ನಮ್ಮ ಚಿತ್ರವೂ ಹಾಸ್ಯ ಪ್ರಧಾನವಾಗಿರುವ ಹಿನ್ನೆಲೆಯಲ್ಲಿ ಸ್ಟಾಂಡ್ ಅಪ್ ಕಾಮಿಡಿ ಟೀಮ್ ಜೊತೆಗೆ ಜನರ ಬಳಿ ಹೋಗುತ್ತಿದ್ದೇವೆ. ಕಾಲೆಳೆಯುತ್ತಾ, ಹಾಸ್ಯ ಚಟಾಕಿ ಹಾರಿಸುತ್ತಾ ಸಿನಿಮಾ ಬಗ್ಗೆ ಮಾಹಿತಿ ನೀಡಿ ಜನರಿಗೆ ಮನರಂಜನೆ ನೀಡುತ್ತೇವೆ.
ಆರಂಭದಿಂದಲೂ ಹೊಸ ಮಾದರಿಯ ಪ್ರಚಾರ ತಂತ್ರದ ಮೂಲಕ ಶ್ರೀನಿ (Srini) ನೇತೃತ್ವದ ‘ಓಲ್‌ಡ್ಮಾಂಕ್’ (Old Monk) ಚಿತ್ರತಂಡ ಗಮನಸೆಳೆಯುತ್ತಿದೆ. ಇದೀಗ ಸ್ಟಾಂಡಪ್ ಕಾಮಿಡಿ (Standup Comedy) ಟೀಮ್ ಲೋಲ್‌ಬಾಗ್ (Lolbag) ಜೊತೆ ಸೇರಿ ‘ಓಲ್‌ಡ್ಮಾಂಕ್ ವರ್ಸಸ್ ಲೋಲ್‌ಬಾಗ್’ ಎಂಬ ಸ್ಟಾಂಡಪ್ ಕಾಮಿಡಿ ಕಾರ್ಯಕ್ರಮದ ಮೂಲಕ
ವಿನೂತನ ಮಾದರಿ ಪ್ರಚಾರಕ್ಕೆ ಮುಂದಾಗಿದೆ.
ಈ ಬಗ್ಗೆ ವಿವರ ನೀಡುವ ಓಲ್‌ಡ್ಮಾಂಕ್ ನಿರ್ದೇಶಕ ಹಾಗೂ ನಾಯಕ ಶ್ರೀನಿ, ‘ಈ ಶೋ ಬೆಂಗಳೂರಿನ ಎನ್‌ಆರ್ ಕಾಲನಿಯ (NR Colony) ಡಾ ಸಿ ಅಶ್ವತ್ಥ ಕಲಾಭವನದಲ್ಲಿ ಶನಿವಾರ ಸಂಜೆ ಆರು ಗಂಟೆಗೆ ನಡೆಯಲಿದೆ. ನಮ್ಮ ಸಿನಿಮಾ ಟೀಮ್‌ನಿಂದ ನಾಯಕಿ ಅದಿತಿ ಪ್ರಭುದೇವ (Aditi Prabhudeva), ಸುಜಯ್ ಶಾಸ್ತ್ರಿ, ಸಿಹಿಕಹಿ ಚಂದ್ರು (Sihi Kahi Chandru) ಮತ್ತಿತರರು ಭಾಗವಹಿಸುತ್ತಿದ್ದೇವೆ. ಲೋಲ್‌ಬಾಗ್ ಟೀಮ್‌ನಿಂದ ಕಾರ್ತಿಕ್, ಪವನ್, ಅನೂಪ್ ಮಯ್ಯ ಮೊದಲಾದವರಿದ್ದಾರೆ. ನಮ್ಮ ಚಿತ್ರವೂ ಹಾಸ್ಯ ಪ್ರಧಾನವಾಗಿರುವ ಹಿನ್ನೆಲೆಯಲ್ಲಿ ಸ್ಟಾಂಡ್‌ಅಪ್ ಕಾಮಿಡಿ ಟೀಮ್ ಜೊತೆಗೆ ಜನರ ಬಳಿ ಹೋಗುತ್ತಿದ್ದೇವೆ.ಕಾಲೆಳೆಯುತ್ತಾ, ಹಾಸ್ಯ ಚಟಾಕಿ ಹಾರಿಸುತ್ತಾ ಸಿನಿಮಾ ಬಗ್ಗೆ ಮಾಹಿತಿ ನೀಡಿ ಜನರಿಗೆ ಮನರಂಜನೆ ನೀಡುತ್ತೇವೆ’ ಎನ್ನುತ್ತಾರೆ.
