾಧ್ಯವಾಗಿದಕ್ಕೆ ಗಂಡರು ಕೆಲಸಕ್ಕೆ ಹೋಗಲು ಆಗುತ್ತಿರುವುದು. ಮಹಿಳೆಯರು ಶ್ರಮ ಜೀವಿಗಳು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ ಮನೆ ನೋಡಿಕೊಳ್ಳುತ್ತಾರೆ ಹಾಗೂ ಮಕ್ಕಳನ್ನು ಸಂಭಾಳಿಸುತ್ತಾರೆ ಇದರಿಂದ ಗಂಡಸರ ಜೀವನ ಒಂದು ಮಟ್ಟಕ್ಕೆ ನಿಶ್ಚಿಂತೆಯಿಂದ ನಡೆಸುತ್ತಿರುವುದು. ಅಕ್ಟಿಂಗ್ ಜೀವನದಲ್ಲಿ ನಾಯಕಿಯರಿಗೆ ಶೆಡ್ಯೂಲ್ ಇರುವುದಿಲ್ಲ. ನಟರು ಯಾವಾಗಂದ್ರೆ ಅವಾಗ ಶೂಟಿಂಗ್ ಮಾಡುತ್ತಿರುತ್ತಾರೆ ಆಗ ಹೆಂಡತಿಯರು ಮನೆ ನಡೆಸುವುದು. ಒಟ್ಟಿನಲ್ಲಿ ಯಾರು ಯಾವ ಕೆಲಸ ಮಾಡಲಿ ಮನೆ ನಡೆಸುವುದು ಮಕ್ಕಳು ನೋಡಿಕೊಳ್ಳುವುದು ಮಲ್ಟಿಟಾಸ್ಕಿಂಗ್ ಮಾಡುವುದು ಮಹಿಳೆಯರೇ. ಪೇರೆಂಟಿಂಗ್ ವಿಚಾರದಲ್ಲಿ 50-50 ಮಾಡಿಕೊಳ್ಳಬೇಕು' ಎಂದಿದ್ದಾರೆ ಶ್ರೀಯಾ.  

ರಾಣಿಯಂತೆ ಫೀಲ್ ಆಗ್ತಿದೆ; ಕೆಂಪು ಸೀರೆಯಲ್ಲಿ ಮಿಂಚಿದ 'ಕಬ್ಜ' ಸುಂದರಿ ಶ್ರೀಯಾ ಶರಣ್

ಶ್ರಿಯಾ ಸರನ್ ಮತ್ತು ಆಂಡ್ರೇ ಕೊಸ್ಚೆವ್ ಮಾರ್ಚ್‌ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2020ರಲ್ಲಿ ಮೊದಲ ಮಗುವನ್ನು ಬರ ಮಾಡಿಕೊಂಡರು. 'ದೇವರಿಗೆ ನಾನು ಋಣಿಯಾಗಿರುವೆ ತುಂಬಾ ಸಪೋರ್ಟ್‌ ಮಾಡುವ ಪಾರ್ಟ್‌ನರ್ ಸಿಕ್ಕಿದ್ದಾರೆ. ಆಂಡ್ರೇನ ಗಂಡ ಎಂದು ಕರೆಯುವುದಕ್ಕಿಂತ ಪಾರ್ಟ್‌ನರ್‌ ಎಂದು ಕರೆಯಲು ಇಷ್ಟ ಪಡುವೆ. ನನ್ನ ಕೆಲಸ ಮತ್ತು ನನ್ನ ಬಗ್ಗೆ ತುಂಬಾ ಹೆಮ್ಮೆ ಪಡುವ ವ್ಯಕ್ತಿ. ಕೆಲವೊಂದು ವಿಚಾರಕ್ಕೆ ನಾನು ತುಂಬಾ ತಲೆ ಕೆಡಿಸಿಕೊಳ್ಳುವೆ ಆಗ ವಿಚಾರವನ್ನು ತಿಳಿಸಿ ಸಮಾಧಾನ ಮಾಡುತ್ತಾರೆ. ಹೀಗಾಗಿ ಅವರ ಜೊತೆ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುವೆ' ಎಂದು ಶ್ರೀಯಾ ಹೇಳಿದ್ದಾರೆ. 

click me!