Varada: ವಿನೋದ್ ಪ್ರಭಾಕರ್-ಅಮಿತ ಕಾಂಬಿನೇಷನ್‌ನ 'ಯಾರೇ ನೀನು' ರೊಮ್ಯಾಂಟಿಕ್ ಸಾಂಗ್ ರಿಲೀಸ್!

Suvarna News   | Asianet News
Published : Feb 17, 2022, 07:47 PM IST
Varada: ವಿನೋದ್ ಪ್ರಭಾಕರ್-ಅಮಿತ ಕಾಂಬಿನೇಷನ್‌ನ 'ಯಾರೇ ನೀನು' ರೊಮ್ಯಾಂಟಿಕ್ ಸಾಂಗ್ ರಿಲೀಸ್!

ಸಾರಾಂಶ

'ಮರಿ ಟೈಗರ್' ವಿನೋದ್ ಪ್ರಭಾಕರ್ ಹೀರೋ ಆಗಿರುವ ಹೊಸ ಸಿನಿಮಾ 'ವರದ' ಫೆ.18ರಂದು ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ಚಿತ್ರದ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡಿದೆ.

'ಮರಿ ಟೈಗರ್' ವಿನೋದ್ ಪ್ರಭಾಕರ್ (Vinod Prabhakar) ಹೀರೋ ಆಗಿರುವ ಹೊಸ ಸಿನಿಮಾ 'ವರದ' (Varada) ಫೆ.18ರಂದು ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ (Trailer) ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ಚಿತ್ರದ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡಿದೆ. 'ಯಾರೇ ನೀನು ಪ್ರೀತಿಯ ಮಳೆಯ ತಂದವಳೆ' (Yaare Neenu) ಎಂಬ ಹಾಡು ಬಿಡುಗೆಯಾಗಿದ್ದು, ವಿನೋದ್ ಹಾಗೂ ಅಮಿತ (Amitha) ಕೆಮಿಸ್ಟ್ರಿ ಹಾಡಿನಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕಲರ್‌ಫುಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ವೆಂಕಿ (Santhosh Venky) ಕಂಠಸಿರಿಯಲ್ಲಿ ಮೂಡುಬಂದಿರುವ ಈ ಹಾಡಿಗೆ ಸಿನಿರಸಿಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. 

'ಯಾರೇ ನೀನು ಪ್ರೀತಿಯ ಮಳೆಯ ತಂದವಳೆ' ಹಾಡಿಗೆ ಕೆ.ಕಲ್ಯಾಣ್ (K.Kalyan) ಸಾಹಿತ್ಯ ರಚಿಸಿದ್ದು, ಪ್ರದೀಪ್ ವರ್ಮ (Pradeep Varma) ಸಂಗೀತ ಸಂಯೋಜಿಸಿದ್ದಾರೆ. ಉದಯ್‌ ಪ್ರಕಾಶ್‌ (UdayPrakash) 'ವರದ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ರಾಬರ್ಟ್' ಚಿತ್ರದ ನಂತರ ನನ್ನ ಅಭಿನಯದ 'ವರದ' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳ ಜೊತೆಗೆ, ಕೌಟುಂಬಿಕ ದೃಶ್ಯಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ತಂದೆ-ಮಗನ ಬಾಂಧವ್ಯ ಈ ಚಿತ್ರದ ಹೈಲೆಟ್. ನನ್ನ ತಂದೆ ಪಾತ್ರದಲ್ಲಿ ಖ್ಯಾತ ನಟ ಚರಣ್ ರಾಜ್ (Charan Raj) ಅಭಿನಯಿಸಿದ್ದಾರೆ ಎಂದು ವಿನೋದ್ ಪ್ರಭಾಕರ್ ತಿಳಿಸಿದ್ದಾರೆ. 

Vinod Prabhakar: ಮರಿ ಟೈಗರ್ ನಟನೆಯ 'ವರದ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಇತ್ತೀಚೆಗಷ್ಟೇ 'ವರದ' ಚಿತ್ರದ ಪತ್ರಿಕಾಗೋಷ್ಠಿ (Pressmeet) ನಡೆದಿತ್ತು. ಈ ಪ್ರತಿಕಾಗೋಷ್ಠಿಯಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ, ವಿನೋದ್ ಪ್ರಭಾಕರ್ ಅಸಮಾಧಾನವನ್ನು ಹೊರ ಹಾಕಿದ್ದರು. ಹೌದು! 'ವರದ' ಚಿತ್ರದ ಟ್ರೇಲರ್‌ನಲ್ಲಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಫೋಟೋ ಹಾಕಿಲ್ಲ, ಅಪ್ಪುಗೆ ನಮನ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ವಿನೋದ್ ಬೇಸರ ಮಾಡಿಕೊಂಡಿದ್ದರು. ಈ ಬಗ್ಗೆ 'ನನಗೆ ನಿಜವಾಗಿಯೂ ಬೇಜಾರಾಯ್ತು ಟ್ರೈಲರ್ ನೋಡಿ. ಪುನೀತ್ ಸರ್‌ಗೆ ನಮನ ಅಂತ ಒಂದೇ ಒಂದು ವಿಡಿಯೋ ಬರಲಿಲ್ಲ. ಒಂದು ಫೋಟೋ ಕೂಡ ಹಾಕದೇ ಇರುವುದು ನನಗೆ ಖುದ್ದಾಗಿ ತುಂಬಾ ಬೇಜಾರಾಗುತ್ತಿದೆ. ನನಗೆ ತುಂಬಾನೇ ಬೇಜಾರಾಗಿದೆ. ಹೀಗಾಗಿ ನಾನು ಟ್ರೈಲರ್ ಬಗ್ಗೆ ಏನನ್ನೂ ಮಾತನಾಡುವುದಿಲ್ಲ' ಎಂದಿದ್ದರು ವಿನೋದ್. 



ನಾನು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು. ಆರಂಭದಲ್ಲಿ ತುಂಬಾ ಕಷ್ಟದ ದಿನಗಳನ್ನು ನೋಡಿದ್ದೀನಿ. ಈಗ ಒಂದು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಲುಪಿದ್ದೇನೆ. ನಿರ್ದೇಶನವನ್ನು ನಾನೇ ಮಾಡಿದ್ದೀನಿ. ನಮ್ಮ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಮಿತ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಅಭಿನಯ ಚೆನ್ನಾಗಿದೆ.‌ ತಂತ್ರಜ್ಞರ ಕಾರ್ಯವಂತು ಅದ್ಭುತ. ಇದೇ ಹದಿನೆಂಟರಂದು ನಮ್ಮ ಚಿತ್ರ ರಾಜ್ಯಾದ್ಯಂತ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಉದಯ್‌ ಪ್ರಕಾಶ್‌ ತಿಳಿಸಿದರು.

ನಿರ್ಮಾಪಕನಾದ Vinod Prabhakar; ಟೈಗರ್ ಟಾಕೀಸ್‌ನಲ್ಲಿ 'ಲಂಕಾಸುರ' ತಯಾರಿ!

ಇನ್ನು 'ವರದ' ಚಿತ್ರಕ್ಕೆ ವಿನಾಯಕರಾಮ್ ಸಂಭಾಷಣೆ, 'ಭಜರಂಗಿ' ಆನಂದ್ ಕ್ಯಾಮೆರಾ ಕೈ ಚಳಕ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿನೋದ್ ಪ್ರಭಾಕರ್, ಚರಣ್ ರಾಜ್, ಅಮಿತ, ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಕಲ್ಯಾಣ್, ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?