undefined
‘ಚಿತ್ರತಂಡಗಳು ಟಿವಿ ಶೋಗಳಲ್ಲಿ ಭಾಗವಹಿಸೋದು ಸಾಮಾನ್ಯ. ಅಲ್ಲಿಗೂ ಇಲ್ಲಿಗೂ ಮುಖ್ಯ ವ್ಯತ್ಯಾಸ ಅಂದರೆ ಇಂಥಾ ಕಾರ್ಯಕ್ರಮಗಳ ಮೂಲಕ ನೇರವಾಗಿ ಜನರ ಜೊತೆಗೇ ಸಂವಹನ ಮಾಡಬಹುದು. ಅವರ ಸಂದೇಹಗಳಿಗೆ ಉತ್ತರಿಸಬಹುದು. ಜೊತೆಗೆ ನಮ್ಮ ಸಿನಿಮಾದ ಬಗ್ಗೆ ನೇರವಾಗಿ ಮಾಹಿತಿ ಹಂಚಿಕೊಳ್ಳಬಹುದು. ಇದು ಹೆಚ್ಚು ಪರಿಣಾಮಕಾರಿ. ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ’ ಎನ್ನುತ್ತಾರೆ. ಇದರ ಜೊತೆಗೆ ‘ಓಲ್‌ಡ್ಮಾಂಕ್’ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ಮಂಡ್ಯ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ ಹೀಗೆ ಹಲವೆಡೆ ಜನರ ಜೊತೆಗೆ ಬೆರೆತು ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದೆ.
Valentine's Day Special: 'ಓಲ್ಡ್ ಮಾಂಕ್' ಚಿತ್ರದ ರೀಲ್ ಜೋಡಿಯ ರಿಯಲ್ ಪ್ರೇಮ ಕತೆ!‘ಸಿನಿಮಾ ಪ್ರಚಾರದ ಉದ್ದೇಶದಿಂದ ನಾನಾ ಕಡೆ ಓಡಾಡಿದ್ದೇವೆ. ಇದರಲ್ಲಿ ಸಿಕ್ಕ ಅನುಭವ ದೊಡ್ಡದು. ಒಂದು ಡ್ಯಾನ್‌ಸ್ ಸ್ಕೂಲ್ ಉದ್ಘಾಟನೆಗೆ ಹೋಗಿದ್ದೆ. ಅಲ್ಲೊಬ್ಬ ಹೆಣ್ಮಗಳು ತಾನು ‘ಬೀರಬಲ್’ ಚಿತ್ರವನ್ನು ಹದಿನೈದು ಸಲ ನೋಡಿದ್ದೀನಿ ಅಂದರು. ಮತ್ತೊಂದು ಕಡೆ ಅಭಿಮಾನಿ ಬಳಗವೊಂದು ವಾಚ್ ಗಿಫ್‌ಟ್ ಮಾಡಿತು. ಹುಬ್ಬಳ್ಳಿಯಲ್ಲಿ ಹುಡುಗರ ಗುಂಪೊಂದು ತಮ್ಮದೇ ಚಿತ್ರವೇನೋ ಅನ್ನುವಷ್ಟು ಪ್ರೀತಿಯಲ್ಲಿ, ನಾವು ಮಠದಿಂದ ಪ್ರಚಾರ ಶುರು ಮಾಡಿ, ಆಮೇಲೆ ಇಂಥ ಕಡೆಗೆಲ್ಲ ಹೋಗೋಣ ಅಂತ ನೀಟಾಗಿ ಪ್ಲಾನ್ ರೂಪಿಸಿತ್ತು. ಇಂಥದ್ದನ್ನೆಲ್ಲ ನೋಡುವಾಗ ನಮ್ಮಲ್ಲೂ ಸಿನಿಮಾ ಮಾಡುವ ಉತ್ಸಾಹ ಹೆಚ್ಚುತ್ತದೆ. ಇಷ್ಟು ಪ್ರೀತಿ ತೋರಿಸುವ ಜನ ಸಿಗುತ್ತಾರೆ ಅಂದಾಗ ಒಳ್ಳೆಯ ಸಿನಿಮಾಗೆ ಸೋಲಿಲ್ಲ ಅನ್ನೋದು ಗೊತ್ತಾಗುತ್ತೆ’ ಎನ್ನುವುದು ಶ್ರೀನಿ ಮಾತುಗಳು.
QR Code ಸ್ಕ್ಯಾನ್ ಮಾಡುವಾಗ ಓಲ್ಡ್ ಮಾಂಕ್ ಬಗ್ಗೆ ತಿಳಿಯುತ್ತದೆ; ಹೀಗಿದೆ ಡಿಫರೆಂಟ್ ಪ್ರಚಾರ!ಶ್ರೀನಿ ಅವರು ಫೋಟೋಶಾಪ್ ಮೂಲಕ ನ್ಯೂಯಾರ್ಕ್‌ನ ಟೈಮ್‌ಸ್ ಸ್ಕ್ವೇರ್‌ನಲ್ಲಿ ಓಲ್‌ಡ್ಮಾಂಕ್‌ನ ಚಿತ್ರದ ಪೋಸ್ಟರ್ ಡಿಸೈನ್ ಮಾಡಿದ್ದು, ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಓಲ್‌ಡ್ಮಾಂಕ್ ಚಿತ್ರ ಫೆ. 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶ್ರೀನಿ ಅವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.